ಮನೆಯಲ್ಲಿ ಜೀರಲೆ, ಇರುವೆಗಳ ಕಾಟವೇ? ಹಾಗಾದರೆ ಈ ಮನೆಮದ್ದೇ ಸಾಕು..

0 views

ಕೆಲವೊಮ್ಮೆ ಅಡುಗೆ ಮನೆ ಅಥವಾ ಮನೆಯ ಇತರ ಭಾಗಗಳನ್ನ ಎಷ್ಟೇ ಸ್ವಚ್ಛವಾಗಿಟ್ಟುಕೊಳ್ಳಿ, ಆದರೂ ಜಿರಲೆ, ಇರುವೆ ಮೊದಲಾದ ಕ್ರಿಮಿ ಕೀಟಗಳು ಮನೆ ಒಳಗೆ ಬಂದೇ ಬರುತ್ತವೆ. ನಾವು ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಸಮಯದಲ್ಲಿ ಕಾಣಿಸಿಕೊಳ್ಳದ ಈ ಜಿರಲೆಗಳು ರಾತ್ರಿ ದೀಪ ಆರಿಸಿದ ನಂತರ ಮನೆಯ ಮೂಲೆ ಮೂಲೆಯಲ್ಲಿಯೂ ಸಂಚಾರ ಶುರುಮಾಡುತ್ತವೆ. ಈ ಜಿರಲೆಗಳು ಸಾಕಷ್ಟು ರೋಗಕಾರಕಗಳೂ ಹೌದು. ಮನೆಯಲ್ಲಿ ಇಟ್ಟ ಪದಾರ್ಧಗಳ ಮೇಲೆ ಕುಳಿತುಕೊಂಡಿರುವುದು ನಮ್ಮ ಅರಿವಿಗೆ ಬಾರದೇ ಅದನ್ನು ಎಷ್ಟೋ ಸಲ ಉಪಯೋಗಿಸಿ ಬಿಡುತ್ತೇವೆ ಅಂತಹ ಸಂದರ್ಭದಲ್ಲಿ ಫುಡ್ ಪಾಯಿಸನ್ ಅಥವಾ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಜಿರಲೆಯಿಂದ ತಪ್ಪಿಸಿಕೊಳ್ಳಲು ನಾವು ರಾಸಾಯನಿಕ ಸ್ಪ್ರೇ ಅಥವಾ ಇನ್ಯಾವುದೇ ರಾಸಾಯನಿಕಗಳನ್ನು ಬಳಸುತ್ತೇವೆ. ಮನೆಯ ಪೂರ್ತಿ ಸಿಂಪಡಿಸುತ್ತೇವೆ. ಇದರಿಂದ ಇನ್ನೂ ಅಪಾಯಗಳೇ ಜಾಸ್ತಿ. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಈ ರಾಸಾಯನಿಕಗಳು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಾಗಾಗಿ ನಿಮ್ಮ ಈ ಎಲ್ಲಾ ಸಮಸ್ಯೆಗೆ ಪರಿಹಾರ ಅಂದರೆ ಜಿರಲೆಯೂ ಹೋಗಬೇಕು ಹಾಗೂ ಆರೋಗ್ಯದ ಮೇಲೆಯೋ ಯಾವುದೇ ಅಡ್ಡ ಪರಿಣಾಮಗಳು ಆಗಬಾರದು ಎಂಬ ಕಾರಣಕ್ಕೆ ನಾವಿಲ್ಲಿ ಒಂದು ಮನೆಯಲ್ಲಿ ಮಾಡಬಹುದಾದ ಜಿರಲೆ ಔಷಧವನ್ನು ಹೇಳುತ್ತಿದ್ದೇವೆ.

ತಯಾರಿಸಲು ಬೇಕಾಗುವ ಸಾಮಗ್ರಿಗಳು – ಕರ್ಪೂರ,ಅಗರಬತ್ತಿಗಳು ಹಾಗೂ ಹತ್ತಿ
ತಯಾರಿಸುವ ವಿಧಾನ ಹೇಗೆಂದರೆ: ಸುಮಾರು ಎಂಟರಿಂದ ಹತ್ತು ಕರ್ಪೂರಗಳನ್ನು ತೆಗೆದುಕೊಳ್ಳಿ. ಜೊತೆಗೆ ನಾಲ್ಕು ಅಗರಬತ್ತಿಗಳನ್ನು ತೆಗೆದುಕೊಳ್ಳಿ. ಈ ಎರಡನ್ನೂ ಪುಡಿಮಾಡಿ ಅದನ್ನು ಒಂದು ಬೌಲ್ ನೀರಿಗೆ ಹಾಕಿ ಮಿಶ್ರಣ ಮಾಡಿ. ಹೀಗೆ ಮಾಡಿ ಒಂದು ಹತ್ತು ನಿಮಿಷದ ನಂತರ ಹತ್ತಿಯ ಉಂಡೆಗಳನ್ನು ಮಾಡಿಕೊಂಡು ಅವುಗಳನ್ನು ಈ ನೀರಿನಲ್ಲಿ ಅದ್ದಿ. ನಂತರ ನಿಮ್ಮ ಮನೆಯಲ್ಲಿ ಜಿರಲೆಗಳು ಓಡಾಡುವ ಜಾಗಗಳಲ್ಲಿ ಈ ಹತ್ತಿ ಉಂಡೆಗಳನ್ನು ಇಡಿ. ರಾತ್ರಿ ಮಲಗುವಾಗ ಇಟ್ಟರೆ ಸಾಕು.

ಕರ್ಪೂರ ಹಾಗೂ ಅಗರಬತ್ತಿಯ ಗಾಡು ಜಿರಲೆಗಳನ್ನು ಓಡಿಸಲು ಸಹಾಯಮಾಡುತ್ತವೆ, ತಿಂಗಳಿನಲ್ಲಿ ನಾಲ್ಕುಬಾರಿ ಈ ವಿಧಾನವನ್ನು ಅನುಸರಿಸಿದರೆ ಜಿರಲೆ, ಇರುವೆ ಅಥವಾ ಇತರ ಯಾವುದೇ ಕೀಟಗಳೂ ನಿಮ್ಮ ಮನೆಯನ್ನು ಪ್ರವೇಶಿಸುವುದಿಲ್ಲ. ಈ ವಿಧಾನದ ಜೊತೆಗೆ ಮನೆಯನ್ನೂ ಸ್ವಚ್ಛವಾಗಿಟ್ತುಕೊಂಡರೆ ನೀವು ಖಂಡಿತವಾಗಿಯೂ ಜಿರಲೆ ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ!