ಅಪ್ಪನ ಬಗ್ಗೆ ಮಾತಾಡಿದ್ರೆ ಸರಿ ಇರಲ್ಲ.. ಮಂಜು.. ಪ್ರಶಾಂತ್ ಸಂಬರ್ಗಿ ನಡುವೆ ದೊಡ್ಡ ಮಟ್ಟದಲ್ಲಿಯೇ ಗಲಾಟೆ ಕೈ ಮಿಲಾಯಿಸುವ ಹಂತಕ್ಕೆ.. ನಿಜಕ್ಕೂ ನಡೆದದ್ದೇನು ಗೊತ್ತಾ?

0 views

ಬಿಗ್ ಬಾಸ್ ಮನೆಯಲ್ಲಿ ಇಂದು ಯಾರೂ ಊಹಿಸಿರದ ದೊಡ್ಡ ರಂಪಾಟವೊಂದು ನಡೆದಿದ್ದು.. ಕೈ ಮಿಲಾಯಿಸುವ ಹಂತಕ್ಕೆ ಬಂದು ನಿಂತಿತ್ತು.. ಹೌದು ಮಂಜು ಪಾವಗಡ ಹಾಗೂ ಪ್ರಶಾಂತ್ ಸಂಬರ್ಗಿ ನಡುವೆ ದೊಡ್ಡ ಮಟ್ಟದಲ್ಲಿಯೇ ಗಲಾಟೆ ನಡೆದಿದ್ದು ಕುಟುಂಬದವರನ್ನೆಲ್ಲಾ ಎಳೆದು ತಂದಿದ್ದಾರೆ.. ಹೌದು ಪ್ರಶಾಂತ್ ಸಂಬರ್ಗಿ ಹಾಗೂ ಮಂಜು ಪಾವಗಡ ಮೊದಲ ಎರಡು ವಾರಗಳು ಅನ್ಯೂನ್ಯವಾಗಿಯೇ ಇದ್ದರು.. ಆದರೆ ಅದ್ಯಾಕೋ ಮೂರನೇ ವಾರದಿಂದ ಇಬ್ಬರ ನಡುವೆ ಮನಸ್ತಾಪ ಹೆಚ್ಚಾಗಿದ್ದು ಆಗಾಗ ಮನೆಯಲ್ಲಿ ಕಿರಿಕ್ ಗಳು ನಡೆಯುತ್ತಲೇ ಇದೆ.. ಕೂಗಾಟ ಕಿರುಚಾಟಕ್ಕೆ ನಿಲ್ಲುತ್ತಿದ್ದ ಮನಸ್ತಾಪಗಳು ಇಂದು ಕುಟುಂಬದವರನ್ನೆಲ್ಲಾ ಎಳೆದು ತರುವ‌ ಮಟ್ಟಕ್ಕೆ ಬಂದು ನಿಂತಿದೆ..

ಹೌದು ಅದರಲ್ಲೂ ಬಿಗ್ ಬಾಸ್ ಮನೆಗೆ ಚಕ್ರವರ್ತಿ ಚಂದ್ರಚೂಡ ಬಂದ ನಂತರ ಮನೆಯ ವಾತಾವರಣವೇ ಬದಲಾಗಿದೆ ಎನ್ನಬಹುದು.. ಚಂದ್ರಚೂಡ ಮತ್ತು ಪ್ರಶಾಂತ್ ಸಂಬರ್ಗಿ ಮಾತನಾಡುವ ರೀತಿಗೆ ಇವರಿಬ್ಬರು ಬಿಗ್ ಬಾಸ್ ಮನೆಯ ಶಕುನಿಗಳು ಎಂದೂ ಸಹ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ.. ಇನ್ನು ಇವರಿಬ್ಬರು ನಿನ್ನೆ ಈಜುಕೊಳದಲ್ಲಿ ನಿಂತು ಹಾಡು ಹೇಳುತ್ತಿರುವ ಸಮಯದಲ್ಲಿ ಅತ್ತ ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದ ಇತರ ಸ್ಪರ್ಧಿಗಳು ಮಾತನಾಡುತ್ತಿದ್ದರು.. ಆ ಸಮಯದಲ್ಲಿ ದಿವ್ಯಾ ಸುರೇಶ್ ಅವರು ಪ್ರಶಾಂತ್ ಸಂಬರ್ಗಿ ಹಾಗೂ ಚಂದ್ರಚೂಡ ಅವರಿಗೆ ವಾಯ್ಸ್ ಸ್ವಲ್ಪ ಕಡಿಮೆ ಇದ್ದಿದ್ದರೆ ಚೆನ್ನಾಗಿರ್ತಿತ್ತು ಎಂದಿದ್ದರೆ.. ಅಷ್ಟಕ್ಕೆ ಮಂಜು ಜೊತೆ ಮಾತನಾಡುವಾಗ ಅವತ್ತು ಧ್ವನಿ ಹೆಚ್ಚಿದ್ದರೆ ಚೆನ್ನಾಗಿರ್ತಿತ್ತಾ ಎಂದು ಚಂದ್ರಚೂಡ ಪ್ರಶ್ನೆ ಮಾಡಿದ್ದಾರೆ.. ಜೊತೆಗೆ ಬೆಡ್ ರೂಮಿನಲ್ಲಿ ಜೋರಾಗಿ ಮಾತನಾಡಿದ್ರೆ ಹೇಳು ಎಂದಿದ್ದಾರೆ..

ಆ ಸಮಯದಲ್ಲಿ ಮಂಜು “ನಾನ್ ಏನಾದ್ರು ಇವಾಗ ಮಾತಾಡಿದ್ನಾ? ನನಗ್ಯಾಕೆ ಹೇಳ್ತಿದ್ದೀರಾ ಎಂದಿದ್ದಾರೆ.. ಆ ತಕ್ಷಣ ಏಯ್ ನಿನಗಲ್ಲ ನಿನ್ನ ಡವ್ ದಿವ್ಯಾ ಸುರೇಶ್ ಗೆ ಹೇಳಿದ್ದು ಎಂದು ಪ್ರಶಾಂತ್ ಸಂಬರ್ಗಿ ಮಂಜುಗೆ ಹೇಳಿದ್ದಾರೆ.. ಡವ್ ಎನ್ನುವ ಪದ ಬಳಕೆ ಮಾಡಿದ್ದು ದಿವ್ಯಾ ಸುರೇಶ್ ನೆತ್ತಿಗೆ ಏರಿಸಿದೆ.. ತಕ್ಷಣ ಪ್ರತಿಕ್ರಿಯೆ ನೀಡಿದ ದಿವ್ಯಾ ಸುರೇಶ್ ಡವ್ ಗಿವ್ ಅಂತ ಹೇಳೋಕೆ ನೀನ್ಯಾರು.. ನಿನಗ್ಯಾರು ಹಕ್ಕು ಕೊಟ್ಟಿದ್ದು ನನ್ನ ಯಾಕ್ ಹಾಗ್ ಅಂತೀಯಾ ಎಂದು ಪ್ರಶಾಂತ್ ರನ್ನ ಪ್ರಶ್ನೆ ಮಾಡಿದ್ದಾರೆ.. ಮಾತಿಗೆ ಮಾತು ಬೆಳೆದು ನಿಂತಿದೆ.. ಇತ್ತ ಪ್ರಶಾಂತ್ ಡವ್ ಅಂತಾನು ಅಂತೀನಿ.. ಲವರ್ ಅಂತಾನು ಅಂತೀನಿ ಏನೀವಾಗ ಎಂದಿದ್ದಾರೆ.. ಆಗ ಮಂಜು ಪಾವಗಡ ಮಾತನಾಡಿ.. ಏಯ್ ಮಾವ ಅವತ್ತೆ ಹೇಳಿದ್ದೀನಿ ಏನ್ ಹೇಳೋದಿದ್ರು ನನಗೆ ಡೈರೆಕ್ಟ್ ಆಗಿ ಹೇಳು ಅಂತ.. ಆಗ ಪ್ರಶಾಂತ್ ಸಂಬರ್ಗಿ ಮಾತನಾಡಿ ಯಾರೋ ನಿನ್ ಮಾವ ಎಂದಿದ್ದಾರೆ.. ಆಗ ನೀನೆ ಮಾವ ಎಂದಿದ್ದಾರೆ ಮಂಜು..

ಯಾರೋ ನಿನ್ ಮಾವ.. ನಿಮ್ ಅಪ್ಪ ಹೇಳಿದ್ನಾ? ಎಂದು ಕುಟುಂಬದವರ ವಿಚಾರ ಎಳೆದಿದ್ದಾರೆ.‌. ಅಪ್ಪನ ಬಗ್ಗೆ ಮಾತನಾಡಿದ್ದಕ್ಕೆ ಇತ್ತ ಮಂಜು ಪಾವಗಡ ಕೂಡ ಕೋಪಗೊಂಡಿದ್ದು ಅಪ್ಪನ್ ಬಗ್ಗೆ ಮಾತಾಡ್ಬೇಡ ಸರಿ‌ ಇರಲ್ಲ ಎಂದಿದ್ದಾರೆ.. ಅತ್ತ ಪ್ರಶಾಂತ್ ಸಂಬರ್ಗಿ ನಾನೇನ್ ಬರೆದುಕೊಟ್ಟಿದ್ದೀನಾ ಮಾವ ಅಂತ.. ಮಾವ ಅಂತೆ ಮಾವ ಎಂದು ಸ್ವಿಮ್ಮಿಂಗ್ ಪೂಲಿನಲ್ಲಿಯೇ ಕೂಗಾಡಿದ್ದಾರೆ.. ಇತ್ತ ನಮ್ ಅಪ್ಪನ ಬಗ್ಗೆ ಮಾತಾಡಿದ್ರೆ ಈಗ ನಾನ್ ಏನ್ ಮಾಡ್ತೀನೋ ನನಗೆ ಗೊತ್ತಿಲ್ಲ ನೀನ್ ಯಾವನೋ ಲೇಯ್.. ಎಂದು ಏಕವಚನದಲ್ಲಿ ಪ್ರಶಾಂತ್ ಬಳಿ ತೆರಳಿದ್ದಾರೆ..

ಸದ್ಯ ಮನೆಯ ಇತರ ಸ್ಪರ್ಧಿಗಳು ಕೆಲವರು ನೋಡುತ್ತಾ ಸುಮ್ಮನೆ ನಿಂತಿದ್ದರೆ ಮತ್ತೆ ಕೆಲವರು ಇಬ್ಬರನ್ನು ಸಮಾಧಾನ ಪಡಿಸಲು ಮುಂದಾಗಿದ್ದಾರೆ.. ಒಟ್ಟಿನಲ್ಲಿ ಈ ವಾರದ ಕೊನೆಯಲ್ಲಿ ಪ್ರಶಾಂತ್ ಹಾಗೂ ಮಂಜು ಪಾವಗಡ ಲ್ರ ವಿಚಾರ ಸುದೀಪ್ ಅವರ ಮುಂದೆ ಚರ್ಚೆ ಆಗೋದಂತು ಗ್ಯಾರಂಟಿ ಆಗಿದ್ದು ಯಾರದ್ದು ತಪ್ಪು ಯಾರದ್ದು ಸರಿ ಎಂದು ಕಿಚ್ಚನ ಪಂಚಾಯಿತಿಯಲ್ಲಿ ತಿಳಿಯಲಿದೆ.. ಜೊತೆಗೆ ಅಲ್ಲಿ ಏನೇ ಚರ್ಚೆ ಆದರೂ ಕುಟುಂಬದವರ ವಿಚಾರ ಎಳೆ ತರಬಾರದಿತ್ತು.. ಈ ಬಗ್ಗೆ ಸುದೀಪ್ ಗ್ರಹಚಾರ ಬಿಡಿಸೋದು ಸಹ ಗ್ಯಾರಂಟಿ ಎನ್ನಬಹುದು..