ಬಿಗ್ ಬಾಸ್ ಮನೆಯಲ್ಲಿ ಮಾರಾಮಾರಿ.. ಒಮ್ಮೆಲೆ ಎಲ್ಲರೂ ಬಿಗ್‌ ಬಾಸ್‌ ಮನೆಯಿಂದ ಹೊರಕ್ಕೆ?

0 views

ಬಿಗ್ ಬಾಸ್ ಸೀಸನ್ ಎಂಟು ಅದ್ಯಾಕೋ‌ ಮನರಂಜನೆಗಿಂತ ಹೆಚ್ಚು ಸದ್ದು ಗದ್ದಲ ಗಲಾಟೆಗಳಿಂದಲೇ ಸುದ್ದಿಯಾಗುತ್ತಿದೆ.. ಪ್ರತಿದಿನವೂ ಜಗಳ ಇದ್ದೇ ಇರುತ್ತಿದೆ.. ಇಷ್ಟು ದಿನಗಳ ಕಾಲ ಪ್ರಶಾಂತ್ ಸಂಬರ್ಗಿ ಜೊತೆಯಲ್ಲಿ ಒಬ್ಬರಲ್ಲ ಒಬ್ಬರು ಜಗಳವಾಡುತ್ತಲೇ ಇದ್ದರು.. ಆದರೀಗ ಕೋಪ ಅತಿಯಾಗಿದೆ.. ಮಾತು ಮೈಮೇಲೆ ಬೀಳುವಂತೆ ಮಾಡಿದೆ.. ಕೋಪಕ್ಕೆ ಕಡಿವಾಣ ಹಾಕಲು ಸ್ಪರ್ಧಿಗಳು ಸೋತಿದ್ದಾರೆ.. ಹೌದು ಪ್ರಶಾಂತ್ ಸಂಬರ್ಗಿ ಮೊದಮೊದಲು ಸ್ವಲ್ಪ ಕಿರಿಕಿರಿ ಅನಿಸಿದ್ದರೂ ಸಹ ಸದ್ಯದ ಪರಿಸ್ಥಿತಿಯಲ್ಲಿ ಅವರನ್ನು ಎಲ್ಲರೂ ಟಾರ್ಗೆಟ್ ಮಾಡುತ್ತಿದ್ದಾರೆ ಅನ್ನೋ ಮಾತು ಪ್ರೇಕ್ಷಕರ ಬಾಯಿಂದಲೂ ಬರುತ್ತಿದ್ದು ಎಲ್ಲಾ ವಿಚಾರಗಳಲ್ಲಿಯೂ ಪ್ರಶಾಂತ್ ರನ್ನು ಬೆಂಬಲಿಸದಿದ್ದರೂ ಕೆಲವೊಂದು ವಿಚಾರದಲ್ಲಿ ಪ್ರಶಾಂತ್ ರದ್ದು ಏನೂ ತಪ್ಪಿಲ್ಲದಿದ್ದರೂ ಅವರನ್ನು ಮನೆಯ ಇತರ ಸದಸ್ಯರು ಟಾರ್ಗೆಟ್ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ..

ಇನ್ನು ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಮಾರಾಮಾರಿಯಾಗಿದ್ದು ಎಲ್ಲರೂ ಕೈಮಿಲಾಯಿಸುವ ಹಂತಕ್ಕೆ ಬಂದು ನಿಂತಿದ್ದಾರೆ.. ಇಷ್ಟಕ್ಕೆಲ್ಲಾ ಕಾರಣ ಬಿಗ್ ಬಾಸ್ ಮನೆಯ ನಂಬರ್ ಒನ್ ಪಟ್ಟ.. ಹೌದು ಬಿಗ್ ಬಾಸ್ ನಲ್ಲಿ ಇಂದಿನ ಸಂಚಿಕೆಯಲ್ಲಿ ಇದೆಲ್ಲವೂ ಪ್ರಸಾರವಾಗಲಿದೆ.. ಬಿಗ್ ಬಾಸ್ ನಲ್ಲಿ ಯಾರು ನಂಬರ್ ಒನ್ ಯಾರು ನಂಬರ್ 2 ಹೀಗೆ ಯಾವ ಯಾವ ಸ್ಪರ್ಧಿ ಯಾವ ಯಾವ ಸ್ಥಾನದಲ್ಲಿದ್ದಾರೆ ಎಂಬುದನ್ನು ಎಲ್ಲರೂ ಒಮ್ಮತದಿಂದ ಆಯ್ಕೆ ಮಾಡಬೇಕಾಗಿತ್ತು.. ಈ ಸಮಯದಲ್ಲಿ ನಂಬರ್ ಒನ್ ಪಟ್ಟಕ್ಕೆ ಜಗಳ ಶುರುವಾಗಿದೆ.. ಹೌದು ಅರವಿಂದ್ ಹಾಗೂ ಮಂಜು ಪಾವಗಡ ನಂಬರ್ ಒನ್ ಸ್ಥಾನ ಬೇಕು ಎಂದು ನಿಂತಿದ್ದರು.. ಇದಕ್ಕೆ ಆಕ್ಷೇಪಣೆ ವ್ಯಕ್ತ ಪಡಿಸೊದ ಪ್ರಶಾಂತ್ ಅವರು ಮನೆಯಲ್ಲಿ ಮಂಜು ಅರವಿಂದ್ ಮಾತ್ರವಲ್ಲ ನಂಬರ್ ಒನ್.. ಇತರರು ಸಹ ಇದ್ದಾರೆ ಎಂದಿದ್ದಾರೆ.. ಈ ಮಾತಿಗೆ ಪ್ರಿಯಾಂಕ ಕೂಡ ಸಹಮತ ವ್ಯಕ್ತ ಪಡಿಸಿದ್ದು ಮಂಜು ಅರವಿಂದ್ ಮಾತ್ರ ಯಾಕೆ ನಂಬರ್ ಒನ್ ಗೆ ನಿಲ್ಲಬೇಕು ಎಂದಿದ್ದಾರೆ..

ಇನ್ನೂ ಇಲ್ಲಿಂದ ಶುರುವಾದ ಮಾತು ಅತಿರೇಕಕ್ಕೆ ತಿರುಗಿದೆ.. ಅರವಿಂದ್ ಒಂದರಲ್ಲಿ ಮಂಜು ಎರಡರಲ್ಲಿ ನಿಂತಿದ್ದರು.. ಇತ್ತ ಪ್ರಶಾಂತ್ ನಾನು ದಿವ್ಯಾ ಸುರೇಶ್ ಗಿಂತ ಕಡೆನಾ? ಅವರಿಗಿಂತ ಸ್ಟ್ರಾಂಗ್ ಇದ್ದೀನಿ ಎಂದಿದ್ದಾರೆ.. ನಂತರ ಅರವಿಂದ್ ನಾನು ನಿನ್ನ ಫ್ರೆಂಡ್ ಅಲ್ಲ.. ನೀನು ನನ್ನ ಫ್ರೆಂಡ್ ಅಲ್ಲ ಎಂದಿದ್ದಾರೆ.. ಇದಕ್ಕೆ ಉತ್ತರಿಸಿದ ಪ್ರಶಾಂತ್.. ನಿನ್ನನ್ನ ಯಾರು ಫ್ರೆಂಡ್ ಅಂದರು ಹೋಗು ಸುಮ್ಮನೆ ಎಂದಿದ್ದು ಮಂಜು ಯಾಕೆ ಎರಡನೇ ಸ್ಥಾನದಲ್ಲಿ ನಿಲ್ಲಬೇಕು? ಏಳನೇ ಸ್ಥಾನದಲ್ಲಿ ನಿಲ್ಲಲಿ ಎಂದ್ದಿದ್ದೇ ತಡ.. ಮಂಜು ಪಾವಗಡ ತಿರುಗಿ ಬಿದ್ದಿದ್ದಾರೆ..

ನಿನ್ನದು ಎಷ್ಟಿದಿಯೋ ಅಷ್ಟು ಮಾತನಾಡು.. ನನ್ನ ವಿಷಯಕ್ಕೆ ಬರಬೇಡ ಎಂದಿದ್ದಾರೆ.. ನನ್ನ ವಿಷಯ ತೆಗೆಯೋಕೆ ನೀನ್ ಯಾರೋ.. ನೀನ್ ಯಾವನೋ? ಎಂದು ಮಂಜು ಸಹ ಇದ್ದ ಜಾಗದಿಂದ ಎದ್ದು ಬಂದು ಪ್ರಶಾಂತ್ ಮುಂದೆ ನಿಂತಿದ್ದಾರೆ.. ಇತ್ತ ಪ್ರಶಾಂತ್ ಸಹ ಸುಮ್ಮನಾಗದೆ ನನ್ನ ನಿಯತ್ತು ಎಷ್ಟಿದೆ ಅಂತ ನನಗೆ ಗೊತ್ತಿದೆ.. ಅದಕ್ಕೆ ಮಾತಾಡ್ತೀನಿ ಏನೀಗ? ಇಲ್ಲಿ ಎಲ್ಲರಿಗೂ ಅಣ್ಣ ತಮ್ಮ ಅಕ್ಕ ತಂಗಿ ಆಗಕ್ಕಾಗಲ್ಲ.. ಎಂದು ಮಂಜು ಮುಂದೆ ಬಂದು ನಿಂತಿದ್ದಾರೆ.. ಇಬ್ಬರೂ ಕೈ ಮಿಲಾಯಿಸುವ ಹಂತಕ್ಕೆ ಬಂದು ನಿಂತಿದ್ದು ಹೀಗೆ ಆದರೆ.. ಕೋಪಕ್ಕೆ ಕಡಿವಾಣ ಹಾಕದೆ ಬಾಯಿಗೆ ಬಂದಂತೆ ಮಾತನಾಡಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡರೆ ಖಂಡಿತ ಎಲ್ಲರೂ ಸಾರಾಸಗಟಾಗಿ ಮನೆಯಿಂದ ಹೊರ ಬರುವುದಂತೂ ಸತ್ಯ.. ಬಹುಶಃ ಇನ್ನು ಕೆಲವೇ ದಿನಗಳಲ್ಲಿ ಇದೇ ರೀತಿ ನಡೆಯುತ್ತಿದ್ದರೆ ಈ ಸೀಸನ್ ಆ ದಾಖಲೆಯನ್ನೂ ಸಹ ಬರೆಯಬಹುದಾಗಿದೆ..

ಅಲ್ರಯ್ಯಾ ನಂಬರ್ ಗಳನ್ನು ಕಟ್ಕೊಂಡ್ ಏನಾಗ್ಬೇಕು.. ಬಿಗ್ ಬಾಸೇ ಪ್ರಪಂಚ ಅನ್ನೋ ರೀತಿ ಆಡೋದನ್ನಿ ಬಿಟ್ಟು ಇದ್ದಷ್ಟು ದಿನ ಅವರೂ ಎಂಜಾಯ್ ಮಾಡಿಕೊಂಡು ಪ್ರೇಕ್ಷಕರಿಗೂ ಮನರಂಜನೆ ಕೊಟ್ಕೊಂಡು ಹೊರ ಬರಬೇಕು.. ಅದನ್ನು ಬಿಟ್ಟು ಬಿಗ್ ಬಾಸೇ ಸರ್ವಸ್ವ.. ಅಲ್ಲಿ ಗೆದ್ದುಬಿಟ್ಟರೆ ಮತ್ತಿನ್ನೇನೋ ಸಿಗತ್ತೆ ಅನ್ನೋ ರೀತಿ ಆಡ್ತಿದ್ದಾರೆ.. ಆದರೆ ಅವರಿಗೇನು ಗೊತ್ತು ಅಲ್ಲಿ‌ಸಿ ಗೋದು ಹಣ ಮಾತ್ರ.. ಆದರೆ ಇತ್ತ ಬಿಗ್ ಬಾಸ್ ಮನೆಯಿಂದ ಆಚೆ ಕೋಟಿ ಕೋಟಿ ಹಣ ಇದ್ದವರೆಲ್ಲಾ ಕೊನೆಯದಾಗಿ ಕುಟುಂಬದ ಮುಖವನ್ನೂ ಸಹ ನೋಡಲಾಗದೇ ಚಿತಾಗಾರದ ಮುಂದೆ ಸಾಲು ಸಾಲಾಗಿ ಮಲಗಿದ್ದಾರೆ ಅಂತ..