ಚಿರು ಬೇಬಿನ ನೋಡ್ಬೇಕು.. ಮೇಘಿ ನಿಮ್ಮನೆಗೆ ಬರ್ಲಾ ಪ್ಲೀಸ್ ಎಂದು ಮೇಘನಾರನ್ನು ಕೇಳಿಕೊಂಡ ಈ ಮಗು ಯಾರು ಗೊತ್ತಾ?

0 views

ಮೇಘನಾ ರಾಜ್.. ಸದ್ಯ ಪುಟಾಣಿ ಚಿರುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.. ಮುದ್ದು ಕಂದನೊಂದಿಗೆ ಸಮಯ ಕಳೆಯುತ್ತಿರುವ ಮೇಘನಾ ರಾಜ್ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಚಿರು ಕುರಿತು ಅಭಿಮಾನಿಗಳು ಎಡಿಟ್ ಮಾಡಿರುವ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.. ಸದ್ಯ ಇದೀಗ ಚಿರು ಬೇಬಿಯನ್ನು ನೋಡಬೇಕು.. ಮೇಘಿ ನಿಮ್ಮ ಮನೆಗೆ ಬರ್ಲಾ? ಎಂದು ಪುಟಾಣಿ ಮಗುವೊಂದು ವೀಡಿಯೋ ಮೂಲಕ ಮನವಿ ಮಾಡಿಕೊಂಡಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ..

ಹೌದು ಚಿರು ಇಲ್ಲವಾದ ಸಮಯದಿಂದ ಮೇಘನಾರಿಗೆ ಅವರ ಸ್ನೇಹಿತರು ಬೆಂಬಲವಾಗಿ ನಿಂತರು.. ಪ್ರತಿ ಕ್ಷಣದಲ್ಲಿಯೂ ಜೊತೆಯಾಗಿ ನಿಂತು ಧೈರ್ಯ ತುಂಬಿದರು.. ಚಿರು ಹಾಗೂ ಮೇಘನಾ ಇಬ್ಬರಿಗೂ ಬಹುತೇಕ ಎಲ್ಲರೂ ಕಾಮನ್ ಫ್ರೆಂಡ್ಸ್ ಆಗಿದ್ದ ಕಾರಣ ಮೇಘನಾ ಅವರ ಸೀಮಂತ ಶಾಸ್ತ್ರವನ್ನು ಸ್ನೇಹಿತರೆಲ್ಲಾ ಸೇರಿ ನೆರವೇರಿಸಿದ್ದರು.. ಮೇಘನಾ ರಾಜ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಕಷ್ಟದ ಸಮಯದಲ್ಲಿ ನನ್ನ ಸ್ಟ್ರೆಂತ್ ಆಗಿ ನಿಂತ ಎಲ್ಲಾ ಸ್ನೇಹಿತರಿಗೆ ಎಷ್ಟು ಧನ್ಯವಾದಗಳನ್ನು ತಿಳಿಸಿದರು ಸಾಲದು ಎಂದಿದ್ದರು..

ಇದೀಗ ಮೇಘನಾ ಹಾಗೂ ಚಿರು ಸ್ನೇಹಿತನ ಮಗು ಮೇಘಿ ನಿಮ್ಮನೆಗೆ ಬರ್ಲಾ ಪ್ಲೀಸ್ ಎಂದು ಮನವಿ ಮಾಡಿಕೊಂಡಿದೆ.. ಹೌದು ಆ ಮಗು ಮತ್ಯಾರೂ ಅಲ್ಲ.. ಚಿರು ಹಾಗೂ ಮೇಘನಾರ ಆಪ್ತ ಸ್ನೇಹಿತ ನಿರ್ದೇಶಕ ಪನ್ನಘಭರಣ ಅವರ ಮಗ.. ಹೌದು ಪನ್ನಘಭರಣ ಹಾಗೂ ಚಿರು ಮತ್ತು ಮೇಘನಾ ಬಹಳ ವರ್ಷಗಳಿಂದ ಆಪ್ತ ಸ್ನೇಹಿತರು.. ಒಂದು ರೀತಿ ಕುಟುಂಬವೆಂದೇ ಹೇಳಬಹುದು.. ಚಿರು ಹೋದ ಬಳಿಕ ತಿಂಗಳ ಕಾರ್ಯವನ್ನು ಪನ್ನಘಭರಣ ಕುಇಡ ತಮ್ಮ ಮನೆಯಲ್ಲಿ ನೆರವೇರಿಸಿದ್ದರು.. ತಮ್ಮ ಮನೆಯಲ್ಲಿ ಚಿರುವಿಗಾಗಿ ಸ್ಥಳವೊಂದನ್ನು ಮೀಸಲಿಟ್ಟು ಆ ಜಾಗದಲ್ಲಿ ಚಿರುವಿನ ಫೋಟೋ ಇಟ್ಟು ಅಲ್ಲಿ ಚಿರು ಎಂದೆಂದೂ ಶಾಶ್ವತವಾಗಿ ಇರ್ತಾನೆ ಎಂದಿದ್ದರು.. ನಂತರದ ದಿನಗಳಲ್ಲಿ ಮೇಘನಾರ ಸೀಮಂತ ಶಾಸ್ತ್ರವನ್ನು ಸಹ ತಮ್ಮ ಮನೆಯಲ್ಲಿ‌ ನೆರವೇರಿಸಿದ್ದರು..

ಮೇಘನಾ ಮಗುವಿಗೆ ಜನ್ಮ ನೀಡಿದ ಬಳಿಕವೂ ಎಲ್ಲಾ ಸ್ನೇಹಿತರು ಮೇಘನಾರನ್ನು ಭೇಟಿ‌ ಮಾಡಿ ಮಗುವನ್ನು ನೋಡಿ ಚಿರುವೇ ಮತ್ತೆ ಹುಟ್ಟಿ ಬಂದ.. ನಮ್ಮ ಸ್ನೇಹಿತ ಮರಳಿ ಬಂದನೆಂದು ಸಂತೋಷ ಪಟ್ಟಿದ್ದರು.. ಪ್ರತಿದಿನವೂ ಮೇಘನಾ ಜೊತೆ ಫೋನ್ ನಲ್ಲಿ‌ ಮಾತನಾಡುವ ಸ್ನೇಹಿತರು ಆಗಾಗ ಮನೆಗೆ ಹೋಗಿ ಇಬ್ಬರನ್ನು ನೋಡಿ ಸ್ವಲ್ಪ ಸಮಯ ಕಳೆದು ಬರುತ್ತಾರೆ.. ಇನ್ನು ಸ್ವಲ್ಪ ದಿನಗಳ ಬಳಿಕ ಮಗುವಿಗಾಗಿಯೂ ಸ್ನೇಹಿತರೆಲ್ಲಾ ಸೇರಿ ಸಮಾರಂಭ ಮಾಡುವ ಪ್ಲಾನ್ ನಲ್ಲಿಯೂ ಇದ್ದಾರೆ ಎನ್ನಲಾಗಿದೆ..

ಇನ್ನು ಇದೀಗ ಪನ್ನಘಭರಣ ಅವರ ಮಗ ವೀಡಿಯೋ ಮೂಲಕ ಮೇಘನಾರನ್ನು ಮಗುವನ್ನು ನೋಡಲು ಬರ್ತೀನಿ ಎಂದು ಮನವಿ ಮಾಡಿದೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ಪನ್ನಘಭರಣ ವೀಡಿಯೋ ಹಂಚಿಕೊಂಡಿದ್ದು ವೀಡಿಯೋದಲ್ಲಿ.. “ನಾನು ಚಿರು ಬೇಬಿನ ನೋಡ್ಬೇಕು.. ಮೇಘಿ ಮನೆಗೆ ಹೋಗಣಾ.. ಬೇಬಿನ ನೋಡ್ಬೇಕು ಬರ್ಲಾ ಪ್ಲೀಸ್ ಎಂದು ಕೇಳಿಕೊಂಡಿದೆ.. ಈ ವೀಡಿಯೋವನ್ನು ಮೇಘನಾ ರಾಜ್ ಕೂಡ ಹಂಚಿಕೊಂಡಿದ್ದು‌ ದಟ್ ಸ್ಮೈಲ್ ಮೇಡ್ ಮೈ ಡೇ.. ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ..