ಅದೇಗೆ ಒಬ್ಬ ಹೆಣ್ಣು ಮಗಳನ್ನ ಮಂಜು ಪಾವಗಡ ಸರಸಕ್ಕೆ ಕರಿತಾನೆ.. ಟಮೋಟೋ ಹಣ್ಣಿನ ಕೀಳು ಜೋಕ್ ಗಳನ್ನ ಹೇಳ್ತಾನೆ.. ಸುದೀಪ್ ಅವರ ಮುಂದೆಯೇ ಸಿಡಿದೆದ್ದ ಚಕ್ರವರ್ತಿ ಚಂದ್ರಚೂಡ‌.. ಮಾಡಿದ್ದೇನು ಗೊತ್ತಾ..

0 views

ಬಿಗ್ ಬಾಸ್ ಸೀಸನ್ ಎಂಟರ ಎರಡನೇ ಇನ್ನಿಂಗ್ಸ್ ನ ಮೊದಲ ವಾರದ ಕತೆಯಲ್ಲಿ ನಿಜಕ್ಕೂ ಸ್ಪರ್ಧಿಗಳ ಕಿಚ್ಚು ಹೆಚ್ಚಾಗಿದೆ ಎನ್ನಬಹುದು.. ನಲವತ್ತೈದು ದಿನಗಳ ಕಾಲ ತಮ್ಮ ತಮ್ಮ ಬಗ್ಗೆ ಯಾರ್ ಯಾರು ಏನೇನು ಮಾತನಾಡಿದ್ದಾರೆ ಎಂಬುದನ್ನ ಚೆನ್ನಾಗಿ ನೋಡಿ ತಿಳಿದುಕೊಂಡು ಬಂದಿರುವ ಅಷ್ಟೂ ಸ್ಪರ್ಧಿಗಳು ಇದೀಗ ತಮ್ಮ ಹೊಟ್ಟೆಯಲ್ಲಿಯೇ ಆ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ಸಮಯ ಬಂದಾಗ ಒಂದೊಂದೆ ಮಾತುಗಳನ್ನಿ ಹೊರ ಹಾಕುತ್ತಿದ್ದಾರೆ.. ಅದರಲ್ಲಿಯೂ ಮಂಜು ಪಾವಗಡ ಹಾಗೂ ಚಕ್ರವರ್ತಿ ಚಂದ್ರಚೂಡ ಅವರ ನಡುವಿನ ವಾಕ್ಸಮರ ತಾರಕಕ್ಕೇರಿದ್ದು ಇದೀಗ ಕಿಚ್ಚ ಸುದೀಪ್ ಅವರ ಮುಂದೆಯೇ ಮಂಜು ಪಾವಗಡ ಒಬ್ಬ ಹೆಣ್ಣು ಮಗಳ ಜೊತೆ ನಡೆದುಕೊಂಡ ರೀತಿಯನ್ನಿ ವಿವರಿಸಿ ಗ್ರಹಚಾರವನ್ನೇ ಬಿಡಿಸಿದ್ದಾರೆನ್ನಬಹುದು..

ಅದರಲ್ಲಿಯೂ ಚಕ್ರವರ್ತಿ ಚಂದ್ರಚೂಡ ಅವರ ಮಾತುಗಳು ಮಂಜು ಪಾವಗಡ ಅವರನ್ನು ತಬ್ಬಿಬ್ಬುಗೊಳಿಸಿದ್ದು ಮಂಕಾಗಿ ಕೂತಿದ್ದೂ ಸಹ ಸತ್ಯವೇ.. ಹೌದು ಚಕ್ರವರ್ತಿ ಚಂದ್ರಚೂಡ ಅವರು ಕಳೆದ ಇನ್ನಿಂಗ್ಸ್ ನಲ್ಲಿ ವೈಕ್ಡ್ ಕಾರ್ಡ್ ಮೂಲಕ ಬಂದಾಗಿನಿಂದಲೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ.. ನೇರವಾಗಿ ಮಾತನಾಡೋದು ಕೆಲವರಿಗೆ ಇಷ್ಟವಾದರೆ..‌ ಕೆಲವೊಂದು ವಿಚಾರಗಳನ್ನು ಅಲ್ಲಿಂದ ಇಲ್ಲಿಗೆ ಹೇಳೋದು ಕೆಲವರಿಗೆ ಇಷ್ಟವಾಗಿರಲಿಲ್ಲ.. ಇನ್ನು ನಲವತ್ತೈದು ದಿನಗಳ ಗ್ಯಾಪ್ ನಲ್ಲಿ ಸಾಕಷ್ಟು ಸಂದರ್ಶನಗಳಲ್ಲಿ ಸಾಕಷ್ಟು ಸ್ಪರ್ಧಿಗಳ ಬಗ್ಗೆ ಹೇಳಿಕೆಗಳನ್ನು ನೀಡಿದ್ದರು.. ಆ ಕುರಿತು ಸಹ ವೈಷ್ಣವಿ ಕೆಲ ವಿಚಾರಗಳನ್ನು ಚರ್ಚೆ ಮಾಡಿ ನೀವು ಮಾಡುದ್ದು ತಪ್ಪು ಎಂದಿದ್ದರು.. ಇನ್ನು ಇದೆಲ್ಲವನ್ನು ಹೊರತು ಪಡಿಸಿ ಎರಡನೇ ಇನ್ನಿಂಗ್ಸ್ ಆರಂಭವಾದ ಸನಯದಿಂದಲೂ ಮಂಜು ಪಾವಗಡ ದಿವ್ಯಾ ಹಾಗೂ ಚಕ್ರವರ್ತಿ ಮತ್ತು ಪ್ರಶಾಂತ್ ಸಂಬರ್ಗಿ ಅವರ ನಡುವೆ ಒಂದಿಲ್ಲೊಂದು ಕಿರಿಕ್ ಗಳು ನಡೆಯುತ್ತಲೇ ಇದೆ..

ಅದರಲ್ಲಿಯೂ ಮಂಜು ಪಾವಗಡ ಅವರ ಮನಸ್ಸಿನಲ್ಲಿ ಸಾಕಷ್ಟು ಇಟ್ಟುಕೊಂಡೇ ಅವರಿಬ್ಬರ ಬಗ್ಗೆ ಮಾತನಾಡುತ್ತಿರುವುದು ಎದ್ದು ಕಾಣುತ್ತಿದೆ.. ಇನ್ನು ಈ ಎಲ್ಲಾ ವಿಚಾರಗಳು ವಾರದ ಕತೆಯಲ್ಲಿ ಸುದೀಪ್ ಅವರ ಮುಂದೆ ಹೊರ ಬಂದಿವೆ.‌ ಅದರಲ್ಲಿಯೂ ಮಂಜು ಪಾವಗಡ ಅವರ ಮೇಲೆ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.. ಹೌದು ಮಂಜು ಪಾವಗಡ ಅವರು ಹೊಸದರಲ್ಲಿ ದಿವ್ಯಾ ಸುರೇಶ್ ಅವರ ಜೊತೆ ಮಾಡುತ್ತಿದ್ದ ಜೋಕ್ ಗಳು ಜನರಿಫ಼ೆ ಇಷ್ಟವಾಗಿದ್ದೇನೋ ಸತ್ಯ.. ಆದರೆ ಬರುಬರುತ್ತಾ ಅದು ಅತಿರೇಕಕ್ಕೆ ಹೋದಾಗ ಬೇರೆ ರೀತಿಯ ಅರ್ಥದಲ್ಲಿ ಜೋಕ್ ಗಳು ಬಂದಾಗ ಜನರು ಸಹ ಕಿರಿಕಿರಿ ಮಾಡಿಕೊಂಡಿದ್ದರು.. ವಾಹಿನಿಯವರು ಸಹ ಅಷ್ಟಾಗಿ ಕೆಲವನ್ನು ಪ್ರಸಾರ ಮಾಡುತ್ತಿರಲಿಲ್ಲ..

ಆದರೆ ಮನೆಯೊಳಗೆ ಇದ್ದ ಸ್ಪರ್ಧಿಗಳಿಗೆ ಯಾವ ದೃಶ್ಯಗಳೂ ಕಟ್ ಆಗದೇ ನೇರ ಪ್ರಸಾರದಲ್ಲಿ ನೋಡಲು ಸಿಗುತ್ತಿದ್ದ ಕಾರಣ ಮಂಜು ಪಾವಗಡ ಅವರು ದಿವ್ಯಾ ಸುರೇಶ್ ಜೊತೆ ನಡೆದುಕೊಳ್ಳುತ್ತಿದ್ದ ರೀತಿ ಹಲವರಿಗೆ ಹಿಡಿಸಿರಲಿಲ್ಲ.. ಅದರಲ್ಲಿ ಒಬ್ಬರು ಚಕ್ರವರ್ತಿ ಚಂದ್ರಚೂಡ ಅವರು.. ಅವರು ಇದೇ ವಿಚಾರವನ್ನು ನಿನ್ನೆ ಸುದೀಪ್ ಅವರ ಮುಂದೆ ಪ್ರಸ್ತಾಪ ಮಾಡಿ ಮಾತನಾಡಿದ್ದಾರೆ.. ಹೌದು ಸಂಡೇ ಸ್ಪೆಶಲ್ ಕಾರ್ಯಕ್ರಮದಲ್ಲಿ ಚಕ್ರವರ್ತಿ ಚಂದ್ರಚೂಡ ಅವರು ಮಾತನಾಡಿದ್ದು “ಶ್ರೀಮಾನ್ ಮಂಜು ಒಆವಗಡ ಅವರು ಒಂದು ಹೆಣ್ಣನ್ನ ಒಂದು ಶೋಗೋಸ್ಕರ ಅದೇಗೆ ಹೆಂಡತಿಯನ್ನಾಗಿ ಮಾಡ್ಕೋತಾರೆ ಸರ್.. ಸರಸಕ್ಕೆ ಕರೆಯೋತರ.. ಕೀಳು ಮಟ್ಟದ ಟಮೋಟೋ ಹಣ್ಣಿನ ಜೋಕ್ ಗಳನ್ನ ಹೇಳೋತರ.. ಎಂದಿದ್ದಾರೆ.. ಇದಕ್ಕೆ ಉತ್ತರ ಕೊಟ್ಟ ಮಂಜು ಪಾವಗಡ ಇಲ್ಲಿ ಇದ್ದ ಎಲ್ಲರಿಗೂ ಗೊತ್ತಿತ್ತು ಅದು ನಾಟಕ ಅಂತ..

ಅದಕ್ಕೆ ಉತ್ತರ ಕೊಟ್ಟ ಪ್ರಶಾಂತ್ ಅವರು ನನ್ನ ತಂದೆ ತಾಯಿ ಕಲಿಸಿಲ್ಲ ಸರ್ ಸರಸಕ್ಕೆ ಕರೆಯೋದು ಕೆಟ್ಟ ಕೆಟ್ಟ ಜೋಕ್ ಗಳನ್ನು ಹೇಳೋದನ್ನ ಎಂದಿದ್ದಾರೆ.. ಇದಕ್ಕೆ ಮರು ಉತ್ತರ ಕೊಟ್ಟ ಮಂಜು ಪಾವಗಡ ಇಲ್ಲಿದ್ದಾಗ ನಕ್ಕುಬಿಟ್ಟು.. ಮಜಾ ಮಾಡಿಬಿಟ್ಟು.. ಹೊರಗೆ ಹೋದಮೇಲೆ ಇದೆಲ್ಲಾ ಅಸಹ್ಯ ಆಗೋಯ್ತಾ ಎಂದರು.. ಅದಕ್ಕೆ ಮರು ಉತ್ತರ ಕೊಟ್ಟ ಚಕ್ರವರ್ತಿ ಚಂದ್ರಚೂಡ ಅವರು ಯಾವುದೇ ಹಾಸ್ಯಗಾರನಾದರು ತಾನು ಮಾಡುವ ಹಾಸ್ಯದಲ್ಲಿ ಯಾವತ್ತೂ ಸಹ ಮಾನವೀಯತೆಯನ್ನು ಬಿಟ್ಟುಕೊಡಬಾರದು..‌ ಯಾವುದೇ ಕೃತಕತೆ ನಡೆದರೂ ನಾನು ಹೋರಾಡೋದು ಸತ್ಯ ಸರ್..ಎಂದು ಕೋಪ ತಡೆಯಲಾಗದೇ ಬಿಗ್ ಬಾಸ್ ಮನೆಯ ಗೋಡೆಗೆ ತನ್ನ ಕೈಯನ್ನು ಹೊಡೆದುಕೊಂಡಿದ್ದಾರೆ.. ಒಟ್ಟಿನಲ್ಲಿ ಬಿಗ್ ಬಾಸ್ ಭಾನುವಾರದ ಕಾರ್ಯಕ್ರಮದಲ್ಲಿ ದೊಡ್ಡದೊಂದ ರಣರಗದ ಸನ್ನಿವೇಶವೇ ಪ್ರಸಾರವಾಗಲಿದ್ದು ಸುದೀಪ್ ಅವರು ಏನು ಹೇಳಲಿದ್ದಾರೆ ಎಂದು ಕಾದು ನೋಡಬೇಕಿದೆ