ಬಿಗ್ ಬಾಸ್ ನಲ್ಲಿ‌ ಮಂಜು ಹಾಕಿಕೊಳ್ಳುತ್ತಿದ್ದ ಬಟ್ಟೆಗಳಿಗಾಗಿ ದುಡ್ಡು ಕೊಡುತ್ತಿದ್ದ ಆ ಮಹಿಳೆ ಯಾರು ಗೊತ್ತಾ.. ಹೇಳಿಕೊಂಡು ಭಾವುಕರಾದ ಮಂಜು ಪಾವಗಡ‌..

0 views

ಬಿಗ್ ಬಾಸ್ ಸೀಸನ್‌ ಎಂಟರಲ್ಲಿ ಗೆಲುವು ಕಂಡ ಮಂಜು ಪಾವಗಡ ಅವರ ಕತೆ ಇದೀಗ ಒಂದೊಂದಾಗಿಯೇ ಹೊರ ಬರುತ್ತಿದೆ.. ಹೌದು ಜೀವನದಲ್ಲಿ ಆತ ಪಟ್ಟ ಕಷ್ಟಗಳಿಗೆ ಇದೀಗ ಒಂದು ರೀತಿ ಮುಕ್ತಿ ದೊರೆಯಿತೆನ್ನಬಹುದು.. ಆದರೆ ಆತನ ಕಷ್ಟದ ಜರ್ನಿಯಲ್ಲಿ ಜೊತೆಯಾದವರನ್ನು ನೆನಪಿಸಿಕೊಳ್ಳುವುದನ್ನು ಮಂಜು ಮರೆಯಲಿಲ್ಲ.. ಹೌದು ಕೆಲವರು ಕಷ್ಟದಲ್ಲಿದ್ದಾಗ ಸ್ನೇಹಿತರ ಜೊತೆ ಇರ್ತಾರೆ.. ಆತನಿಗೆ ಸುಖ ಬಂದಾಗ ತನ್ನ ಕಷ್ಟದಲ್ಲಿ ಸಹಾಯ ಮಾಡಿದವರನ್ನೇ ಮರೆತು ಬಿಡ್ತಾನೆ.. ಆದರೆ ಮಂಜು ಇದೆಲ್ಲವನ್ನು ಮೈಗೂಡಿಸಿಕೊಳ್ಳಲಿಲ್ಲ.. ತನ್ನ ಕಷ್ಟದ ದಿನಗಳನ್ನಿ ಹಾಗೂ ತನಗೆ ಆ ದಿನಗಳಲ್ಲಿ ಸಹಾಯ ಮಾಡಿದವರನ್ನು ಇಂದೂ ಸಹ ನೆನಪಿಸಿಕೊಂಡು ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ.. ಆದರೆ ಬಿಗ್ ಬಾಸ್ ಮನೆ ಎಂಬುದು ಬಣ್ಣದ ಮನೆ ಅನ್ನೋದು ಎಲ್ಲರಿಗೂ ತಿಳಿದೇ ಇದೆ..

ಆ ಮನೆಯಲ್ಲಿ ದಿನಕ್ಕೊಂದು ಬಟ್ಟೆ ಹಾಕಿದರೇ ಬೆಲೆ.. ಅಂತಹ ಮನೆಯಲ್ಲಿ ಮದ್ಯಮವರ್ಗದ ಹುಡುಗ ಮಂಜು ಹಾಕುತ್ತಿದ್ದ ಬಟ್ಟೆಗಳಿಗೆ ದುಡ್ಡು ಕೊಟ್ಟದ್ದು ಒಬ್ಬ ಮಹಿಳೆ.. ಆ ವಿಚಾರವನ್ನು ಇದೀಗ ಮಂಜು ಹೇಳಿಕೊಂಡು ಭಾವುಕರಾಗಿದ್ದಾರೆ.. ಹೌದು ಆ ಮಹಿಳೆ ಕರುನಾಡಿಗೆ ಗೊತ್ತಿರುವ ಚಿರಪಚಿತರೂ ಹೌದು.. ಹೌದು ಮೊದಲೇ ಹೇಳಿದಂತೆ ಬಿಗ್ ಬಾಸ್ ಮನೆ ಬಣ್ಣದ ಮನೆಯಂತೆ.. ಇಪ್ಪತ್ತ ನಾಲ್ಕು ಗಂಟೆಯೂ ಪ್ರೇಕ್ಷಕರಿಗೆ ಪಾರದರ್ಶಕವಾಗಿರುವ ಅಲ್ಲಿನ ಸ್ಪರ್ಧಿಗಳು ಬಣ್ಣ ಬಣ್ಣವಾಗಿಯೇ ಇರಬೇಕು ಅನ್ನೋದು ವಾಸ್ತವ.. ಅದೇ ರೀತಿ ಅಲ್ಲಿ ಬಂದಿದ್ದ ಎಲ್ಲರೂ ಬಹಳ ಅನುಕೂಲಸ್ತರೇ ದಿನಕ್ಕೆರೆಡು ಬಟ್ಟೆ ಹಾಕುವಷ್ಟು ಅನುಕೂಲವಾಗಿ ಇದ್ದವರೇ.. ಆದರೆ ಇತ್ತ ಮಂಜು ಪಾವಗಡ ಮದ್ಯಮ ಕುಟುಂಬದಿಂದ ಬಂದವ..

ಎರಡು ವರ್ಷಗಳಿಂದ ಮಜಾಭಾರತದಲ್ಲಿ ಕಾಣಿಸಿಕೊಂಡರೂ ಸಹ ಆತ ಪ್ರತಿದಿನವೂ ಹೊಸ ಬಟ್ಟೆ ಹಾಕುವಷ್ಟು ಬೆಳೆದಿರಲಿಲ್ಲ.. ಮದ್ಯಮ ವರ್ಗದ ಕುಟುಂಬದ ಕಮಿಂಟ್ಮೆಂಟ್ ಗಳು ಎಲ್ಲರಿಗೂ ತಿಳಿದಿರುವಂತದ್ದೇ.. ಇನ್ನು ಬಿಗ್ ಬಾಸ್ ಗೆ ಆಯ್ಕೆಯಾದ ನಂತರ ಬಿಗ್ ಬಾಸ್ ಮನೆಯಲ್ಲಿ‌ ಇದ್ದವರಂತೆ ಈತನೂ ಸಹ ಇರಬೇಕಾದದ್ದು ಅನಿವಾರ್ಯ.. ಇನ್ನು ಮಂಜು ಸಹ ಎಲ್ಲರಂತೆ ಡಿಸೈನರ್ ಬಟ್ಟೆಗಳನ್ನೇ ಹಾಕಿಕೊಳ್ಳುತ್ತಿದ್ದದ್ದು ಸುದೀಪ್ ಅವರ ಗಮನಕ್ಕೂ ಬಂದಿತ್ತು.. ಹೌದು ಮಂಜು ಪಾವಗಡ ಅವರ ಸ್ನೇಹಿತನೊಬ್ಬ ಡಿಸೈನರ್ ಆಗಿದ್ದು ಆತನೇ ಮಂಜುಗಾಗಿ ಪ್ರತಿಯೊಂದು ಬಟ್ಟೆಯನ್ನು ಡಿಸೈನ್ ಮಾಡಿ ಕಳುಹಿಸುತ್ತಿದ್ದನು..ಆದರೆ ಇದಕ್ಕೆಲ್ಲಾ ಹಣ ಯಾರು ಕೊಡುತ್ತಿದ್ದರು ಎಂಬುದೇ ಕುತೂಹಲ..

ಹೌದು ಇದಕ್ಕೆಲ್ಲಾ ಮಂಜು ಸಹ ಸ್ವಲ್ಪ ಹಣ ಕೊಟ್ಟು ಬಂದಿದ್ದ.. ಆದರೆ ಅದನ್ಮು ಹೊರತುಪಡಿಸಿ ಆತನ ಬಟ್ಟೆಗಳಿಗೆ ಹಣ ಕೊಡುತ್ತಿದ್ದವರು ಒಬ್ಬ ಮಹಿಳೆ.. ಆ ಮಹಿಳೆ ಮತ್ಯಾರೂ ಅಲ್ಲ ಕನ್ನಡದ ಸ್ಟಾರ್ ನಟಿ.. ಹೌದು ನಟಿ ರಚಿತಾರಾಮ್ ಅವರೇ ಮಂಜು ಪಾವಗಡ ಅವರ ಬಟ್ಟೆಗಳಿಗಾಗಿ ಡಿಸೈನರ್ ಗೆ ಹಣ ಕೊಡುತ್ತಿದ್ದರು.. ಮಜಾಭಾರತ ಶೋ ಮೂಲಕ ಪರಿಚಯವಾದ ಮಂಜು ಪಾವಗಡ ಅವರ ಪರಿಸ್ಥಿತಿ ತಿಳಿದಿದ್ದ ರಚಿತಾರಾಮ್ ಅವರು ಬಿಗ್ ಬಾಸ್ ನಲ್ಲಿ ಮಂಜು ಒಳ್ಳೊಳ್ಳೆ ಬಟ್ಟೆ ಹಾಕಿಕೊಳ್ಳಲಿ ಎಂದು ಡಿಸೈನರ್ ಗೆ ಹಣ ಕಳುಹಿಸಿಕೊಡುತ್ತಿದ್ದರು.. ಅಷ್ಟೇ ಅಲ್ಲದೇ ಫಿನಾಲೆಯಲ್ಲಿ ಮಂಜು ಹಾಕಿದ್ದ ಬಟ್ಟೆಯನ್ನು ಖುದ್ದು ಅವರೇ ಸೆಲೆಕ್ಟ್ ಮಾಡಿ ಕಳುಹಿಸಿ ಕೊಟ್ಟಿದ್ದರಂತೆ..

ಆದರೆ ಈ ವಿಚಾರ ಮಂಜುವಿಗೆ ತಿಳಿದಿರಲಿಲ್ಲ.. ಹೊರ ಬಂದ ಬಳಿಕವೇ ಮಜಾಭಾರತದ ಸ್ನೇಹಿತರು ಹೇಳಿದ ನಂತರ ಮಂಜುಗೆ ರಚಿತಾ ರಾಮ್ ಅವರ ವಿಚಾರ ತಿಳಿದಿದ್ದು ಸಂದರ್ಶನವೊಂದರಲ್ಲಿ ಬಹಳಷ್ಟು ಜನರು ನನಗೆ ಈ ರೀತಿ ಪ್ರೀತಿ ತೋರಿಸಿದ್ದಾರೆ.. ರಚಿರಾ ರಾಮ್ ಅವರು ದೊಡ್ಡ ನಟಿ ಆದರೂ ಸಹ ನಮ್ಮೆಲ್ಲರ ಜೊತೆ ಪ್ರೀತಿ ವಿಶ್ವಾಸದಿಂದ ಇರುತ್ತಿದ್ದರು.. ಈಗ ನನಗೆ ಬಟ್ಟೆ ಕಳುಹಿಸಿಕೊಟ್ಟಿದ್ದಾರೆ.. ಇದೆಲ್ಲಾ ಅವರ ದೊಡ್ಡಗುಣ ಎಂದು ಭಾವುಕರಾದರು..