ಮಂಜು ವಿರುದ್ಧ ಎಲ್ಲರನ್ನೂ ಎತ್ತಿ ಕಟ್ಟುತ್ತಿರುವ ಪ್ರಶಾಂತ್ ಸಂಬರ್ಗಿ.. ಎಷ್ಟು ಸಣ್ಣತನ‌.. ನಿಜವಾದ ಕಾರಣವೇನು ಗೊತ್ತಾ?

0 views

ಬಿಗ್ ಬಾಸ್ ಕನ್ನಡ ಸೀಸನ್ ಎಂಟರಲ್ಲಿ ಮೊದಲ ಒಂದೆರೆಡು ವಾರಗಳಲ್ಲಿಯೇ ಜನರ ಮನಗೆದ್ದ ಮಂಜು ಪಾವಗಡ ಅವರು ಸಿಕ್ಕಪಟ್ಟೆ ಸ್ಪೀಡ್ ನಲ್ಲಿಯೇ ಮನರಂಜನೆ ನೀಡಿ ಮುನ್ನುಗ್ಗುತ್ತಿದ್ದರು.. ಸಾಮಾಜಿಕ ಜಾಲತಾಣದಲ್ಲಿಯೂ ಮಂಜು ಅವರನ್ನು ಸಿಕ್ಕಾಪಟ್ಟೆ ಇಷ್ಟ ಪಟ್ಟು ನಾಮಿನೇಷನ್ ನಿಂದ ಸೇಫ್ ಮಾಡಿದ್ದರು.. ಆದರೆ ಅದ್ಯಾಕೋ ನಾಲ್ಕನೇ ವಾರ ಶುರುವಾಗುತ್ತಲೇ ಮಂಜು ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಕೆಲ ವಕ್ರದೃಷ್ಟಿಗಳು ಬಿದ್ದಂತೆ ಕಾಣುತ್ತಿವೆ..

ಹೌದು ಕಳೆದ ವಾರವಷ್ಟೇ ಮನೆಯವರೆಲ್ಲಾ ಇಷ್ಟ ಪಡುವ ಸದಸ್ಯ ಮಂಜು ಪಾವಗಡ ಅವರು ಎಂದು ನಿರ್ಧರಿಸಿ ತುಲಾಭಾರ ಕೂಡ ಮಾಡಿ ತಮ್ಮ ತಮ್ಮ ಇಷ್ಟವಾದ ವಸ್ತುಗಳನ್ನು ಬಿಗ್ ಬಾಸ್ ಗೆ ನೀಡಿದ್ದರು.. ಆದರೆ ನಾಲ್ಕನೇ ವಾರದಲ್ಲಿ ಮನೆಯ ಮತ್ತೊಬ್ಬ ಸದಸ್ಯರಾದ ಪ್ರಶಾಂತ್ ಸಂಬರ್ಗಿ ಅವರು ಮನೆಯ ಮಿಕ್ಕೆಲ್ಲಾ ಸದಸ್ಯರ ಬಳಿ ಹೋಗಿ ಮಂಜು ಅವರ ಬಗ್ಗೆ ಎತ್ತಿಕಟ್ಟುತ್ತಿದ್ದು ಸರಿಯಾಗಿ ಪ್ಲಾನ್ ಮಾಡಿ ಮಂಜು ವಿರುದ್ಧ ಸದಸ್ಯರು ನಿಲ್ಲುವಂತೆ ಮಾಡುವುದು ಎದ್ದು ಕಾಣುತ್ತಿದೆ..

ಹೌದು ಅದಾಗಲೇ ಮನೆಯಲ್ಲಿ ಮಂಜು ಪಾವಗಡ ಅವರು ಹೈಲೈಟ್ ಆಗಿರುವುದು ಪ್ರಶಾಂತ್ ಅವರಿಗೆ ಮಾತ್ರವಲ್ಲದೇ ಎಲ್ಲರಿಗೂ ತಿಳಿದೇ ಇದೆ.. ಆದರೆ ಪ್ರಶಾಂತ್ ಅವರಿಗೆ ಇದನ್ನಿ ಸಹಿಸಲು ಆಗಲಿಲ್ಲವೋ ಅಥವಾ ತಾವು ಹೈಲೈಟ್ ಆಗಲೆಂದೋ ಈ ವಾರದಲ್ಲಿ ಅದಾಗಲೇ ಮಂಜು ಜೊತೆ ಎರಡು ಮೂರು ಬಾರಿ ಮಾತಿಗೆ ಮಾತು ಬೆಳೆಸಿ ಜಗಳವನ್ನು ಸಹ ಆಡಿದ್ದರು..

ಆದರೀಗ ಮನೆಯ ಇತರ ಸದಸ್ಯರಾದ ದಿವ್ಯಾ ಸುರೇಶ್ ಹಾಗೂ ಶಮಂತ್ ಬಳಿ ತೆರಳಿ ಮಂಜು ಬಗ್ಗೆ ಚಾಡಿ ಮಾತುಗಳನ್ನು ಹೇಳುವ ಮೂಲಕ ಎತ್ತಿ ಕಟ್ಟುತ್ತಿರುವುದು ಎದ್ದು ಕಾಣುತ್ತಿದೆ.. ಹೌದು ದಿವ್ಯಾ ಸುರೇಶ್ ಬಳಿ ಹೋಗಿ ನಿಮ್ಮನ್ನು ಮಂಜು ಉಪಯೋಗಿಸಿಕೊಳ್ಳುತ್ತಿದ್ದಾನೆ.. ಅವನು ಹೈಲೈಟ್ ಆಗೋಕೆ ನಿಮ್ಮನ್ನು ಬಳಸಿಕೊಳ್ತಾ ಇದ್ದಾನೆ.. ನೀವು ಅವನ ಬಾಲದ ರೀತಿ ಆಗಿದ್ದೀರಾ‌.. ನೀವು ಸ್ಟ್ರಾಂಗ್.. ನನಗೆ ಅರ್ಥವಾಗಿದೆ.. ನೀವು ಸಹ ಅದನ್ನ ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ.. ಇನ್ನು ಮುಂದೆ ಒಬ್ಬಂಟಿಯಾಗಿ ಇರಿ ಎಂದು ಎತ್ತಿ ಕಟ್ಟಿದ್ದಾರೆ..

ಅಷ್ಟೇ ಅಲ್ಲದೇ ಶಮಂತ್ ಬಳಿಯೂ ತೆರಳಿ.. ಮಂಜು ಕತೆ ಮುಗಿತು.. ಅವನು ಇನ್ನು ಹೈ ಲೈಟ್ ಆಗಲ್ಲ.. ಎಲ್ಲದರಲ್ಲೂ ಅವನೇ ಇದ್ದ.. ಆದರೀಗ ಅವನು ಫುಲ್ ಡಮ್ಮಿ.. ನಿನಗೆ ತುಂಬಾ ಪವರ್ ಇದೆ.‌ ನೀನು ಓಪನ್ ಅಪ್ ಆಗು.. ನೀನು ನಂಬರ್ ಒನ್ ಆಗ್ತೀಯಾ ಎಂದು ಶಮಂತ್ ಬಳಿ ತೆರಳಿ ಮಂಜು ಬಗ್ಗೆ ಚುಚ್ಚಿದ್ದಾರೆ..

ಇದೇ ಸಮಯದಲ್ಲಿ ಸರಿಯಾದ ಟಾಸ್ಕ್‌ ಕೊಟ್ಟ ಬಿಗ್ ಬಾಸ್ ಅತಿ ಹೆಚ್ಚು ಮಾತನಾಡುವವರಿಗೆ ಮಾಸ್ಕ್ ಹಾಗೂ ಅತಿ ಕಡಿಮೆ ಮಾತನಾಡುವವರಿಗೆ ಮೈಕ್ ಬ್ಯಾಡ್ಜ್ ಗಳನ್ನು ಹಾಕಬೇಕಾಗಿ ಮನೆಯ ಸದಸ್ಯರಿಗೆ ಸೂಚಿಸಿದರು.. ಮನೆಯ ಬಹಳಷ್ಟು ಸದಸ್ಯರು ಮಂಜು ಅವರಿಗೆ ಮಾಸ್ಕ್ ನೀಡಿದ್ದು.. ನನ್ನ ಕೈಗೆ ನಿಜವಾದ ಮಾಸ್ಕ್ ಇದ್ದಿದ್ದರೆ ಅವನ ಬಾಯಿಗೆ ಹಾಕ್ತಿದ್ದೆ ಎಂದು ಖಾರವಾಗಿಯೇ ಎಲ್ಲರ ಮುಂದೆ ಹೇಳಿ ಪ್ರಶಾಂತ್ ಅವರು ಸಹ ಮಂಜುಗೆ ಮಾಸ್ಕ್ ಬ್ಯಾಡ್ಜ್ ಹಾಕಿದರು.. ಇತ್ತ ಮಂಜು ಕೂಡ ಪ್ರಶಾಂತ್ ಅವರಿಗೆ ಮಾಸ್ಕ್ ಬ್ಯಾಡ್ಜ್ ಹಾಕುವ ಮೂಲಕ ಅರ್ಥವಿಲ್ಲದೇ ಮಾತನಾಡುತ್ತಾರೆಂಬ ಕಾರಣ ನೀಡಿದರು..

ಇನ್ನೂ ಅದೆಲ್ಲವನ್ನು ಹೊರತು ಪಡಿಸಿ ಮತ್ತೊಬ್ಬರ ಮಾತಿಗೆ ಮನುಷ್ಯರು ಎಷ್ಟು ಪ್ರಭಾವಿತರಾಗುತ್ತಾರೆನ್ನುವುದಕ್ಕೆ ಉದಾಹರಣೆಯಂತೆ ಮನೆಯ ಕೆಲ ಸದಸ್ಯರು ಮಂಜು ಅವರ ಬಗ್ಗೆಯೇ ಪ್ರತ್ಯೇಕವಾಗಿ ಮಾತನಾಡಿಕೊಳ್ಳುವಂತಾಗಿದೆ.. ಇತ್ತ ಸಾಮಾಜಿಕ ಜಾಲತಾಣದಲ್ಲಿ ಪ್ರಶಾಂತ್ ಅವರ ನಡೆಗೆ ಟೀಕೆಗಳು ವ್ಯಕ್ತವಾಗಿದ್ದು ಇದು ಪ್ರಶಾಂತ್ ಅವರ ಸಣ್ಣತನ ಎಂದಿದ್ದಾರೆ‌..