ನೋವಿನಲ್ಲಿರುವ ಸಮಯದಲ್ಲಿ ಎರಡನೇ ಮದುವೆ ಅಂತ ಮೇಘನಾ ರಾಜ್‌ ಅವರಿಗೆ ಏನು ಮಾಡಿದ್ದಾರೆ ನೋಡಿ.. ಇವರ ಜನ್ಮಕ್ಕಿಷ್ಟು..

0 views

ಮನುಷ್ಯ ನೊಬ್ಬ ಅದು ಯಾರೇ ಆಗಿರಲಿ ಹೆಣ್ಣಾಗಲಿ ಗಂಡಾಗಲಿ ಸ್ಟಾರ್ ಆಗಲಿ ಅಥವಾ ಸಾಮಾನ್ಯನೇ ಆಗಲಿ ಯಾರೇ ಆದರೂ ನೋವಿನಲ್ಲಿ ಇರುವಂತಹ ಸಮಯದಲ್ಲಿ ಸಾಧ್ಯವಾದರೆ ಆ ನೋವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಬೇಕು ಅಥವಾ ಸುಮ್ಮನಿದ್ದು ಬಿಡಬೇಕು.. ಆದರೆ ನೋವಿನಲ್ಲಿರುವ ಮನುಷ್ಯನಿಗೆ ಕೇವಲ ಹಣಕ್ಕಾಗಿ ಇಂತಹ ಕೆಲಸ ಮಾಡಿ ಮತ್ತೆ ಮತ್ತೆ ನೋವು ನೀಡೋದು ಅಂತಹ ಜನರ ಕೀಳು ಮನಸ್ಥಿತಿಯನ್ನು ತೋರುವುದಂತೂ ಸತ್ಯ.. ಹೌದು ಇದೀಗ ಮೇಘನಾ ರಾಜ್ ಅವರ ಜೀವನದಲ್ಲಿಯೂ ಆಗಿದ್ದೂ ಅದೇ.. ಹೌದು ಒಂದು ಕಡೆ ಚಿರು ನೆನಪಿನಲ್ಲಿ ಜೀವನ ಪೂರ್ತಿ ಕಳೆಯುವ ನಿರ್ಧಾರ ಮಾಡಿರುವ ಮೇಘನಾ ರಾಜ್ ಅವರು ತಮ್ಮ ಮಗುವೇ ತಮ್ಮ ಮುಂದಿನ ಜೀವನ.. ರಾಯನ್ ರಾಜ್ ಸರ್ಜಾನೆ ನನ್ನ ಮುಂದಿನ ಜೀವನದ ಭರವಸೆ ಎಂದಿದ್ದಾರೆ.. ಅವನೇ ನನಗೆ ಎಲ್ಲಾ.. ಅವನಿಗಾಗಿ ನಾನು ಜೀವನ ಸಾಗಿಸುವೆ ಎನ್ನುತ್ತಿದ್ದರೆ ಇತ್ತ ಇನ್ನೊಂದು ಕಡೆ ಮೇಘನಾ ರಾಜ್ ಅವರ ಎರಡನೇ ಮದುವೆ ಸುದ್ದಿ ಹೆಗ್ಗಿಲ್ಲದೇ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ..

ಹೌದು ಕೇವಲ ವ್ಯೂವ್ಸ್ ಹಾಗೂ ಹಣಕ್ಕಾಗಿ ಇಂತಹ ಕೆಲಸ ಮಾಡೋರಿಗೆ ಇಂತಹ ಸುದ್ದಿಗಳಿಂದ ಮತ್ತೊಬ್ಬರ ಮನಸ್ಸು ಯಾವ ರೀತಿ ನೋವು ಪಡುವುದು ಎಂಬ ಸಣ್ಣ ಕಲ್ಪನೆಯೂ ಇಲ್ಲದಂತಾಗಿ ಹೋಗಿರುವುದು ದುರ್ಧೈವವೇ ಸರಿ.. ಹೌದು ಯೂಟ್ಯೂಬ್ ನಲ್ಲಿ ಈ ಹಿಂದೆಯೂ ಕೆಲವರು ಮೇಘನಾ ರಾಜ್ ಅವರಿಗೆ ಅವರು ಅಷ್ಟು ಹಣ ಕೊಟ್ಟರು ಇವರು ಇಷ್ಟು ಹಣ ಕೊಟ್ಟರು ಎಂದು ಸುದ್ದಿ ಹಬ್ಬಿಸಿ ಅದಾಗಲೇ ಸುಂದರ್ ರಾಜ್ ಅವರ ಕುಟುಂಬಕ್ಕೂ ನೋವು ನೀಡಿ ಅಂದು ಮಗುವಿನ ನಾಮಕರಣದ ಸಮಯದಲ್ಲಿ ಪ್ರಮಿಳಾ ಸುಂದರ್ ಅವರು ಈ ಬಗ್ಗೆ ಅಸಮಾಧಾನವನ್ನೂ ಸಹ ವ್ಯಕ್ತ ಪಡಿಸಿದ್ದರು.. ನನ್ನ ಮಗಳನ್ನು ಯಾರೂ ಸಹ ನೋಡಿಕೊಂಡಿಲ್ಲ.. ನೋಡಿಕೊಳ್ಳೋದು ಬೇಕಿಲ್ಲ.. ಅವಳು ಹುಟ್ಟಿದಾಗಿನಿಂದ ಅವಳ ಅಪ್ಪ ಹಾಗೂ ನನ್ನ ಜವಾಬ್ದಾರಿಯೇ ಆಗಿದ್ದಾಳೆ.. ಮುಂದೆಯೂ ಅವಳ ಬೇಕು ಬೇಡಗಳನ್ನು ನಾವೇ ನೋಡಿಕೊಳ್ಳುತ್ತೇವೆ.. ಅವರು ಅಷ್ಟು ಕೊಟ್ಟರು ಇವರು ಇಷ್ಟು ಕೊಟ್ಟರು ಅನ್ನೋ ಪ್ರಚಾರ ಬೇಡ.. ನಮಗೆ ಯಾರೂ ಏನೂ ಕೊಟ್ಟಿಲ್ಲ.. ಸುಮ್ಮನೆ ಅಂತಹ ಪ್ರಚಾರಗಳನ್ನು ಮಾಡಬೇಡಿ ಎಂದಿದ್ದರು..

ಇನ್ನು ಇದೇ ವಿಚಾರವಾಗಿ ಸರ್ಜಾ ಹಾಗೂ ಸುಂದರ್ ರಾಜ್ ಅವರ ಕುಟುಂಬದ ನಡುವೆ ಮನಸ್ತಾಪ ಮೂಡಿದೆಯಾ ಎಂಬ ಪ್ರಶ್ನೆ ಸಹ ಹುಟ್ಟಿಕೊಂಡು ಅದೇ ಕಾರ್ಯಕ್ರಮದಲ್ಲಿ ಧೃವ ಸರ್ಜಾ ಸ್ಪಷ್ಟನೆಯನ್ನೂ ಸಹ ನೀಡಿ ಕೆಲವು ಯೂಟ್ಯೂಬ್ ನವರು ನಮ್ಮ ಎರಡು ಕುಟುಂಬದ ನಡುವೆ ಮನಸ್ತಾಪ ತರುವ ಕೆಲಸ ಮಾಡ್ತಿದ್ದಾರೆ ದಯವಿಟ್ಟು ಆ ಕೆಲಸ ಮಾಡಬೇಡಿ.. ನಾವು ಸದಾ ಒಟ್ಟಾಗಿಯೇ ಇರ್ತೇವೆ ಎಂದಿದ್ದರು.. ಇನ್ನು ಮೇಘನಾ ರಾಜ್‌ ಅವರೂ ಸಹ ಈ ಬಗ್ಗೆ ಮಾತನಾಡಿ ಯೂಟ್ಯೂಬ್‌ ನಲ್ಲಿ ಇಲ್ಲ ಸಲ್ಲದ ಕೆಲ ವೀಡಿಯೋಗಳು ಮನಸ್ಸಿಗೆ ನೋವು ತಂದಿದೆ.. ಅದೇ ಕಾರಣಕ್ಕೆ ನಮ್ಮ ತಾಯಿ ಈ ರೀತಿ ಮಾತನಾಡಿದ್ದು ಎಂದಿದ್ದರು.

ಆದರೀಗ ಮೇಘನಾ ಅವರಿಗೆ ನೋವಿನ ಮೇಲೆ ನೋವು ಎಂಬಂತೆ ಮೇಘನಾ ರಾಜ್‌ ಅವರು ಎರಡನೇ ಮದುವೆ ಆಗ್ತಾ ಇದ್ದಾರೆ ಎಂದು ಮತ್ತಷ್ಟು ನೋವು ನೀಡುತ್ತಿದ್ದಾರೆ. ಹೌದು ಮೇಘನಾ ರಾಜ್‌ ಅವರ ಎರಡನೇ ಮದುವೆ ಬಗ್ಗೆ ಇಲ್ಲ ಸಲ್ಲದ ಸುದ್ದಿ ಹಬ್ಬಿಸಿ ಅವರಿಗೆ ಮತ್ತಷ್ಟು ನೋವು ನೀಡುವ ಪ್ರಯತ್ನ ಮಾಡಿದ್ದಾರೆ.. ಹೌದು ಮೇಘನಾ ರಾಜ್ ಅವರು ಕೆಲ ದಿನಗಳ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು.. ಅದೇ ವೀಡಿಯೋವನ್ನು ಇಟ್ಟುಕೊಂಡು ಕೇವಲ ವ್ಯೂವ್ಸ್ ಹಾಗೂ ಹಣಕ್ಕಾಗಿ ಮೇಘನಾ ರಾಜ್ ಅವರು ಎರಡನೇ ಮದುವೆಯಾಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಹೆಡ್ ಲೈನ್ ಹಾಕಿ ಒಳಗೆ ಅಂತಹ ಯಾವ ವಿಚಾರವೂ ಇಲ್ಲದ ವೀಡಿಯೋವನ್ನು ಪೋಸ್ಟ್ ಮಾಡಿದ್ದು ಇದೀಗ ಅಂತಹ ಕೀಳು ಮನಸ್ಸಿನ ಯೂಟ್ಯೂಬ್ ನವರನ್ನು ಟ್ರೋಲ್ ಪೇಜ್ ಗಳಲ್ಲಿ ಸರಿಯಾಗಿಯೇ ಟೀಕಿಸಲಾಗುತ್ತಿದೆ..

ಹೌದು ಈ ರೀತಿ ತಮ್ಮ ಜೀವಕ್ಕೆ ಜೀವ ಎಂದುಕೊಂಡ ಸಂಗಾತಿಯನ್ನು ಕಳೆದುಕೊಂಡು ಎಳೆ ಮಗುವಿನ ಜೊತೆ ನೋವಿನಲ್ಲಿಯೇ ಜೀವನ ಸಾಗಿಸುತ್ತಿರುವ, ಚಿರುವಿನ ನೆನಪಿನಲ್ಲಿಯೇ ಮಗನ ಭವಿಷ್ಯವನ್ನು ರೂಪಿಸುವ ನಿರ್ಧಾರ ಮಾಡಿರುವ ಮೇಘನಾ ರಾಜ್ ಅವರ ಬಗ್ಗೆ ಈ ರೀತಿ ಮಾತನಾಡೋದು ನಿಜಕ್ಕೂ ಅಂತವರ ಬಗ್ಗೆ ಅಸಹ್ಯವನ್ನುಂಟು‌ ಮಾಡುತ್ತಿದೆ.. ಯಾರೇ ಆಗಲಿ ಮೊದಲು ವ್ಯಕ್ತಿಗೆ ಆ ವ್ಯಕ್ತಿಯ ಭಾವನೆಗಳಿಗೆ ಬೆಲೆ ಕೊಟ್ಟು ನಡೆದುಕೊಳ್ಳುವುದು ಒಳ್ಳೆಯದು.. ಕೇವಲ ವ್ಯೂವ್ಸ್ ಗಳಿಗಾಗಿ ಇಂತಹ ಇಲ್ಲ ಸಲ್ಲದ ವಿಚಾರ ಹಬ್ಬುವುದು ಇನ್ನಾದರೂ ಕಡಿಮೆಯಾಗಲಿ..