ಮಗುವಿನ ಸಂತೋಷದಲ್ಲಿದ್ದ ಮೇಘನಾರಿಗೆ ಮತ್ತೊಂದು ಶಾಕ್.. ಯಾರಿಗೂ ಬೇಡ ಇಂತಹ ನೋವು..

0 views

ಮೇಘನಾ ರಾಜ್.. ಈಗ ತಾನೆ ಮಗುವಿನ ಆಗಮನದ ಸಮಾಧಾನದಿಂದ ಮುಂದಿನ ಜೀವನದ ಭರವಸೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಸಮಯದಲ್ಲಿಯೇ ಮೇಘನಾ ರಾಜ್ ಅವರಿಗೆ ಮತ್ತೊಂದು ನೋವಿನ ವಿಚಾರ ಎದುರಾಗಿದೆ.. ಹೌದು ಮೇಘನಾ ರಾಜ್ ಅವರ ತಾಯಿ‌ ಪ್ರಮಿಳಾ ಸುಂದರ್ ಅವರನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದ್ದು ನಿನ್ನೆ ರಾತ್ರಿಯಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ..

ಹೌದು ಹಿರಿಯ ನಟಿ.. ಸುಂದರ್ ರಾಜ್ ಅವರ ಪತ್ನಿ.. ಮೇಘನಾ ರಾಜ್ ಅವರ ತಾಯಿ‌ ಪ್ರಮಿಳಾ ಸುಂದರ್ ಅವರಿಗೆ ತೀವ್ರ ಅನಾರೋಗ್ಯದ ಕಾರಣ ಜಯನಗರದ ಎಕ್ಸೆಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.. ನಿನ್ನೆ ತಡರಾತ್ರಿ ಪ್ರಮಿಳಾ ಸುಂದರ್ ಅವರಿಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಮೂಲಗಳ ಪ್ರಕಾರ ಪ್ರಮಿಳಾ ಸುಂದರ್ ಅವರಿಗೆ ಕೋವಿಡ್ ಲಕ್ಷಣ ಕಾಣಿಸಿಕೊಂಡಿದೆ ಎನ್ನಲಾಗಿದೆ.. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಕೃತವಾಗಿ ಕುಟುಂಬ ಮೂಲಗಳು ಬಿಟ್ಟುಕೊಟ್ಟಿಲ್ಲ.. ಅತ್ತ ಆಸ್ಪತ್ರೆಯವರೂ ಸಹ ಡಿಸ್ಕ್ಲೋಸ್ ಮಾಡುವ ಹಾಗಿಲ್ಲ ಎಂದು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.. ಅತ್ತ ಸುಂದರ್ ರಾಜ್ ಅವರ ಫೋನ್ ಕೂಡ ಪ್ರತಿಕ್ರಿಯೆ ನೀಡುತ್ತಿಲ್ಲ..

ಚಿರು ಅಗಲಿಕೆಯ ಬಳಿಕ ಬಹಳಷ್ಟು ಕುಗ್ಗಿ ಹೋಗಿದ್ದ ಪ್ರಮಿಳಾ ಸುಂದರ್ ಅವರಿಗೆ ಮೇಘನಾ ರಾಜ್ ಅವರೇ ಧೈರ್ಯ ತುಂಬಿದ್ದರು ಎಂದು ಈ ಹಿಂದೆ ಹೇಳಿಕೊಂಡಿದ್ದರು.. ಇನ್ನು ಮೇಘನಾ ರಾಜ್ ಅವರು‌ ಮಗುವಿಗೆ ಜನ್ಮ ನೀಡಿದ ಬಳಿಕ ಮಗು ಹಾಗೂ ಮೇಘನಾ ಅವರ ಹಾರೈಕೆಯಲ್ಲಿ ತೊಡಗಿಕೊಂಡಿದ್ದರು.. ಈ ಹಿಂದೆ ಮಗುವಿಗೆ ತವರು ಮನೆಯ ತೊಟ್ಟಿಲ ಶಾಸ್ತ್ರ ಮಾಡುವ ಸಂದರ್ಭದಲ್ಲಿ ಮೇಘನಾ ಅವರು ತಾಯಿಯ ಬಗ್ಗೆ ಮಾತನಾಡಿದ್ದರು.. ಮಗುವಿನ ಪ್ರತಿಯೊಂದು ಕೆಲಸವನ್ನೂ ಅಮ್ಮನೇ ನೋಡಿಕೊಳ್ಳುತ್ತಾರೆ.. ನಾನು ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು ಎಂದಿದ್ದರು.. ಬಹುಶಃ ಅತಿಯಾದ ಕೆಲಸದ ಕಾರಣ ಅನಾರೋಗ್ಯಕ್ಕೆ ಈಡಾದರೋ ಅಥವಾ ಮತ್ತೇನು ಕಾರಣ ಎಂಬುದು ಇನ್ನಷ್ಟೇ ತಿಳಿಯಬೇಕಿದೆ..

ಮನೆಯ ಮಿಕ್ಕ ಸದಸ್ಯರ ಫೋನ್ ಗಳು ಕೂಡ ಸ್ವಿಚ್ ಆಫ್ ಆಗಿದ್ದು ಯಾರೂ ಸಹ ಈ ಬಗ್ಗೆ ಮಾಹಿತು ಬಿಟ್ಟುಕೊಟ್ಟಿಲ್ಲ.. ಬಲ್ಲ ಮೂಲಗಳ ಪ್ರಕಾರ ಕೋವಿಡ್ ಲಕ್ಷಣ ಕಾಣಿಸಿಕೊಂಡಿದೆ ಎನ್ನಲಾಗುತ್ತಿದ್ದು ಅಕಸ್ಮಾತ್ ಕೋವಿಡ್ ಪಾಸಿಟಿವ್ ಕಂಡುಬಂದರೆ ಸದಾ ಜೊತೆಯಲ್ಲಿಯೇ ಇರುತ್ತಿದ್ದ ಮೇಘನಾ ಹಾಗೂ ಮಗುವಿಗೂ ಕೂಡ ಪರೀಕ್ಷೆ ಮಾಡಿಸಬಹುದಾಗಿದೆ..

ಹೇಗೋ ಮಗುವಿನ ಆಗಮನದಿಂದ ಕೊಂಚ ನೆಮ್ಮದಿಯಿಂದ ಇದ್ದ ಕುಟುಂಬದಲ್ಲೀಗ ಮತ್ತೆ ಪ್ರಮಿಳಾ ಸುಂದರ್ ಅವರ ಅನಾರೋಗ್ಯದ ಕಾರಣದಿಂದ ಮತ್ತಷ್ಟು ಆತಂಕ ಉಂಟಾಗಿದೆ.. ಅತ್ತ ಮಗು ಹಾಗೂ ತಮಗೆ ಅಮ್ಮನ ಹಾರೈಕೆಯ ಅಗತ್ಯ ಇರುವಂತಹ ಸಮಯದಲ್ಲಿ ಅಮ್ಮ ಆಸ್ಪತ್ರೆ ಸೇರಿರುವುದು ಮೇಘನಾರನ್ನು ದಿಕ್ಕು ತೋಚದಂತೆ ಮಾಡಿದೆ.. ಆದಷ್ಟು ಬೇಗ ಪ್ರಮಿಳಾ ಸುಂದರ್ ಅವರು ಚೇತರಿಸಿಕೊಂಡು ಮನೆಗೆ ಮರಳುವಂತಾಗಲಿ ಎಂಬುದೇ ಎಲ್ಲರ ಹಾರೈಕೆ..