ಮನೆ ಮುಂದೆ ಆಟವಾಡುತ್ತಿದ್ದ ಒಂದು ವರ್ಷದ ಈ ಪುಟ್ಟ ಮಗು ಕ್ಷಣ ಮಾತ್ರದಲ್ಲಿ ಏನಾಗಿ ಹೋಯ್ತು ಗೊತ್ತಾ.. ನೋಡಿ ಬೆಚ್ಚಿಬಿದ್ದ ಕುಟುಂಬ..

0 views

ಮಕ್ಕಳನ್ನು ಅದರಲ್ಲೂ ಎಳೆ ಮಕ್ಕಳನ್ನು ಎಷ್ಟು ಜೋಪಾನ ಮಾಡಿದರೂ ಸಾಲದು ಎಂಬುದಕ್ಕೆ ಈ ಘಟನೆಯೇ ನೈಜ್ಯ ಉದಾಹರಣೆ.. ಹೌದು ವರ್ಷಗಳ ಕಾಲ ಮಕ್ಕಳಿಗಾಗಿ ದೇವರಲ್ಲಿ ಪ್ರಾರ್ಥನೆ ಮಾಡ್ತಾರೆ.. ಒಂಭತ್ತು ತಿಂಗಳು ಹೊತ್ತು ಹೆತ್ತು ಆ ಮಕ್ಕಳ ಬಗ್ಗೆ ಆ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಂಡಿರ್ತಾರೆ.. ಆದರೆ ಒಂದು ಸಣ್ಣ ಅಜಾಗರೂಕತೆ ಮಗುವನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಹೋಗಿ ನಿಲ್ಲುತ್ತದೆ ಎಂದರೆ ನಿಜಕ್ಕೂ ನಂಬಲೇ ಬೇಕಾದ ವಿಚಾರ.. ಅಂತಹುದೇ ಒಂದು ಮನಕಲಕುವ ಘಟನೆ ನಡೆದಿದ್ದು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ..

ಹೌದು ವಿಜಯಪುರ ಜಿಲ್ಲೆಯಲ್ಲಿ ಇಂತಹುದೊಂದು ಘಟನೆ ನಡೆದಿದ್ದು ಒಂದು ವರ್ಷದ ಎಳೆ ಕಂದ ಜೀವ ಕಳೆದುಕೊಂಡ ರೀತಿ‌ ನೋಡಿದರೆ ಕರುಳು ಕಿತ್ತುಬರುವಂತಿದೆ.. ಈ ಪುಟ್ಟ ಕಂದನ ಹೆಸರು ಮನವೀರ್.. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡಾದ ನಿವಾಸಿ ಹರೀಶ್ ಎಂಬುವವರ ಮಗ.. ವಯಸ್ಸು ಕೇವಲ ಒಂದು ವರ್ಷ ಎರಡು ತಿಂಗಳು.. ಬದುಕಿ ಬಾಳಬೇಕಾದ ಕಂದನೀಗ ಬಾರದ ಲೋಕಕ್ಕೆ ಪಯಣಿಸಿದ್ದು ಹೆತ್ತವರ ಸಂಕಟ ಮನಕಲಕುವಂತಿತ್ತು.

ಹೌದು ಮನವೀರ್ ನನ್ನು ಪ್ರತಿದಿನ ಮನೆಯಿಂದ ಹೊರಗೆ ಆಟವಾಡಲು ಬಿಡುತ್ತಿದ್ದರು.. ಮನೆಯ ಅಂಗಳದಲ್ಲಿ ಅಕ್ಕಪಕ್ಕದ ಮಕ್ಕಳ ಜೊತೆ ಪ್ರತಿದಿನ ಮನ್ವೀರ್ ಆಟವಾಡುತ್ತಿದ್ದ.. ಅದೇ ರೀತಿ ನಿನ್ನೆ ಸಂಜೆಯೂ ಸಹ ಅಕ್ಕಪಕ್ಕದ ಮಕ್ಕಳ ಜೊತೆ ಆಟವಾಡುತ್ತಿದ್ದ.. ಆದರೆ ಮಕ್ಕಳ ಕೈನಲ್ಲಿ ಏನಿರುತ್ತದೆ ಏನಿರುವುದಿಲ್ಲ ಎಂಬುದನ್ನು ಹೆತ್ತವರು ಗಮನಿಸದಿದ್ದರೆ ಇಂತಹ ಘಟನೆಗಳು ನಡೆಯೋದು ಖಂಡಿತ.. ಹೌದು ಮಕ್ಕಳು ಗಾಜಿನ ಗೋಲಿಗಳಲ್ಲಿ ಆಟವಾಡುತ್ತಿದ್ದದ್ದೇ ಆ ಕಂದನ ಜೀವ ಹೋಗಲು ಕಾರಣವಾಗಿ ಹೋಯ್ತು..

ಹೌದು ಮನ್ವೀರ್ ಮಕ್ಕಳ ಜೊತೆ ಆಟವಾಡುತ್ತಾ ಗಾಜಿನ ಗೋಲಿಯನ್ನು ಬಾಯಲ್ಲಿ ಹಾಕಿಕೊಂಡು ಕ್ಷಣ ಮಾತ್ರದಲ್ಲಿಯೇ ಅದನ್ನು ನುಂಗಿಬಿಟ್ಟಿದ್ದಾನೆ.. ಇದನ್ನು ನೋಡಿದ ಬೇರೊಬ್ಬ ಬಾಲಕ ವಿಚಾರವನ್ನು ಹೆತ್ತವರಿಗೆ ತಿಳಿಸಿದ್ದಾನೆ.. ಆದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಹೌದು ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹ ಹತ್ತು ನಿಮಿಷಗಳಲ್ಲಿಯೇ ಮಗು ಕೊನೆಯುಸಿರೆಳೆದುಬಿಟ್ಟಿತ್ತು..

ಒಂದು ಕಡೆ ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದರೆ ಇನ್ನೊಂದು ಕಡೆ ಮಗುವನ್ನು ಆಡಲು ಬಿಟ್ಟ ಆ ತಾಯಿಯ ಸಂಕಟ ಹೇಳತೀರದ್ದಾಗಿತ್ತು.. ಮಕ್ಕಳನ್ನು ಎಷ್ಟು ಜೋಪಾನ ಮಾಡಿದರೂ ಸಾಲದು.. ಅದರಲ್ಲೂ ಆಕರ್ಷಕ ವಸ್ತುಗಳನ್ನು ಕಂಡರೆ ಅವುಗಳನ್ನು ಬಾಯಲ್ಲಿ ಹಾಕಿಕೊಳ್ಳುವುದು ಸಹಜ.. ಅಂತಹ ಯಾವುದೇ ವಸ್ತುಗಳನ್ನು ಮಕ್ಕಳಿಂದ ದೂರ ಇಡುವುದೇ ಒಳ್ಳೆಯದು. ಅದರಲ್ಲೂ ಸಣ್ಣ ಮಕ್ಕಳ ಕೈ ಬಾಯಿಯನ್ನು ಆಗಗಾ ಗಮನಿಸಿ ಎಚ್ಚರಿಕೆ ವಹಿಸಲೇ ಬೇಕಿದೆ.. ಇಲ್ಲವಾದರೆ ಕಾಲ ಮಿಂಚಿ ಹೋದಮೇಲೆ ಎಷ್ಟೇ ಕಣ್ಣೀರಿಟ್ಟರು ಮಕ್ಕಳು ಮರಳಿ ಬರುವುದಿಲ್ಲ.. ಆಗ ಚಿಂತಿಸಿದರೂ ಫಲವಿಲ್ಲ.. ದಯವಿಟ್ಟು ಸಣ್ಣ ಮಕ್ಕಳ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಿ.. ಏನೂ ಅರಿಯದ ಈ ಪುಟ್ಟ ಕಂದ ಮನ್ವೀರ್ ಗೆ ಆದ ರೀತಿ ಮತ್ಯಾರಿಗೂ ಆಗದಿರಲಿ.. ಆ ಪುಟ್ಟ ಕಂದನಿಗೆ ಶಾಂತಿ ಸಿಗುವಂತಾಗಲಿ..