ಮಗನ ಬಗ್ಗೆ ಕಡ್ಡಿ ತುಂಡಾಗುವಂತೆ ಮಾತನಾಡಿ ಪ್ರತಿಜ್ಞೆ ಮಾಡಿದ ಮೇಘನಾ ರಾಜ್..

0 views

ಮೇಘನಾ ರಾಜ್ ಹಾಗೂ ಅವರ ಸಂಪೂರ್ಣ ಕುಟುಂಬಕ್ಕೆ ಕೊರೊನಾ ಬಂದ ವಿಚಾರ ಎಲ್ಲರಿಗೂ ತಿಳಿದೇ ಇದೆ.. ಇದೀಗ ಮೇಘನಾ ರಾಜ್ ಮಗನ ಬಗ್ಗೆ ಮಾತನಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು ಮೇಘನಾಗೆ ಹ್ಯಾಟ್ಸ್ ಆಫ್ ಹೇಳುತ್ತಿದ್ದಾರೆ ನೆಟ್ಟಿಗರು.. ಹೌದು ಕಳೆದ ಜೂನ್ ಏಳರಂದು ಮೇಘನಾ ಕನಸಿನಲ್ಲಿಯೂ ಊಹಿಸದ ಘಟನೆ ನಡೆದಿತ್ತು.. ಚಿರು ಸರ್ಜಾ ಅಕಾಲಿಕವಾಗಿ ಇಲ್ಲವಾದರು.. ಏನು ನಡೆಯುತ್ತಿದೆ ಎಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಎಲ್ಲವೂ ಮುಗಿದು ಹೋಗಿತ್ತು.. ಆದರೆ ಅಲ್ಲಿ ಅದಾಗಲೇ ಮತ್ತೊಂದು ಚಿಗುರು ಹೊಸ ಭರವಸೆಯ ಮೂಡಿಸಿತ್ತು..

ಕುಟುಂಬಕ್ಕೆ ಮಾತ್ರ ತಿಳಿದಿದ್ದ ಮೇಘನಾ ರಾಜ್ ಗರ್ಭಿಣಿ ಎಂಬ ವಿಚಾರ ಅದೇ ದಿನ ನಟಿ ತಾರಾ ಅವರಿಂದ ಜನರಿಗೂ ತಿಳಿಯಿತು.. ಚಿರು ಎಲ್ಲಿಯೂ ಹೋಗಿಲ್ಲ.. ಮತ್ತೆ ಹುಟ್ಟಿ ಬರ್ತಾನೆ.. ಮೇಘನಾಳ ಹೊಟ್ಟೆಯಲ್ಲಿಯೇ ಇದ್ದಾನೆ ಎಂದು ಅಂದು ತಾರಾ ಅವರು ಆಡಿದ ಮಾತು ಅಕ್ಷರಶಃ ಸತ್ಯವಾಯಿತು.. ಕೋಟಿ‌ಕೋಟಿ ಹೃದಯಗಳು ಮೇಘನಾ ಹಾಗೂ ಮಗುವಿಗಾಗಿ ಪ್ರಾರ್ಥಿಸಿತು.. ಎಲ್ಲರ ಪ್ರಾರ್ಥನೆ ಸಫಲವಾಯಿತು..

ಅಕ್ಟೋಬರ್ 22 ರಂದು ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದರು.. ಆಗಲೂ ಸಹ ಚಿರುವಿನ ಫೋಟೋವನ್ನು ಹೆರಿಗೆಯ ಕೋಣೆಯಲ್ಲಿಯೇ ಇರಿಸಿದ್ದು ಮಗುವನ್ನು‌ ಮೊದಲು ಚಿರುವಿನ ಫೋಟೋಗೆ ತೋರಿಸಿ ಫೋಟೋವನ್ನು‌‌ ಮುಟ್ಟಿಸಿದ್ದು ಚಿರು ಮೇಲೆ ಮೇಘನಾ ಎಷ್ಟು ಪ್ರೀತಿ‌ ಇಟ್ಟಿದ್ದರು ಎಂಬುದನ್ನು ತೋರುತ್ತದೆ.. ಇ‌ನ್ನು ತಿಂಗಳ‌ ನಂತರ ಮಗುವಿಗೆ ತೊಟ್ಟಿಲ ಶಾಸ್ತ್ರ ನೆರವೇರಿಸಿದ್ದ ಮೇಘನಾ ರಾಜ್ ಮಾದ್ಯಮದ ಮುಂದೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿ‌ ಮಾತನಾಡಿದ್ದರು.. ನನಗೆ ಮಗನೇ ಎಲ್ಲಾ.. ನಾನೇ ತಂದೆ ನಾನೇ ತಾಯಿ.. ಒಳ್ಳೆಯ ತಂದೆ ಆಗ್ತೀನೋ ಇಲ್ವೋ ಗೊತ್ತಿಲ್ಲ.. ಆದರೆ ಒಳ್ಳೆಯ ತಾಯಿಯಂತೂ ಆಗಲು ಪ್ರಯತ್ನ ಮಾಡ್ತೀ‌ನಿ ಎಂದು ಮಗನ ಬಗ್ಗೆ ಸಂತೋಷ ಹಂಚಿಕೊಂಡಿದ್ದರು..

ಜೊತೆಗೆ ಚಿರುವನ್ನು ಆ ಘಟನೆಯನ್ನು ನೆನೆದು ಕಣ್ಣಲ್ಲಿ‌ನೀರು ತುಂಬಿಕೊಂಡರು.. ಎಲ್ಲವೂ ಸರಿ ಆಯಿತು.. ಮನೆಗೆ ಮಗುವಿನ ರೂಪದಲ್ಲಿ ಚಿರು ಮತ್ತೆ ಬಂದ ಎಂದು ಕೊಂಚ ಸಮಾಧಾನ ಪಟ್ಟುಕೊಳ್ಳುತ್ತಿದ್ದ ಸಮಯದಲ್ಲಿಯೇ ಅದೇನಾಯಿತೋ.. ಮೇಘನಾ ರಾಜ್ ಅವರ ಇಡೀ ಕುಟುಂಬಕ್ಕೆ ಕೊರೊನಾ ಪಾಸಿಟಿವ್ ಆಗಿದ್ದು ಒಂದೂವರೆ ತಿಂಗಳ ಹಸುಗೂಸಿಗೂ ಸೋಂಕು ಕಾಣಿಸಿಕೊಂಡಿರುವುದು ನಿಜಕ್ಕೂ ಅತ್ಯಂತ ಬೇಸರದ ಸಂಗತಿ.. ಆದರೆ ಈ ಬಗ್ಗೆ ಮೇಘನಾ ರಾಜ್ ಮಾತನಾಡಿ ನಾನು ಹಾಗೂ ಮಗ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇವೆ.. ಅಪ್ಪ ಅಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಎಲ್ಲರೂ ಚೆನ್ನಾಗಿದ್ದೇವೆ.. ಯಾರೂ ಚಿಂತೆ ಮಾಡಬೇಡಿ.. ಜೂನಿಯರ್ ಚಿರು ಕೂಡ ಆರಾಮಾಗಿದ್ದಾನೆ.. ಸದಾ ನನ್ನ ಜೊತೆಯೇ ಇದ್ದಾನೆ ಎಂದಿದ್ದು ಅಭಿಮಾನಿಗಳಿಗೆ ಕೊಂಚ ಸಮಾಧಾನ ತಂದಿತ್ತು..

ಇನ್ನು ಇದೀಗ ಮಗನ ಬಗ್ಗೆ ಮಾತನಾಡಿರುವ ಮೇಘನಾ ರಾಜ್ ಆತನನ್ನು ಬೆಳೆಸುವ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.. ಹೌದು ಸಾಮಾನ್ಯವಾಗಿ ಮಕ್ಕಳನ್ನು ಒಳ್ಳೆಯ ವಿದ್ಯೆ ಕೊಟ್ಟು ಸಮಾಜದಲ್ಲಿ ದೊಡ್ಡ ಮನುಷ್ಯನನ್ನಾಗಿ ಮಾಡುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ.. ಆದರೆ ಮೇಘನಾ ರಾಜ್ ಅವರು ಆಡಿದ ಮಾತೇ ಬೇರೆಯಾಗಿದೆ..

ಹೌದು.. “ನಿಮ್ಮ‌ ಮಗಳು ಸುರಕ್ಷಿತವಾಗಿ ಇರುವಂತೆ ನಾನು ನನ್ನ ಮಗನನ್ನು ಬೆಳೆಸುತ್ತೇನೆ.. ಇದು ನನ್ನ ಪ್ರತಿಜ್ಞೆ ಎಂದಿದ್ದಾರೆ.. ಹೌದು ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಘಟನೆಗಳು ಒಮ್ಮೊಮ್ಮೆ ನಿಜಕ್ಕೂ ಸಮಾಜ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎನಿಸಿಬಿಡುತ್ತದೆ.. ಆದರೆ ಗಂಡು ಮಕ್ಕಳಿಗೆ ತಾವು ನಡೆದುಕೊಳ್ಳಬೇಕಾದ ರೀತಿಯನ್ನು ತಕಲಿಸುವ ಬದಲು ಹೆಣ್ಣು ಮಕ್ಕಳಿಗೆ ಕಟ್ಟುಪಾಡು ಹೇರುವುದೇ ಹೆಚ್ಚು..

ಆದರೆ ಇದೆಲ್ಲಕ್ಕೂ ಅಪವಾದವೆಂಬಂತೆ.. ಮೇಘನಾ ರಾಜ್ ಅವರು ಮತ್ತೊಬ್ಬರ ಹೆಣ್ಣು ಮಕ್ಕಳು ಸುರಕ್ಷಿತವಾಗಿರುವಂತೆ ಅವರು ತಮ್ಮ ಮಗನನ್ನು ಒಳ್ಳೆಯ ದಾರಿಯಲ್ಲೊ ಬೆಳೆಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ.. ಮೇಘನಾ ರಾಜ್ ಅವರು ಆಡಿದ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು ಎಲ್ಲರೂ ಮೇಘನಾ ಅವರ ಮನಸ್ಥಿತಿಗೆ ಅಭಿನಂದಿಸಿದ್ದಾರೆ..