ಬೈಕ್ ಮಾರಿಕೊಂಡ ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರ ಪರಿಸ್ಥಿತಿ ಹೇಗಾಗಿದೆ ನೋಡಿ..

0 views

ಲಾಕ್ ಡೌನ್ ನಿಂದಾಗಿ ಸಾಮನ್ಯರ ಜೀವನ ಮಾತ್ರವಲ್ಲ ಕೆಲ ಸೆಲಿಬ್ರೆಟಿಗಳ ಜೀವನವೂ ಸಹ ಕೆಟ್ಟ ಪರಿಸ್ಥಿತಿಗೆ ಬಂದು ನಿಂತಿದೆ ಎಂದರೆ ನಂಬಲೇಬೇಕಾಗಿದೆ.. ಹೌದು ಕಲಾವಿದರಿಗೂ ಸಹ ಅವರ ಕೆಲಸ ಮಾಡಿದರಷ್ಟೇ ಕೈಯಲ್ಲಿ ಹಣ ಇರುವುದು.. ಅವರಿಗೂ ತಿಂಗಳ ಸಂಬಳ ಬರುವುದಿಲ್ಲ.. ಕೆಲಸ ಇದ್ದರಷ್ಟೇ ಸಂಪಾದನೆ.. ಇದೀಗ ಕಳೆದ ಆರೇಳು ತಿಂಗಳುಗಳಿಂದ ಕೆಲ ಸೆಲಿಬ್ರೆಟಿಗಳು ಸಹ ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ.. ಅವರಲ್ಲಿ ಒಬ್ಬರು ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು.. ಹೌದು ಮಾದ್ಯಮವೊಂದರ ಜೊತೆ ಮಾತನಾಡುತ್ತಾ ಲಾಕ್ ಡೌನ್ ನಲ್ಲಿ ತಾವು ಅನುಭವಿಸಿದ ಈಗಲೂ ಅನುಭವಿಸುತ್ತಿರುವ ಕಷ್ಟದ ಬಗ್ಗೆ ಹಂಚಿಕೊಂಡಿದ್ದಾರೆ..

ಈ ಕೊರೊನಾ ಅದ್ಯಾಕಾದ್ರು ಬಂತೋ ಲಾಕ್ ಡೌನ್ ಆದ ನಂತರ ನನಗೆ ಬಹಳ ಆರ್ಥಿಕ ಸಮಸ್ಯೆ ಎದುರಾಯಿತು.. ನನ್ನ ಬೈಕ್ ಮಾರುವ ಪರಿಸ್ಥಿತಿಯೂ ಬಂತು.. ಆದರೆ ಇದೆಲ್ಲವನ್ನು ಹೇಳಿಕೊಂಡರೆ ಯಾರೂ ಸಹ ನಂಬೋದಿಲ್ಲ.. ಆದರೆ ಇದೇ ವಾಸ್ತವ ಸತ್ಯ.. ಬಹಳ ಕಷ್ಟ ಪಟ್ಟೆ ಎಂದಿದ್ದಾರೆ.. ಲೈವ್ ಬ್ಯಾಂಡ್ ಯಾವುದೂ ಇಲ್ಲ.. ಲೈವ್ ಬ್ಯಾಂಡ್ ಇಲ್ಲದೇ ಸಂಪಾದನೆ ನಿಂತು ಹೋಗಿದೆ.. ಅದೇ ನಮಗೆ ಪ್ರಮುಖ ಆದಾಯದ ಮೂಲವಾಗಿತ್ತು..

ನಮಗೆ ತಿಂಗಳ ಸಂಬಳ ಅಂತ ಬರೋದಿಲ್ಲ.. ಕೆಲಸ ಇದ್ರೆ ದುಡ್ಡು.. ಇಲ್ಲದಿದ್ದರೆ ಇಲ್ಲ.. ಪ್ರತಿ ತಿಂಗಳು ನನ್ನ ಬೈಕ್ ಇ ಎಂ ಐ ಕಟ್ಟಬೇಕಿತ್ತು.. ಆದರೆ ಆರ್ಥಿಕ ಸಮಸ್ಯೆಯಿಂದ ಕಟ್ಟಲಾಗದೇ ಬೈಕ್ ಅನ್ನೇ ಮಾರಿಕೊಂಡೆ.. ಲಾಕ್ ಡೌನ್ ಆದ ಹೊಸದರಲ್ಲಿ ನಾನೇ ಇತರರಿಗೆ ಸಹಾಯ ಮಾಡಿದೆ.. ಆದರೆ ಈಗ ನನಗೆ ಯಾರಾದರು ಸಹಾಯ ಮಾಡಿದರೆ ಜೀವನ ಸಾಗಿಸುವಂತಾಗಿದೆ.. ಏಳು ತಿಂಗಳಿನಿಂದ ಲೈವ್ ಕಾರ್ಯಕ್ರಮ ನಡೆದಿಲ್ಲ.. ಅದೇ ಕಾರಣಕ್ಕೆ ಸಂಪಾದನೆ ನಿಂತಿದೆ.. ಆದಷ್ಟು ಬೇಗ ಇದೆಲ್ಲವೂ ಮುಗಿದು ಪರಿಸ್ಥಿತಿ ಮೊದಲಿನಂತಾಗಲಿ ಅನ್ನೋದೆ ನಮ್ಮ ಪ್ರಾರ್ಥನೆ ಎಂದರು.. ಅಷ್ಟೇ ಅಲ್ಲದೆ ಕೆಲ ದಿನಗಳ ಹಿಂದೆ ಕಾರ್ ಚಾಲನೆ ಮಾಡುತ್ತಿರುವ ವೀಡಿಯೋವೊಂದನ್ನು ಹಂಚಿಕೊಂಡು ಈ ಆರ್ಥಿಕ ಕಷ್ಟದ ನಡುವೆ ಡ್ರೈವಿಂಗ್ ಅನ್ನು ಚೆನ್ನಾಗಿ ಕಲಿಯಬೇಕಿದೆ.. ಉಬರ್ ಡ್ರೈವರ್ ಆಗಲು.. ಎಂದು ಬರೆದು ಪೋಸ್ಟ್ ಮಾಡಿದ್ದರು.. ಆದರೆ ಅಂದು ಅವರ ಮಾತು ತಮಾಷಎಗಾಗಿ ಎಂದುಕೊಳ್ಳಲಾಗಿತ್ತು.. ಆದರೆ ಆ ಮಾತಿನ ಹಿಂದೆ ಅವರ ಕಷ್ಟದ ಸತ್ಯವಿತ್ತು..

ಇನ್ನು ಸದ್ಯ ಲಾಕ್ ಡೌನ್ ನಲ್ಲಿ ಕಷ್ಟಗಳ ನಡುವೆಯೂ ಸುಮ್ಮನೆ ಕೂರದ ರಘು ದೀಕ್ಷಿತ್ ಅವರು 10 ಹಾಡುಗಳನ್ನು ಕಂಪೋಸ್ ಮಾಡಿದ್ದು ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ‌ ಬಿಡುಗಡೆ ಮಾಡಲಿದ್ದಾರೆ.. ಅಷ್ಟೇ ಅಲ್ಲದೇ ಸದ್ಯ ಸಿನಿಮಾ ಹಾಗೂ ವೆಬ್ ಸೀರಿಸ್ ಗಳಲ್ಲಿಯೂ ನಟನೆ ಮಾಡುವುದಾಗಿ ಒಪ್ಪಿಕೊಂಡಿದ್ದು ಕೆಲ ಸಿನಿಮಾಗಳ ಸಂಗೀತ ನಿರ್ದೇಶನದ ಕೆಲಸವನ್ನೂ ಸಹ ಈಗ ಒಪ್ಪಿಕೊಂಡಿದ್ದಾರೆ..

ಇನ್ನು ಅದಾಗಲೇ ರಘು ದೀಕ್ಷಿತ್ ಸಂಗೀತ ನಿರ್ದೇಶನದ ಲವ್ ಮಾಕ್ ಟೈಲ್ ಸಿನಿಮಾ ಸಕ್ಸಸ್ ಕಂಡಿದ್ದು..‌ ಇದೀಗ ಲವ್ ಮಾಕ್ ಟೈಲ್ 2 ಸಿನಿಮಾಗೂ ರಘು ದೀಕ್ಷಿತ್ ಅವರದ್ದೇ ಸಂಗೀತ ನಿರ್ದೇಶನ ವಿರಲಿದೆ.. ಒಟ್ಟಿನಲ್ಲಿ ಲಾಕ್ ಡೌನ್ ನಿಂದ ಆದ ಸಮಸ್ಯೆಗಳೆಲ್ಲಾ ಆದಷ್ಟು ಬೇಗ ಕಳೆದು ಹೋಗಿ ಎಲ್ಲರ ಜೀವನ ಸಹಜ ಸ್ಥಿತಿಗೆ ಮರಳುವಂತಾಗಲಿ..