ಸಿಡಿ ಪ್ರಕರಣಕ್ಕೆ ಯಾರೂ ಊಹಿಸಿರದ ತಿರುವು.. ಯುವತಿ ಪರ ವಕಾಲತ್ತು ವಹಿಸಿದ್ದ ಲಾಯರ್ ಮಂಜುನಾಥ್ ಸ್ಥಿತಿ ಏನಾಗಿದೆ ನೋಡಿ..

0 views

ರಾಜ್ಯ ರಾಜಕಾರಣದ ಪ್ರಚಲಿತ ವಿಚಾರ ಸದ್ಯ ಕೊರೊನಾ ಬಿಟ್ಟು ಟ್ರೆಂಡಿಂಗ್ ನಲ್ಲಿರುವ ರಮೇಶ್ ಜಾರಕಿಹೋಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೊಡ್ಡ ತಿರುವು ದೊರೆತಿದೆ.. ಹೌದು ಯುವತಿ ಪರ ವಕಾಲತ್ತು ವಹಿಸಿದ್ದ ಲಾಯರ್ ಸ್ಥಿತಿ ಏನಾಗಿದೆ ನೋಡಿ.. ಹೌದು ಯುವತಿ ಕಳೆದ ಕೆಲ ದಿನಗಳ ಹಿಂದೆ ಸಹಾಯ ಕೋರಿ ಮನವಿ ಮಾಡಲಾಗಿ ಲಾಯರ್ ಜಗದೀಶ್ ಅವರು ತನ್ನನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದರು.. ಅದರಂತೆ ಯುವತಿ ಹಾಗೂ ಲಾಯರ್ ಜಗದೀಶ್ ಭೇಟಿಯಾಗಿ ತನ್ನ ಪರ ವಕಾಲತ್ತು ವಹಿಸಿ ಎಂದು ಕೇಳಿಕೊಂಡಿದ್ದಳು‌‌..

ಅದೇ ರೀತಿ ಯುವತಿ ಪರವಾಗಿ ಜಗದೀಶ್ ಅವರು ದೂರು ದಾಖಲಿಸಿದ್ದರು.. ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇನಸ್ ಆಗಿರುವ ಲಾಯರ್ ಜಗದೀಶ್ ಅವರು ಆಗಾಗ ಫೇಸ್ಬುಕ್ ಲೈವ್ ಬರುವ ಮೂಲಕ ಸಿಡಿ ಪ್ರಕರಣದ ಬಗ್ಗೆ ಮಾಹಿತಿ ನೀಡುತ್ತಿದ್ದರು.. ಅಷ್ಟೂ ದಿನಗಳ ಕಾಲ ಜಗದೀಶ್ ಅವರೇ ಯುವತಿಯ ಪರವಾಗಿ ವಕಾಲತ್ತು ವಹಿಸಿದ್ದಾರೆ ಎನ್ನಲಾಗಿತ್ತು.. ಆದರೆ ಅಸಲಿ ಸತ್ಯ ಬೇರೆಯೇ ಇತ್ತು.. ಯುವತಿ ಪರವಾಗಿ ವಕಾಲತ್ತು ವಹಿಸಿದ್ದು ಜಗದೀಶ್ ಅವರಲ್ಲ.. ಬದಲಿಗೆ ಸದಾ ಜಗದೀಶ್ ಅವರ ಜೊತೆಯಲ್ಲಿಯೇ ಇದ್ದ ವಕೀಲ ಮಂಜುನಾಥ್ ಅವರು.. ಹೌದು ವಕೀಲ ಮಂಜುನಾಥ್ ಅವರೇ ಯುವತಿ ಪರವಾಗಿ ವಕಾಲತ್ತು ವಹಿಸಿದ್ದರು.. ಆದರೀಗ ಮಂಜುನಾಥ್ ಗೆ ದೊಡ್ಡ ಸಂಕಷ್ಟ ಎದುರಾಗಿದೆ..

ಹೌದು ಮಂಜುನಾಥ್ ಅವರನ್ನು ಕರ್ನಾಟಕ ಬಾರ್ ಕೌನ್ಸಿಲ್ ನಿಂದ ಅಮಾನತು ಮಾಡಲಾಗಿದೆ.. ಹೌದು ಜಗದೀಶ್ ಅವರ ಸ್ನೇಹಿತ ಸದ್ಯ ಕರ್ನಾಟಕ ಬಾರ್ ಕೌನ್ಸಿಲ್ ನಲ್ಲಿ ರಿಜಿಸ್ಟರ್ ಆಗಿದ್ದರು.. ಆದರೀಗ ಅವರನ್ನು ಅಮಾನತು ಮಾಡಲಾಗಿದೆ.. ಇನ್ನು ಮುಂದೆ ಅವರು ವಾದ ಮಾಡುವಂತಿಲ್ಲ.. ಹೌದು ವಕೀಲ ಜಗದೀಶ್ ಹಾಗೂ ವಕೀಲ ಮಂಜುನಾಥ್ ಅವರು ಫೇಸ್ಬುಕ್ ಲೈವ್ ನಲ್ಲಿ ವಕೀಲ ಪರಿಷತ್ತಿನ ಬಗ್ಗೆ ಇಲ್ಲಸಲ್ಲದ್ದು ಮಾತನಾಡಿ ಕೆಲ ಆರೋಪ ಮಾಡಿದ್ದರು.. ವಕೀಲರ ಕ್ಷೇಮಾಭಿವೃದ್ಧಿಗೆ ಇರುವ ವೆಲ್ಫೇರ್ ಸ್ಟ್ಯಾಂಪ್ ಗಳ ಬಗ್ಗೆ ಮಾತನಾಡಿದರು ಎಂಬ ಕಾರಣಕ್ಕೆ ಮಂಜುನಾಥ್ ಅವರನ್ನು ಅಮಾನತು ಮಾಡಲಾಗಿದೆ..

ಒಂದು ಕೇಸ್ ಪರವಾಗಿ ವಾದ ಮಾಡಬೇಕು ಎಂದರೆ ಪ್ರತಿಯೊಬ್ಬ ಲಾಯರ್ ಕೂಡ ಇಂತಿಷ್ಟು ಹಣ ಕಟ್ಟಿ ವೆಲ್ಫೇರ್ ಫಂಡ್ ಸ್ಟ್ಯಾಂಪ್ ಅನ್ನು ಪಡೆಯಬೇಕಿದೆ.. ಅದು ಒಂದು ರೀತಿ ವಾದ ಮಾಡಲು ಅನುಮತಿ ಪತ್ರ ವಿದ್ದಂತೆ.. ಆ ಹಣವನ್ನು ವಕೀಲರ ಕ್ಷೇಮಾಭಿವೃದ್ಧಿಗೆ ಬಳಸಲಾಗುತಿತ್ತು.. ಆ ಸ್ಟ್ಯಾಂಪ್ ಇಲ್ಲವಾದರೆ ಯಾವುದೇ ವಕೀಲ ರಾಜ್ಯದಲ್ಲಿ ವಾದ ಮಾಡುವಂತಿಲ್ಲ.. ಆದರೆ ಆ ಹಣದ ಬಗ್ಗೆ ಜಗದೀಶ್ ಹಾಗೂ ಮಂಜುನಾಥ್ ಅವರು ತಪ್ಪಾಗಿ ಮಾತನಾಡಿದರು ಎಂಬ ಕಾರಣಕ್ಕೆ ಕರ್ನಾಟಕ ಬಾರ್ ಕೌನ್ಸಿಲ್ ನಿಂದ ಮಂಜುನಾಥ್ ಅವರನ್ನು ಅಮಾನತು ಮಾಡಲಾಗಿದೆ..

ಹೌದು ರಾಜ್ಯ ವಕೀಲರ ಪರಿಷತ್ತು ಈ ಬಗ್ಗೆ ಸಭೆ ನಡೆಸಿ ಮಂಜುನಾಥ್ ಅವರಿಗೆ ನೋಟಿಸ್ ನೀಡಿದ್ದು ಮುಂದಿನ ಆದೇಶ ನೀಡುವವರೆಗೂ ಸನ್ನದನ್ನು ಅಮಾನತು ಗೊಳಿಸಿ ಆದೇಶ ನೀಡಲಾಗಿದೆ.. ಹತ್ತು ದಿನದ ಒಳಗಾಗಿ ನೋಟಿಸ್ ಗೆ ಉತ್ತರ ನೀಡಬೇಕಾಗಿದ್ದು ಇದರ ಕುರಿತು ವಿಚಾರಣೆ ಮುಗಿಯುವವರೆಗೂ ಮಂಜುನಾಥ್ ಎಲ್ಲಿಯೂ ವಕೀಲಿ ವೃತ್ತಿ ಮಾಡುವಂತಿಲ್ಲ.. ಇನ್ನು ಸದ್ಯ ಮಂಜುನಾಥ್ ಯುವತಿಯ ಕೇಸ್ ನಡೆಸುವುದು ಅಸಾಧ್ಯವಾಗಿದ್ದು.. ಈ ಕೇಸ್ ಅನ್ನು ಜಗದೀಶ್ ಕೈಬಿಡುವರೋ ಅಥವಾ ಮತ್ತೆ ಬೇರೆ ಯಾರಾದರು ಲಾಯರ್ ಈ ಕೇಸ್ ತೆಗೆದುಕೊಳ್ಳುವರೋ ಕಾದು ನೋಡಬೇಕಿದೆ.. ಇತ್ತ ಯುವತಿಯ ಕೇಸ್‌ ಕೂಡ ಇಲ್ಲ.. ಅತ್ತ ಬೇರೆ ಯಾವ ಕೇಸ್‌ ಕೂಡ ತೆಗೆದುಕೊಳ್ಳುವ ಹಾಗಿಲ್ಲ ಎನ್ನುವಂತಾಗಿದೆ ಮಂಜುನಾಥ್‌ ಅವರ ಪರಿಸ್ಥಿತಿ.