ಶಂಕರಣ್ಣನ ಸಾವಿನ ಪ್ರಕರಣಕ್ಕೆ ಟ್ವಿಸ್ಟ್.. ಅಸಲಿ‌ ಕತೆ ಬೇರೆಯೇ ಇದೆ..

0 views

ಶಂಕರಣ್ಣ.. ಬಹುಶಃ ಆರು ತಿಂಗಳ ಹಿಂದೆ ತನ್ನ ನಲಬತ್ತೈದು ವರ್ಷ ವಯಸ್ಸಿನಲ್ಲಿ ಮದುವೆ ಮಾಡಿಕೊಂಡು ಹೊಸ ಜೀವನ ಶುರು ಮಾಡಿದ ಶಂಕರಣ್ಣನ ಸಂತೋಷಕ್ಕೆ ಪಾರವೇ ಇರಲಿಲ್ಲ.. ಆದರೆ ಮುಂದೊಂದು ದಿನ ಅದೂ ಸಹ ಮದುವೆಯಾದ ಕೇವಲ ಆರೇ ತಿಂಗಳಿಗೆ ಸ್ವತಃ ತಾನೇ ಈ ಭೂಮಿಯ ಮೇಲೆ ಇರೋದಿಲ್ಲ ಎಂದು ಆತ ಕನಸಿನಲ್ಲಿಯೂ ಊಹಿಸಿರಲಿಲ್ಲ ಎನಿಸುತ್ತದೆ.. ಹೌದು ಮದುವೆಯಾದ ಆರೇ ತಿಂಗಳಿಗೆ ತನ್ನದೇ ತೋಟದ ಹಲಸಿನ ಮರದಲ್ಲಿ ಜೀವ ಕಳೆದುಕೊಂಡು ಬಿಟ್ಟರು.. ಆದರೆ ಇದೀಗ ಶಂಕರಣ್ಣನ ಅಗಲಿಕೆಗೆ ಅಸಲಿ ಸತ್ಯ ಹೊರ ಬಿದ್ದಿದೆ.. ಹೌದು ಕಳೆದ ಅಕ್ಟೋಬರ್ ಇಪ್ಪತ್ತೊಂದರಂದು ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಮದುವೆ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು..

ನಲವತ್ತೈದು ವರ್ಷದ ಶಂಕ್ರಣ್ಣ ಇಪ್ಪತ್ತೈದು ವರ್ಷದ ಮೇಘನಾಳನ್ನು ಮದುವೆ ಮಾಡಿಕೊಂಡಿದ್ದರು.. ಇಪ್ಪತ್ತು ವರ್ಷ ಚಿಕ್ಕವಳನ್ನು ಮದುವೆ ಮಾಡಿಕೊಂಡಿದ್ದು ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿತ್ತು. ಆನಂತರ ಮದುವೆಗೆ ನಿನವಾದ ಕಾರಣವೂ ತಿಳಿದು ವಿಚಾರ ತಣ್ಣಗಾಗಿತ್ತು.. ಮೇಘನಾಳಿಗೆ ಮೂರು ವರ್ಷದ ಹಿಂದೆ ಮದಿವೆಯಾಗಿ ಗಂಡ ಆಕೆಯನ್ನು ಬಿಟ್ಟು ಹೋದವನು ಮತ್ತೆ ಬಾರಲಿಲ್ಲ.. ಇತ್ತ ಶಂಕರಣ್ಣ ಸಾಕಷ್ಟು ಹೆಣ್ಣುಗಳನ್ನು ನೋಡಿ ಯಾರ ಜೊತೆಯೂ ಮದುವೆ ಸೆಟ್ ಆಗದ ಕಾರಣ ಮದುವೆಯನ್ನೇ ಆಗದೇ ಹಾಗೇ ಉಳಿದುಬಿಟ್ಟರು.. ತುಮಕೂರಿನ ಕುಣಿಗಲ್ ನ ಚೌಡನಕುಪ್ಪೆಯ ಅಕ್ಕಿಮರಿ ಪಾಳ್ಯದಲ್ಲಿ ಎರಡೂವರೆ ಎಕರೆ ತೋಟವಿದ್ದ ಶಂಕರಣ್ಣ ನೆಮ್ಮದಿಯಾಗಿ ಜೀವನ ಮಾಡುತ್ತಿದ್ದರು.. ಆದರೆ ಒಂದು ದಿನ ಮೇಘನಾ ಬಂದು ನೇರವಾಗಿ ಶಂಕರಣ್ಣನನ್ನು ಮದುವೆ ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದಳು..

ಆಆದರೆ ಶಂಕರಣ್ಣ ಅವರು ಮೊದಮೊದಲು ಒಪ್ಪದೇ ನಂತರ ಹೇಗೋ ಇಬ್ಬರೂ ಒಪ್ಪಿ ಗ್ರಾಮದ ಹೊರವಲಯದಲ್ಲಿನ ದೇವಸ್ಥಾನದಲ್ಲಿ ಸರಳವಾಗಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಮದುವೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ನಂತರ ತಣ್ಣಗಾಗಿತ್ತು.. ಆದರೆ ಮದುವೆಯಾದ ಬಳಿಕ ಇಬ್ಬರೂ ರೀಲ್ಸ್ ಮಾಡುತ್ತಾ ಸಿಕ್ಕಾಪಟ್ಟೇ ಫೇಮಸ್ ಆಗಿದ್ದೂ ಉಂಟು.. ಆದರೆ ಇಂದು ಇದ್ದಕಿದ್ದ ಹಾಗೆ ಶಂಕರಣ್ಣ ತನ್ನದೇ ತೋಟದಲ್ಲಿ ಜೀವಕಳೆದುಕೊಂಡಿರುವ ವಿಚಾರ ತಿಳಿದು ಸುದ್ದಿಯಾಯಿತು.. ಆದರೆ ಇದಕ್ಕೆಲ್ಲ ನಿಜವಾದ ಕಾರಣವೇನು ಎಂಬ ಅನುಮಾನ ಮೂಡಿತ್ತು.. ಒಂದು ಕಡೆ ತಾನು ಜೀವ ಕಳೆದುಕೊಳ್ಳುವ ಮುನ್ನ ಪತ್ರವನ್ನು ಬರೆದಿದ್ದು ಇದೀಗ ಪೊಲೀಸರು ಆ ಕುರಿತು ತನಿಖೆ ನಡೆಸುತ್ತಿದ್ದಾರೆ..

ಇನ್ನೊಂದು ಕಡೆ ಮೇಘನಾಳನ್ನು ಮದುವೆಯಾಗಿದ್ದೇ ಇದಕ್ಕೆಲ್ಲಾ ಕಾರಣ ಎಂದು ಹಲವಾರು ಮಂದಿ ಹೇಳುತ್ತಿದ್ದರು.. ಆದರೆ ಅಲ್ಲಿ ನಡೆದಿರೋ ವಿಚಾರವೇ ಬೇರೆ.. ಹೌದು ಈ ವಯಸ್ಸಿನಲ್ಲಿ ಮದುವೆಯಾಗಿ ಆರೇ ತಿಂಗಳಿಗೆ ಜೀವ‌ ಕಳೆದುಕೊಂಡರೇ ಯಾರಿಗೇ ಆದರೂ ಅನುಮಾನ ಬಂದೇ ಬರುತ್ತದೆ.. ಅದೇ ರೀತಿ ಇತ್ತ ಮೇಘನಾ ಮೇಲೆಯೂ ಸಾಕಷ್ಟು ಅನುಮಾನಗಳು ಮೂಡಿವೆ.. ಶಂಕರಣ್ಣನ ಮನೆಯಲ್ಲಿ ಅವರ ತಾಯಿ ಸಹೋದರಿಯೂ ಸಹ ಇದ್ದರು.. ಅಲ್ಲಿ ಮೇಘನಾ ಹೊಂದಿಕೊಳ್ಳಲು ಕಷ್ಟವಾಗುತ್ತಿತ್ತು.. ಮದುವೆಯಾದ ಹೊಸತರಲ್ಲಿ ಎಲ್ಲವೂ ಸರಿ ಇತ್ತು.. ಆದರೆ ಆನಂತರ ಬರುಬರುತ್ತಾ ಮೇಘನಾ ಹಳ್ಳಿಯಲ್ಲಿನ ಆಸ್ತಿಯನ್ನು ಮಾರಿ ಮೈಸೂರು ಅಥವಾ ಬೆಂಗಳೂರಿಗೆ ಹೋಗಿ ವಾಸ ಮಾಡೋಣ ಎನ್ನುತ್ತಿದ್ದಳು ಎನ್ನುವ ಮಾತು ಸಹ ಕೇಳಿ ಬಂದಿದೆ..

ಆದರೆ ಇದೀಗ ಖುದ್ದು ಮಾದ್ಯಮದ ಮುಂದೆ ಮಾತನಾಡಿರುವ ಮೇಘನಾ ನಾನು ನನ್ನ ಗಂಡ ಚೆನ್ನಾಗಿಯೇ ಇದ್ವಿಸರ್.. ಇದಕ್ಕೆಲ್ಲಾ ನನ್ನ ಅತ್ತೆಯೇ ಕಾರಣ.. ಒಂದು ದಿನ ಶಂಕರಣ್ಣನ ತಂಗಿ ಪಾತ್ರೆ ತೊಳೆಯುತ್ತಿದ್ದರು.. ನಾನು ಆಗ ಸುಮ್ಮನೇ ಕೂತಿದ್ದೆ.. ಆಗ ನನ್ನ ಅತ್ತೆ ಬಂದು ನನಗೆ ಬೈದರು.. ಆಗ ನನಗೆ ಬೇಸರವಾಗಿ ಅಳುತ್ತಾ ಮಲಗಿದ್ದೆ.. ಆಗ ಇವರಿಗೆ ವಿಚಾರ ತಿಳಿದು ಅವರ ತಾಯಿಯನ್ನು ಕೇಳಿದ್ರು.. ಆಗ ಮನೆಯಲ್ಲಿ ಜಗಳ ಶುರು ಆಗಿದ್ದು.. ಆನಂತರ ಅವರು ಕಟ್ಟಿದ್ದ ನಾಯಿಯನ್ನು ನಾನು ಬಿಟ್ಟುಬಿಟ್ಟಿದ್ದೆ.. ನಾನು ಸಾಕಿರುವ ನಾಯಿಯನ್ನು ಇವಳು ಯಾಕೆ ಬಿಟ್ಟಿದ್ದಾಳೆ ಅಂತ ನಮ್ಮ ಅತ್ತೆ ಜಗಳ ಮಾಡಿದ್ರು.. ನಿನ್ನ ಹೆಂಡತಿ ನಮ್ಮನ್ನೆಲ್ಲಾ‌ ಇಲ್ಲವಾಗಿಸೋಕೆ ಬಂದಿದ್ದಾಳೆ ಎಂದು ಜಗಳ‌‌ ಮಾಡಿದ್ರು..

ನಾನು ಸತ್ರೆ ನೀನ್ ನೆಮ್ಮದಿಯಾಗಿರ್ತೀಯಾ ಅಂತ ನಮ್ ಮನೆಯವರು ಹೇಳಿದ್ರು.. ಹೋಗಿ ಸಾಯಿ ಅಂತ ನಮ್ಮ ಅತ್ತೆನೇ ಹೇಳಿದ್ರು.. ನಿನ್ನೆ ರಾತ್ರಿ ಮನೆ ಬಿಟ್ಟು ಹೋಗಿ ಹಲಸಿನ ಮರಕ್ಕೆ ನೇಣು ಹಾಕಿಕೊಂಡು ಜೀವ ಕಳೆದುಕೊಂಡಿದ್ದಾರೆ..‌ ನನ್ನ ಮೊದಲನೇ ಗಂಡನೂ ನನ್ನ ಬಿಟ್ಟು ಹೋದ ಸರ್..‌ಈಗ ಇವರೂ ಹೋದ್ರು.. ನನಗೆ ಯಾರು ದಿಕ್ಕು ಎನ್ನುತ್ತಿದ್ದಾರೆ‌.. ಒಟ್ಟಿ‌ನಲ್ಲಿ ಜೀವನದಲ್ಲಿ ನಾವುಗಳು ಮಾಡುವ ಕೆಲವೊಂದು ನಿರ್ಧಾರಗಳು ಜೀವನದಲ್ಲಿ ಎಂತೆಂತಹ ತಿರುವುಗಳನ್ನು ನೀಡುತ್ತವೆ.. ಜೀವನವನ್ನೇ ಹಾಳು ಮಾಡಿ ಬಿಡುತ್ತದೆ ಎಂಬುದಕ್ಕೆ ಇದೇ ನೈಜ್ಯ ಉದಾಹರಣೆ..