ಅದ್ಧೂರಿಯಾಗಿ ನೆರವೇರಿತು ನಟಿ ಮಯೂರಿ ಸೀಮಂತ.. ಫೋಟೋ ಗ್ಯಾಲರಿ ನೋಡಿ..

0 views

ಅಶ್ವಿನಿ‌ ನಕ್ಷತ್ರ ಧಾರಾವಾಹಿ ಖ್ಯಾತಿಯ ಮಯೂರಿ ಹಾಗೂ ಅರುಣ್ ಜೋಡಿ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದು ಸದ್ಯ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿದೆ.. ಹೌದು ಕಳೆದ 2020 ರ ಜೂನ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮಯೂರಿ ಹಾಗೂ ಅರುಣ್ ಜೋಡಿ ಕಳೆದ ನವೆಂಬರ್ ತಿಂಗಳಿನಲ್ಲಿ ತಾಯಿಯಾಗುತ್ತಿರುವ ಸಂತೋಷ ಹಂಚಿಕೊಂಡಿದ್ದರು..

ಹೌದು ಹನ್ನೆರೆಡು ವರ್ಷಗಳ ಕಾಲ ಪ್ರೀತಿಸಿ ಕಳೆದ ವರ್ಷವಷ್ಟೇ ತಮ್ಮ ಪ್ರೀತಿಗೆ ಮದುವೆಯ ಮೂಲಕ ಅರ್ಥಪೂರ್ಣವಾಗಿಸಿದ್ದರು.. ಅರುಣ್ ಹಾಗೂ ಮಯೂರಿ ಇಬ್ಬರೂ ಸಹ ಏನೂ ಇಲ್ಲದ ಸಮಯದಲ್ಲಿಯೇ ಪರಿಚಯವಾಗಿದ್ದು ಆಗಿನಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು.. ಇಬ್ಬರೂ ಸಹ ತಮ್ಮ ತಮ್ಮದೇ ಕ್ಷೇತ್ರದಲ್ಲಿ ಹೆಸರು ಮಾಡಿದ ಬಳಿಕವೂ ತಮ್ಮ ಪ್ರೀತಿಯನ್ನು ಹಾಗೆಯೇ ಉಳಿಸಿಕೊಂಡು ಇನ್ನಷ್ಟು ಗಟ್ಟಿ ಮಾಡಿಕೊಂಡಿದ್ದರು.. ಧಾರಾವಾಹಿ ನಂತರ ಸ್ಯಾಂಡಲ್ವುಡ್ ಗೆ ಕಾಲಿಟ್ಟ ಮಯೂರಿ ಅವರು ಕೃಷ್ಣ ಲೀಲಾ ಸಿನಿಮಾದಲ್ಲಿ ಫ್ಲವರ್ ಲೀಲಾ ಆಗಿ ಕಾಣಿಸಿಕೊಂಡು ಸೈ ಎನಿಸಿಕೊಂಡರು.. ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆದರು.. ಅತ್ತ ಅರುಣ್ ಕೂಡ ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡರು.. ಕಳೆದ ವರ್ಷ ಇಬ್ಬರೂ ಮದುವೆಯ ನಿರ್ಧಾರ ಮಾಡಿ ಜೂನ್ ತಿಂಗಳಿನಲ್ಲಿ ನೂತನ ಜೀವನಕ್ಕೆ ಕಾಲಿಟ್ಟರು.. ಕೊರೊನಾ ಕಾರಣದಿಂದಾಗಿ ಅದ್ಧೂರಿ ಮದುವೆಗೆ ಬ್ರೇಕ್ ಹಾಕಿದ ಜೋಡಿ ಬೆಂಗಳೂರಿನ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾದರು..

ಇನ್ನು ಮದುವೆಯಲ್ಲಿ ಕುಟುಂಬದ ಸದಸ್ಯರು ಮಾತ್ರ ಹಾಜರಿದ್ದು ಶಾಸ್ತ್ರ ಸಂಪ್ರದಾಯವನ್ನು ನೆರವೇರಿಸಿದರು.. ಅಶ್ವಿನ ನಕ್ಷತ್ರ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದ ಜೆಕೆ ಹಾಗೂ ಮಯೂರಿ ಕುಟುಂಬ ಬಹಳ ಆಪ್ತವಾಗಿತ್ತು.. ಮಯೂರಿ ಅವರಿಗೆ ತಂದೆ ಇಲ್ಲದ ಕಾರಣ ಮದುವೆಯ ದಿನ ಜೆಕೆ ಅವರ ತಂದೆ ತಾಯಿಯೇ ಅಪ್ಪ ಅಮ್ಮನ ಸ್ಥಾನದಲ್ಲಿ ನಿಂತು ಮಯೂರಿ ಅವರ ಮದುವೆಯ ಎಲ್ಲಾ ಶಾಸ್ತ್ರವನ್ನು ನೆರವೇರಿಸಿ ಧಾರೆ ಎರೆದು ಕನ್ಯಾದಾನ ಮಾಡಿ ಕೊಟ್ಟರು.. ಈ ಬಗ್ಗೆ ಮಯೂರಿ ಅವರು ಹೇಳಿಕೊಂಡು ಭಾವುಕರಾಗಿದ್ದರು..

ಇನ್ನು ಮದುವೆಯಾದ ಕೆಲವೇ ತಿಂಗಳಿಗೆ ಸಿಹಿ ಸುದ್ದಿ ನೀಡಿದ್ದ ಅರುಣ್ ಮಯೂರಿ ಜೋಡಿ ತಮ್ಮ ಮನೆಗೆ ನೂತನ ಮೆಂಬರ್ ಆಗಮನದ ಸುದ್ದಿಯನ್ನು ಹಂಚಿಕೊಂಡಿದ್ದರು.. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಇರುವ ಮಯೂರಿ ಅವರು ಪ್ರೆಗ್ನೆನ್ಸಿ ಫೋಟೋ ಚಿತ್ರೀಕರಣ ಮಾಡಿಸಿ ತಮ್ಮ ತಾಯ್ತನದ ಫೋಟೋಗಳನ್ನು ಆಗಾಗ ಹಂಚಿಕೊಳ್ಳುವ ಮೂಲಕ ಸಂತೋಷ ವ್ಯಕ್ತಪಡಿಸುತ್ತಿದ್ದರು..

ಇನ್ನು ಇದೀಗ ಮಯೂರಿ ಅವರು ತುಂಬು ಗರ್ಭಿಣಿಯಾಗಿದ್ದು ಇನ್ನೆರೆಡು ತಿಂಗಳಿನಲ್ಲಿ ಮಗುವಿನ ಆಗಮನವಾಗಲಿದೆ.. ಸದ್ಯ ಇದೀಗ ಮಯೂರಿ ಅವರ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ನೆರವೇರಿದೆ.. ಹೌದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಹಿಳೆಯರಿಗಾಗಿಯೇ ಇರುವ ಕಾರ್ಯಕ್ರಮವಾದ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿಯೇ ಮಯೂರಿ ಅವರನ್ನು ಕರೆಸಿ ಅವರಿಗೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಿದ್ದು ನಟಿಯರೆಲ್ಲಾ ಮಯೂರಿ ಅವರಿಗೆ ಮಡಿಲು ತುಂಬಿ ಶುಭ ಹಾರೈಸಿದ್ದಾರೆ.. ಕಾರ್ಯಕ್ರಮದಲ್ಲಿ ಮಯೂರಿ ಅರುಣ್ ಹಾಗೂ ಕುಟುಂಬದವರು ಪಾಲ್ಗೊಂಡಿದ್ದು ಈ ರೀತಿ ಸೀಮಂತದ ಉಡುಗೊರೆ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ..