ನಾನು ಮಾನಸಿಕವಾಗಿ ಕುಗ್ಗಿ ಹೋದೆ.. ಮಗುವಿನ ಬಗ್ಗೆ ಮಾತನಾಡಿ ಭಾವುಕರಾದ ಮೇಘನಾ ರಾಜ್..

0 views

ಮೇಘನಾ ರಾಜ್.. ಜೀವನದಲ್ಲಿ ಊಹಿಸಲಾಗದ ಬಹಳಷ್ಟು ಕಷ್ಟಗಳನ್ನು ದಾಟಿ ಸಧ್ಯ ಮಗುವಿನ ಜೊತೆ ನೆಮ್ಮದಿಯ ಜೀವನದ ಕನಸುಗಳನ್ನು ಕಟ್ಟಿಕೊಂಡು ದಿನ ದೂಡುತ್ತಿದ್ದಾರೆ.. ಇಂತಹ ಸಮಯದಲ್ಲಿ ಮಗನ ಬಗ್ಗೆ ತಾವು ಮಾನಸಿಕವಾಗಿ ಕುಗ್ಗಿ ಹೋದ ದಿನಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.. ಹೌದು ಕಳೆದ ವರ್ಷ ಮೇಘನಾ ರಾಜ್ ಅವರಿಗೆ ಬಹಳಷ್ಟು ನೋವು ತಂದ ವರ್ಷ.. ವಿಪರ್ಯಾಸವೆಂದರೆ ಕಳೆದ ವರ್ಷ ಹೊಸದರಲ್ಲಿ ಚಿರು ಸರ್ಜಾ ಮಾಧ್ಯಮದ ಮುಂದೆ ಮಾತನಾಡಿ ಈ ವರ್ಷ ನನಗೆ ಬಹಖ ವಿಶೇಷವಾದ ವರ್ಷ..

ಸಾಕಷ್ಟು ಒಳ್ಳೆಯ ಸಿನಿಮಾಗಳು ಕೈನಲ್ಲಿವೆ.. ಎಂದಿದ್ದರು.. ಮಗುವಿನ ಆಗಮನದ ಸಂತೀಷದಲ್ಲಿಯೂ ಇದ್ದ ಚಿರು ಸರ್ಜಾ.. ಅದನ್ನು ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ ಈ ವರ್ಷ ನನಗೆ ಬಹಳ ವಿಶೇಷ ಎನ್ನುತ್ತಿದ್ದರು.. ಆದರೆ ದುರ್ಧೈವ ಕಾಲದ ಮುಂದೆ ಮನುಷ್ಯನ ಕನಸುಗಳು ಅಲೆಗಳಿಗೆ ಸಿಕ್ಕ ಕಸದಂತಾಗಿಬಿಡುತ್ತದೆ.. ಮಗುವಿನ ಕನಸು ಕಂಡಿದ್ದ ಚಿರು ಸರ್ಜಾ ಮಗನ ಮುಖ ನೋಡುವ ಮುನ್ನವೇ ಅಕಾಲಿಕವಾಗಿ ಇಹಲೋಕ ತ್ಯಜಿಸಿಬಿಟ್ಟರು.. ಇನ್ನು ಅಂದಿನ ಸಂದರ್ಭ ನಿಜಕ್ಕೂ ಮೇಘನಾ ರಾಜ್ ಅವರ ಜೀವನದ ಅತ್ಯಂತ ಕಷ್ಟದ ಸಂದರ್ಭವೇ ಆಗಿತ್ತು..

ಹೊಟ್ಟೆಯಲ್ಲಿ ಮಗು.. ಹತ್ತು ವರ್ಷಗಳ ಸ್ನೇಹ ಪ್ರೀತಿಗೆ ಮದುವೆಯ ಅರ್ಥ ನೀಡಿದ್ದ ತನ್ನ ಪ್ರೀತಿಯ ಪತಿ ಚಿರು ಇನ್ನಿಲ್ಲವೆಂದರೆ ನಿಜಕ್ಕೂ ಮೇಘನಾ ರಾಜ್ ಅವರ ಪರಿಸ್ಥಿತಿ ಯಾರಿಗೂ ಬಾರದಿರಲಿ ಎನಿಸಿತ್ತು.. ಅದೇ ರೀತಿ ಆ ಎಲ್ಲಾ ಕಷ್ಟದ ದಿನಗಳನ್ನು ದಾಟಿ ಬಂದ ಮೇಘನಾ ರಾಜ್ ಅವರ ಬಾಳಿಗೆ ಅಕ್ಟೋಬರ್ 22 ರಂದು ಜೂನಿಯರ್ ಚಿರುವಿನ ಆಗಮನವಾಯಿತು.. ಚಿರು ಇಲ್ಲದ ದಿನಗಳ ಕಳೆದ ಮೇಘನಾರಿಗೆ ಹೊಸ ಬೆಳಕು ಮೂಡಿತ್ತು.. ಆದರೆ ನೋವಿನ ಮೇಲೆ ನೋವು ಎನ್ನುವಂತೆ ಮಗು ಹುಟ್ಟಿದ ಎರಡೇ ತಿಂಗಳಿಗೆ ಅವರ ಸಂತೋಷ ದೂರವಾಗಿ ಹೋಯ್ತು‌‌.. ಪುಟ್ಟ ಕಂದ ಸೇರಿದಂತೆ ಸಂಪೂರ್ಣ ಕುಟುಂಬಕ್ಕೆ ಕೊರೊನಾ ಪಾಸಿಟುವ್ ಆಗಿ ಇನ್ನಿಲ್ಲದ ಕಷ್ಟ ಅನುಭವಿಸುವಂತಾಯ್ತು..

ಅತ್ತ ಸುಂದರ್ ರಾಜ್ ಅವರು ಹಾಗೂ ಪ್ರಮಿಳಾ ಸುಂದರ್ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೆ ಇತ್ತ ಮೇಘನಾ ರಾಜ್ ಅವರು ಹಾಗೂ ಮಗು ಮನೆಯಲ್ಲಿಯೇ ಐಸೋಲೇಟ್ ಆಗಿ ಚಿಕಿತ್ಸೆ ಪಡೆದರು.. ಸಧ್ಯ ಆ ಎಲ್ಲಾ ದಿನಗಳನ್ನು ಗೆದ್ದು ಬಂದ ಮೇಘನಾರಾಜ್ ಅವರು ಇದೀಗ ಅಂದಿನ ಕಷ್ಟದ ಬಗ್ಗೆ ಮಾತನಾಡಿದ್ದಾರೆ.. ಹೌದು ಮಾಧ್ಯನದ ಸಂದರ್ಶನವೊಂದರಲ್ಲಿ ಮಾತನಾಡಿರುವ ಮೇಘನಾ ರಾಜ್ ಅವರು ತಮ್ಮ ಆ ಕಷ್ಟದ ದಿನಗಳನ್ನು ನೆನೆದಿದ್ದಾರೆ.‌ ಹೌದು ಮಗುವನ್ನು ನೋಡಿಕೊಳ್ಳುವುದೇ ನನಗೆ ಹೊಸ ಅನುಭವವಾಗಿತ್ತು.. ಅಂತಹ ಸಮಯ ಸಮಯದಲ್ಲಿ ಕೊರೊನಾದಿಂದಾಗಿ ಅಪ್ಪ ಅಮ್ಮ ಆಸ್ಪತ್ರೆಗೆ ದಾಖಲಾದರು.. ಇತ್ತ ನಾನು ಮಗು ಮನೆಯಲ್ಲಿಯೇ ಐಸೋಲೇಟ್ ಆದೆವು‌‌..

ಮಗುವನ್ನು ಹೇಗೆ ನೋಡಿಕೊಳ್ಳಬೇಕು ಅನ್ನೋದೆ ಗೊತ್ತಾಗುತ್ತಿರಲಿಲ್ಲ.. ಮಾನಸಿಕವಾಗಿ ಬಹಳಷ್ಟು ಕುಗ್ಗಿ ಹೋಗಿದ್ದೆ.. ವೈದ್ಯರು ಬಹಳಷ್ಟು ಸಲಹೆ ನೀಡುತ್ತಿದ್ದರು.. ಆದರೂ ಸಹ ಆ ದಿನಗಳಲ್ಲಿ ಬಹಳಷ್ಟು ಹೆದರಿದ್ದೆ‌‌.. ಭಯದ ದಿನಗಳಾಗಿದ್ದವು.. ಆ ದಿನಗಳು ಮತ್ತೆಂದೂ ಜೀವನದಲ್ಲಿ ಬಾರದಿರಲಿ ಎಂದು ಭಾವುಕರಾಗಿದ್ದಾರೆ.. ಸಾಲು ಸಾಲು ಕಷ್ಟಗಳನ್ನು ನೋಡಿದ ಜೀವ ಇನ್ನು ಮುಂದಾದರೂ ನೆಮ್ಮದಿಯಿಂದ ಬದುಕುವಂತಾಗಲಿ.. ಜೂನಿಯರ್ ಚಿರು ಮೇಘನಾ ರಾಜ್ ಅವರ ಭವಿಷ್ಯ ವಾಗಲಿ.. ಮೇಘನಾ ರಾಜ್ ಅವರೇ ತಿಳಿಸಿರುವಂತೆ ಆದಷ್ಟು ಬೇಗ ಚಿತ್ರರಂಗಕ್ಕೆ ಮರಳಿ ಬಂದು ಎಂದಿನಂತೆ ಸಿನಿಮಾವನ್ನು ಬದುಕಾಗಿಸಿಕೊಳ್ಳಲಿ..