ತಮ್ಮ ಹೊಸ ಜೀವನದ ಆರಂಭದ ಬಗ್ಗೆ ತಿಳಿಸಿ ಇದು ದೇವರು ಕೊಟ್ಟ ವರ ಎಂದ ಮೇಘನಾ ರಾಜ್‌‌.. ಶುಭ ಹಾರೈಸಿದ ಅಭಿಮಾನಿಗಳು..

0 views

ಕನ್ನಡ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ ಮೇಘನಾ ರಾಜ್ ಕಳೆದ ಎರಡು ವರ್ಷಗಳಿಂದ ತಮ್ಮ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ನೋಡಿದ್ದರು.. ಜೀವನದ ಉದ್ದಕ್ಕೂ ಜೊತೆಯಾಗಿ ಇರಬೇಕಿದ್ದ ಸಂಗಾತಿ ಚಿರು ಸರ್ಜಾರನ್ನು ಕಳೆದುಕೊಂಡು ಸಾಕಷ್ಟು ನೋವುಗಳನ್ನು ಅನುಭವಿಸಿದರು.. ಆದರೆ ಜೀವನ ಮುಂದೆ ಸಾಗಲೇ ಬೇಕಿತ್ತು.. ಮಗುವಿಗೆ ಜನ್ಮ ನೀಡಿದ ನಂತರದ ಬದುಕು ಮುಂಚಿನ ಜೀವನದಂತೆ ಇರುವುದಿಲ್ಲ.. ನಮ್ಮನ್ನು ನಾವು ಸಾಕಷ್ಟು ಬದಲಿಸಿಕೊಳ್ಳಬೇಕಾಗುತ್ತದೆ.. ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಸಹ ಮಗುವಿಗಾಗಿ ಮುನ್ನಡೆಯಲೇ ಬೇಕಿರುತ್ತದೆ.. ಇನ್ನು ಮೇಘನಾ ರಾಜ್ ಅವರು ಮಾಡಿದ್ದೂ ಸಹ ಅದೇ.. ಮನಸ್ಸಿನಲ್ಲಿ ಸಾಕಷ್ಟು ನೋವಿದ್ದರೂ ಸಹ ತಮ್ಮ ಮಗುವಿನ ಮುಂದಿನ ಭವಿಷ್ಯ ರೂಪಿಸಲೇ ಬೇಕಾದ ಕರ್ತವ್ಯ ಅನಿವಾರ್ಯತೆ ಜವಾಬ್ದಾರಿ ಎಲ್ಲವೂ ಸಹ ಮೇಘನಾ ರಾಜ್ ಅವರದ್ದೇ ಆಗಿದ್ದು ಕಳೆದ ವರ್ಷ ರಾಯನ್ ನ ಹುಟ್ಟುಹಬ್ಬದ ಆಚರಣೆಯನ್ನು ಅದ್ಧೂರಿಯಾಗಿ ಆಚರಣೆ ಮಾಡಿದ ಬಳಿಕ ತಮ್ಮ ಮುಂದಿನ ವೃತ್ತಿ ಜೀವನದ ಬಗ್ಗೆ ಗಮನ ಕೊಟ್ಟಿದ್ದರು..

ಸಾಕಷ್ಟು ಜಾಹೀರಾತುಗಳಲ್ಲಿ ಅಭಿನಯಿಸಿದ್ದ ಮೇಘನಾ ರಾಜ್ ಅವರು ಮುಂದೆ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದರು.. ಕಲಾವಿದರು ಎಲ್ಲರೂ ಆಗರ್ಭ ಸಿರಿವಂತರಾಗಿರುವುದಿಲ್ಲ‌.. ಅವರ ಜೀವನ ನಿರ್ವಹಣೆಗೆ ಕಲೆಯನ್ನೇ ವೃತ್ತಿಯನ್ನಾಗಿ‌ ಮಾಡಿಕೊಂಡು ಆ ಕೆಲಸವನ್ನು ಮಾಡಲೇಬೇಕಾದ ಅನಿವಾರ್ಯತೆ ಕೂಡ ಅವರಿಗೆ ಇದ್ದೇ ಇರುತ್ತದೆ.. ಚಿರು ಇದ್ದಿದ್ದರೆ ಇನ್ನು ಬಹಳಷ್ಟು ವರ್ಷಗಳ ಕಾಲ ಮೇಘನಾ ರಾಜ್ ಸಿನಿಮಾ ಇಂಡಸ್ಟ್ರಿಗೆ ಬರುವ ಅಗತ್ಯವಿರಲಿಲ್ಲ.. ಆದರೆ ಜೀವನದಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಸವಾಲುಗಳು ನಮ್ಮನ್ನು ಗಟ್ಟಿಯಾಗಿಸುತ್ತವೆ ಎನ್ನುವಂತೆ ಚಿರು ಅಗಲಿಕೆ ಮೇಘನಾ ಅವರು ಮತ್ತೆ ಇಷ್ಟು ಬೇಗ ಕೆಲಸ ಮಾಡುವಂತೆ ಮಾಡಿತು..

ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತುಗಳಲ್ಲಿ ಅಭಿನಯಿಸಿದ ಬಳಿಕ ಇದೀಗ ಕನ್ನಡ ಕಿರುತೆರೆಗೂ ಸಹ ಕಾಲಿಟ್ಟು ಡ್ಯಾನ್ಸಿಂಗ್ ಚಾಂಪಿಯನ್ ಶೋ ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವಂತಾಯಿತು.. ಮೇಘನಾ ಅವರಿಗೆ ಕೈತುಂಬಾ ಸಂಭಾವನೆಯೂ ಸಹ ಸಿಗುತ್ತಿದ್ದು ವೃತ್ತಿ ಬದುಕಿನ ಪುನರಾರಂಭಕ್ಕೆ ಕಿರುತೆರೆಯ ಈ ಡ್ಯಾನ್ಸಿಂಗ್ ಶೋ ಒಂದೊಳ್ಳೆ ಮೆಟ್ಟಿಲಾಯಿತೆನ್ನಬಹುದು.. ಇನ್ನು ಇದೀಗ ತಮ್ಮ ಜೀವನದ ಪುನರಾರಂಭದ ಬಗ್ಗೆ ಹೊಸ ಜೀವನದ ಬಗ್ಗೆ ಮೇಘನಾ ರಾಜ್ ಅವರು ಖುದ್ದು ತಿಳಿಸಿ ಸಂತೋಷ ಹಂಚಿಕೊಂಡಿದ್ದಾರೆ..

ಹೌದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಜೊತೆಗೆ ಈ ವಿಚಾರ ತಿಳಿಸಿದ್ದು ಇದು ದೇವರು ಕೊಟ್ಟ ವರ ಎಂದಿದ್ದಾರೆ.. ಜೀವನದಲ್ಲಿ ಎಲ್ಲವೂ ಬಹಳ ಮುಖ್ಯ.. ಅದೇ ರೀತಿ ಕೆಲಸ ಎಂಬುದು ಅದೆಲ್ಲಕ್ಕಿಂತ ಮುಖ್ಯವಾಗಿರುತ್ತದೆ.. ಕೆಲಸಕ್ಕೆ ಗೌರವ ನೀಡಿದಾಗ ಮಾತ್ರವೇ ಆ ವ್ಯಕ್ತಿಯ ಏಳಿಗೆ ಸಾಧ್ಯವೆಂಬುದು ಅಕ್ಷರಶಃ ಸತ್ಯದ ಮಾತು.. ಮೇಘನಾ ರಾಜ್ ಅವರು ಈ ಹಿಂದೆ ಸಿನಿಮಾವೊಂದನ್ನು ಅನೌನ್ಸ್ ಮಾಡಿದರೂ ಸಹ ಆ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಕೇಳಿ ಬರಲಿಲ್ಲ.. ಇತ್ತ ವಾರಕ್ಕೊಂದು ದಿನ ಡ್ಯಾನ್ಸಿಂಗ್ ಚಾಂಪಿಯನ್ ಚಿತ್ರೀಕರಣದಲ್ಲಿ ಮೇಘನಾ ಬ್ಯುಸಿ ಆದರು.. ಆದರೆ ಮುಂದೆ ಸಿನಿಮಾ ದಾರಿ ಕಡೆಗೆ ಹೋಗಲೇ ಬೇಕಿತ್ತು.. ಇತ್ತ ಮೇಘನಾ ರಾಜ್ ಅವರ ತಾಯಿ ಪ್ರಮಿಳಾ ಸುಂದರ್ ಅವರು ತಮಗೆ ಈಗಲೂ ಸಹ ಸಾಕಷ್ಟು ಸಿನಿಮಾಗಳ ಅವಕಾಶ ಬರುತ್ತಿದ್ದರೂ ಸಹ ಅದೆಲ್ಲವನ್ನು ತಿರಸ್ಕರಿಸಿ ಮಗುವಿನ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡು ಮಗಳು ಮೇಘನಾ ತನ್ನ ವೃತ್ತಿ ಜೀವನವನ್ನು ಕಟ್ಟಿಕೊಳ್ಳಲು ನೆರವಾಗಿದ್ದಾರೆ..

ಇನ್ನು ಇತ್ತ ಮೇಘನಾ ಅವರೂ ಸಹ ಅವಕಾಶಕ್ಕಾಗಿ ತಾವು ಮಾಡಬೇಕಾದ ಪ್ರಯತ್ನವನ್ನು ಮಾಡುತ್ತಿದ್ದಾರೆ.. ತಿಂಗಳಿಗೊಬ್ಬರು ಪ್ರತಿಭೆಯುಳ್ಳ ಹೊಸ ಹೊಸ ನಾಯಕಿಯರು ಕಾಲಿಡುತ್ತಿರುವ ಸಮಯದಲ್ಲಿ ಸಿನಿಮಾ ಅವಕಾಶ ಎನ್ನುವುದು ಸುಲಭದ ಮಾತಲ್ಲ.. ಅದೇ ಕಾರಣಕ್ಕೆ ಬಾಣಂತನ ಮುಗಿಸಿ ಇದೀಗ ಪ್ರತಿದಿನ ಜಿಮ್ ವರ್ಕೌಟ್ ಮಾಡಿ ತಮ್ಮ ತೂಕವನ್ನು‌ ಇಳಿಸಿಕೊಳ್ಳುತ್ತಿದ್ದು ಮುಂದಿನ ಸಿನಿಮಾಗಳಿಗೆ ಸಿದ್ಧರಾಗುತ್ತಿದ್ದಾರೆ.‌. ಅದರ ಬೆನ್ನಲ್ಲೇ ಇದೀಗ ಹೊಸ ಸಿನಿಮಾದ ಘೋಷಣೆ ಮಾಡಿ ಹೊಸ ಆರಂಭದ ಬಗ್ಗೆ ತಿಳಿಸಿದ್ದಾರೆ.‌

ಹೌದು ಮೇಘನಾ ಅವರು ಶಬ್ಧ ಎಂಬ ಹೊಸ ಸಿನಿಮಾವನ್ನಿ ಘೋಷಣೆ ಮಾಡಿದ್ದು ಈ ಹಿಂದೆ ಮೇಘನಾ ಅವರ ಹಳೆ ಸಿನಿಮಾ ಇರುವುದೆಲ್ಲವ ಬಿಟ್ಟು ಸಿನಿಮಾ ತಂಡದ ಜೊತೆಯೇ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.. “ನಾನು ನನ್ನ ಮುಂದಿನ ಸಿನಿಮಾವನ್ನು ಅನೌನ್ಸ್ ಮಾಡುತ್ತಿದ್ದೇನೆ.. ಶಬ್ಧ.. ನನ್ನ ಹಿಂದಿನ ಸಿನಿಮಾ ಇರುವುದೆಲ್ಲವ ಬಿಟ್ಟು ಸಿನಿಮಾದ ಅದೇ ತಂಡದ ಜೊತೆಗೆ ಈ ಸಿನಿಮಾ ಮಾಡುತ್ತಿದ್ದೇನೆ.. ರಾಜ್ಯ ಒರಶಸ್ತಿ ಪಡೆದ ಆ ಸಿನಿಮಾದ ಸಂಪೂರ್ಣ ತಂಡದ ಬಗ್ಗೆ ನನಗೆ ಹೆಮ್ಮೆಯಿದೆ.. ಎರಡನೇ ಬಾರಿ ನಾನು ಕಾಂತ ಕನ್ನಲಿ ಅವರ ಜೊತೆ ನಾನು ಕೆಲಸ ಮಾಡುವುದು ನಿಜಕ್ಕೂ ನನಗೆ ದೇವರು ಕೊಟ್ಟ ವರವೆನ್ನಬಹುದು.. ನಿಮ್ಮೆಲ್ಲರ ಬೆಂಬಲ ಹಾಗೂ ಹಾರೈಕೆಗೆ ನನ್ನ ಧನ್ಯವಾದಗಳು.. ಸಧ್ಯದಲ್ಲಿಯೇ ಮುಂದಿನ ಮಾಹಿತಿಗಳನ್ನು ಹಂಚಿಕೊಳ್ಳುವೆ ಎಂದಿದ್ದಾರೆ.. ಮೇಘನಾ ರಾಜ್ ಅವರ ಈ ಹೊಸ ಆರಂಭಕ್ಕೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ..