ಶಿಲ್ಪಾ ನಾಗ್ ರನ್ನು ತರಾಟೆಗೆ ತೆಗೆದುಕೊಂಡ ಮುಖ್ಯ ಕಾರ್ಯದರ್ಶಿಗಳು ಕೇಳಿದ ಆ ಐದು ಪ್ರಶ್ನೆಗಳು ಏನು ಗೊತ್ತಾ? ಉತ್ತರ ನೀಡಲಾಗದೆ ತಬ್ಬಿಬ್ಬಾದ ಶಿಲ್ಪಾ ನಾಗ್..

0 views

ಮೈಸೂರಿನ ಮಹಿಳಾ ಅಧಿಕಾರಿಗಳ ನಡುವಿನ ಅಸಮಾಧಾನದ ವಿಚಾರ ಎಲ್ಲೆಲ್ಲೂ ಸದ್ದು ಮಾಡುತ್ತಿದೆ.. ಒಬ್ಬರು ಪಾಲಿಕೆ ಆಯುಕ್ತರು ಶಿಲ್ಪಾ ನಾಗ್.. ಮತ್ತೊಬ್ಬರು ಜಿಲ್ಲಾಧಿಕಾರಿಳು ರೋಹಿಣಿ ಸಿಂಧೂರಿ.. ಇಬ್ಬರ ನಡುವಿನ ಸಮಾಧಾನದ ವಿಚಾರ ರಾಜ್ಯದ ಪ್ರಮುಖ ಸುದ್ದಿಯಾಗಿದೆ.‌ ಇದಕ್ಕೆ ಕಾರಣ ಈ ಹಿಂದೆ ರೋಹಿಣಿ ಸಿಂಧೂರಿ ಅವರನ್ನು ಟಾರ್ಗೆಟ್ ಮಾಡಿ ಸಾಕಷ್ಟು ಮಂದಿ ವಿಫಲರಾಗಿದ್ದರು.. ಇದೀಗ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ಅವರು ರೋಹಿಣಿ ಸಿಂಧೂರಿ ಅವರು ನಮಗೆ ಅವಮಾನ ಮಾಡುತ್ತಿದ್ದಾರೆ ಹಾಗೂ ಇನ್ನಿತರ ಆರೋಪ ಮಾಡಿ ಸುದ್ಧಿಗೋಷ್ಟಿ ನಡೆಸಿ ರಾಜಿನಾಮೆ ನೀಡಿದ್ದರು..

ಅತ್ತ ಮೈಸೂರಿನ ರಾಜಕಾರಣಿಗಳೆಲ್ಲಾ ಅಂದರೆ ಜನರಿಂದ ಆರಿಸಲ್ಪಟ್ಟ ಜನನಾಯಕರು ಒಂದಾಗಿ ರೋಹಿಣಿ ಸಿಂಧೂರಿ ಅವರ ವಿರುದ್ಧ ನಿಂತಿದ್ದರೆ ಇತ್ತ ಜನ ಸಾಮಾನ್ಯರೆಲ್ಲಾ ರೋಹಿಣಿ ಸಿಂಧೂರಿ ಅವರು ದಕ್ಷ ಅಧಿಕಾರಿ ಅವರ ಪರವಾಗಿ ನಾವು ಸದಾ ನಿಲ್ಲುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿದ್ದಾರೆ..ಇನ್ನು ಇಂದು ಮುಖ್ಯ ಕಾರ್ಯದರ್ಶಿಗಳಾದ ಪಿ ರವಿ ಕುಮಾರ್ ಅವರು ಮೈಸೂರಿಗೆ ಭೇಟಿ ನೀಡಿದ್ದು ಶಿಲ್ಪಾ ನಾಗ್ ಅವರನ್ನು ರಾಜಿನಾಮೆ ಕುರಿತಂತೆ ವಿಚಾರಣೆ ನಡೆಸಿದ್ದಾರೆ.. ಆ ಸಮಯದಲ್ಲಿ ಶಿಲ್ಪಾ ನಾಗ್ ಅವರು ತಬ್ಬಿಬ್ಬಾಗಿದ್ದಾರೆ ಎಂದು ತಿಳಿದುಬಂದಿದೆ.. ಹೌದು ಮುಖ್ಯ ಕಾರ್ಯದರ್ಶಿಗಳು ಹಲವಾರು ಪ್ರಶ್ನೆಗಳನ್ನು ಕೇಳಿ ಶಿಲ್ಪಾ ನಾಗ್ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ..

ಹೌದು ಪಿ ರವಿ ಕುಮಾರ್ ಅವರು ಕೇಳಿದ ಪ್ರಶ್ನೆಗಳು ಇಂತಿವೆ ನೋಡಿ.. ನೀವು ಜಿಲ್ಲಾಧಿಕಾರಿಗಳ ಮೇಲೆ ಮಾಡಿರುವ ಆರೋಪಕ್ಕೆ ಸಾಕ್ಷಿ ಇದೆಯಾ.. ದಾಖಲೆಗಳು ಇದೆಯಾ.. ಇದ್ದರೆ ತೋರಿಸಿ.. ನೆನ್ನೆ ನೀವು ಏಕಾಏಕಿ ಸುದ್ಧಿಗೋಷ್ಟಿ ನಡೆಸುವ ಅಗತ್ಯ ಏನಿತ್ತು.. ಏಕಾಏಕಿ ಅದೇಗೆ ಸುದ್ದಿಗೋಷ್ಟಿ ನಡೆಸಿದಿರಿ.. ಯಾವ ಆಧಾರದಲ್ಲಿ ಸುದ್ದಿಗೋಷ್ಟಿ ನಡೆಸಿದಿರಿ.. ಸುದ್ದಿ ಗೋಷ್ಠಿ ನಡೆಸಿದ ನಿಮ್ಮ ಉದ್ದೇಶ ಏನಿತ್ತು.. ನಿಮಗೆ ತೊಂದರೆಯಾಗಿದ್ದಲ್ಲಿ ನನಗೆ ದೂರು ನೀಡಬೇಕಾಗಿತ್ತು.. ಆದರೆ ಆಧಾರವಿಲ್ಲದೇ ದಾಖಲೆಗಳಿಲ್ಲದೆ ಸುದ್ದಿಗೋಷ್ಟಿ ಏಕೆ ನಡೆಸಿದಿರಿ..

ಇದು ಆಡಳಿತಾತ್ಮಕ ಉಲ್ಲಂಘನೆ ಅಲ್ಲವೇ.. ಜಿಲ್ಲಾಧಿಕಾರಿಗಳ ಮೇಲೆ ಮಾಡಿರುವ ಆರೋಪಗಳಿಗೆ ದಾಖಲೆ ತೋರಿಸಿ ಎಂದಿದ್ದಾರೆ.. ಹೌದು ನಿಯಮಗಳ ಪ್ರಕಾರ ಯಾವುದೇ ಐ ಎ ಎಸ್‌ ಅಧಿಕಾರಿಗೆ ತೊಂದರೆಯಾದಲ್ಲಿ ಅವರು ಮೊದಲು ಮುಖ್ಯ ಕಾರ್ಯದರ್ಶಿಗಳಿಗೆ ದೂರನ್ನು ಸಲ್ಲಿಸಬೇಕು.. ಮುಖ್ಯ ಕಾರ್ಯದರ್ಶಿಗಳು ವಿಚಾರಣ ಎನಡೆಸಿ ಸಮಸ್ಯೆ ಬಗೆಹರಿಸುವರು. ಅಕಸ್ಮಾತ್‌ ಅವರಿಂದ ನ್ಯಾಯ ಒದಗಿಸಲು ಸಾಧ್ಯವಾಗದ ಪಕ್ಷದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಬೇಕು. ಆದರೆ ಇದ್ದಕ್ಕಿದ್ದಂತೆ ಮುಖ್ಯ ಕಾರ್ಯದರ್ಶಿಗಳಿಗೆ ಯಾವುದೇ ವಿಚಾರ ತಿಳಿಸದೇ ನೇರವಾಗಿ ಮಾಧ್ಯಮದವದರ ಮುಂದೆ ಕೂತು ಜಿಲ್ಲಾಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದು ಇದೀಗ ಪೇಚಿಗೆ ಸಿಲುಕುವಂತೆ ಮಾಡಿದೆ..

ಇನ್ನು ಇತ್ತ ರೋಹಿಣಿ ಸಿಂಧೂರಿ ಅವರು ನನ್ನನ್ನು ಕೆಲ ವಾಟ್ಸಪ್ ಗ್ರೂಪ್ ಗಳಿಂದ ಹೊರಗೆ ಹಾಕಿದ್ದಾರೆ ಎಂದು ತೋರಿಸಿದ್ದಾರೆ.. ಅಷ್ಟೇ ಅಲ್ಲದೆ ಕೆಲ ಸಮಜಾಯಿಷಿ ನೀಡಿ ರೋಹಿಣಿ ಸಿಂಧೂರಿ ಅವರ ಬಗ್ಗೆ ದೂರಿದ್ದಾರೆ.. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯ ಕಾರ್ಯದರ್ಶಿಗಳು ನಿಮ್ಮ ಬಳಿ ದಾಖಲೆ ಇದ್ದರೆ ದಾಲ್ಹಲೆ ಸಮೇತ ಬಂದು ನನಗೆ ವಿವರಣೆ ನೀಡಿ ಎಂದಿದ್ದಾರೆ.. ಒಟ್ಟಿನಲ್ಲಿ ಒಬ್ಬ ಜಿಲ್ಲಾಧಿಕಾರಿಗಳ ಮೇಲೆ ದಾಖಲೆಗಳಿಲ್ಲದೆ ಸುಖಾಸುಮ್ಮನೆ ಸುದ್ಧಿಗೋಷ್ಟಿ ನಡೆಸಿ ಆಡಳಿತಾತ್ಮಕ ಉಲ್ಲಂಘನೆ ಮಾಡಿ ಇದೀಗ ಮುಖ್ಯ ಕಾರ್ಯದರ್ಶಿಗಳ ಮುಂದೆ ತಬ್ಬಿಬ್ಬಾಗುವಂತಾಗಿದೆ.. ಒಟ್ಟಿನಲ್ಲಿ ಮುಖ್ಯ ಕಾರ್ಯದರ್ಶಿ ಗಳ ಸೂಚನೆಯಂತೆ ದಾಖಲೆ ಸಮೇತ ಶಿಲ್ಪಾ ನಾಗ್ ಅವರು ವಿವರಣೆ ನೀಡುವರಾ ಅಥವಾ ಇದು ಸಹ ಚಾಮರಾಜ ನಗರದ ಆಕ್ಸಿಜನ್ ಪ್ರಕರಣದಂತೆ ಸುಮ್ಮನೆ ಜಿಲ್ಲಾಧಿಕಾರಿಗಳನ್ನು ಟಾರ್ಗೆಟ್ ಮಾಡಿದ್ದಾರಾ ಕಾದು ನೋಡಬೇಕಷ್ಟೇ..