ನಾಗಿಣಿ ಧಾರಾವಾಹಿಯಿಂದ ಹೊರ ಬಂದ ಮುಖ್ಯ ಪಾತ್ರದ ನಟ.. ಕಾರಣವೇನು ಗೊತ್ತಾ?

0 views

ಸದ್ಯ ಕನ್ನಡ ಕಿರುತೆರೆಯ ಟಾಪ್ ಐದು ಧಾರಾವಾಹಿಗಳಲ್ಲಿ ಒಂದಾಗಿರುವ ನಾಗಿಣಿ‌ ಧಾರಾವಾಹಿಯಿಂದ ಇದೀಗ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದ ನಟ ಹೊರ ಬಂದಿದ್ದಾರೆ.. ಹೌದು ನಾಗಿಣಿ ಹಳೆಯ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿತು.. ನಾಗಿಣಿ ಧಾರಾವಾಹಿಯಲ್ಲಿ ನಾಅಗಿಣಿಯಾಗಿ ಅಭಿನಯಿಸಿದ್ದ ದೀಪಿಕಾ ದಾಸ್ ಅವರನ್ನು ನಿಜವಾದ ಹಾವೆಂದೇ ಬಹಳಷ್ಟು ಜನರು ತಿಳಿದುಕೊಳ್ಳುವ ಮಟ್ಟಕ್ಕೆ ಧಾರಾವಾಹಿ ಸಕ್ಸಸ್ ಆಗಿತ್ತು.. ಆ ಪಾತ್ರದಿಂದ ಬೇರೆ ಪಾತ್ರದಲ್ಲಿ ದೀಪಿಕಾ ದಾಸ್ ಅವರನ್ನು ನೋಡಲು ಸಾಧ್ಯವೇ ಇಲ್ಲ ಎನ್ನುವಂತಾಗಿತ್ತು. ಕೊನೆಗೆ ಧಾರಾವಾಹಿ ಬಿಟ್ಟು ಬಿಗ್ ಬಾಸ್ ಸೀಸನ್ ಏಳರಲ್ಲಿ ಕಾಣಿಸಿಕೊಂಡ ದೀಪಿಕಾ ಕಿರುತೆರೆಯಿಂದ ಬ್ರೇಕ್ ಪಡೆದರು.. ಬಹಳಷ್ಟು ವರ್ಷಗಳ ಕಾಲ ಪ್ರಸಾರಗೊಂಡ ಧಾರಾವಾಹಿ ದೀಪಿಕಾ ದಾಸ್ ಧಾರಾವಾಹಿ ಬಿಟ್ಟ ನಂತರದಲ್ಲಿ ಧಾರಾವಾಹಿ ಕೂಡ ತನ್ನ ಪ್ರಸಾರವನ್ನು ನಿಲ್ಲಿಸಿತು.. ಇನ್ನು ಅದಾಗಲೇ ಭರ್ಜರಿ ಟಿ ಆರ್ ಪಿ ಇದ್ದ ಧಾರಾವಾಹಿಯನ್ನು ನಿಲ್ಲಿಸಿದ ವಾಹಿನಿ ಮತ್ತೊಂದು ಬದಲಾವಣೆಯನ್ನು ತಂದಿತ್ತು..

ಹೌದು ನಾಗಿಣಿ ಪ್ರಸಾರವಾಗುತ್ತಿದ್ದ ಅದೇ ಸಮಯಕ್ಕೆ ನಾಗಿಣಿ 2 ಧಾರಾವಾಹಿಯನ್ನು ಹೊಸ ರೀತಿಯಲ್ಲಿ ಹೊಸ ಕತೆಯೊಂದಿಗೆ ತೆರೆ ಮೇಲೆ ತಂದಿತ್ತು.. ಜೆಕೆ.. ನಮ್ರತಾ ಗೌಡ.. ಮೋಹನ್ ಸೇರಿದಂತೆ ದೊಡ್ಡ ತಾರಾಬಳಗದಲ್ಲಿ ಶುರುವಾದ ಧಾರಾವಾಹಿ ಹೊಸದರಲ್ಲಿಯೇ ದೊಡ್ಡ ಯಶಸ್ಸು ಪಡೆದು ಕನ್ನಡ ಕಿರುತೆರೆಯ ಟಾಪ್ ಐದು ಧಾರಾವಾಹಿಗಳಲ್ಲಿ ಒಂದಾಯಿತು.. ಶುರುವಾದ ಬಹಳಷ್ಟು ತಿಂಗಳಿಂದಲೂ ತನ್ನ ಸ್ಥಾನವನ್ನು ಉಳಿಸಿಕೊಂಡು ಯಶಸ್ಸಿನ ಪಯಣವನ್ನು ಮುಂದುವರೆಸುತ್ತಿದೆ..

ಕೆಲವೇ ದಿನದ ಹಿಂದೆ ಧಾರಾವಾಹಿಯ ಪ್ರಮೋಷನ್ ಗಾಗಿ ಶಿವಾನಿ ಹಾಗೂ ತ್ರಿಶೂಲ್ ಮದುವೆಯ ಅರತಕ್ಷತೆ ಕಾರ್ಯಕ್ರಮವನ್ನು ಜನರ ನಡುವೆಯೇ ಅದ್ಧೂರಿಯಾಗಿ ಆಚರಿಸಿ ಅಭಿಮಾನಿಗಳಿಗೆ ನೆಚ್ಚಿನ ನಟ ನಟಿಯರ ಜೊತೆ ಸಮಯ ಕಳೆಯಲು ಹಾಗೂ ಅವರ ಜೊತೆ ಫೋಟೋ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು.. ಆದರೆ ನಿಜವಾದ ಮದುವೆಯ ಅರತಕ್ಷತೆ ರೀತಿಯಲ್ಲಿ ನಡೆದ ಕಾರ್ಯಕ್ರಮದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಪ್ರೇಕ್ಷಕರು ಈ ಜೋಡಿ ನಿಜವಾಗಿಯೂ ನಿಜ ಜೀವನದಲ್ಲಿಯೂ ಮದುವೆಯಾಗಿದ್ದಾರೆ ಎಂದು ತಿಳಿದು ಶುಭ ಹಾರೈಸಿದ್ದರು.. ನೋಡು ನೋಡುತ್ತಿದ್ದಂತೆ ಸುದ್ದಿ ವೈರಲ್ ಆಗಿತ್ತು.. ಇದರಿಂದ ತಬ್ಬಿಬ್ಬಾದ ನಮ್ರತಾ ಹಾಗೂ ತ್ರಿಶೂಲ್.. ನಮ್ಮಿಬ್ಬರ ಮದುವೆ ನಡೆದಿಲ್ಲ.. ಇದು ಕೇವಲ ಧಾರಾವಾಹಿಯಲ್ಲಿ ನಡೆದ ಮದುವೆಯಷ್ಟೇ ಎಂದು ಸ್ಪಷ್ಟನೆ ನೀಡಿದ್ದರು..

ಇನ್ನು ಇದೀಗ ಧಾರಾವಾಹಿಯಿಂದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ನಟ ಧಾರಾವಾಹಿಯಿಂದ ಹೊರ ಬಂದಿದ್ದಾರೆ.. ಹೌದು ದಿಗ್ವಿಜಯ್ ಪಾತ್ರದ ಮೂಲಕ ಸ್ಯಾಂಡಲ್ವುಡ್ ನಿಂದ ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದ ಮೋಹನ್ ಅವರು ಧಾರಾವಾಹಿಯಿಂದ ಹೊರ ನಡೆದಿದ್ದಾರೆ.. ಹೌದು ಈ ಬಗ್ಗೆ ಮಾದ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಮೋಹನ್ ಅವರು ಧಾರಾವಾಹಿ ಬಗ್ಗೆ ಹಾಗೂ ಕೊರೊನಾ ಬಗ್ಗೆ ಮಾತನಾಡಿದ್ದಾರೆ..

ಕೊರೊನಾದಿಂದ ಎಷ್ಟು ಎಚ್ಚರವಾಗಿದ್ದರೂ ಸಾಲದು.. ಕಳೆದ ವರ್ಷ ಅಷ್ಟಾಗಿ ತಿಳಿಯಲಿಲ್ಲ.. ಆದರೆ ಈ ವರ್ಷ ನನ್ನ ಸಂಬಂಧಿಕರೇ ಆರು ಜನ ಜೀವ ಕಳೆದುಕೊಂಡರು.. ನನ್ನ ತಂದೆ ತಾಯಿ ಕೂಡ ಕೊರೊನಾ ಸೋಂಕಿತರಾಗಿ ಗುಣಮುಖರಾದರು.. ಇದರಿಂದಾಗಿ ಆರ್ಥಿಕವಾಗಿಯೂ ನಮಗೆ ಪೆಟ್ಟು ಬಿತ್ತು.. ನಮಗೆ ಸಿನಿಮಾ ನಟನೆ ಬಿಟ್ಟರೆ ಬೇರೆ ತಿಳಿದಿಲ್ಲ.. ಎಲ್ಲವೂ ಸರಿ ಇದ್ದರೆ ತಮಿಳು ಹಾಗೂ ಕನ್ನಡದ ಎರಡು ದೊಡ್ಡ ಸಿನಿಮಾಗಳಲ್ಲಿ ನಾನು ನಟಿಸಬೇಕಿತ್ತು.. ಆದರೆ ಎಲ್ಲವೂ ಮುಂದಕ್ಕೆ ಹೋಯ್ತು.. ಇನ್ನು ನಾನು ಸಂಭಾಷಣೆ ಬರೆದಿರುವ ರವಿ ಸರ್ ನಟಿಸಿರುವ ರವಿ ಬೋಪಣ್ಣ ಸಿನಿಮಾ ಬಿಡುಗಡೆಯಾಗಬೇಕಿದೆ.. ಈ ನಡುವೆ ವ್ಯಯಕ್ತಿಕ ಕಾರಣಾಂತರಗಳಿಂದ ನಾನು ನಾಗಿಣಿ ಧಾರಾವಾಹಿಯಿಣ್ದ ಹೊರ ಬಂದಿರುವುದು ನಿಜ ಎಂದಿದ್ದಾರೆ..