ಚಿರಂಜೀವಿ ಸರ್ಜಾ ಕುಟುಂಬದಲ್ಲೀಗ ಸಂತೋಷದ ದಿನಗಳ ಆರಂಭವಾಗಿವೆ.. ಮಗುವಿನ ರೂಪದಲ್ಲಿ ಮತ್ತೆ ಹುಟ್ಟಿ ಬಂದ ಜೂನಿಯರ್ ಚಿರುಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ.. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಇತರ ರಾಜ್ಯದ ಸ್ನೇಹಿತರು.. ಸಂಬಂಧಿಕರು ಎಲ್ಲರೂ ಸಹ ಮೇಘನಾರಿಗೆ ಹಾಗೂ ಮುದ್ದು ಕಂದನಿಗೆ ಶುಭ ಹಾರೈಸುತ್ತಿದ್ದಾರೆ.. ಇದೀಗ ಸೂಪರ್ ಸ್ಟಾರ್ ತನ್ನ ಪತ್ನಿಯ ಜೊತೆಗೆ ಬರೋಬ್ಬರಿ 550 ಕಿ ಮೀ ದೂರದಿಂದ ಕಾರಿನಲ್ಲಿಯೇ ಬಂದು ಮಗುವನ್ನು ನೋಡಿ ಮರಳಿದ್ದಾರೆ..
ಹೌದು ಅವರು ಮತ್ಯಾರೂ ಅಲ್ಲ ಮಳಯಾಳಂ ನ ಸೂಪರ್ ಸ್ಟಾರ್ ನಟ ಫಹದ್ ಫಾಸಿಲ್ ಹಾಗೂ ಅವರ ಪತ್ನಿ ನಟಿ ನಜ್ರಿಯಾ ನಜೀಮ್.. ಹೌದು ಕೊಚ್ಚಿಯಲ್ಲಿ ವಾಸವಿರುವ ಈ ದಂಪತಿ ಚಿರುವಿನ ಮಗುವನ್ನು ನೋಡುವ ಸಲುವಾಗಿ 550 ಕಿಲೋ ಮೀಟರ್ ಕಾರಿನಲ್ಲಿಯೇ ಬಂದು ಮಗುವನ್ನು ನೋಡಿ ಮರಳಿದ್ದಾರೆ.. ಇದಕ್ಕೆ ಕಾರಣವೂ ಇದೆ..
ಹೌದು ನಜ್ರಿಯಾ ನಜೀಮ್ ಮೇಘನಾ ರಾಜ್ ಅವರ ಆಪ್ತ ಸ್ನೇಹಿತೆ.. ಮೇಘನಾ ರಾಜ್ ಅವರು ಕನ್ನಡ ಮಾತ್ರವಲ್ಲದೇ ಮಳಯಾಳಂ ಚಿತ್ರರಂಗದಲ್ಲಿಯೂ ಹೆಸರು ಮಾಡಿದ್ದಾರೆ.. ಅಲ್ಲಿನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಮೇಘನಾ ರಾಜ್ ಅವರೂ ಸಹ ಒಬ್ಬರಾಗಿದ್ದಾರೆ.. ಮಳಯಾಳಂ ಸಿನಿಮಾವೊಂದರಲ್ಲಿ ಮೇಘನಾ ಹಾಗೂ ನಜ್ರಿಯಾ ನಜೀಮ್ ಒಟ್ಟಿಗೆ ಅಭಿನಯಿಸಿದ್ದರು.. ಅಂದಿನಿಂದ ಇಬ್ಬರೂ ಬಹಳ ಆಪ್ತ ಸ್ನೇಹಿತೆಯರಾಗಿದ್ದರು.. ಅಷ್ಟೇ ಅಲ್ಲದೇ ಫಹದ್ ಫಾಸಿಲ್ ಹಾಗೂ ಚಿರು ಕೂಡ ಒಳ್ಳೆಯ ಸ್ನೇಹಿತರಾಗಿದ್ದರು..
ಚಿರು ಅಗಲಿಕೆಯ ನಂತರ ಮೇಘನಾರಿಗೆ ನಜ್ರಿಯಾ ಆತ್ಮಸ್ಥೈರ್ಯ ತುಂಬಿ ಜೊತೆಗಿದ್ದರು.. ಇದೀಗ ಮೇಘನಾರಿಗೆ ಮಗುವಾದ ದಿನವೇ ಚಿರು ಮತ್ತೆ ಹುಟ್ಟಿ ಬಂದರು ಎಂದು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದರು..
ಇದೀಗ ಮಗುವನ್ನು ನೋಡುವ ಸಲುವಾಗಿ 550 ಕಿಲೋಮೀಟರ್ ದೂರದ ಕೊಚ್ಚಿಯಿಂದ ಕಾರಿನಲ್ಲಿಯೇ ಪತಿ ಫಹದ್ ಫಾಸಿಲ್ ಜೊತೆಗೆ ಆಗಮಿಸಿದ್ದಾರೆ.. ಹೌದು ಪುಟ್ಟ ಮಗುವನ್ನು ನೋಡಲು ಬರಬೇಕಿದ್ದ ಕಾರಣ ವಿಮಾನದಲ್ಲಿ ಬಂದರೆ ಕೊರೊನಾ ವೈರಸ್ ನ ಆತಂಕವಿದ್ದುದರಿಂದ ವಿಮಾನದಲ್ಲಿ ಬಂದು ಮಗುವಿನ ಬಳಿ ಹೋಗುವುದು ಬೇಡವೆಂದು ಅಷ್ಟು ದೂರದಿಂದ ಕಾರಿನಲ್ಲಿಯೇ ಆಗಮಿಸಿ ಆಸ್ಪತ್ರೆಗೆ ತೆರಳಿ ಜೂನಿಯರ್ ಚಿರುವನ್ನು ನೋಡಿ.. ಮೇಘನಾರ ಜೊತೆ ಸ್ವಲ್ಪ ಸಮಯ ಕಳೆದು ನಂತರ ಕನಕಪುರ ರಸ್ತೆಯಲ್ಲಿನ ಧೃವ ಅವರ ಬೃಂದಾವನ ಫಾರ್ಮ್ ನಲ್ಲಿನ ಚಿರಂಜೀವಿ ಸರ್ಜಾರ ಸಮಾಧಿ ಬಳಿ ತೆರಳಿ ಸ್ವಲ್ಪ ಸಮಯ ಅಲ್ಲಿಯೇ ಇದ್ದು ನಂತರ ಮರಳಿ ಕೊಚ್ಚಿಗೆ ತೆರಳಿದ್ದಾರೆ..
ಇನ್ನು ಮೊನ್ನೆಯಷ್ಟೇ ಅರ್ಜುನ್ ಸರ್ಜಾ ಅವರು ಕುಟುಂಬ ಸಮೇತ ಚೆನ್ನೈ ನಿಂದ ಬೆಂಗಳೂರಿಗೆ ಆಗಮಿಸಿ ಜೂನಿಯರ್ ಚಿರುವನ್ನು ನೋಡಿ ಸಂತೋಷಪಟ್ಟರು.. ಅಷ್ಟೇ ಅಲ್ಲದೇ ಮಗು ರಾಜಯೋಗದಲ್ಲಿ ಹುಟ್ಟಿರುವನು.. 36 ವರ್ಷಗಳ ಹಿಂದೆ ಇದೇ ತಿಂಗಳಿನಲ್ಲಿ ಅವನ ಅಪ್ಪನನ್ನು ನೋಡಲು ಆಸ್ಪತ್ರೆಗೆ ಬಂದಿದ್ದೆ.. ಇದೇ ರೀತಿ ಆನಂದವಾಗಿತ್ತು.. ಈಗ ಮತ್ತೆ ಅವನೇ ತನ್ನ ಮಗನಾಗಿ ಹುಟ್ಟಿ ಬಂದಿದ್ದಾನೆ.. ಈ ಸಂತೋಷವನ್ನು ಪದಗಳಲ್ಲಿ ಹೇಳೋಕೆ ಸಾಧ್ಯವಿಲ್ಲ.. ಮಗು ಸಂಪೂರ್ಣವಾಗಿ ಚಿರು ರೀತಿಯಲ್ಲಿಯೇ ಇದೆ.. ಇಂದು ಅವನಿದ್ದಿದ್ದರೆ ಈ ಸಂಭ್ರಮವೇ ಬೇರೆ ರೀತಿಯಲ್ಲಿ ಇರುತ್ತಿತ್ತು.. ಆದರೆ ಸಮಯದ ಜೊತೆ ನಾವು ಸಾಗಬೇಕು ಅಷ್ಟೇ.. ಎಲ್ಲರೂ ಮಗುವಿಗೆ ಹಾರೈಸಿ ಎಂದು ಮನವಿ ಮಾಡಿಕೊಂಡರು..