ಸುದೀಪ್‌ ಅವರು ಶೋ ಮುಗಿಸಿ ಹೋದ ನಂತರ‌ ನಡೆದದ್ದೇನು ಗೊತ್ತಾ.. ದಿವ್ಯಾಗೆ ನುಗ್ಗೆಕಾಯಿ ತಿನ್ನಿಸಿದ ಮಂಜು.. ಪತ್ರವಳಿ ಆಟ ಎಂದರೆ ನಿಜವಾದ ಅರ್ಥವೇನು ಗೊತ್ತಾ..

0 views

ಬಿಗ್ ಬಾಸ್ ಮನೆ ನಿನ್ನೆ ಅಕ್ಷರಶಃ ರಣರಂಗದ ರೀತಿಯಲ್ಲಿ ಭಾಸವಾಗುತಿತ್ತು.. ಇದಕ್ಕೆ ಕಾರಣ ಮಂಜು ಪಾವಗಡ ಹಾಗೂ ಚಕ್ರವರ್ತಿ ಚಂದ್ರಚೂಡ ಅವರ ನಡುವೆ ನಡೆದ ಜಗಳ.. ಹೌದು ಬಿಗ್ ಬಾಸ್ ಸೀಸನ್ ಎಂಟರ ಎರಡನೇ ಇನ್ನಿಂಗ್ಸ್ ನಲ್ಲಿ ಮೊದಲ ವಾರದ ಕತೆಯಲ್ಲಿಯೇ ಅದರಲ್ಲಿಯೂ ನಾಲ್ಕೇ ದಿನದ ಬಿಗ್ ಬಾಸ್ ವಾಸದಲ್ಲಿ ದೊಡ್ಡ ಗಲಾಟೆಗಳೇ ಶುರುವಾಗಿದೆ.. ಇದಕ್ಕೆ ಕಾರಣ ಕಳೆದ ನಲವತ್ತೈದು ದಿನಗಳಲ್ಲಿ ಎಲ್ಲರೂ ಸಹ ತಮ್ಮ ತಮ್ಮ ಬಗ್ಗೆ ಯಾರ್ಯಾರು ಏನೇನು ಮಾತನಾಡಿದ್ದಾರೆಂಬುದನ್ನು ತಿಳಿದುಕೊಂಡು ಬಂದಿರೋದು.. ಹೌದು ಅದೇ ರೀತಿ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಮರಳಿ ಬಂದ ಮೊದಲ ದಿನವೇ ಕಳೆದ ಬುಧವಾರ ನಾಮಿನೇಷನ್ ಪ್ರಕ್ರಿಯೆ ನಡೆದಿತ್ತು..

ನಾಮಿನೇಷನ್‌ ಪ್ರಕ್ರಿಯೆಯಲ್ಲಿ ಎಲ್ಲರೂ ರೊಚ್ಚಿಗೆದ್ದಿದ್ದು ಸ್ಪಷ್ಟವಾಗಿ ಕಾಣುತಿತ್ತು.. ಅದರಲ್ಲಿ ಮಂಜು ಪಾವಗಡ ದಿವ್ಯಾ ಸುರೇಶ್ ಚಕ್ರವರ್ತಿ ಚಂದ್ರಚೂಡ ಅವರನ್ನು ನಾಮಿನೇಟ್ ಮಾಡಿ ನಮ್ಮ ಬಗ್ಗೆ ಏನೇನೋ ಹೇಳಿದ್ದಾರೆ ನಾಲಿಗೆ ಇದೆ ಅಂತ ಏನೇನೋ ಮಾತನಾಡೋದಲ್ಲ.. ಅದಕ್ಕೆ ನಾಮಿನೇಟ್ ಮಾಡ್ತಾ ಇದ್ದೇವೆ ಎಂಬ ಕಾರಣ ಕೊಟ್ಟಿದ್ದರು.. ಇನ್ನು ಈ ಬಗ್ಗೆ ಮಾತನಾಡಲು ಸಮಯಕ್ಕಾಗಿ ಕಾಯುತ್ತಿದ್ದ ಚಕ್ರವರ್ತಿ ಚಂದ್ರಚುಯ್ಡ ಅವರು ಭಾನುವಾರದ ಕಾರ್ಯಕ್ರಮದಲ್ಲಿ ಸಿಡಿದೆದ್ದರು.. ಅದರಲ್ಲಿಯೂ ಮಂಜು ಹಾಗೂ ದಿವ್ಯಾ ಬಗ್ಗೆ ದೊಡ್ಡದಾಗಿಯೇ ಗುಡುಗಿದರು.. ಹೌದು “ಶ್ರೀಮಾನ್ ಮಂಜು ಪಾವಗಡ ಅವರು ಅದ್ಯಾವ್ ರೀತಿಯಲ್ಲಿ ಒಂದು ಶೋನಲ್ಲಿ ಉಳ್ಕೊಳೋದಕ್ಕೋಸ್ಕರ ಒಂದು ಹೆಣ್ಣನ್ನ ಸರಸಕ್ಕೆ ಕರಿತಾರೆ.. ಅದರಲ್ಲಿಯೂ ಮಾವಿನ ಹಣ್ಣು ನುಗ್ಗೆಕಾಯಿಯ ಜೋಕ್ಸ್ ಮಾಡ್ತಾರೆ..

ನಿನ್ನೆ ನುಗ್ಗೆಕಾಯಿ ತಿನ್ಸಿದ್ದೀನಿ ಇವತ್ತು ಅದಾಗಲೇ ಮಾವಿನ ಹಣ್ಣು ತಿನ್ಸ್ತೀನಿ ಅಂತಾನೆ.. ಕಾಮಿಡಿ ಮಾಡವನು ಯಾವತ್ತು ಹೆಣ್ಣನ್ನ ಈ ರೀತಿ ಬಳಸಿಕೊಂಡು ಮಾನವೀಯತೆ ಮರಿಬಾರದು.. ಪತ್ರವಳ್ಳಿ ಆಟ ಅಂತಾನೆ.. ಆ ಪದಕ್ಕೆ ಕನ್ನಡದ ಡಿಕ್ಷನರಿಯಲ್ಲಿ ಪೊದೆ ಗಳ ಸಂದಿಯಲ್ಲಿ ನಡೆಯುವ ಗಂಡು ಹೆಣ್ಣಿನ ಆಟ ಅಂತಲೇ ಇರೋದು.. ಇವನು ನನ್ನ ಬಗ್ಗೆ ಮಾತನಾಡ್ತಾನೆ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು.. ಆ ಬಳಿಕ ಮಂಜು ಸಹ ಮಾತನಾಡಿ ಇಲ್ಲಿ ಎಲ್ಲಾ ಮಜಾ ತಗೊಂಡು ಹೊರಗೆ ಹೋಗಿ ಇವರಿಗೆ ನೆನಪಾಯ್ತಾ ಎಂದರು.. ಅಷ್ಟೇ ಅಲ್ಲದೇ ಚಕ್ರವರ್ತಿ ಅವರು ಯಾವ ರೀತಿ ಬಂದಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು ಎನ್ನುವ ಪದ ಬಳಸಿದ್ದು ಆ ಪದಕ್ಕೆ ಚಕ್ರವರ್ತಿ ಚಂದ್ರಚೂಡ ಅವರು ಆಕ್ಷೇಪ ವ್ಯಕ್ತ ಪಡಿಸಿ ನಾನು ಯಾವ ರೀತಿ ಬಂದೆ ಎಂದು ಹೇಳು ಅಂತ ಕೇಳಲಾಗಿ ಇತ್ತ ಮಂಜು ಪಾವಗಡ ಅವರಲ್ಲಿ ಉತ್ತರವಿಲ್ಲದೆ ಬೆಪ್ಪಾದ ಪ್ರಸಂಗವು ನಡೆಯಿತು..

ಇನ್ನೂ ಸುದೀಪ್ ಅವರು ಶೋ ಮುಗಿಸಿದ ನಂತರವೂ ಇದೇ ವಿಚಾರ ಮನೆಯಲ್ಲಿ ಚರ್ಚೆಯಾಗಿದ್ದು ಚಕ್ರವರ್ತಿ ಚಂದ್ರಚೂಡ ಅವರನ್ನು ಅರವಿಂದ್ ದಿವ್ಯಾ ವೈಷ್ಣವಿ ಶಮಂತ್ ರಘು ಎಲ್ಲರೂ ಸಹ ಸಮಾಧಾನ ಪಡಿಸಿದರೆ ಅತ್ತ ಮಂಜು ಮಾತ್ರ ಎಲ್ಲಾದರು ಎಡವಿದೆನಾ ಎಂದು ಆಲೋಚನೆ ಮಾಡುವಂತೆಯೇ ಕಾಣುತಿತ್ತು.. ಇನ್ನೂ ಇತ್ತ ದಿವ್ಯಾ ಸುರೇಶ್ ಮಾತ್ರ ಸುದೀಪ್ ಅವರ ಕಾರ್ಯಕ್ರಮ ಇದ್ದಷ್ಟೂ ಸಮಯ ಕಣ್ಣನ್ನು ಒರೆಸಿಕೊಳ್ಳುತ್ತಲೇ ಇದ್ದರು.. ಆದರೆ ಕಣ್ಣೀರೆ ಬರದಿದ್ದರೂ ಕಣ್ಣು ಒರೆಸಿಕೊಳ್ಳುತ್ತಿರುವ ಹಾಗೆ ನಡೆದುಕೊಳ್ಳುತ್ತಿದ್ದಾರೆ ದಿವ್ಯಾ ಸುರೇಶ್ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತುಗಳು ಕೇಳಿ ಬಂತು.. ಇನ್ನು ಸುದೀಪ್ ಅವರು ಹೋದ ನಂತರವೂ ದಿವ್ಯಾ ಸುರೇಶ್ ಈ ಕಣ್ಣು ಒರೆಸುವ ಪ್ರಸಂಗ ನಡೆದರೂ ಸಹ ಅಷ್ಟಾಗಿ ಯಾರೂ ಸಹ ತಲೆ ಕೆಡಿಸಿಕೊಳ್ಳದೇ ತಮ್ಮ ತಮ್ಮ ಕೆಲಸದ ಕಡೆ ಗಮನ ಕೊಟ್ಟು ಸುಮ್ಮನಾದರು..

ಒಟ್ಟಿನಲ್ಲಿ ಬಿಗ್ ಬಾಸ್ ಬಲ್ಲಿ ದೊಡ್ಡದೊಂದು ಬೆಂಕಿ ಹೊತ್ತುಕೊಂಡಿದ್ದು ಇನ್ನು ಇರುವಷ್ಟು ದಿನ ಇದರ ಹೊಗೆಯಾಡುವುದು ಸುಳ್ಳಲ್ಲ.. ಇನ್ನೂ ಬಿಗ್ ಬಾಸ್ ನಲ್ಲಿ ಈ ಮಟ್ಟದ ಜಗಳ ನಡೆದಿದ್ದು ಇದೇ ಮೊದಲ ಬಾರಿಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಚಕ್ರವರ್ತಿ ಚಂದ್ರಚೂಡ ಅವರಿಗೆ ಹೆಚ್ಚು ಜನರು ಬೆಂಬಲಿಸಿದ್ದು ಮಂಜು ಪಾವಗಡ ಅವರು ಹೇಳಿದ್ದೂ ಸರಿ ಎಂದೂ ಸಹ ಕೆಲವರು ನಿಂತಿದ್ದಾರೆ.. ಒಟ್ಟಿನಲ್ಲಿ ಬಿಗ್ ಬಾಸ್ ನಲ್ಲಿ ಅಸಲಿ ಆಟಗಳು ಮುಂದೆ ಶುರುವಾಗುತ್ತವೆ ನೋಡುತ್ತಿರಬೇಕಷ್ಟೇ..