ಧೃವ ಅವರ ಬಳಿ ಮಾತು ಕೇಳಿಕೊಂಡ ಮೇಘನಾ.. ಅದರಂತೆಯೇ ಮಾಡಿದ್ದೇವೆ ಎಂದ ಚಿರುವಿನ ಅಜ್ಜಿ..

0 views

ಮೇಘನಾ ರಾಜ್.. ಸದ್ಯ ಕನ್ನಡದ ಜನತೆ ಮನಸ್ಪೂರ್ತಿಯಾಗಿ ಹಾರೈಸಿದ್ದ ಹೆಣ್ಣು ಮಗಳು.. ತಾಯಿ ಮಗು ಇಬ್ಬರೂ ಆರೋಗ್ಯವಾಗಿರಲಿ.. ಚಿರು ಮತ್ತೆ ಹುಟ್ಟಿ ಬರಲೆಂದು ಕಳೆದ ಐದು ತಿಂಗಳಿನಿಂದಲೂ ಬಹಳಷ್ಟು ಅಭಿಮಾನಿಗಳು ಆ ಎರಡು ಜೀವಗಳಿಗಾಗಿ ಪ್ರಾರ್ಥಿಸಿದ್ದರು.. ಇದೀಗ ಎಲ್ಲರ ಪ್ರಾರ್ಥನೆ ಫಲ ನೀಡಿದೆ.. ತನ್ನ ಕುಟುಂಬದ ನೋವನ್ನು ಮರೆಯಾಗಿಸಲು ಚಿರುವೇ ತನ್ನ ಮಗನಾಗಿ ಮತ್ತೆ ಹುಟ್ಟಿ ಬಂದಾಗಿದೆ.. ಅದೇ ರೀತಿ ಹೆರಿಗೆಗೆ ಹೋಗುವ ಮುನ್ನ ಮೇಘನಾ ಅವರು ತಮ್ಮ ಆಸೆಯೊಂದನ್ನು ಧೃವ ಸರ್ಜಾರ ಬಳಿ ಹೇಳಿಕೊಂಡಿದ್ದರು ಎಂದು ತಿಖಿದುಬಂದಿದೆ.. ಹೌದು ಕಳೆದ ನಾಲ್ಕು ತಿಂಗಳಿನಿಂದ ಎಲ್ಲಾ ನೋವುಗಳ ನಡುವೆ ತನ್ನ ಮನಸ್ಸನ್ನು ಬಹಳ ಗಟ್ಟಿ ಮಾಡಿಕೊಂಡಿದ್ದ ಮೇಘನಾ ಅವರು ನಾಲ್ಕು ತಿಂಗಳು ಒಡಲಲ್ಲಿನ ಕಂದನ ಹಾರೈಕೆಯಲ್ಲಿ ತೊಡಗಿ ಈ ಕ್ಷಣಕ್ಕಾಗಿ ಕಾಯುತ್ತಿದ್ದರೇನೋ..‌

ಇದೀಗ ಅವರ ಎಲ್ಲಾ ನೋವಿನ ನಡುವೆ ಭರವಸೆಯ ಬೆಳಕೊಂದು ಮೂಡಿದೆ.. ಹೌದು ಇಂದು ಬೆಳಿಗ್ಗೆ 11.09 ರ ಸಮಯದಲ್ಲಿ ಕೆ ಆರ್ ರಸ್ತೆಯ ಅಕ್ಷ ಆಸ್ಪತ್ರೆಯಲ್ಲಿ ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.. ಆದರೆ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಲೇಬರ್ ವಾರ್ಡ್ ಗೆ ತೆರಳುವ ಮುನ್ನ ಧೃವ ಸರ್ಜಾರ ಬಳಿ ತಮ್ಮ ಆಸೆಯೊಂದನ್ನು ಹೇಳಿಕೊಂಡಿದ್ದಾರೆ..

ಹೌದು ಮಗುವನ್ನು ಮೊದಲು ಚಿರುವಿಗೆ ತೋರಿಸಬೇಕೆಂದು ಕೇಳಿಕೊಂಡಿದ್ದಾರೆ.. ಅದೇ ಕಾರಣಕ್ಕೆ ಮೇಘನಾ ಆಸೆಪಟ್ಟಂತೆ ಮಗು ಹುಟ್ಟಿದ ಕೂಡಲೇ ಮೊದಲು ಮಗುವನ್ನು ಚಿರಂಜೀವಿಗೆ ತೋರಿಸಿದ್ದೇವೆ.. ಅವನ ಆಶೀರ್ವಾದ ಮಗುವಿಗೆ ಸಿಕ್ಕಿದೆ ಎಂದು ಚಿರಂಜೀವಿ ಸರ್ಜಾರ ಅಜ್ಜಿ ತಿಳಿಸಿದ್ದಾರೆ..

ಹೌದು ಮೇಘನಾರಿಗೆ ಮಗುವಾದ ಕೂಡಲೇ ವೈದ್ಯರು ಹಾಗೂ ಮೇಘನಾರ ತಾಯಿ ಮತ್ತು ಚಿರುವಿನ ಅಜ್ಜಿ ಮಗುವನ್ನು ಹೊರಗೆ ಕರೆದೊಯ್ಯದೇ ಮೊದಲು ಚುರುವಿನ ಫೋಟೋ ಬಳಿ ಕರೆತಂದು ಫೋಟೋಗೆ ಮುಟ್ಟಿಸಿ ಆಶೀರ್ವಾದ ಪಡೆದಿದ್ದಾರೆ.. ಬಹುಶಃ ಚಿರು ಇದ್ದಿದರೆ ತನ್ನ ಕಂದನನ್ನು ಎತ್ತಿ‌ ಮುದ್ದಾಡುತ್ತಿದ್ದರೇನೋ.. ಆದರೆ ಫೋಟೋ ಬಳಿಯೇ ನಿಂತು ತನ್ನ ಪ್ರತಿರೂಪಕ್ಕೆ ಆಶೀರ್ವಾದ ಮಾಡುತ್ತಿದ್ದಾರೆ ಎನ್ನುವಂತೆ ಕಂಡಿತು ಆ ದೃಶ್ಯ..

ಸದ್ಯ ದೃವ ಸರ್ಜಾ ಮಾದ್ಯಮದ ಜೊತೆ ಮಾತನಾಡಿ ಅತ್ತಿಗೆ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.. ಮಗುವನ್ನು ಎತ್ತಿಕೊಂಡಾಗ ಬಹಳ ಸಂತೋಷ ಆಯಿತು.. ಆ ಸಂತೋಷದ ಅನುಭವವೇ ಬೇರೆ.. ಅದನ್ನ ಹೇಳೋದಕ್ಕೆ ಆಗೊಲ್ಲ‌… ಅದು ಹೇಗೆ ಅನ್ನಿಸಿತು ಅಂತ ನಾನು ಅಬ್ಸರ್ವ್ ಕೂಡ ಮಾಡ್ಲಿಲ್ಲ.. ಒಟ್ಟಿನಲ್ಲಿ ಬಹಳ ಖುಷಿ ಆಗಿದೆ.. ಎಂದು ಸಂತೋಷ ಹಂಚಿಕೊಂಡರು.. ಅಷ್ಟೇ ಅಲ್ಲದೇ ಮಗುವಿನ ಹೆಸರಿನ ಬಗ್ಗೆ ಪ್ರತಿಕ್ರಿಯೆ ನೀಡಿ ಅದನ್ನೆಲ್ಲಾ ಇನ್ನೂ ನಿರ್ಧಾರ ಮಾಡಿಲ್ಲ.. ದೇವರ ಆಶೀರ್ವಾದ ನಿಮ್ಮೆಲ್ಲರ ಹಾರೈಕೆ ಎಲ್ಲವೂ ಒಳ್ಳೆಯದಾಗಿದೆ ಎಂದು ಸಂತೋಷ ಪಟ್ಟರು‌‌..