ಜೀವನದ ನೂತನ ಹೆಜ್ಜೆಯ ಸಂತೋಷದ ಸುದ್ದಿ ಹಂಚಿಕೊಂಡ ಜೊತೆಜೊತೆಯಲಿ ನಟಿ ಮೇಘಾ ಶೆಟ್ಟಿ..

0 views

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿ ಜೊತೆಜೊತೆಯಲಿ ಸೀರಿಯಲ್ ನ ಮೂಲಕ‌ ಜನರ ಮನಗೆದ್ದ ಅನು ಪಾತ್ರಧಾರಿ ನಟಿ‌ ಮೇಘಾ ಶೆಟ್ಟಿ ಸಂತೋಷದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.. ಹೌದು ಕಲೇದ ವರ್ಷ ಸೆಪ್ಟೆಂಬರ್ 9 ರಂದು ಜೀ ಕನ್ನಡ ವಾಹಿನಿಯಲ್ಲಿ ತನ್ನ ಪ್ರಸಾರ ಆರಂಭಿಸಿದ ವಿಭಿನ್ನ ಕಥೆಯ ಧಾರಾವಾಹಿ ಜೊತೆಜೊತೆಯಲಿ ಹೊಸ ಇತಿಹಾಸವನ್ನೇ ಬರೆದಿತ್ತು.. ಸೌತ್ ನ ಇತರ ಕಿರುತೆರೆ ಇಂಡಸ್ಟ್ರಿಯವರೂ ಸಹ ಕನ್ನಡದ ಜೊತೆಜೊತೆಯಲಿ ಧಾರಾವಾಹಿ ಕುರಿತು ಚರ್ಚೆ ಮಾಡುತ್ತಿದ್ದರು ಎನ್ನುವ ಮಾತಿದೆ.. ಅತ್ತ ಸಿನಿಮಾದಿಂದ ಕಿರುತೆರೆಗೆ ಆರ್ಯವರ್ಧನ್ ಪಾತ್ರದ ಮೂಲಕ ಎಂಟ್ರಿ ಕೊಟ್ಟ ನಟ ಅನಿರುದ್ಧ್ ಅವರಿಗೂ ದೊಡ್ಡ ಮಟ್ಟದಲ್ಲಿ ಯಶಸ್ಸು ದೊರೆಯಿತು..

ಇತ್ತ ಐ ಎ ಎಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದ ಮೇಘಾ ಶೆಟ್ಟಿಗೆ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ದೊರೆತು ಕಿರುತೆರೆಗೆ ಕಾಲಿಟ್ಟ ಮೊದಲ ಧಾರಾವಾಹಿಯಲ್ಲಿಯೇ ಮನೆಮಾತಾದರು.. ಮದ್ಯಮ ವರ್ಗದ ಜನರ ಜೀವನದ ಕಷ್ಟಗಳನ್ನು ಎಳೆ ಎಳೆಯಾಗಿ ತೆರೆದಿಟ್ಟ ಶುರುವಿನ ಆ ಸಂಚಿಕೆಗಳು ಬಹುದೊಡ್ಡ ರೇಟಿಂಗ್ ಪಡೆಯುವ ಮೂಲಕ ಕಿರುತೆರೆಯಲ್ಲಿ ಹೊಸ ದಾಖಲೆಯನ್ನೂ ಸಹ ಬರೆದಿತ್ತು.. ಧಾರಾವಾಹಿ ಶುರುವಾದ ವರ್ಷವಾದರೂ ಸಹ ಈಗಲೂ ಕನ್ನಡ ಕಿರುತೆರೆಯ ಟಾಪ್ ಎರಡನೇ ಧಾರಾವಾಹಿಯಾಗಿ ತನ್ನ ಯಶಸ್ಸಿನ ಪಯಣವನ್ನು‌ ಮುಂದುವರೆಸುತ್ತಿದೆ.. ಮೊನ್ನೆಮೊನ್ನೆಯಷ್ಟೇ ಜೊತೆಜೊತೆಯಲಿ ಧಾರಾವಾಹಿ ಮುನ್ನೂರರ ಸಂಚಿಕೆ ಪೂರೈಸಿದ್ದು ಅಭಿಮಾನಿಗಖ ಜೊತೆ ಧಾರಾವಾಹಿ ತಂಡ ಸಂತೋಷ ಹಂಚಿಕೊಂಡಿತ್ತು.. ಇನ್ನು ಈ ನಡುವೆ

ಇನ್ನು‌ ಈ ನಡುವೆ ನಟಿ ಮೇಘಾ ಶೆಟ್ಟಿ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.. ಹೌದು ತಮ್ಮ ಜೀವನದ ಹೊಸ ಹೆಜ್ಜೆಯ ಬಗ್ಗೆ ಹಂಚಿಕೊಂಡಿದ್ದು ತಮ್ಮೆಲ್ಲರ ಆಶೀರ್ವಾದವಿರಲಿ ಎಂದಿದ್ದಾರೆ.. ಹೌದು ಜೊತೆಜೊತೆಯಲಿ ಧಾರಾವಾಹಿಯಲ್ಲಿನ ಮೇಘಾ ಶೆಟ್ಟಿ ಅವರ ಅಭಿನಯ ನೋಡಿ ಮೇಘಾ ಶೆಟ್ಟಿಗೆ ಅನೇಕ ಸಿನಿಮಾಗಳ ಅವಕಾಶ ಒದಗಿ ಬಂದಿದ್ದವು.. ಆದರೆ ಹೊಸತರಲ್ಲೇ ಸಿನಿಮಾದ ಕಡೆ ಹೋಗುವುದು ಬೇಡ.. ಕಿರುತೆರೆಯಲ್ಲಿಯೇ ಸಾಕಷ್ಟು ಕಲಿಯುವುದು‌ ಇದೆ ಎಂದಿದ್ದ ಮೇಘಾ ಶೆಟ್ಟಿ‌ ಇದೀಗ ಒಂದು ವರ್ಷಗಳ ಕಾಲ ಕಿರುತೆರೆಯಲ್ಲಿಯೇ ಧಾರಾವಾಹಿಯಲ್ಲಿನ ಅಭಿನಯದಲ್ಲಿ ಪಕ್ವವಾಗಿ ಇದೀಗ ಸಿನಿಮಾ ಇಂಡಸ್ಟ್ರಿಗೆ ಕಾಲಿಡುತ್ತಿದ್ದಾರೆ..

ಹೌದು ಈ ಹಿಂದೆ ಗಣೇಶ್ ಅವರ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಮೇಘಾ ಶೆಟ್ಟಿ ಅವರಿಗೆ ಅವಕಾಶ ಸಿಕ್ಕಿದೆ ಎಂದು ಸುದ್ದಿಯಾಗಿತ್ತು.. ಆದರೆ ಮೇಘಾ ಶೆಟ್ಟಿ ಈ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ.. ಆದರೀಗ ಗಣೇಶ್ ಅವರ ಜೊತೆಗೆ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಗಣೇಶ್ ಅವರೊಟ್ಟಿಗಿನ ಫೋಟೋ ಜೊತೆಗೆ ಸಂತೋಷ ಹಂಚಿಕೊಂಡಿದ್ದಾರೆ.. ಇನ್ನು ಜೊತೆಜೊತೆಯಲಿ ಧಾರಾವಾಹಿಯಲ್ಲಿಯೂ ಬ್ಯುಸಿ ಆಗಿರುವ ಮೇಘಾ ಶೆಟ್ಟಿ ಇದೀಗ ಡೇಟ್ಸ್ ಹೊಂದಿಸಿಕೊಂಡು ಎರಡೂ ಕಡೆ ಮ್ಯಾನೇಜ್ ಮಾಡುತ್ತಿದ್ದಾರೆ.. ಸಿನಿಮಾ ಅವಕಾಶ ಸಿಕ್ಕಿತೆಂದು ಧಾರಾವಾಹಿ ಬಿಡದೇ ತನಗೆ ಹೆಸರು ತಂದು ಕೊಟ್ಟ ಧಾರಾವಾಹಿಯಲ್ಲಿಯೂ ಮುಂದುವರೆಯುತ್ತಾ ಡೇಟ್ಸ್ ಹೊಂದಿಸಿಕೊಂಡು ಸಿನಿಮಾ ಹಾಗೂ ಧಾರಾವಾಹಿ ಎರಡೂ ಕಡೆಯೂ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.‌. ಆದರೆ ಜೊತೆಜೊತೆಯಲಿ ಧಾರಾವಾಹಿ ಬಳಿಕ ಇನ್ನು ಮೇಘಾ ಶೆಟ್ಟಿ ಸಂಪೂರ್ಣವಾಗಿ ಸಿನಿಮಾಗಳಲ್ಲಿ ತೊಡಗಿ ಕೊಳ್ಳುವುದು ಖಚಿತವಾಗಿದ್ದು ಇನ್ನು ಬೇರೆ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ಕಾಣಿಸಿಕೊಳ್ಳುವುದು ಅನುಮಾನವಾಗಿದೆ..

ಹೌದು ತ್ರಿಬಲ್ ರೈಡಿಂಗ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡುತ್ತಿರುವ ನಟಿ ಮೇಘಾ ಶೆಟ್ಟಿಗೆ ಮೊದಲ ಸಿನಿಮಾದಲ್ಲಿಯೇ ಸ್ಟಾರ್ ನಟನ ಜೊತೆ ಅಭಿನಯಿಸುವ ಅವಕಾಶ ದೊರೆತಿದ್ದು ರಚಿತಾ ರಾಮ್ ಅವರಿಗೆ ದರ್ಶನ್ ಅವರ ಜೊತೆ ಬುಲ್ ಬುಲ್ ಸಿನಿಮಾದ ಅವಕಾಶ ಸಿಕ್ಕು ಸ್ಟಾರ್ ಆದ ರೀತಿಯಲ್ಲಿಯೇ ಅದೃಷ್ಟ ಕೈಹಿಡಿದು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಸ್ಯಾಂಡಲ್ವುಡ್ ನ ಸ್ಟಾರ್ ನಟಿಯರಲ್ಲಿ ಒಬ್ಬರಾಗುವರ ಕಾದು ನೋಡಬೇಕಿದೆ..