ಶಿವರಾತ್ರಿ ದಿನ ಎಲ್ಲರೂ ಉಪವಾಸ ಮಾಡಿದ್ರೆ ಇಲ್ಲಿ ಮಾತ್ರ ಎಲ್ಲರೂ ಮಾಂಸ ಮಾಡಿ ತಿಂತಾರೆ.. ಕಾರಣವೇನು ಗೊತ್ತಾ..

0 views

ನಮ್ಮ ದೇಶ ವಿವಿಧತೆಯಲ್ಲಿ ಏಕತೆಯುಳ್ಳ ದೇಶ ಎಂಬ ಹೆಗ್ಗಳಿಕೆ ಇದೆ.. ದೇಶ ಮಾತ್ರವಲ್ಲ ನಮ್ಮ ರಾಜ್ಯದೊಳಗೂ ಸಹ ಅನೇಕ ಕಡೆ ಅನೇಕ ರೀತಿಯ ಆಚರಣೆಗಳು ಇರುವುದು ವಿಶೇಷ. ಹೌದು ಹಬ್ಬಗಳ ಆಚರಣೆ ಅಂತಾ ವಿಚಾರಕ್ಕೆ ಬಂದರೆ ಒಂದೊಂದು ರಾಜ್ಯದಲ್ಲಿ‌ ಒಂದೊಂದು ರೀತಿ ಆಚರಣೆ ಮಾಡುತ್ತಾರೆ.. ಇಲ್ಲಿ ಸಂಕ್ರಾಂತಿ ಎಂದರೆ ಪಕ್ಕದ ರಾಜ್ಯದಲ್ಲಿ ಪೊಂಗಲ್ ಉತ್ತರ ಭಾರತದ ಕಡೆ ಮತ್ತೊಂದು ಹೆಸರಿನಿಂದ ಆಚರಿಸಲಾಗುತ್ತದೆ.. ಆದರೆ ಶಿವರಾತ್ರಿ ಹಬ್ಬ ಎಂದು ಬಂದರೆ ಎಲ್ಲಾ ಕಡೆಯೂ ಒಂದೇ ರೀತಿಯಲ್ಲಿ ಶಿವ ಆರಾಧನೆ ನಡೆಯುತ್ತದೆ.. ರಾತ್ರಿ ಪೂರ್ತಿ ಜಾಗರಣೆ ಉಒಅವಾಸ ಹೀಗೆ ಶಿವನಾಮ ಜಪದಲ್ಲಿ ಭಕ್ತರು ತಲ್ಲೀನರಾಗುವುದು ಸಾಮಾನ್ಯ..

ಆದರೆ ಇಲ್ಲೊಂದು ಗ್ರಾಮದಲ್ಲಿ ಮಾತ್ರ ಶಿವರಾತ್ರಿಯಂದು ಮಾಂಸ ಮಾಡಿ ಸೇವನೆ ಮಾಡುತ್ತಾರೆ.. ಹೌದು ಶಿವರಾತ್ರಿ ಎಂದೊಡನೆ ಉಪವಾಸ ಹಾಗೂ ಫಲಹಾರ ಸೇವನೆ ಮಾಡೋದು ಸರ್ವೇ ಸಾಮಾನ್ಯ.. ಈ ದಿನ ಅನ್ನ ತಿನ್ನುವುದು ಕೂಡ ಅಪರೂಪ.. ಆದರೆ ಈ ಗ್ರಾಮದಲ್ಲಿ ಮಾತ್ರ ಊರಿಗೆ ಊರೇ ಸೇರಿ ದೇವಸ್ಥಾನದ ಮುಂದೆಯೇ ಕ್ವಿಂಟಾಲ್ ಗಟ್ಟಲೆ ನಾನ್ ವೆಜ್ ಮಾಡುತ್ತಾರೆ.. ಅನ್ನ ಮುದ್ದೆ ಚಿಕನ್ ಮಟನ್ ಹೀಗೆ ಎಲ್ಲಾ ರೀತಿಯ ಅಡುಗೆ ಮಾಡಿ ಊರಿಗೆ ಊರೇ ಒಟ್ಟಿಗೆ ನಾನ್ ವೆಜ್ ಊಟ ಮಾಡಿ ಶಿವರಾತ್ರಿ ಹಬ್ಬವನ್ನು ಆಚರಿಸುತ್ತಾರೆ.‌ ವಿಚಾರ ಕೇಳಿದ ಜನ ಆಶ್ಚರ್ಯ ಪಡುವುದು ಸಹಜ..

ಹೌದು ಬೆಂಗಳೂರಿನ ಪಕ್ಕದ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿಯಲ್ಲಿ ಈ ರೀತಿಯ ಆಚರಣೆ ಮಾಡಲಾಗುತ್ತದೆ.. ಹೌದು ಮಂಗಾಡಹಳ್ಳಿಯಲ್ಲಿ ಸಿದ್ದಾಪ್ಪಾಜಿ ದೇವಸ್ಥಾನವಿದೆ.. ಈ ದೇವಸ್ಥಾನದ ಮುಂದೆ ಮಂಗಾಡಹಳ್ಳಿಯ ಜನರು ಮಾತ್ರವಲ್ಲ ಸುತ್ತ ಮುತ್ತಲಿನ ಹದಿನೈದು ಗ್ರಾಮದ ಜನರು ಇಲ್ಲಿಗೆ ಆಗಮಿಸಿ ತಾವೇ ಕುರಿ ಕೋಳಿಗಳನ್ನು ತಂದು ದೇವರಿಗೆ ನೀಡ್ತಾರೆ.. ಇನ್ನು ಗ್ರಾಮದ ಜನರೇ ಸ್ವಯಂ ಬಂದು ಜನರು ಕೊಟ್ಟ ಕುರಿ ಕೋಳಿಗಳನ್ನು ದೇವರಿಗೆ ಒಪ್ಪಿಸಿ ಅದರಿಂದಲೇ ಅಡುಗೆ ಮಾಡುತ್ತಾರೆ.. ಈ ರೀತಿ ನೂರಾರು ಕುರಿ ಕೋಳಿಗಳನ್ನು ಭಕ್ತರು ನೀಡುವ ಕಾರಣ ಅದರಿಂದ ಮಾಡಿದ ಅಡುಗೆಯನ್ನು ಎಲ್ಲಾ ಗ್ರಾಮಸ್ಥರು ಸಹ ದೇವಸ್ಥಾನದ ಮುಂದೆಯೇ ಕೂತು ಒಟ್ಟಿಗೆ ಊಟ ಮಾಡುತ್ತಾರೆ..

ಈ ಗ್ರಾಮಕ್ಕೆ ಮೈಸೂರು ಬೆಂಗಳೂರಿನಿಂದ ಭಕ್ತರು ಆಗಮಿಸಿ ಕುರಿ ಕೋಳಿಗಳನ್ನು ಕೊಡುತ್ತಾರಂತೆ.. ಇನ್ನು ಈ ಬಗ್ಗೆ ಮಾತನಾಡಿದ ಗ್ರಾಮಸ್ಥರು ಈ ಆಚರಣೆಗೆ ಕಾರಣ ನೀಡಿದ್ದಾರೆ.. ಹೌದು ಮಂಗಾಡಹಳ್ಳಿಯಲ್ಲಿ ಕಳೆದ ಹದಿನೈದು ತಲೆಮಾರುಗಳಿಂದ ಈ ಆಚರಣೆ ನಡೆದುಕೊಂಡು ಬರುತ್ತಿದೆಯಂತೆ ಈ ದೇವರಿಗೆ ಹರಕೆ ಕಟ್ಟಿಕೊಂಡು ಆ ಪ್ರಾರ್ಥನೆ ನೆರವೇರಿದ ನಂತರ ಇಲ್ಲಿ ಶಿವರಾತ್ರಿ ಹಬ್ಬದ ದಿನ ದೇವಸ್ಥಾನಕ್ಕೆ ಬಂದು ಹರಕೆಯಾಗಿ ಕುರಿ ಕೋಳಿಗಳನ್ನು ಒಪ್ಪಿಸುತ್ತಾರಂತೆ.. ಅಷ್ಟೇ ಅಲ್ಲದೇ ಬಂದವರೆಲ್ಲಾ ಇಲ್ಲಿಯೇ ಊಟ ಮಾಡಿ ನಂತರ ರಾತ್ರಿ ನಡೆಯುವ ಸಿದ್ದಾಪ್ಪಾಜಿ ಭಜನೆಯಲ್ಲಿ ಪಾಲ್ಗೊಳ್ಳುತ್ತಾರಂತೆ..

ಈ ದೇವರಿಗೆ ನಿಷ್ಟೆಯಿಂದ ಬೇಡಿಕೊಂಡು ಹರಕೆ ಕಟ್ಟಿಕೊಂಡರೆ ಆ ಆಸೆಗಳೆಲ್ಲಾ ಈಡೇರುತ್ತದೆ ಎನ್ನುವ ನಂಬಿಕೆ ಇದ್ದು ಆ ಕಾರಣಕ್ಕೆ ಬಹಳ ನಿಷ್ಠೆಯಾಗಿ ಈ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದಾರೆ.‌ ಶಿವರಾತ್ರಿಗೆ ಮಾತ್ರವಲ್ಲದೇ ಇದೇ ದೇವಸ್ಥಾನದಲ್ಲಿ ಗೌರಿ ಹಬ್ಬಕ್ಕೂ ಕೂಡ ಇದೇ ರೀತಿ ಕುರಿ ಕೋಳಿಗಳನ್ನು ನೀಡಿ ದೇವಸ್ಥಾನದ ಮುಂದೆಯೇ ಗ್ರಾಮದವರೇ ಸೇರಿಕೊಂಡು ಅಡುಗೆ ಮಾಡಿ ಸಾವಿರಾರು ಜನ ಭಕ್ತರು ದೇವರ ಪ್ರಸಾದವೆಂದು ನಾನ್ ವೆಜ್ ಊಟ ಮಾಡಲಾಗುತ್ತದೆ..

ಮಂಗಾಡಹಳ್ಳಿಯಲ್ಲಿನ ಸಿದ್ದಾಪ್ಪಾಜಿ ದೇವಸ್ಥಾನದ ಬಳಿ ನಡೆಯುವ ಈ ಶಿವರಾತ್ರಿ ಆಚರಣೆ ಅದರಲ್ಲಿಯೂ ನಾನ್ ವೆಜ್ ಮಾಡಿ ಶಿವರಾತ್ರಿಯಂದು ಊಟ ಮಾಡುವ ವಿಚಾರ ತಿಳಿದ ಸಾಕಷ್ಟು ಮಂದಿ ಆಶ್ಚರ್ಯ ಪಟ್ಟಿದ್ದೂ ಉಂಟು.. ಆದರೆ ಇಲ್ಲಿನ ದೇವರ ಶಕ್ತಿ ಹಾಗೂ ಭಕ್ತರ ನಿಷ್ಠೆ ಎಲ್ಲವನ್ನೂ ಅರಿತ ಮೇಲೆ ಅವರುಗಳು ಕೂಡ ಇಲ್ಲಿನ ದೇವಸ್ಥಾನಗಳಲ್ಲಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಮಾಡಿ ಹರಕೆ ಕಟ್ಟಿಕೊಂಡವರೂ ಇದ್ದಾರೆ.. ಒಟ್ಟಿನಲ್ಲಿ ನಮ್ಮದೇ ರಾಜ್ಯದಲ್ಲಿ ಶಿವರಾತ್ರಿಯ ವಿಶಿಷ್ಟವಾದ ಆಚರಣೆಗೆ ಈ ಮಂಗಾಡಹಳ್ಳಿ ಗ್ರಾಮ ಸಾಕ್ಷಿಯಾಗಿದ್ದು ಎಲ್ಲಾ ರೀತಿಯ ಆಚರಣೆಗಳ ಮೂಲ ಭಕ್ತಿಯೇ ಎನ್ನುವುದು ಮಾತ್ರ ಸತ್ಯ..