ಮಗುವಿಗೆ ಕೊರೊನಾ ಬಂದಿರುವ ವಿಚಾರ ತಿಳಿಸಿ ಮೇಘನಾ ಹೇಳಿದ ಮಾತು ನೋಡಿ..

0 views

ಕೊರೊನಾ ಬಹುಶಃ ಈ ವರ್ಷದ ಅತ್ಯಂತ ಕೆಟ್ಟ ಪದ ಇದೇ ಇರಬಹುದು.. ಸಾಮಾನ್ಯನಿಂದ ಹಿಡಿದು ಸಿರಿವಂತರವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಜೀವ ಜೀವನ ಎರಡನ್ನೂ ಕಸಿದುಕೊಂಡುಬಿಟ್ಟಿತು.. ಇನ್ನು ಕಲಾವಿದರ ವಿಚಾರಕ್ಕೆ ಬಂದರೆ ಅನೇಕ ಸಿನಿಮಾ ಕಲಾವಿದರು ಗಾಯಕರು ಕಿರುತೆರೆ ಕಲಾವಿದರು ಕೊರೊಬಾಗೆ ತುತ್ತಾಗಿ ಕೆಲವರು ಚೇತರಿಸಿಕೊಂಡರು.. ಮತ್ತೆ ಕೆಲವರು ಎಲ್ಲರನ್ನು ಬಿಟ್ಟು ಅಗಲಿದರು..

ಆದರೆ ಎಲ್ಲದಕ್ಕಿಂತ ನೋವಿನ ವಿಚಾರ ಎಂದರೆ ಮೇಘನಾ ರಾಜ್ ಅವರ ಒಂದೂವರೆ ತಿಂಗಳ ಕೂಸಿಗೆ ಕೊರೊನಾ ಪಾಸಿಟಿವ್ ಆಗಿರುವುದು.. ಹೌದು ಜೂನ್ 7 ರಂದು ಚಿರಂಜೀವಿ ಸರ್ಜಾ ಇಲ್ಲವಾದ ಬಳಿಕ ಸರ್ಜಾ ಹಾಗೂ ಸುಂದರ್ ರಾಜ್ ಅವರ ಕುಟುಂಬ ಕುಗ್ಗಿ ಹೋಗಿತ್ತು.. ಆದರೆ ಅದೆಲ್ಲೋ ಒಂದು ಮೂಲೆಯಲ್ಲಿ ಸಣ್ಣದೊಂದು ಭರವಸೆಯ ಬೆಳಕು ಮೂಡಿತ್ತು.. ಹೌದು ಮೇಘನಾ ರಾಜ್ ಅವರು ಗರ್ಭಿಣಿ ಎಂಬ ವಿಚಾರ ಅದಾಗಲೇ ಕುಟುಂಬಕ್ಕೆ ತಿಳಿದಿತ್ತು.. ಈ ವಿಚಾರ ಅಭಿಮಾನಿಗಳಿಗೆ ತಿಳಿದಾಗ ಲಕ್ಷಾಂತರ ಜನರು ಆ ಕಂದನಿಗಾಗಿ ಹಾಗೂ ಮೇಘನಾ ರಾಜ್ ಗಾಗಿ ಪ್ರಾರ್ಥಿಸಿದ್ದರು.. ಇಬ್ಬರೂ ಆರೋಗ್ಯವಂತರಾಗಿರಲಿ ಎಂದು ಹಾರೈಸಿದ್ದರು.. ಚಿರು ತನ್ನದೇ ಮಗುವಾಗಿ ಮತ್ತೆ ಹುಟ್ಟಿಬರಲಿ ಎಂದು ಪ್ರಾರ್ಥಿಸಿದ್ದರು..

ಎಲ್ಲರ ಪ್ರಾರ್ಥನೆಯ ಫಲವಾಗಿ ಎಲ್ಲರೂ ಬಯಸಿದಂತೆಯೇ ಮೇಘನಾ ರಾಜ್ ಅವರು ಅಕ್ಟೋಬರ್ 22 ರಂದು ಗಂಡು ಮಗುವಿಗೆ ಜನ್ಮ ನೀಡಿದರು.. ಎರಡೂ ಕುಟುಂಬದಲ್ಲಿ ಚಿರುವೇ ಮಗುವಾಗಿ ಮರಳಿ ಬಂದನೆಂಬ ನಂಬಿಕೆ ಮೂಡಿತು.. ಚಿರುವನ್ನು ಮರೆಯಲು ಸಾಧ್ಯವಾಗದಿದ್ದರೂ ಸಹ ಮಗುವಿನ ಮೂಲಕ ಮತ್ತೆ ಆ ಕುಟುಂಬದಲ್ಲಿ ಸಂತೋಷ ಮನೆ ಮಾಡಿತ್ತು.. ಮೊನ್ನೆ ಮೊನ್ನೆಯಷ್ಟೇ ಅದ್ಧೂರಿಯಾಗಿ ಮಗುವಿಗೆ ತೊಟ್ಟಿಲ ಶಾಸ್ತ್ರ ನೆರವೇರಿಸಿದ್ದರು.. ಈ ಸಮಯದಲ್ಲಿ‌ ಚಿರು ಹೋದ ಬಳಿಕ ಮೊದಲ ಬಾರಿಗೆ ಮೇಘನಾ ರಾಜ್ ಮಾದ್ಯಮದ ಮುಂದೆ ಬಂದು ಮಾತನಾಡಿ ತಮ್ಮೆಲ್ಲಾ ನೋವು ಹಾಗೂ ಮಗುವಿನ ಆಗಮನದ ಸಂತೋಷ ಎರಡನ್ನೂ ಹಂಚಿಕೊಂಡಿದ್ದರು..

ಆದರೆ ಎಲ್ಲಿ ಏನು ಎಚ್ಚರಿಕೆ ತಪ್ಪಿತೋ.. ಸುಂದರ್ ರಾಜ್ ಅವರ ಸಂಪೂರ್ಣ ಕುಟುಂಬಕ್ಕೆ ಇದೀಗ ಕೊರೊನಾ ಪಾಸಿಟಿವ್ ಆಗಿದೆ.. ಹೌದು ಪ್ರಮಿಳಾ ಸುಂದರ್ ಅವರು ಹಾಗೂ ಸುಂದರ್ ರಾಜ್ ಅವರಿಗೆ ವಯಸ್ಸಾದ ಕಾರಣ ಅವರಿಬ್ಬರನ್ನು ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.. ಇತ್ತ ಮೇಘನಾ ಹಾಗೂ ಮಗುವಿಗೆ ಮನೆಯಲ್ಲಿಯೇ ಐಸೋಲೇಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.. ಈ ಬಗ್ಗೆ ಇದೀಗ ಖುದ್ದು ಮೇಘನಾ ರಾಜ್ ಮಾತನಾಡಿದ್ದು ಮಗುವಿಗೆ ಕೊರೊನಾ ಬಂದಿರುವುದು ನಿಜ ಎಂದಿದ್ದಾರೆ..

ಹೌದು ನನ್ನ ಅಪ್ಪ.. ಅಮ್ಮ.. ನನಗೆ ಮತ್ತು ನನ್ನ ಮಗನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.. ಕಳೆದ ಕೆಲವು ವಾರಗಳಿಂದ ನಮ್ಮ ಸಂಪರ್ಕದಲ್ಲಿದ್ದವರಿಗೆ ಮಾಹಿತಿ ನೀಡುತ್ತಿದ್ದೇವೆ.. ಎಲ್ಲರೂ ಎಚ್ಚರ ವಹಿಸಿ.. ಚಿರು ಮತ್ತು ನನ್ನ ಅಭಿಮಾನಿಗಳ್ಯಾರೂ ಚಿಂತಿಸಬೇಡಿ.. ಪ್ರಸ್ತುತ ನಾವೆಲ್ಲರೂ ಚಿಕಿತ್ಸೆಯಲ್ಲಿದ್ದೇವೆ.. ಜೂನಿಯರ್ ಚಿರು ಸಹ ಚೆನ್ನಾಗಿದ್ದಾನೆ.. ಸದಾ ನನ್ನ ಜೊತೆಯಲ್ಲಿಯೇ ಇದ್ದಾನೆ.. ಕೊರೊನಾದ ವಿರುದ್ಧ ನಾವೆಲ್ಲರೂ ವಿಜಯಶಾಲಿಯಾಗಿ ಬರುತ್ತೇವೆ.. ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಇತ್ತ ಮೇಘನಾ.. ಮಗು.. ಹಾಗೂ ಸಂಪೂರ್ಣ ಕುಟುಂಬಕ್ಕೆ ಕೊರೊನಾ ಪಾಸಿಟಿವ್ ಆಗಿರುವ ವಿಚಾರ ತಿಳಿದು ಅಭಿಮಾನಿಗಳಷ್ಟೇ ಅಲ್ಲದೇ ಎಲ್ಲರೂ ಸಹ ಮೇಘನಾ.. ಮಗು.. ಹಾಗೂ ಎಲ್ಲರೂ ಕೊರೊನಾ ದಿಂದ ಚೇತರಿಸಿಕೊಳ್ಳಲಿ.. ಸಂಪೂರ್ಣವಾಗಿ ಗುಣಮುಖರಾಗಿ ಆ ಕುಟುಂಬದ ನೋವು ಇಷ್ಟಕ್ಕೆ ನಿಲ್ಲಲಿ ಎಂದು ಹಾರೈಸಿದ್ದಾರೆ..