ಮದುವೆಯಾಗಿ ಕೇವಲ ಮೂರೇ ದಿನ.. ಬಾತ್ ರೂಮಿನಲ್ಲಿ ನಡೆಯಬಾರದು ನಡೆದೇ ಹೋಯಿತು.. ಬೆಚ್ಚಿ ಬಿದ್ದ ಗಂಡ..

0 views

ಈಗ ಕಾಲ ಬದಲಾಗಿದೆ ಹೆಣ್ಣು ಮಕ್ಕಳು ಹುಟ್ಟಿದರೆ ಸಂಭ್ರಮ ಪಡುತ್ತಾರೆ.. ಅದ್ಧೂರಿಯಾಗಿ ಮನೆಯಲ್ಲಿ ಸಮಾರಂಭಗಳನ್ನು ಮಾಡುತ್ತಾರೆ.. ಮನೆಗೆ ಮಹಾಲಕ್ಷ್ಮಿ ಆಗಮಿಸಿದಳು ಎಂದು ಸಂತೋಷ ಪಡುತ್ತಾರೆ.. ಈ ರೀತಿ ಹೆಣ್ಣು ಮಗು ಹುಟ್ಟಿದಾಗ ಸಂಭ್ರಮ ಪಟ್ಟ ಸಾಕಷ್ಟು ವೀಡಿಯೋಗಳನ್ನು ಇತ್ತಿಚೆಗೆ ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೇವೆ.. ಇದೆಲ್ಲವೂ ಒಳ್ಳೆಯ ಬೆಳವಣಿಗೆ.. ಆದರೆ ಇದೆಲ್ಲದರ ನಡುವೆ ಇನ್ನೂ ಸಹ ಹೆಣ್ಣು ಮಕ್ಕಳು ತಮ್ಮ ಇಷ್ಟದ ಬದುಕು ಕಟ್ಟಿಕೊಳ್ಳಲೂ ಸಹ ಸ್ವಾತಂತ್ರ್ಯ ಇಲ್ಲದೇ ಅಪ್ಪ ಅಮ್ಮನ ಆಸೆಗಳಿಗೆ ಒಪ್ಪಿ ತಮ್ಮಗಳ ಜೀವ ಹಾಗೂ ಜೀವನವನ್ನೇ ತ್ಯಾಗ ಮಾಡುತ್ತಿರುವ ಘಟನೆಗಳು ಸಹ ನಡೆಯುತ್ತಲೇ ಇದೆ..

ಹೌದು ಇಲ್ಲೊಂದು ಅಂತಹುದೇ ಮನಕಲಕುವ ಘಟನೆ ನಡೆದಿದ್ದು ಮದುವೆಯಾದ ಮೂರೇ ದಿನಕ್ಕೆ ಈ ಹೆಣ್ಣು ಮಗಳು ಆದ ಸ್ಥಿತಿ ನೋಡಿದರೆ ನಿಜಕ್ಕೂ ಸಂಕಟವಾಗುತ್ತದೆ.. ಹೌದು ಈಕೆಯ ಹೆಸರು ಭುವನೇಶ್ವರಿ.. ಇನ್ನೂ ಇಪ್ಪತ್ತೊಂದು ವರ್ಷ ವಯಸ್ಸಷ್ಟೇ.. ಬದುಕಿ ಚೆನ್ನಾಗಿ ಬಾಳಬೇಕಾದ ವಯಸ್ಸು.. ತಮಿಳುನಾಡಿನ ವೆಲ್ಲೂರಿನ ಮುತ್ತು ಮಂಟಪಂ ನಿವಾಸಿ.. ಓದಿನಲ್ಲಿ ಬುದ್ಧಿವಂತೆ.. ಆದರೆ ಜೀವನ ಕಟ್ಟಿಕೊಳ್ಳುವಲ್ಲಿ ಅಸಾಹಯಕಳಾಗಿ ಜೀವವನ್ನೇ ಕಳೆದುಕೊಂಡುಬಿಟ್ಟಳು.. ಈಕೆಯ ಸ್ಥಿತಿಗೆ ನಿಜವಾದ ಕಾರಣ ಕೇಳಿದರೆ ನಿಜಕ್ಕೂ ಸಂಕಟವಾಗುತ್ತದೆ..

ಹೌದು ಭುವನೇಶ್ವರಿ ಚೆನ್ನಾಗಿ ಓದುತ್ತಿದ್ದ ಹುಡುಗಿ.. ಈಕೆ ಮೂರನೇ ವರ್ಷದ ನರ್ಸಿಂಗ್ ಓದುತ್ತಿದ್ದಳು.. ಓದು ಮುಗಿಸಿ ಕೆಲಸಕ್ಕೆ ಸೇರಿಕೊಂಡು ತನ್ನ ಸ್ವಂತ ಕಾಲ ಮೇಲೆ ತಾನು ನಿಂತು ಜೀವನ ಕಟ್ಟಿಕೊಳ್ಳಬೇಕೆಂಬ ಕನಸು ಕಂಡಿದ್ದಳು.. ಆದರೆ ಹೆಣ್ಣು ಮಕ್ಕಳ ಆಸೆ ಅಭಿಪ್ರಾಯವನ್ನು ಈಗಲೂ ಸಹ ಕೇಳದಿರುವ ಪೋಷಕರು ಇರುವುದು ವಿಪರ್ಯಾಸವೇ ಸರಿ.. ಮಗಳಿಗೆ ವಯಸ್ಸು ಇಪ್ಪತ್ತೊಂದು ಆಯಿತು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿ ಜವಾಬ್ದಾರಿ ಮುಗಿಸಿಕೊಳ್ಳಬೇಕೆಂದು ಭುವನೇಶ್ವರಿ ತಂದೆ ಗಂಡು ನೋಡಿದರು.. ಅವರ ಆಸೆಯಂತೆ ರಾಣಿಪೆಟ್ಟೈ ಜಿಲ್ಲೆಯ ಕಾವೇರಿಪಾಕ್ಕಂ ನ ಇಪ್ಪತ್ತೇಳು ವರ್ಷದ ಮಣಿಕಂದನ್ ಎಂಬುವವರ ಜೊತೆ ಮಗಳ ಮದುವೆಯನ್ನೂ ಸಹ ಮಾಡಿ ಮುಗಿಸಿದರು.. ಆದರೆ ಮುಂದೆ ನಡೆದ ಘಟನೆ ಮಾತ್ರ ಸಂಪೂರ್ಣ ಜೀವನ ಕಣ್ಣೀರಿಡುವಂತೆ ಮಾಡಿದೆ..

ಹೌದು ಭುವನೇಶ್ವರಿ ಈಗಲೇ ಮದುವೆ ಬೇಡವೆಂದು ಎಷ್ಟೇ ಹೇಳಿದರೂ ಕೇಳದ ಪೋಷಕರು ಕಳೆದ ಐದು ತಿಂಗಳ ಹಿಂದೆಯೇ ಮಣಿಕಂದನ್ ಜೊತೆಗೆ ನಿಶ್ಚಿತಾರ್ಥ ಮಾಡಿದ್ದಾರೆ.. ಆದರೆ ಜೀವನದಲ್ಲಿ ಗುರಿ ಸಾಧಿಸುವ ಕನಸು ಹೊತ್ತ ಭುವನೇಶ್ವರಿಗೆ ಮದುವೆ ಸಂತೋಷ ನೀಡಲಿಲ್ಲ.. ನಿಶ್ಚಿತಾರ್ಥವಾದ ನಂತರ ಐದು ತಿಂಗಳಲ್ಲಿ ಕೇವಲ ಮೂರು ಬಾರಿ ಮಾತ್ರ ಹುಡುಗನೊಂದಿಗೆ ಮಾತನಾಡಿದ್ದಳಷ್ಟೇ.. ಆದರೆ ಇದೇ ತಿಂಗಳು ನವೆಂಬರ್ ಹದಿನೈದರಂದು ಭುವನೇಶ್ವರಿ ಹಾಗೂ ಮಣಿಕಂದನ್ ಮದುವೆ ನಡೆಯಿತು.. ಮದುವೆ ನಡೆದು ಹೋಗಿದೆ.. ಈ ಜೀವನದಲ್ಲಿ ಹೊಸ ಬದುಕು ಕಟ್ಟಿಕೊಳ್ಳುವ ಮನಸ್ಸು ಮಾಡಬಹಿದಾಗಿತ್ತು.. ಆದರೆ ಭುವನೇಶ್ವರಿ ದುಡುಕಿ ಬೇರೆಯದ್ದೇ ನಿರ್ಧಾರ ತೆಗೆದುಕೊಂಡು ಬಿಟ್ಟಳು‌‌.. ಹೌದು ಮದುವೆಯ ನಂತರದ ಶಾಸ್ತ್ರಗಳಿಗಾಗಿ ಭುವನೇಶ್ವರಿ ತನ್ನ ಮನೆಗೆ ಬಂದಿದ್ದಳು.. ಇದೇ ಸಮಯದಲ್ಲಿ ನವೆಂಬರ್ ಹದಿನೆಂಟರಂದು ಮುಂಜಾನೆ ಬಾತ್ ರೂಮಿನಲ್ಲಿ ತನ್ನ ಜೀವನವನ್ನೇ ಕಳೆದುಕೊಂಡು ಬಿಟ್ಟಳು..

ಇತ್ತ ಬಾತ್ ರೂಮಿನಿಂದ ಸಾಕಷ್ಟು ಸಮಯವಾದರೂ ಬಾರದ ಭುವನೇಶ್ವರಿಯನ್ನು ನೋಡಲು ಬಂದಾಗ ಆಕೆಯ ಸ್ಥಿತಿ ನೋಡಿ ಅಪ್ಪ ಅಮ್ಮ ಗಂಡ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.‌ ಮನಸೊಪ್ಪದ ಮದುವೆ ಮನೆಯಲ್ಲಿ ಮದುವೆ ಸಂಭ್ರಮ ನಡೆದ ಮೂರೇ ದಿನಕ್ಕೆ ಸೂತಕವನ್ನು ತಂದಿತ್ತು.. ಇತ್ತ ಮಗಳನ್ನು ಕಳೆದುಕೊಂಡ ತಂದೆ ತಾಯಿ ಒಂದು ಕಡೆಯಾದರೇ.. ಇತ್ತ ಮದುವೆಯಾಗಿ ಹೊಸ ಜೀವನ ಶುರು ಮಾಡಬೇಕಿದ್ದವ ಪತ್ನಿಯನ್ನು ಕಳೆದುಕೊಂಡು ದಿಕ್ಕು ತೋಚದಂತಾದ.. ಆದರೆ ಮತ್ತೊಬ್ಬರ ಅಭಿಪ್ರಾಯ ಆಸೆಗಳಿಗಾಗಿ ಮದುವೆಯಾಗಿ ನೊಂದು ಆ ಹೆಣ್ಣು ಮಗಳು ಜೀವ ಕಳೆದುಕೊಳ್ಳುವಂತಾಯಿತು..

ದಯವಿಟ್ಟು ಯಾರೇ ಪೋಷಕರಾಗಲಿ ಮಕ್ಕಳ ಅಭಿಪ್ರಾಯ ಆಸೆಗಳಿಗೆ ಮನ್ನಣೆ ನೀಡಿ.. ಮಕ್ಕಳನ್ನು ಕಳೆದುಕೊಂಡು ನೋವು ಪಡುವುದಕ್ಕಿಂತ ಕಣ್ಣ ಮುಂದೆ ಅವರಿಷ್ಟದ ಹಾಗೆ ಸಂತೋಷವಾಗಿರುವುದನ್ನು ನೋಡುವುದೇ ಲೇಸು.. ಮಕ್ಕಳೂ ಅಷ್ಟೇ ತಂದೆ ತಾಯಿಗಳು ಯಾರೂ ಸಹ ನಮಗೆ ಕೆಟ್ಟದ್ದಾಗಲಿ ಎಂದು ಆಸೆ ಪಡುವುದಿಲ್ಲ.. ವಯಸ್ಸಾದ ಜೀವಗಳಿಗೆ ನಮ್ಮ ಸಂತೋಷವೇ ಮುಖ್ಯ.. ಆದರೆ ಕೆಲವರಿಗೆ ತಿಳುವಳಿಕೆಯ ಕೊರತೆಯೂ ಇರುತ್ತದೆ.. ಅಂತವರಿಗೆ ಹೇಳುವ ರೀತಿಯಲ್ಲಿ ತಿಳಿ ಹೇಳಿ ಅವರಿಗೂ ಸಂತೋಷ ಕೊಟ್ಟು ನಾವುಗಳು ಸಹ ಜೀವನದಲ್ಲಿ ಸಂತೋಷವಾಗಿರುವುದೇ ನಿಜವಾದ ಜೀವನ.. ಈಗ ಆಕೆಯ ಪೋಷಕರ ತಪ್ಪೋ ಅಥವಾ ಆಕೆಯ ದುಡುಕಿನ ನಿರ್ಧಾರವೋ ಆದರೆ ಆ ಎರಡು ಕುಟುಂಬಗಳು ಮಾತ್ರ ಇರುವಷ್ಟು ದಿನ ಈ ನೋವು ಕಾಡುವುದು ಮಾತ್ರ ಸತ್ಯ..