ಡಿಕೆ ಶಿವಕುಮಾರ್ ಅವರಿಗೆ ವ್ಯಂಗ್ಯವಾಗಿ ತಿರುಗೇಟು ಕೊಟ್ಟ ಮುನಿರತ್ನ ಅವರು ಹೇಳಿರುವ ಮಾತು ನೋಡಿ..

0 views

ರಾಜ್ಯದಲ್ಲಿ‌ ನಡೆಯುತ್ತುರುವ ವಿಧಾನಸಭಾ ಉಪ ಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರ ಎಂದೇ ಕರೆಯಲಾಗುತ್ತಿರುವ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಎನ್ನುವ ಮಾತು ಕೇಳಿ ಬರುತ್ತಿದೆ.. ಅತ್ತ ಕಾಂಗ್ರೆಸ್ ಪಕ್ಷದಿಂದ ಹೊರಬಂದ ಮುನಿರತ್ನ ಅವರು ಬಿಜೆಪಿ ಅಭ್ಯರ್ಥಿಯಾದರೆ.. ಪಕ್ಷ ಬಿಟ್ಟ ಮುನಿರತ್ನರನ್ನು ಸೋಲಿಸಲೇ ಬೇಕೆಂದು ಪಣ ತೊಟ್ಟು ಡಿ ಕೆ ಶಿವಕುಮಾರ್ ಅವರು ನಿಲ್ಲಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಮತ್ತೊಂದು ಕಡೆ.. ಇಬ್ಬರಿಗೂ ಚುನಾವಣೆಯಲ್ಲಿ ಹಣಾಹಣಿಯಾದರೂ ಇಲಿ ಅಸಲಿ ಆಟ ನಡೆಯುತ್ತಿರುವುದು ಮುನಿರತ್ನ ಹಾಗೂ ಡಿ ಕೆ ಶಿವಕುಮಾರ್ ಅವರಿಗೆ ಎನ್ನಲಾಗುತ್ತಿದೆ..

ಹೌದು ಡಿ ಕೆ ರವಿ ಅವರ ಪತ್ನಿ ಎಂಬುವ ಹೆಸರಿದ್ದರೂ ಸಹ ಅದನ್ನು ಬಳಸಬಾರದು ಎಂದು ಕೆಲವರು ಮಾತನಾಡಿದ ಸಂದರ್ಭದಲ್ಲಿ ಕುಸುಮಾ ಅವರು ನಾನು ಸಂಪ್ರದಾಯಬದ್ಧವಾಗಿಯೇ ರವಿ ಅವರನ್ನ ಮದುವೆ ಆಗಿದ್ದೆ.. ಈಗಲೂ ಅವರ ಪತ್ನಿಯಾಗಿಯೇ ಉಳಿದುಕೊಂಡಿದ್ದೇನೆ.. ಆದರೆ ಚುನಾವಣೆಯಲ್ಲಿ ರವಿ ಅವರ ಹೆಸರನ್ನು ಮುಂದೆ ಇಟ್ಟುಕೊಂಡು ಮತ ಕೇಳುವುದಿಲ್ಲ.. ಬದಲಿಗೆ ಡಿ ಕೆ ಸುರೇಶ್ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಇಟ್ಟುಕೊಂಡು ಮತ ಕೇಳುವೆ ಎಂದಿದ್ದರು..

ಇತ್ತ ಮುನಿರತ್ನ ಅವರು ನಾಮಪತ್ರ ಸಲ್ಲಿಸುವುದು ತಡವಾದರೂ ಇದೀಗ ಕ್ಷೇತ್ರದಲ್ಲಿ ಬರದಿಂದ ಚುನಾವಣೆ ನಡೆಸುತ್ತಿದ್ದು ಸ್ಕೂಟರ್ ನಲ್ಲಿಯೇ ಮನೆ ಮನೆಗೆ ತೆರಳಿ‌ ಮತಯಾಚನೆ ಮಾಡುತ್ತಿದ್ದಾರೆ.. ಇನ್ನು ಇತ್ತ ಕುಸುಮಾ ಪರವಾಗಿ ಡಿ ಕೆ ಶಿವಕುಮಾರ್ ಹಾಗೂ ಸುರೇಶ್ ನಿಂತರೆ ಅತ್ತ ಮುನಿರತ್ನ ಪರವಾಗಿ ಬಿಜೆಪಿ ರಾಜ್ಯ ನಾಯಕರು ನಿಂತಿದ್ದಾರೆ..

ಇನ್ನು ನಿನ್ನೆ ಡಿ ಕೆ ಶಿವಕುಮಾರ್ ಅವರು ಮಾತನಾಡುತ್ತಾ ಎದುರಾಳಿ ನಮ್ಮ ಸರಿಸಮಾನರಾಗಿದ್ದರೆ ಹೋರಾಡಬಹುದು.. ಎಂದು ಮುನಿರತ್ನ ತಮ್ಮ ಸರಿಸಮಾನರಲ್ಲ ಎನ್ನುವಂತೆ ಮಾತನಾಡಿದ್ದರು.. ಹಾಗೆಯೇ ಕುಸುಮಾ ಅವರ ವಿರುದ್ಧ ಮುನಿರತ್ನ ಸೋಲುವುದು ಖಚಿತ ಎಂದಿದ್ದರು..

ಇದೀಗ ಡಿ ಕೆ ಶಿವಕುಮಾರ್ ಅವರ ಮಾತಿಗೆ ಮುನಿರತ್ನ ಅವರು ತಿರುಗೇಟು ನೀಡಿದ್ದಾರೆ.. ಹೌದು “ನಾನು ಶಿವಕುಮಾರ್ ಅವರಿಗೆ ಸರಿಸಮಾನನಾಗಲು ಸಾಧ್ಯವೇ ಇಲ್ಲ.. ಅವರೆಲ್ಲಿ ನಾನೆಲ್ಲಿ.. ಇನ್ನು ಏಳು ಜನ್ಮ ಎತ್ತಿದರೂ ನಾನು ಅವರಿಗೆ ಸಮಾನನಾಗುವುದಿಲ್ಲ ಎಂದಿದ್ದಾರೆ.. ಹೌದು ನಿನ್ನೆ ಜಾಲಹಳ್ಳಿ ವಾರ್ಡ್ ನಲ್ಲಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಮಾದ್ಯಮದವರ ಜೊತೆ ಮಾತನಾಡಿದ ಮುನಿರತ್ನ ಅವರು ನಿನ್ನೆ ಶಿವಕುಮಾರ್ ಅವರು ಹೇಳಿದ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.. “ಡಿ ಕೆ ಶಿವಕುಮಾರ್ ಅವರಿಗೆ ಸರಿಸಮಾನನಾಗಲು ನನಗೆ ಸಾಧ್ಯವೇ ಇಲ್ಲ..

ಅವರು ಹೇಳಿರುವ ಮಾತು ಸತ್ಯ.. ಇದೊಂದು ಜನ್ಮ ಮಾತ್ರವಲ್ಲ.. ಏಳೇಳು ಜನ್ಮದಲ್ಲಿಯೂ ಅವರಿಗೆ ನಾನು ಸರಿಸಮಾನನಾಗಲು ಸಾಧ್ಯವಿಲ.. ಅವರು ಎಂಥಹ ದೊಡ್ಡ ಮನುಷ್ಯರು.. ನಾನು ಅವರ ಮುಂದೆ ಬಹಳ ಸಣ್ಣವನು.. ಅವರು ಇಂದು ಯಾವ ಮಟ್ಟದಲ್ಲಿದ್ದಾರೆ.. ನಾನು ಆ ಮಟ್ಟ ತಲುಪಲು ಸಾಧ್ಯವೇ ಇಲ್ಲ.. ಅವರ ಜೊತೆ ನನ್ನನ್ನು ಹೋಲಿಕೆ ಮಾಡಿ‌ ಮಾತನಾಡೋದೆ ತಪ್ಪು ಎಂದು ವ್ಯಂಗವಾಗಿಯೇ ಶಿವಕುಮಾರ್ ಅವರಿಗೆ ತಿರುಗೇಟು‌ ನೀಡಿದ್ದಾರೆ..

ಒಟ್ಟಿನಲ್ಲಿ ಆರ್ ಆರ್ ನಗರದಲ್ಲಿ ಚುನಾವಣಾ ಕಾವು ವಿಒಅರೀತವಾಗಿಯೇ ಇದ್ದು ರಾಜರಾಜೇಶ್ವರಿ ತಾಯಿ ಯಾರ ಕೈ ಹಿಡಿಯುವರೋ ಕಾದು ನೋಡಬೇಕಿದೆ‌‌..