ಒಬ್ಬರ ಹಿಂದೆ ಒಬ್ಬರನ್ನು ಕಳೆದುಕೊಳ್ಳುತ್ತಿದ್ದೇನೆ.. ಕುಟುಂಬದ ಮತ್ತೊಂದು ಜೀವವನ್ನು ಕಳೆದುಕೊಂಡು ಕಣ್ಣೀರಿಟ್ಟ ಮೇಘನಾ ರಾಜ್..

0 views

ನಮ್ಮ ಫ್ಯಾಮಿಲಿ ಅವನಿಲ್ಲದೇ ಸಂಪೂರ್ಣವಲ್ಲ.. ಕಣ್ಣೀರಿಟ್ಟ ಮೇಘನಾ ರಾಜ್.. ಹೌದು ಮೇಘನಾ ರಾಜ್ ಅವರು ತಮ್ಮ ಕುಟುಂಬದ ಮತ್ತೊಂದು ಜೀವವನ್ನು ಕಳೆದುಕೊಂಡು ಇಂದು ಕಣ್ಣೀರಿಟ್ಟಿದ್ದಾರೆ.. ಅಷ್ಟೇ ಅಲ್ಲದೇ ಸಾಮಾಜಿಕ‌ ಜಾಲತಾಣದಲ್ಲಿ ಆ ಕುರಿತು ಪೋಸ್ಟ್ ಮಾಡಿದ್ದು ಮೇಲೆ ಚಿರು ಬಳಿ ಹೋಗಿರ್ತೀಯಾ ಅಂತ ನಂಬಿದ್ದೀನಿ.. ಅವನಿಗೆ ಎಂದಿನಂತೆ ತೊಂದರೆ ಕೊಡ್ತಾ ಇರ್ತೀಯಾ ಅಂದುಕೊಂಡಿದ್ದೀನಿ.. ಎಂದು ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.. ಹೌದು ಕಳೆದ ವರ್ಷ ಜೂನ್ ಏಳರಂದು ಮೇಘನಾ ರಾಜ್ ಅವರು ತಮ್ಮ ಜೀವನದ ಸಂಗಾತಿ ಚಿರುವನ್ನು ಕಳೆದುಕೊಂಡು ಸಾಕಷ್ಟು ನೋವಿನಲ್ಲಿದ್ದರು..

ಅಂತಹ ನೋವಿನ ಸಮಯದಲ್ಲಿ ಕೆಲವರು ಆ ನೋವನ್ನು ದೂರ ಮಾಡಲಾಗದಿದ್ದರೂ ನೋವಿನಲ್ಲಿ ಜೊತೆಯಾಗಿ ಸಮಯ ಕಳೆಯುತ್ತಿದ್ದರು.. ಅಂತಹ ಜೀವಗಳಲ್ಲಿ ಒಬ್ಬರನ್ನು ಇಂದು ಮೇಘನಾ ರಾಜ್ ಕಳೆದುಕೊಂಡಿದ್ದಾರೆ.. ಹೌದು ಮೇಘನಾ ರಾಜ್ ಕುಟುಂಬದ ಸದಸ್ಯನಾಗಿದ್ದ ಬ್ರೂನೋ ಇಂದು ಕೊನೆಯುಸಿರೆಳೆದಿದೆ.. ಹೌದು ಕೆಲವರಿಗೆ ತಾವು ಸಾಕಿದ ಪ್ರಾಣಿ ತಮ್ಮ ಮನೆಯ ಸದಸ್ಯನಂತೆಯೇ ಆಗಿರುತ್ತದೆ.. ತಮ್ಮೆಲ್ಲಾ ಕಷ್ಟ ಸುಖಗಳಲ್ಲಿ ಆಪ್ತರೂ ದೂರ ಇದ್ದರೂ ಸಹ ಸಾಕಿದ ಪ್ರಾಣಿಗಳು ಸದಾ ಜೊತೆಯಾಗಿಯೇ ಇರುತ್ತವೆ.. ಅದೇ ರೀತಿ ಬಹಳಷ್ಟು ವರ್ಷಗಳಿಂದ ಮೇಘನಾ ಅವರ ಮನೆಯಲ್ಲಿ ಒಂದಾಗಿತ್ತು ಈ ಬ್ರೂನೋ..

ಆದರೆ ಇಂದು ಬ್ರೂನೋ ಇಲ್ಲವಾಗಿದ್ದು ಈ ವಿಚಾರವನ್ನು ಮೇಘನಾ ಹಂಚಿಕೊಂಡಿದ್ದಾರೆ.. ಬ್ರೂನೋ ಮೇಘನಾರ ಅಚ್ವುಮೆಚ್ಚಾಗಿದ್ದರೂ ಸಹ ಚಿರು ಸರ್ಜಾ ಮಾತ್ರ ಬ್ರೂನೋ ಕಂಡರೆ ಸದಾ ಹೆದರುತ್ತಲೇ ಇರುತ್ತಿದ್ದರು.. ಹೌದು ಈ ಹಿಂದೆ ಅಕುಲ್ ಬಾಲಾಜಿ ಅವರ ಸೂಪರ್ ಟಾಕ್ ಟೈಮ್ ಶೋ ನಲ್ಲಿ ಮೇಘನಾ ಹಾಗೂ ಚಿರು ಭಾಗವಹಿಸಿದ್ದ ಸಮಯದಲ್ಲಿ ವೇದಿಕೆಗೆ ಬ್ರೂನೋ ವನ್ನು ಸಹ ಕರೆತರಲಾಗಿತ್ತು.. ಬ್ರೂನೋವನ್ನು ನೋಡಿದ ಕೂಡಲೇ ಚಿರು ಸರ್ಜಾ ಸೋಫಾ ಹತ್ತಿ ಕುಳಿತಿದ್ದದ್ದನ್ನು ನೆನೆಯಬಹುದು.. ಆದರೆ ಇಂದು ಚಿರು ಇರುವ ಜಾಗಕ್ಕೆ ಹೊರಟುಬಿಟ್ಟೆಯಾ ಎಂದು ಮೇಘನಾ ಕಣ್ಣೀರಿಟ್ಟಿದ್ದಾರೆ..

“ಬಹಳಷ್ಟು ಜೀವಗಳನ್ನು ಸಾಲು ಸಾಲಾಗಿ ಕಳೆದುಕೊಂಡುಬಿಟ್ಟೆ.. ಈತನಿಗೆ ಬಹುಶಃ ಯಾವುದೇ ಪರಿಚಯದ ಅಗತ್ಯವಿಲ್ಲ ಎನಿಸುತ್ತದೆ.. ಈತ ಬ್ರೂನೋ.. ನನ್ನ ಆತ್ಮೀಯ ಗೆಳೆಯ ಇಂದು ಕೊನೆಯುಸಿರೆಳೆದಿದ್ದಾನೆ.. ನನ್ನ ಮಗ ಜೂನಿಯರ್ ಚಿರು ಬ್ರೂನೋ ಜೊತೆ ಆಟವಾಡಬೇಕು.. ಆತನ ಬೆನ್ನ ಮೇಲೆ ಕುಳಿತುಕೊಳ್ಳಬೇಕು.. ಹೀಗೆ ಸಾಕಷ್ಟು ಆಸೆಗಳಿದ್ದವು.. ಬ್ರೂನೋ ಸಾಮಾನ್ಯವಾಗಿ ಮಕ್ಕಳಿಂದ ದೂರವಿರುತ್ತಿದ್ದ.. ಮಕ್ಕಳನ್ನು ಕಂಡರೆ ಆಗುತ್ತಿರಲಿಲ್ಲ.. ಆದರೆ ಜೂನಿಯರ್ ಚಿರುವನ್ನು ಕಂಡರೆ ಬಹಳ ಸೌಮ್ಯ ಸ್ವಾಭಾವದಿಂದ ನಡೆದುಕೊಳ್ಳುತ್ತಿದ್ದ.. ಅವನಿಲ್ಲದ ಈ ಮನೆ ಮೊದಲಿನಂತೆ ಇರಲು ಸಾಧ್ಯವೇ ಇಲ್ಲ..

ಈ ಮನೆಗೆ ಬರುವ ಪ್ರತಿಯೊಬ್ಬರೂ ಸಹ ಕೇಳುತ್ತಿದ್ದ ಪ್ರಶ್ನೆ ಬ್ರೂನೋ ಎಲ್ಲಿ? ಅಂತ.. ನಾನು ಅವನನು ಹೇಳಲಾಗದಷ್ಟು ಮಿಸ್ ಮಾಡಿಕೊಳ್ಳುತ್ತೇನೆ.. ಖಂಡಿತವಾಗಿ ಅವನು ಚಿರು ಬಳಿ ಹೋಗಿರ್ತಾನೆ.. ಖಂಡಿತ ಮೊದಲಿನಂತೆ ಚಿರುಗೆ ತೊಂದರೆ ಕೊಡ್ತಿರ್ತಾನೆ ಎಂದುಕೊಳ್ಳುವೆ”.. ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ನಿಜಕ್ಕೂ ಸಾಕು ಪ್ರಾಣಿಗಳಿಗೆ ನಾವುಗಳು ಒಂದಿಷ್ಟು ಪ್ರೀತಿ ನೀಡಿದರೆ ಅವುಗಳು ಮರಳಿ ತೋರುವ ಪ್ರೀತಿ.. ಕಾಳಜಿ.. ಅದೆಲ್ಲದಕ್ಕಿಂತ ಹೆಚ್ಚಾಗಿ ಯಜಮಾನನಿಗೆ ತೋರುವ ನಿಯತ್ತು ನಿಜಕ್ಕೂ ಯಾವ ಮನುಷ್ಯನೂ ತೋರಲಾರ ಎಂಬುದು ಸತ್ಯದ ಮಾತು..