ಇಂದು ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅವರ ಹುಟ್ಟಿದ ದಿನ.. ಅವರಿದ್ದಿದ್ದರೆ ಅದ್ಧೂರಿಯ ಹಬ್ಬದ ಜೊತೆಗೆ ಮನೆಯಲ್ಲಿಯೂ ದೊಡ್ಡದೊಂದು ಸಂಭ್ರಮ ಮನೆ ಮಾಡಿರುತಿತ್ತು.. ಆದರೆ ಇಂದು ಮೌನದ ನಡುವೆಯೂ ಅರ್ಥಪೂರ್ಣವಾದ ದಿನವಾಗಲಿದೆ ಎನ್ನಲಾಗುತ್ತಿದೆ.
ಹೌದು ಅಣ್ಣನ ಹುಟ್ಟು ಹಬ್ಬದ ಪ್ರಯುಕ್ತ ಇಂದು ಧೃವ ಸರ್ಜಾ ಅವರು ಕನಕಪುರ ರಸ್ತೆಯ ನೆಲಗೋಳಿಯಲ್ಲಿನ ತಮ್ಮ ಬೃಂದಾವನ ಫಾರ್ಮ್ ಹೌಸ್ ಗೆ ತೆರಳಿ ಅಣ್ಣನ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ..
ಅಷ್ಟೇ ಅಲ್ಲದೇ ನಿನ್ನೆ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಿರುವ ಚಿರು ಸರ್ಜಾರ ಕೊನೆಯ ಸಿನಿಮಾ ಶಿವಾರ್ಜುನ ಸಿನಿಮಾವನ್ನು ಇಂದೇ ಸಂತೋಷ್ ಚಿತ್ರಮಂದಿರದಲ್ಲಿ ಧೃವ ಸರ್ಜಾ ಅವರು ಅಭಿಮಾನಿಗಳೊಂದಿಗೆ ವೀಕ್ಷಿಸಲಿದ್ದಾರೆ ಎನ್ನಲಾಗಿದೆ.. ಇನ್ನು ನಿನ್ನೆ ಚಿರು ಅವರ ತಾಯಿ ಅಮ್ಮಾಜಿ ಸಹ ಮಗನ ಕೊನೆಯ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡಿ ಕಣ್ಣೀರಿಟ್ಟಿದ್ದರು..
ಇಂದು ಧೃವ ಸರ್ಜಾ ಅವರ ಜೊತೆಗೆ ಸ್ನೇಹಿತರು ಸಹ ಚಿತ್ರಮಂದಿರಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.. ಸರ್ಜಾ ಕುಟುಂಬದ ಅಭಿಮಾನಿಗಳು ಇಂದು ಚಿತ್ರಮಂದಿರದ ಮುಂದೆ ಹಾಕಲಾಗಿರುವ ದೊಡ್ಡ ಕಟೌಟ್ ಮುಂದೆಯೇ ಕೇಕ್ ಕಟ್ ಮಾಡುವ ಮೂಲಕ ಚಿರು ಅವರ ಹುಟ್ಟಿದ ದಿನವನ್ನು ಆಚರಿಸಲಿದ್ದಾರೆ.. ಹುಟ್ಟುಹಬ್ಬದ ಪ್ರಯುಕ್ತ ಅದಾಗಲೇ ಚಿರು ಅವರ ಕಟೌಟ್ ಗಳನ್ನು ಹೂವಿನಿಂದ ಅಲಂಕರಿಸಿದ್ದು ಮನುಷ್ಯ ಇಲ್ಲವಾದರು ಅವರು ಸಂಪಾದಿಸಿರುವ ಪ್ರೀತಿ ಅಭಿಮಾನ ಮಾತ್ರ ಎಂದೆಂದಿಗೂ ಶಾಶ್ವತ ಎಂಬುದು ಸತ್ಯವಾಗಿದೆ..
ಇನ್ನು ಚಿರು ಹುಟ್ಟಿದ ದಿನವಾದ ಇಂದೇ ಸರ್ಜಾ ಕುಟುಂಬ ಹಾಗೂ ಸುಂದರ್ ರಾಜ್ ಅವರ ಕುಟುಂಬಕ್ಕೆ ಜೂನಿಯರ್ ಚಿರುವಿನ ಆಗಮನವಾಗಲಿದೆ ಎನ್ನಲಾಗುತ್ತಿದೆ. ಹೌದು ನಿನ್ನೆಯಷ್ಟೇ ಧೃವ ಸರ್ಜಾ ಅವರು ಮಗುವಿಗೆ ಕುಟುಂಬದವರು ಸ್ವಾಗತ ಕೋರುವ ಹಾಡನ್ನು ಬಿಡುಗಡೆ ಮಾಡಿ ಮುನ್ಸೂಚನೆ ನೀಡಿದ್ದು ಮೇಘನಾ ಅವರಿಗೆ ಇಂದೇ ಹೆರಿಗೆಯಾಗುವ ಸಂಭವವಿದ್ದು ಕುಟುಂಬದ ಸಂತೋಷ ಇನ್ನಷ್ಟು ಹೆಚ್ಚಾಗಲಿದೆ.. ಅಷ್ಟೇ ಅಲ್ಲದೇ ಮೇಘನ ರಾಜ್ ಅವರು ಕೃಷ್ಣನಿಗೆ ಸ್ವಾಗತ ಎಂದು ಸ್ಟೇಟಸ್ ಹಾಕಿಕೊಂಡಿದ್ದು.. ನಿನ್ನ ತಂದೆ ಎಂದರೇ ಸಂಭ್ರಮ.. ಅವರು ಸದಾ ಸಂಭ್ರಮಿಸುತ್ತಾರೆ ಲಿಟಲ್ ಒನ್ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಕೆಳಗಿನ ವೀಡಿಯೋ ನೋಡಿ..
View this post on Instagram
@shalinismakeupprofile @makeover_by_raghu_nagaraj_n @classycaptures_official
ಒಟ್ಟಿನಲ್ಲಿ ಎಲ್ಲರ ಹಾರೈಕೆಯಂತೆ ತಾಯಿ ಮಗು ಸಂಪೂರ್ಣ ಆರೋಗ್ಯವಂತರಾಗಿ ಸದಾ ಸಂತೋಷದಿಂದ ಬಾಳುವಂತಾಗಲಿ.. ಇನ್ನು ಕೆಲ ದಿನಗಳ ಹಿಂದಷ್ಟೇ ನಡೆದ ಕಾರ್ಯಕ್ರಮದಲ್ಲಿ ಧೃವ ಸರ್ಜಾ ಹಾಗೂ ಅರ್ಜುನ್ ಸರ್ಜಾ ಅವರು ತಿಳಿಸಿದಂತೆ ಮೇಘನಾರಿಗೂ ಮಗುವಿಗೂ ಅವರು ಬಂಡೆಯಂತೆ ಜೊತೆಯಾಗಿ ನಿಲ್ಲಲಿ.. ಅವರ ಬಾಂಧವ್ಯ ಸದಾ ಹೀಗೆ ಇರಲಿ..