ನನ್ನನ್ನು ಅವನು ಆ ಜಾಗದಲ್ಲಿ ಮುಟ್ಟುತ್ತಿದ್ದಾನೆ.. ನಿಧಿ ಸುಬ್ಬಯ್ಯ ಗಂಭೀರ ಆರೋಪ.. ಯಾರ ಮೇಲೆ ಗೊತ್ತಾ?

0 views

ಬಿಗ್ ಬಾಸ್ ಶುರುವಾಗಿ ವಾರ ಕಳೆಯುತ್ತಿದ್ದಂತೆ ಮನೆಯಲ್ಲಿ ಮನಸ್ತಾಪಗಳು ಶುರುವಾಗಿದೆ.. ಕಳೆದಷ್ಟು ಸೀಸನ್ ಗಳಲ್ಲಿ ಶುರುವಿನ ಒಂದಷ್ಟು ವಾರಗಳು ಅನ್ಯೂನ್ಯವಾಗಿದ್ದು ನಂತರದಲ್ಲಿ ಭಿನ್ನಾಭಿಪ್ರಾಯಗಳು ಕಿರಿಕ್ ಗಳು ಆರಂಭವಾಗುತ್ತಿದ್ದವು.. ಆದರೆ ಈ ಸೀಸನ್ ನಲ್ಲಿ ಮೊದಲ ವಾರವೇ ಮನೆಯಲ್ಲಿ ಕಿರಿಕ್ ಶುರುವಾಗಿದ್ದು ಇದೀಗ ಎರಡನೇ ವಾರದಲ್ಲಿ ಸ್ಪರ್ಧಿಯೊಬ್ಬರ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ..

ಹೌದು ಈ ಸೀಸನ್ ಶುರುವಾಗಿ ಅದಾಗಲೇ ವಾರ ಕಳೆದಿದ್ದು ಧನುಶ್ರೀ ಮೊದಲನೇ ವಾರದಲ್ಲಿಯೇ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಾಯ್ತು.. ಇದೀಗ ಎರಡನೇ ವಾರದಲ್ಲಿ ಫಿಸಿಕಲ್ ಟಾಸ್ಕ್ ಗಳು ಶುರುವಾಗಿದ್ದು ಮಾನವರು ಹಾಗೂ ವೈರಸ್ ನ ಗುಂಪಿನ ನಡುವೆ ಜಿದ್ದಾಜಿದ್ದಿ ಆರಂಭವಾಗಿದೆ.. ಎರಡೂ ಗುಂಪು ಸಹ ತಾವೇ ಗೆಲ್ಲಬೇಕೆಂಬ ಪಣತೊಟ್ಟಿದ್ದು ಮುಖ ಮೂತಿ ನೋಡದೇ ಅಟವಾಡುತ್ತಿದ್ದಾರೆನ್ನಬಹುದು.. ಇನ್ನು ಈ ನಡುವೆ ನಟಿ ನಿಧಿ ಸುಬ್ಬಯ್ಯ ಅವರು ಮತ್ತೊಬ್ಬ ಸ್ಪರ್ಧಿಯ ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ..

ಹೌದು ನನ್ನ ಯಾವುದೋ ಜಾಗವನ್ನು ಅವನು ಮುಟ್ಟುತ್ತಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದು ಆಟದ ಸಂಪೂರ್ಣ ದಿಕ್ಕೇ ಬದಲಾಗಿದೆ.‌ ಹೌದು ನಟಿ ನಿಧಿ ಸುಬ್ಬಯ್ಯ ಆರೋಪ ಮಾಡಿರುವುದು ಮತ್ಯಾರ ಮೇಲೂ ಅಲ್ಲ ಅದು ಮಂಜು ಪಾವಗಡ ಅವರ ಮೇಲೆ..

ಮನೆಯ ಸದಸ್ಯರನ್ನು ವೈರಸ್ ಹಾಗೂ ಮಾನವ ಗುಂಪು ಎಂದು ಎರಡು ಮಾಡಿಕೊಂಡಿದ್ದು ವೈರಸ್ ಗುಂಪಿನ ನಾಯಕನಾಗಿ ಪ್ರಶಾಂತ್ ಸಂಬರ್ಗಿ.. ಮಾನವ ಗುಂಪಿನ ನಾಯಕನಾಗಿ ಮಂಜು ಪಾವಗಡ ಆಯ್ಕೆಯಾಗಿದ್ದು ತಂಡವನ್ನು ಮುನ್ನಡೆಸುತ್ತಿದ್ದಾರೆ.. ಇತ್ತ ವೈರಸ್ ಗುಂಪಿನಲ್ಲಿರುವ ನಿಧಿ ಸುಬ್ಬಯ್ಯ.. ಮಾನವ ಗುಂಪಿನ ನಾಯಕನಾದ ಮಂಜು ಪಾವಗಡ ಅವರ ಮೇಲೆ ಆರೋಪ ಮಾಡಿ ಅಳಲು ತೋಡಿಕೊಂಡಿದ್ದಾರೆ..

ಹೌದು ನಮ್ಮ ತಂಡದವರು ಯಾರೂ ಸಹ ಹುಡುಗಿಯರನ್ನು ಮುಟ್ಟಿಲ್ಲ.. ಆದರೆ ಮಂಜು ಮತ್ತು ಶಮಂತ್ ಬೇಕು ಬೇಕಂತಲೇ ನನ್ನನ್ನು ಎಲ್ಲೆಲ್ಲೋ ಮುಟ್ಟುತ್ತಿದ್ದಾರೆ.. ಮುಟ್ಟಿ ಎಸೆಯುತ್ತಿದ್ದಾರೆ.. ಪರಚುತ್ತಿದ್ದಾರೆ.. ಪ್ಲಾನ್ ಮಾಡಿಕೊಂಡು ಬಂದು ನಮ್ಮನ್ನು ಹಿಡಿದುಕೊಳ್ಳುತ್ತಿದ್ದಾರೆ.. ನಮಗೆ ಹೇಸಿಗೆ ಎನಿಸುತ್ತಿದೆ.. ದಯವಿಟ್ಟು ಈ ಆಟ ಸಾಕು.. ಇಲ್ಲಿಗೆ ನಿಲ್ಲಿಸಿ ಎಂದು ಕಣ್ಣೀರಿಟ್ಟಿದ್ದಾರೆ..

ಇತ್ತ ನಿಧಿ ಸುಬ್ಬಯ್ಯ ಈ ರೀತಿ ಹೇಳಿದಾಕ್ಷಣ ಅವರ ಆರೋಪವನ್ನು ಮಂಜು ತಳ್ಳಿಹಾಕಿದ್ದಾರೆ.. ನಾನು ಎಲ್ಲೂ ಮುಟ್ಟಿಲ್ಲ.. ಯಾವುದೇ ಉದ್ದೇಶ ಪೂರ್ವಕವಾಗಿ ನಾನು ಯಾರನ್ನು ಸಹ ಹಿಡಿದುಕೊಂಡಿಲ್ಲ.. ನಮಗೆ ಖುಷಿಖುಷಿಯಾಗಿ ಆಟವನ್ನು ಆಡಬೇಕು ಎಂಬ ಉದ್ದೇಶ ಇತ್ತು.. ಆದರೆ ನೀವುಗಳೇ ಆಟದ ದಿಕ್ಕನ್ನು ಬದಲಿಸಿದ್ದು.. ಈಗ ಈ ರೀತಿ ಆರೋಪ ಮಾಡುತ್ತಿದ್ದೀರಾ ಎಂದು ತಿರುಗೇಟು ನೀಡಿದ್ದಾರೆ.‌

ಒಟ್ಟಿನಲ್ಲಿ ಮುಟ್ಟಿದವರ್ಯಾರೋ.. ಮುಟ್ಟಿಸಿಕೊಂಡವರ್ಯಾರೋ.. ಆಟವನ್ನು ಆಟದ ರೀತಿ ಆಡಬೇಕಷ್ಟೇ.. ಗೆಲ್ಲಬೇಕೆಂದು ಒಂದು ತಂಡ ತಂತ್ರವನ್ನು ರೂಪಿಸಿದರೆ ಮತ್ತೊಂದು ತಂಡ ಪ್ರತಿತಂತ್ರ ರೂಪಿಸುತ್ತದೆ.. ಆದರೆ ಸದ್ಯ ನಿಧಿ ಸುಬ್ಬಯ್ಯ ಪರವಾಗಿ ಒಂದಷ್ಟು ಜನ.. ಮಂಜು ಪಾವಗಡ ಪರವಾಗಿ ಒಂದಷ್ಟು ಜನ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧವಾಗಿ ಮಾತುನಾಡುತ್ತಿದ್ದು ವಾರಾಂತ್ಯದಲ್ಲಿ ಈ ಬಗ್ಗೆ ಸುದೀಪ್ ಅವರ ಪ್ರತಿಕ್ರಿಯೆ ಏನಿರಬಹುದು ಕಾದು ನೋಡಬೇಕಿದೆ..