ಮತ ಎಣಿಕೆ ಮುಕ್ತಾಯ.. ಮುನಿರತ್ನರಿಗೆ ವಿಜಯಮಾಲೆ.. ಆದರೆ ಕುಸುಮಾಗೆ ಸಿಕ್ಕ ಮತವೆಷ್ಟು ಗೊತ್ತಾ?

0 views

ರಾಜ್ಯದಲ್ಲಿ ನಡೆದ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಮುಕ್ತಾಯಗೊಂಡಿದ್ದು ಹೈ ವೋಲ್ಟೇಜ್ ಕಣ ಎನಿಸಿಕೊಂಡಿದ್ದ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ‌ ಅಭ್ಯರ್ಥಿ ಮುನಿರತ್ನ ಅವರು ಜಯಭೇರಿ ಭಾರಿಸಿದ್ದಾರೆ.. ಹೌದು ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ವಿಜೇತರಾಗಿದ್ದ ಮುನಿರತ್ನ ಅವರು ನಂತರ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.. ಬಿಜೆಪಿ ಅಧಿಕಾರದ ಗದ್ದುಗೆಗೇರಿತ್ತು..

ಇದೀಗ ನವೆಂಬರ್ 3 ರಂದು ನಡೆದ ಉಪ ಚುನಾವಣೆಯಲ್ಲಿ ಅತ್ತ ಬಿಜೆಪಿ ಪಕ್ಷದಿಂದ ಮುನಿರತ್ನ ಸ್ಪರ್ಧಿಸಿದರೆ ಇತ್ತ ಡಿ ಕೆ ರವಿ ಅವರ ಪತ್ನಿ ಕುಸುಮಾ ಅವರು ರಾಜಕೀಯ ಪ್ರವೇಶ ಪಡೆದು ಮುನಿರತ್ನ ಅವರ ವಿರುದ್ಧ ಸ್ಪರ್ಧೆ ಮಾಡಿದ್ದರು.. ಡಿ ಕೆ ಶಿವಕುಮಾರ್ ಹಾಗೂ ಮುನಿರತ್ನ ಅವರಿಗೆ ಇದು ಪ್ರತಿಷ್ಟೆಯ ಕಣವಾಗಿದ್ದು ಗೆಲ್ಲಲ್ಲೇ ಬೇಕೆಂಬ ಪಣ ತೊಟ್ಟಿದ್ದರು..

ಇದೀಗ ಇಂದು ಬೆಳಿಗ್ಗೆಯಿಂದಲೇ ಮತ ಏಣಿಕೆ ಕಾರ್ಯ ನಡೆದಿದ್ದು ಪ್ರತಿ ಹಂತದ ಮತ ಏಣಿಕೆಯಲ್ಲಿಯೂ ಮುನಿರತ್ನ ಅವರೇ ಮುನ್ನಡೆ ಕಾಯ್ದುಕೊಂಡು ಬಂದಿದ್ದರು.. ಇದೀಗ ಅಂತಿಮ ಹಂತದ ಮತ ಎಣಿಕೆ ಮುಕ್ತಾಯವಾಗಿದ್ದು, ಮುನಿರತ್ನ ಅವರಿಗೆ ವಿಜಯಮಾಲೆ ದೊರೆತಿದೆ.. ಗೆಲುವಿನ ನಿರೀಕ್ಷೆಯಲ್ಲಿದ್ದ ಕುಸುಮಾ ಅವರಿಗೆ ನಿರಾಸೆಯಾಗಿದೆ..

ಒಟ್ಟು ಮುನಿರತ್ನ ಅವರಿಗೆ 1,18,980 ಮತಗಳು ಬಂದಿದ್ದರೆ ಕಾಂಗ್ರೆಸ್ ನ ಕುಸುಮಾ ಅವರಿಗೆ 65,795 ಮತಗಳು ಬಂದಿವೆ.. ಇನ್ನು ಜೆಡಿಎಸ್ ನ ಅಭ್ಯರ್ಥಿ ಕೃಷ್ಣಮೂರ್ತಿ ಅವರು ಠೇವಣಿ ಕಳೆದುಕೊಂಡಿದ್ದಾರೆ‌‌..

ಸದ್ಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು 54,449 ಮತಗಳ ಅಂತರದಿಂದ ಭರ್ಜರಿ ವಿಜಯದ ದಾಖಲೆ ಬರೆದಿದ್ದು ಅತ್ತ ಗೆಲ್ಲುವ ವಿಶ್ವಾಸ ಇಟ್ಟುಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಅಂತರದ ಸೋಲು ಶಾಕ್ ಆಗಿದೆ.. ಇನ್ನು ಮುನಿರತ್ನ ಅವರಿಗೆ ಅದಾಗಲೇ ಯಡಿಯೂರಪ್ಪನವರು ಬರಹೇಳಿದ್ದು ಈ ಮೊದಲೇ ಹೇಳಿದಂತೆ ಸಚಿವ ಸ್ಥಾನ ನೀಡುವುದು ಖಚಿತವಾಗಿದೆ..

ಇನ್ನು ತಮ್ಮ ಗೆಲುವಿನ ಬಗ್ಗೆ ಮಾತನಾಡಿರುವ ಮುನಿರತ್ನ ಅವರು ಇಷ್ಟು ದೊಡ್ಡ ಮತಗಳ ಅಂತರದ ಗೆಲುವು ಸಂತೋಷ ತಂದಿದೆ.. ಎಲ್ಲರಿಗೂ ಒಳ್ಳೆಯದಾಗಲಿ.. ನಾನು ಆಡಿಲ್ಲದ ಕೆಲ ಮಾತುಗಳನ್ನು ಹೇಳಿದ್ದಾರೆ ಎಂದಿದ್ದರು.. ಅದೆಲ್ಲವೂ ಬಹಳ ಬೇಸರ ತಂದಿತ್ತು.. ಆದರೂ ಎಲ್ಲರಿಗೂ ಒಳ್ಳೆದಾಗ್ಲಿ.. ನಾನು ಮೊದಲು ಫಲಿತಾಂಶದ ಸರ್ಟಿಫಿಕೇಟ್ ಪಡೆದು ನಂತರ ಮುಖ್ಯ ಮಂತ್ರಿಗಳನ್ನ ಭೇಟಿಯಾಗ್ತೇನೆ.. ರಾಜರಾಜೇಶ್ವರಿ ನಗರದ ಎಲ್ಲಾ ಮತದಾರರಿಗೂ ನನ್ನ ಕೃತಜ್ಞತೆಗಳು ಎಂದಿದ್ದಾರೆ..