ಬೇರೆ ಹುಡುಗನನ್ನು ಮದುವೆಯಾಗು ಎಂದು ಮಿಲನಾರಿಗೆ ತಿಳಿಸಿದ್ದ ನಟ ಕೃಷ್ಣ.. ಕಾರಣವೇನು ಗೊತ್ತಾ?

0 views

ಸದ್ಯ ಸ್ಯಾಂಡಲ್ವುಡ್ ನ ಲವ್ ಮಾಕ್ಟೈಲ್ ಜೋಡಿ ಎಂದೇ ಖ್ಯಾತರಾಗಿರುವ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಮದುವೆ ಇನ್ನೇನು 25 ದಿನಗಳಷ್ಟೇ ಬಾಕಿ ಇದ್ದು ಮದುವೆಗೆ ಭರ್ಜರಿಯಾಗಿಯೇ ತಯಾರಿ ನಡೆಯುತ್ತಿದೆ.. ಪ್ರೇಮಿಗಳ ದಿನದಂದು ತಮ್ಮ 6 ವರ್ಷದ ಪ್ರೀತಿಗೆ ದಾಂಪತ್ಯ ಜೀವನದ ಹೊಸ ಅರ್ಥ ನೀಡುತ್ತಿರುವ ಮಿಲನಾ ಹಾಗೂ ಕೃಷ್ಣ ಜೋಡಿ ತಮ್ಮ ಮದುವೆಯ ಸಮಾರಂಭವನ್ನು ವಿಶೇಷವಾಗಿ ಪ್ಲಾನ್‌ ಮಾಡಿದೆ.. ಆದರೆ ಈ ನಡುವೆ ಕೃಷ್ಣ ಅವರು ಮಿಲನಾ ಅವರಿಗೆ ಹೇಳಿದ ಮಾತೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..

ಹೌದು ನಟಿ‌ ಮಿಲನಾ ನಾಗರಾಜ್ ಹಾಗೂ ನಟ ಡಾರ್ಲಿಂಗ್ ಕೃಷ್ಣ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ.. ಆದರೆ ಇಬ್ಬರಿಗೂ ಸಿನಿಮಾ ಕ್ಷೇತ್ರದಲ್ಲಿ ಏನಾದರು ಸಾಧನೆ ಮಾಡಬೇಕೆಂಬ ಹಂಬಲ.. ಇನ್ನು ಮಿಲನಾ ನಾಗರಾಜ್ ಸಾಕಷ್ಟು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದರು.. ದರ್ಶನ್ ಅವರ ಜೊತೆ ಬೃಂದಾವನ ಸಿನಿಮಾದಲ್ಲಿಯೂ ನಟಿಸಿದ್ದರೂ ಸಹ ಮಿಲನಾ ನಾಗರಾಜ್ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರಲಿಲ್ಲ..

ಇತ್ತ ನಟ ಕೃಷ್ಣ ಕೂಡ ಸಹ ನಿರ್ದೇಶಕನಾಗಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ನಟನಾಗಿ ಹೆಸರು ಮಾಡಿದರೂ ಸಹ ದೊಡ್ಡ ಯಶಸ್ಸಿನ ನಿರೀಕ್ಷೆಯಲ್ಲಿದ್ದ ಕೃಷ್ಣ ರಿಗೆ ಹೇಳಿಕೊಳ್ಳುವಂತಹ ದೊಡ್ಡ ಹಿಟ್ ಯಾವುದು ಸಿಕ್ಕಿರಲಿಲ್ಲ.. ಆದರೆ ಈ ಜೋಡಿ ಒಂದಾಗಿ ಮಾಡಿದ ಸಿನಿಮಾ ಇಬ್ಬರ ಜೀವನವನ್ನೇ ಬದಲಿಸಿತು..

ಹೌದು ಈ ಜೋಡಿ ಸೇರಿ ನಿರ್ದೇಶಿಸಿ ನಟಿಸಿದ ಸಿನಿಮಾ ಲವ್ ಮಾಕ್ಟೈಲ್ ಸಿನಿಮಾ ನಿರೀಕ್ಷೆಗೂ ಮೀರಿ ಜನರಿಂದ ಮೆಚ್ಚುಗೆ ಗಳಿಸಿತು.. ಅದರಲ್ಲೂ ಆನ್ಲೈನ್ ನಲ್ಲಿ ಸಿನಿಮಾ ಬಿಡುಗಡೆ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಂದರಲ್ಲಿ ಲವ್ ಮಾಕ್ಟೈಲ್ ಸಿನಿಮಾದ್ದೇ ಮಾತಾಗಿತ್ತು.. ಇಬ್ಬರಿಗೂ ಲವ್ ಮಾಕ್ಟೈಲ್ ಜೋಡಿಯೆಂದೇ ಹೆಸರು ಬಂತು..

ಇನ್ನು ಈ ಜೋಡಿ ಕಳೆದ 2019 ರ ಫೆಬ್ರವರಿ 14 ರಂದು ತಾವಿಬ್ಬರು ಪ್ರೀತಿಸುತ್ತಿದ್ದ ವಿಚಾರವನ್ನು ಬಹಿರಂಗಗೊಳಿಸಿದ್ದರು.. ಆದರೆ ಒಳ್ಳೆಯ ಸಿನಿಮಾ ಮಾಡಿದ ಬಳಿಕ ಮದುವೆಯಾಗೋಣ ಎಂಬ ನಿರ್ಧಾರಕ್ಕೆ ಬಂದಿದ್ದ ಮಿಲನಾ ಕೃಷ್ಣ ಜೋಡಿಗೆ ಲವ್ ಮಾಕ್ಟೈಲ್ ಸಿನಿಮಾದ ಯಶಸ್ಸು ಮದುವೆಗೆ ಮನಸ್ಸು ಮಾಡುವಂತೆ ಮಾಡಿತು.. ಇತ್ತ ತೆರೆ ಮೇಲೆ ಹಿಟ್ ಆಗಿದ್ದ ಜೋಡಿ ನಿಜ ಜೀವನದಲ್ಲಿಯೂ ಒಂದಾಗಲಿದ್ದಾರೆ ಎಂಬ ವಿಚಾರ ಕೇಳಿ ಅಭಿಮಾನಿಗಳು ಸಂತೋಷ ಪಟ್ಟಿದ್ದರು..

ಅದರಂತೆ 2021 ರ ಫೆಬ್ರವರಿ 14 ಕ್ಕೆ ಮದುವೆ ನಿಶ್ಚಯವಾಗಿದ್ದು.. ಅದಾಗಲೇ ಸ್ಯಾಂಡಲ್ವುಡ್ ನ ಎಲ್ಲಾ ಸ್ಟಾರ್ ಕಲಾವಿದರಿಗೆ ಸ್ನೇಹಿತರಿಗೆ ಆಪ್ತರಿಗೆ ಖುದ್ದು ಕೃಷ್ಣ ಹಾಗೂ ಮಿಲನಾ ಅವರೇ ತೆರಳಿ ಮದುವೆಗೆ ಆಹ್ವಾನ ನೀಡುತ್ತಿದ್ದಾರೆ.. ಇನ್ನು ಕಳೆದ ಕೆಲ ದಿನಗಳ ಹಿಂದಷ್ಟೇ ಮಿಲನಾ ಅವರಿಗಾಗಿ ಕೃಷ್ಣ ಅವರು ಮದುವೆಗೂ ಮುನ್ನ ಮಾಡುವ ಬ್ಯಾಚುಲರೇಟ್ ಪಾರ್ಟಿಯನ್ನು ವಿಶೇಷವಾಗಿ ಆಯೋಜನೆ ಮಾಡಿ ಭಾವಿ ಪತ್ನಿಗೆ ಸಂತೋಷಪಡಿಸಿದ್ದರು..

ಆದರೆ ಈ ಹಿಂದೆಯೇ ನಟ ಕೃಷ್ಣ ಅವರು ಮಿಲನಾ ಅವರಿಗೆ ಬೇರೊಬ್ಬ ಹುಡುಗನನ್ನು ಮದುವೆಯಾಗಲು ತಿಳಿಸಿದ್ದರಂತೆ.. ಹೌದು ಮಿಲನಾ ನಾಗರಾಜ್ ಅವರ ಬಗ್ಗೆ ತಿಳಿದಿದ್ದ ಕೃಷ್ಣ ಅವರು ಮದುವೆ ಆದರೆ ಈ ಹುಡುಗಿಯನ್ನು ಆಗಬಹುದು ಎಂದುಕೊಂಡು ನೇರವಾಗಿ ನನ್ನನ್ನ ಮದುವೆ ಆಗ್ತೀರಾ.. ನಾವಿಬ್ಬರು ಮದುವೆ ಆಗೋಣ್ವಾ ಎಂದು ನೇರವಾಗಿ ಕೇಳಿದ್ದರಂತೆ.. ಆದರೆ ಇದಕ್ಕೆ ಮಿಲನಾ ಅವರು ಯಾವುದೇ ಉತ್ತರ ನೀಡದೇ ಕೆಲ ದಿನ ಸಮಯ ಕೇಳಿ ನಂತರ ಒಪ್ಪಿಕೊಂಡಿದ್ದರಂತೆ..

ಮಿಲನಾ ಅವರು ಒಪ್ಪಿಕೊಂಡ ಮರುಕ್ಷಣವೇ ಕೃಷ್ಣ ಅವರು ಮಿಲನಾ ಅವರಿಗೆ ಒಂದು ಮಾತನ್ನು ಹೇಳಿದ್ದರಂತೆ.. ನಾವು ಮದುವೆಯಾಗುವ ದಿನದವರೆಗೂ ನಿನಗೆ ಯಾರಾದರು ನನಗಿಂತ ಒಳ್ಳೆಯ ಹುಡುಗ ಸಿಕ್ಕರೆ.. ನಿನಗೆ ಅವರು ಇಷ್ಟ ಆದರೆ ಖಂಡಿತ ನೀನು ಅದೇ ಹುಡುಗನನ್ನು‌ ಮದುವೆಯಾಗು ಎಂದಿದ್ದರಂತೆ.. ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಮಿಲನಾ ಅವರು ಕೃಷ್ಣ ಅವರ ಒಳ್ಳೆಯ ಗುಣದ ಬಗ್ಗೆ ಸಂತೋಷ ವ್ಯಕ್ತ ಪಡಿಸಿದರು.. ಅಷ್ಟೇ ಅಲ್ಲದೇ ಕೃಷ್ಣಾ ಅವರು ಸಹ ಮಾತನಾಡಿ.. ಜೀವನದಲ್ಲಿ ಏನೂ ಇಲ್ಲದೇ ಯಾರದರು ಒಬ್ಬರ ಜೊತೆ ಇದ್ದುಬಿಡು ಎಂದರೆ ನಾನು ಮಿಲನಾ ಜೊತೆ ಇರೋಕೆ ಇಷ್ಟ ಪಡ್ತೀನಿ ಎಂದು ಮಿಲನಾ ಅವರನ್ನು ತಾವು ಎಷ್ಟು ಪ್ರೀತಿಸುತ್ತಿದ್ದಾರೆಂದು ತಿಳಿಸಿದರು.. ಸದ್ಯ ಪ್ರೀತಿಸಿದ ಹುಡುಗಿ ಸಿಗದಿದ್ದರೆ ಅವರಿಗೆ ಕೆಟ್ಟದ್ದು ಬಯಸುವ ಜನರ ನಡುವೆ ತನಗಿಂತ ಒಳ್ಳೆಯ ಹುಡುಗ ಸಿಕ್ಕರೆ ಅವರನ್ನೇ ಮದುವೆಯಾಗಿ ಚೆನ್ನಾಗಿರು ಎಂದು ತಿಳಿಸಿದ್ದ ಕೃಷ್ಣ ನಿಜಕ್ಕೂ ಗ್ರೇಟ್ ಎನ್ನಬಹುದು‌‌.. ಈ ಪ್ರೀತಿ ತುಂಬಿದ ಜೋಡಿ ಸದಾ ಸಂತೋಷವಾಗಿರಲಿ.. ಇವರ ದಾಂಪತ್ಯ ಜೀವನ ಸದಾ ಸುಖವಾಗಿರಲಿ ಎಂಬುದೇ ಅಭಿಮಾನಿಗಳ ಹಾರೈಕೆ..