ಮೇಘನಾ ರಾಜ್ ಹಾಗೂ ಮಗುವಿಗೆ ಕೊರೊನಾ ಪಾಸಿಟಿವ್.. ಇದೆಂತಹ ಹಣೆಬರಹ ಗುರು..

0 views

ನಿಜಕ್ಕೂ ಈ ವಿಚಾರ ಕೇಳುತ್ತಿದ್ದಂತೆ ಎಂತಹ ಕಲ್ಲು ಮನಸ್ಸಾದರೂ ಕಲಕುತ್ತದೆ.. ಹೌದು ಮೇಘನಾ ರಾಜ್ ಅವರ ಸಂಪೂರ್ಣ ಕುಟುಂಬಕ್ಕೆ ಕೊರೊನಾ ಪಾಸಿಟಿವ್ ಆಗಿದೆ.. ಪುಟ್ಟ ಕಂದನಿಗೂ ಸೋಂಕು ತಗುಲಿರುವುದು ಅರಗಿಸಿಕೊಳ್ಳಲಾಗದ ವಿಚಾರವಾಗಿದೆ.‌. ಹೌದು ಅದಾಗಲೇ ಮೇಘನಾ ರಾಜ್ ಅವರ ಅಪ್ಪ ಅಮ್ಮನಿಗೆ ಜಯನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಮೊನ್ನೆ ರಾತ್ರಿ‌ ಪ್ರಮಿಳಾ ಸುಂದರ್ ಅವರಿಗೂ ಸೋಂಕು ತಗುಲಿರುವುದು ಧೃಡಪಟ್ಟಿದೆ.. ಇನ್ನು ಮೇಘನಾ ಹಾಗೂ ಮಗುವಿಗೆ ಮನೆಯಲ್ಲಿಯೇ ಐಸೋಲೇಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.‌

ಕಳೆದ ಅಕ್ಟೋಬರ್ 22 ರಂದು ಮೇಘನಾ ಮಗುವಿಗೆ ಜನ್ಮ ನೀಡಿದ್ದರು.. ಚಿರು ಅಗಲಿಕೆಯ ನಂತರ ಕೊಂಚ ಸಮಾಧಾನಕರ ವಿಚಾರವಾಗಿತ್ತು.. ನೋವು ಮರೆಯಾಗಿ ಮನೆಯಲ್ಲಿ ಮತ್ತೆ ಸಂಭ್ರಮ ಮನೆಮಾಡಿತ್ತು.. ಆದರೆ ಹಣೆಬರಹ ಅನ್ನೋದು ಈ ಮಟ್ಟಕ್ಕೆ ಕೈಕೊಡಬಾರದು.. ಇನ್ನೂ ತಿಂಗಳ ಎಳೆಯ ಕಂದನಿಗೂ ಸೋಂಕು ತಗುಲಿದ್ದು ಕುಟುಂಬ ಆತಂಕಕ್ಕೀಡಾಗಿದೆ..

ಮೊನ್ನೆ ಮೊನ್ನೆಯಷ್ಟೇ ಮಗುವಿಗೆ ತೊಟ್ಟಿಲ ಶಾಸ್ತ್ರ ಸಮಾರಂಭ ನೆರವೇರಿಸಿದ್ದರು.. ಕಾರ್ಯಕ್ರಮದಲ್ಲಿ ಹಲವಾರು ಜನರು ಭಾಗಿಯಾಗಿದ್ದರು.. ಆ ಸಮಯದಲ್ಲಿಯೂ ಅಭಿಮಾನಿಗಳು ಮಗುವನ್ನು ಯಾರೂ ಮುಟ್ಟದ್ದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದರು.. ಕೊರೊನಾ ಸಮಯದಲ್ಲಿ ಯಾವುದೇ ಸಮಾರಂಭ ಮಾಡಬೇಡಿ ಎಂದೂ ಸಹ ಸಾಮಾಜಿಕ ಜಾಲತಾಣದಲ್ಲಿ ಮೇಘನಾ ಅವರಿಗೆ ತಿಳಿಸಿದ್ದರು.. ಆದರೆ ದುರ್ವಿಧಿ ಸಂಪೂರ್ಣ ಕುಟುಂಬಕ್ಕೆ ಕೊರೊನಾ ಪಾಸಿಟಿವ್ ಆಗಿದ್ದು ಎಲ್ಲರಿಗೂ ಚಿಕಿತ್ಸೆ ನಡೆಯುತ್ತಿದೆ..

ಚಿರು ಸರ್ಜಾ ಅವರು ಇಲ್ಲವಾದ ಬಳಿಕ ನಡೆದ ಕೆಲವು ಕಾರ್ಯಗಳಲ್ಲಿ ಭಾಗಿಯಾಗಿದ್ದ ಧೃವ ಹಾಗೂ ಪ್ರೇರಣಾ ಸರ್ಜಾ ರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ನಂತರ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.. ಅದೇ ರೀತಿ ಇದೀಗ ಮೇಘನಾ ಅವರ ಸಂಪೂರ್ಣ ಕುಟುಂಬ ಆದಷ್ಟು ಬೇಗ ಗುಣಮುಖರಾಗಿ ಮನೆಗೆ ಮರಳುವಂತಾಗಿಬಿಡಲಿ.. ಆ ಕುಟುಂಬ ಅನುಭವಿಸಿದ ನೋವು ಇಷ್ಟಕ್ಕಾದರೂ ನಿಲ್ಲಲಿ.. ಅಮ್ಮನ ಮಡಿಲಿನಲ್ಲಿ ನೆಮ್ಮದಿಯಿಂದ ಆಡಬೇಕಾದ ಎಳೆಯ ಕಂದನಿಗೆ ಔಷಧಿ ಈ ಚಿಕಿತ್ಸೆಯ ವಾಸ ನಿಲ್ಲಲಿ.‌.

ಈ ಬಗ್ಗೆ ಮಾತನಾಡಿರುವ ಸುಂದರ್ ರಾಜ್ ಅವರು ನಮ್ಮ ಕುಟುಂಬದ ಮೇಲೆ ಕೊರೊನಾ ಪರಿಣಾಮ ಬೀರಿದೆ.. ಎಲ್ಲರಿಗೂ ಕೊರೊನಾ ಪಾಸಿಟಿವ್ ಆಗಿದೆ ಮೇಘನಾ ಹಾಗೂ ಮಗುವಿಗೆ ಮನೆಯಲ್ಲಿಯೇ ಐಸೋಲೆಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.. ನಾವಿಬ್ಬರು ಹಿರಿಯ ನಾಗರಿಕರಾದ್ದರಿಂದ ನಾವು ಮನೆಯಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತವಲ್ಲವೆಂದು ಆಸ್ಪತ್ರೆಯಲ್ಲೊ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದಿದ್ದಾರೆ‌‌.. ಮೇಘನಾ ರಾಜ್ ಹಾಗೂ ಮಗು ಮತ್ತು ಸುಂದರ್ ರಾಜ್ ಅವರು ಹಾಗೂ ಪ್ರಮಿಳಾ ಅವರಿಗೆ ಕೊರೊನಾ ಪಾಸಿಟಿವ್ ಆಗಿರುವ ವಿಚಾರ ತಿಳಿದ ಅಭಿಮಾನಿಗಳು ಎಲ್ಲರೂ ಆದಷ್ಟು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿದ್ದಾರೆ..