ಒಂದೇ ವಾರಕ್ಕೆ ಡ್ಯಾನ್ಸಿಂಗ್ ಶೋನಿಂದ ಹೊರ ನಡೆದ ಮೇಘನಾ ರಾಜ್.. ನಿಜವಾದ ಕಾರಣವೇನು ಗೊತ್ತಾ..

0 views

ಡ್ಯಾನ್ಸಿಂಗ್ ಚಾಂಪಿಯನ್.. ಸಧ್ಯ ಕನ್ನಡ ಕಿರುತೆರೆಯಲ್ಲಿ ಕಳೆದ ವಾರವಷ್ಟೇ ಶುರುವಾದ ಹೊಸ ಡ್ಯಾನ್ಸ್ ಶೋ.. ಸಾಮಾನ್ಯವಾಗಿ ತನ್ನ ಶೋಗಳಲ್ಲಿ ಸದಾ ಹೊಸತನವೇನಾದರೂ ತರುವ ಕಲರ್ಸ್ ಕನ್ನಡ ಸಧ್ಯ ಇದೀಗ ಡ್ಯಾನ್ಸಿಂಗ್ ಚಾಂಪಿಯನ್ ಶೋ ಮೂಲಕ ಹಿಂದಿ ಕಿರುತೆರೆ ಶೈಲಿಯಲ್ಲಿ ಹೊಸದೊಂದು ಡ್ಯಾನ್ಸ್ ಶೋವನ್ನು ತೆರೆಗೆ ತಂದಿದೆ.. ಕಿರುತೆರೆಯಲ್ಲಿ ಟಿ ಆರ್ ಪಿ ಗಾಗಿ ಕಲರ್ಸ್ ಕನ್ನಡ ಹಾಗೂ ಜೀ ಕನ್ನಡ ವಾಹಿನಿ ಒಂದಿಲ್ಲೊಂದು ಶೋ ತಂದು ಪೈಪೋಟಿ ನಡೆಸುತ್ತಿರುವುದು ಎಲ್ಲರಿಗೂ ತಿಳಿದೇ ಇದೆ.. ಅದೇ ರೀತಿ ಜೀ ಕನ್ನಡ ವಾಹಿನಿಗಲ್ಲಿ ಕಳೆದ ವಾರ ಗೋಲ್ಡನ್ ಸ್ಟಾರ್ ಗಣೇಶ್ ಅವರ ನಿರೂಪಣೆಯ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ತನ್ನ ಒರಸಾರ ಶುರು ಮಾಡಿದರೆ.. ಇತ್ತ ಅದೇ ಸಮಯಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಶೋ ಪ್ರಸಾರ ಶುರುವಾಗಿದೆ.

ಅಕುಲ್ ಬಾಲಾಜಿ ಮತ್ತೆ ನಿರೂಪಣೆಗೆ ಮರಳಿದ್ದು ಮಯೂರಿ ಹಾಗೂ ವಿಜಯ್ ರಾಘವೇಂದ್ರ ಅವರು ತೀರ್ಪುಗಾರರಾಗಿದ್ದಾರೆ.. ಇನ್ನು ಶೋನಲ್ಲಿ ಮೇಘನಾ ರಾಜ್ ಅವರೂ ಸಹ ತೀರ್ಪುಗಾರರಾಗಿದ್ದರು.. ಆದರೆ ಮೊದಲ ವಾರವೇ ಶೊನಿಂದ ಹೊರ ನಡೆದಿದ್ದಾರೆ.. ಇದಕ್ಕೆ ಕಾರಣವೂ ಇದೆ.. ಹೌದು ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಒಬ್ಬೊಬ್ಬ ಸೆಲಿಬ್ರೆಟಿ ಸ್ಪರ್ಧಿಯ ಜೊತೆಗೆ ಒಬ್ಬೊಬ್ಬ ನುರಿತ ಡ್ಯಾನ್ಸರ್ ಗೆ ಅವಕಾಶ ಮಾಡಿಕೊಡಲಾಗಿದ್ದು.. ಕಿಜಿಎಫ್ ಚಿತ್ರದ ಜೂನಿಯರ್ ರಾಕಿ ಪಾತ್ರದಾರಿ ಅಮೋಲ್ ಕನ್ನಡತಿ ಧಾರಾವಾಹಿಯ ಸುಚಿ ಪುಟ್ಟ ಗೌರಿ ಮದುವೆ ಧಾರಾವಾಹಿ ಖ್ಯಾತಿಯ ಸಾನಿಯಾ.. ಇಶಿತಾ, ಚಂದನ್ ಹೀಗೆ ಕಿರುತೆರೆಯ ಸಾಕಷ್ಟು ಕಲಾವಿದರು ಹಾಗೂ ಡ್ಯಾನ್ಸರ್ ಗಳಿಂದ ಶೋ ರಂಗೇರಿದ್ದು ಜನರಿಗೆ ಮನರಂಜನೆಯ ರಸದೌತಣವೆನ್ನಬಹುದು..

ಇನ್ನು ಇತ್ತ ಮೇಘನಾ ರಾಜ್ ಅವರು ತೀರ್ಪುಗಾರರಾಗಿ ಆಗಮಿಸಿದರೂ ಸಹ ಮೊದಲ ವಾರವೇ ಶೋನಿಂದ ಹೊರ ನಡೆದಿದ್ದಾರೆ.. ಇದಕ್ಕೆ ಬೇರೆ ಕಾರಣವೂ ಇದೆ.. ಹೌದು ಕಳೆದ ವರ್ಷ ನಡೆದ ಚಿರು ಸರ್ಜಾ ಅವರ ಘಟನೆಯಿಂದ ಚಿತ್ರದಂಗದಿಂದ ದೂರ ಉಳಿದಿದ್ದ ಮೇಘನಾ ರಾಜ್ ಮಗುವಿನ ಹಾರೈಕೆಯಲ್ಲಿ ತೊಡಗಿಕೊಂಡಿದ್ದರು.. ಇನ್ನು ಸಿನಿಮಾ ರಂಗಕ್ಕೆ ಮರಳುವ ಸೂಚನೆ ನೀಡಿದ್ದರೂ ಸಹ ಕೊರೊನಾ ಕಾರಣದಿಂದ ಸಧ್ಯ ಸಿನಿಮಾ ಕೆಲಸಗಳು ಸೆಟ್ಟೇರಿಲ್ಲ.. ಇತ್ತ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದ ಮೇಘನಾ ರಾಜ್ ಅವರಿಗೆ ಬಂದ ಅವಕಾಶವೇ ಡ್ಯಾನ್ಸಿಂಗ್ ಚಾಂಪಿಯನ್..

ಹೌದು ಡ್ಯಾನ್ಸಿಂಗ್ ಚಾಂಪಿಯನ್ ಶೋ ಮೇಘನಾ ರಾಜ್ ಅವರಿಗೆ ತೆರೆ ಮೇಲೆ ಬರಲು ಒಂದೊಳ್ಳೆ ವೇದಿಕೆಯಾಗಿತ್ತು.. ಆದರೆ ಒಂದು ವಾರಕ್ಕೆ ಮಾತ್ರ ಮೇಘನಾ ರಾಜ್ ಕಾರ್ಯಕ್ರಮವನ್ನು ಸೀಮಿತ ಗೊಳಿಸಿಕೊಂಡರು.. ಹೌದು ಮೇಘನಾ ರಾಜ್ ಅವರಿಗೆ ಸಂಪೂರ್ಣ ಶೋ ನ ತೀರ್ಪುಗಾರರಾಗಲು ಅವಕಾಶವನ್ನು ನೀಡಲಾಗಿತ್ತು.. ಆದರೆ ಇದೇ ಮೊದಲ ಬಾರಿಗೆ ಕಾರ್ಯಕ್ರಮವೊಂದರ ತೀರ್ಪುಗಾರರಾಗಿ ಕಾಣಿಸಿಕೊಂಡ ಮೇಘನಾ ರಾಜ್ ಇದನ್ನು ಅತಿಥಿ ತೀರ್ಪುಗಾರರ ಸ್ಥಾನಕ್ಕಷ್ಟೇ ಸಾಕೆಂದರು.. ಹೌದು ಒಳ್ಳೆಯ ಸಂಭಾವನೆ ಮತ್ತು ತೆರೆ ಮೇಲೆ ಮರಳಿ ಬರಲು ಒಂದೊಳ್ಳೆ ಅವಕಾಶವಾದರೂ ಸಹ ಮೇಘನಾ ರಾಜ್ ಅತಿಥಿ ತೀರ್ಪುಗಾರರಾಗಿ ಮಾತ್ರವೇ ಕಾಣಿಸಿಕೊಂಡರು..

ಇದಕ್ಕೆ ಪ್ರಮುಖ ಕಾರಣ ಜನರು ಯಾವ ರೀತಿ ಪ್ರತಿಕ್ರಿಯೆ ನೀಡಬಹುದೆನ್ನುವ ಆತಂಕ.. ಹೌದು ಚಿರು ಅಗಲಿದ ನಂತರ ಡ್ಯಾನ್ಸ್ ಶೋ ಮೂಲಕ ಕಂಬ್ಯಾಕ್ ಮಾಡಿದ ಮೇಘನಾ ರಾಜ್ ಅವರನ್ನು ಅಭಿಮಾನಿಗಳು ಸಂತೋಷದಿಂದಲೇ ಬರಮಾಡಿಕೊಂಡರು.. ಹೊಸ ಆರಂಭಕ್ಕೆ ಶುಭ ಕೋರಿದರು.. ಆದರೆ ಮೇಘನಾ ರಾಜ್ ಅವರು ಮುಂದೆ ಶೋನಲ್ಲಿ ಬೇರೆ ಬೇರೆ ರೀತಿಯ ಸಂದರ್ಭಗಳು ಸೃಷ್ಟಿಯಾಗಬಹುದು.. ಆ ಸಮಯದಲ್ಲಿ ಅವರು ನೀಡುವ ಪ್ರತಿಕ್ರಿಯೆಗಳನ್ನು ನೋಡಿ ಜನರು ಯಾವ ರೀತಿ ತೆಗೆದುಕೊಳ್ಳಬಹುದು ಎಂದೆಲ್ಲಾ ಆಲೋಚಿಸಿ ಶೋನಲ್ಲಿ ಅತಿಥಿ ತೀರ್ಪುಗಾರರಾಗಿ ಮಾತ್ರವೇ ಕಾಣಿಸಿಕೊಂಡು ಒಂದೇ ವಾರಕ್ಕೆ ಶೋ ಸೀಮಿತಗೊಳಿಸಿಕೊಂಡರು..

ಇನ್ನು ಶೋನಲ್ಲಿ ಮಗ ರಾಯನ್ ಬಗ್ಗೆ ಮಾತನಾಡಿದ ಮೇಘನಾ ರಾಜ್ ಅವನಿಗೆ ಎಷ್ಟು ಅಮ್ಮ ಅಮ್ಮ ಅಂತ ಹೇಳಿಕೊಟ್ಟರು ಅವನು ಮಾತ್ರ ಅಪ್ಪ ಅಪ್ಪ ಅಂತಾನೇ ಹೇಳ್ತಾನೆ, ಇದನ್ನೆಲ್ಲಾ ನೋಡಲು ಚಿರು ಇರಬೇಕಿತ್ತು ಎಂದು ಭಾವುಕರಾದರು..ಇನ್ನು ಸಧ್ಯ ಮೇಘನಾ ಅವರ ಕಂಬ್ಯಾಕ್ ಅನ್ನು ಸಕಾರಾತ್ಮಕವಾಗಿ ಪ್ರೇಕ್ಷಕರು ತೆಗೆದುಕೊಂಡಿದ್ದು ನೋಡಿ ಮೇಘನಾ ರಾಜ್ ಅವರೂ ಸಹ ಸಂತೋಷ ಪಟ್ಟಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಶೋ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.. ಒಟ್ಟಿ‌ನಲ್ಲಿ ಮಗನ ಜವಾಬ್ದಾರಿ ಜೊತೆಗೆ ಸಿನಿಮಾ ಪಯಣ ಮತ್ತೆ ಶುರು ಮಾಡುತ್ತಿರುವ ಮೇಘನಾ ಅವರಿಗೆ ಶುಭವಾಗಲಿ.. ಇನ್ನು ಮೊದಲ ವಾರವೇ ಭರ್ಜರಿ ಓಪನಿಂಗ್ ಪಡೆದಿರುವ ಡ್ಯಾನ್ಸಿಂಗ್ ಚಾಂಪಿಯನ್ ಮುಂದಿನ ವಾರ ಮತ್ತೊಬ್ಬ ಸೆಲಿಬ್ರೆಟಿ ಅಥಿತಿ ತೀರ್ಪುಗಾರರೊಂದಿಗೆ ಪ್ರಸಾರವಾಗಲಿದ್ದು ಕಾದು ನೋಡಬೇಕಿದೆ..