ಮೈಸೂರು ಪ್ರಕರಣದ ಆರೋಪಿಯ ತಾಯಿ ಮರ್ಯಾದೆಗೆ ಅಂಜಿ ಮಾಡಿರುವ ಕೆಲಸ ನೋಡಿ.. ನಿಜಕ್ಕೂ ಮನಕಲಕುತ್ತದೆ..

0 views

ಮೈಸೂರಿನ ಪ್ರಕರಣ ಅನೇಕ ನೋವಿನ ವಿಚಾರಗಳ ನಡುವೆ ಸಾಕಷ್ಟು ಆತಂಕದ ನಡುವೆ ಸುಖಾಂತ್ಯವೇನೋ ಕಂಡಿತು.. ಬಹಳಷ್ಟು ಜನರಿಗೆ ಈ ಪ್ರಕರಣ ಒಂದು ಪಾಠವೂ ಆಯಿತು. ಆದರೆ ಈ ಘಟನೆಯಿಂದ ನಿಜಕ್ಕೂ ನೋವು ತಿಂದದ್ದು ಮಾತ್ರ ಬೇರೆಯವರು.. ಹೌದು ಮಾಡಿದ ತಪ್ಪಿಗೆ ಆ ಯುವಕರೇನೋ ಸಧ್ಯ ಪೊಲೀಸರ ವಶದಲ್ಲಿದ್ದು ಅವರಿಗೆ ಹೊಟ್ಟೆ ತುಂಬ ಊಟ ಇರಲು ಜಾಗ ಎಲ್ಲವೂ ದೊರಕಿದೆ.. ಆದರೆ ಇದರಿಂದ ನಿಜಕ್ಕೂ ನೋವುಂಡವರು ಮಾತ್ರ ಆ ಹೆಣ್ಣು ಮಗಳು ಮತ್ತು ಆರೋಪಿಗಳ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಒಳ್ಳೆಯ ಮಕ್ಕಳು ಎಂದು ಇಷ್ಟು ದಿನ ನಂಬಿ ಕೂತಿದ್ದ ಅವರನ್ನು ಹೆತ್ತವರು..

ಹೌದು ಇದರಲ್ಲಿ ವಿಧ್ಯಾಭ್ಯಾಸಕ್ಕಾಗಿ ರಾಜ್ಯ ಬಿಟ್ಟು ಮೈಸೂರಿಗೆ ಬಂದು ಜೀವನದಲ್ಲಿ ಊಹಿಸಲಾಗದ ತಿರುವು ಪಡೆದು ಜೀವನ ಪೂರ್ತಿ ಮರೆಯಲಾಗದ ನೋವು ಪಡೆದು ಇನ್ನೂ ಸಹ ಆ ಘಟನೆಯಿಂದ ಹೊರ ಬರಲಾಗದೇ ಕಣ್ಣೀರಿಡುತ್ತಿರುವ ಯುವತಿಯ ಕತೆ ಒಂದೆಡೆಯಾದರೆ.. ಅತ್ತ ಬಡವರಾದರೂ ನಮ್ಮ ಮಕ್ಕಳು ಒಳ್ಳೆಯವರು ನಮಗೆ ಕೊನೆಗಾಲದಲ್ಲಿ ನೆಮ್ಮದಿ ನೀಡುತ್ತಾರೆ.. ನಮ್ಮನ್ನು ಕೂರಿಸಿ ಒಂದು ತುತ್ತು ಅನ್ನ ಹಾಕುತ್ತಾರೆ ಎಂದು ನಂಬಿಕೊಂಡಿದ್ದ ಅವರುಗಳನ್ನು ಹೆತ್ತವರ ಕತೆ ನೋಡಿದರೆ ನಿಜಕ್ಕೂ ಮನಕಲಕುತ್ತದೆ.. ಹೌದು ಅವರುಗಳು ಕೇವಲ ಆ ಹೆಣ್ಣು ಮಗಳ ಜೀವನವನ್ನು ಮಾತ್ರವಲ್ಲ ಅವರ ಹೆತ್ತವರ ಜೀವನವನ್ನೂ ಸಹ ಸಂಪೂರ್ಣವಾಗಿ ಹಾಳು ಮಾಡಿಬಿಟ್ಟರು..

ಅದರಲ್ಲಿಯೂ ಈ ಫೋಟೋದಲ್ಲಿನ ವ್ಯಕ್ತಿಯ ತಾಯಿ ಕತೆ ಕೇಳಿದರೆ ನಿಜಕ್ಕೂ ಮನಕಲಕುತ್ತದೆ.. ಹೌದು ಕಷ್ಟ ಪಟ್ಟು ಸಾಕಿ ಸಲುಹಿದಳು.. ಕೆಲ ವರ್ಷಗಳ ಹಿಂದೆ ಗಂಡನನ್ನೂ ಸಹ ಕಳೆದುಕೊಂಡಳು.. ಆದರೂ ಕೂಲಿ ನಾಲಿ ಮಾಡಿ ಮಗನನ್ನು ಸಾಕಿ ಬೆಳೆಸಿದ್ದಕ್ಕೆ ಈಕೆಗೆ ಈ ಬಂದ ಗತಿ ಮಾತ್ರ ನಿಜಕ್ಕೂ ಯಾರಿಗೂ ಬಾರದಿರಲಿ ಎನಿಸುತ್ತದೆ.. ಹೌದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಘಟನೆಗೆ ಕಾರಣನಾಗಿ ಇದೀಗ ಪೊಲೀಸರಿಗೆ ಸಿಕ್ಕಿಬಿದ್ದವರಲ್ಲಿ ತಮಿಳುನಾಡಿನ ತಾಳವಾಡಿ ಸಮೀಪದ ಸುಸೈಪುರಂ ಗ್ರಾಮದ ಯುವಕನೂ ಸಹ ಒಬ್ಬ.. ಈತನಿಗೆ ತಂದೆ ಇಲ್ಲ.. ತಾಯಿ ಒಬ್ಬಳೇ.. ತನ್ನ ತವರು ಮನೆಯವರ ಜೊತೆ ಇದ್ದುಕೊಂಡೇ ಆ ತಾಯಿ ತನ್ನ ಮಗನನ್ನು ಸಾಕಿ ದೊಡ್ಡವನ್ನಾಗಿ ಮಾಡಿದಳು.. ಆತನಿಗೆ ಇಪ್ಪತ್ತೆಂಟು ವರ್ಷ.. ಆದರೂ ಸಹ ಆ ತಾಯಿ ಕೂಲಿ ಮಾಡುವುದ ಬಿಟ್ಟಿರಲಿಲ್ಲ.. ಆದರೆ ಆ ಮಗ ತನ್ನ ತಾಯಿಯ ಕಷ್ಟವನ್ನು ಅರ್ಥವೇ ಮಾಡಿಕೊಳ್ಳಲಿಲ್ಲ..

ಹೌದು ಈತ ಆಟೋ ಟ್ರ್ಯಾಕ್ಟರ್ ಓಡಿಸುತ್ತಿದ್ದನು.. ಆದರೆ ಕೆಲಸ ಇದ್ದರೆ ಹೋಗುತ್ತಿದ್ದ ಇಲ್ಲವಾದರೆ ಸುಮ್ಮನಾಗುತ್ತಿದ್ದ.. ಆದರೆ ಬಂದ ಹಣವನ್ನೆಲ್ಲಾ ಬೇರೆ ಬೇರೆ ಚಟುವಟಿಕೆಗಳಿಗೆ ಬಳಸಿ ಕಾಲಿ ಮಾಡುತ್ತಿದ್ದ.. ಈತನ ತಾಯಿಯೇ ಈತನಿಗೆ ಕೂಲಿ ಮಾಡಿ ಅನ್ನ ಹಾಕುತ್ತಿದ್ದಳು.. ಮರ್ಯಾದೆಗೆ ಬಹಳ ಅಂಜುತ್ತಿದ್ದ ಆ ತಾಯಿ ಮಗನಿಗೆ ಸಾಕಷ್ಟು ಬುದ್ಧಿಯನ್ನೂ ಸಹ ಹೇಳುತ್ತಿದ್ದಳು.. ಆದರೆ ಮಗ ತನ್ನ ಕೆಲಸವನ್ನು ಬಿಡುತ್ತಿರಲಿಲ್ಲ.. ತನಗೇನು ಬೇಕೋ ಅದನ್ನೇ ಮಾಡುತ್ತಿದ್ದ.. ಸಧ್ಯ ಅದೇನು ಪುಣ್ಯವೋ ಆತ ಮದುವೆಯಾಗಿರಲಿಲ್ಲ.. ಮದುವೆಯಾಗಿದ್ದರೆ ಈಗ ಆ ತಾಯಿಯ ಜೊತೆ ಮತ್ತೊಬ್ಬ ಹೆಣ್ಣಿನ ಜೀವನವೂ ಹಾಳಾಗುತ್ತಿತ್ತು..

ಇನ್ನು ನಿನ್ನೆ ಬೆಳ್ಳಂಬೆಳಿಗ್ಗೆ ಆತನನ್ನು ಪೊಲೀಸರು ಹಿಡಿದು ಕರೆತರುತ್ತಿದ್ದಂತೆ ಆತನ ತಾಯಿ ಮಾಡಿರುವ ಕೆಲಸ ನಿಜಕ್ಕೂ ಮನಕಲಕುತ್ತದೆ.. ಹೌದು ಬಡವರಾದರೇನು ಮರ್ಯಾದೆಯೇ ಮುಖ್ಯ ಎನ್ನುತ್ತಿದ್ದ ಆತನ ತಾಯಿ ಮಗ ಈ ರೀತಿ ಹೋದ ತಕ್ಷಣ ತಾನಿದ್ದ ಮನೆಯನ್ನೇ ಖಾಲಿ ಮಾಡಿಕೊಂಡು ತನ್ನ ಕುಟುಂಬದ ಜೊತೆ ಊರು ಬಿಟ್ಟು ಹೋಗಿದ್ದಾರೆ.. ಹೌದು ತಾಯಿಯನ್ನು ಅರ್ಥ ಮಾಡಿಕೊಂಡಿದ್ದರೆ ಆ ಮಗ ನಿಜಕ್ಕೂ ಎಂದೂ ಈ ದಾರಿ ಹಿಡಿಯುತ್ತಿರಲಿಲ್ಲ.. ಆದರೆ ಆತ ಮಾಡಿದ್ದೇ ಬೇರೆ.. ಆದರೆ ಇತ್ತ ನೋವಿನ ವಿಚಾರವೆಂದರೆ ಆ ತಾಯಿ ಹಾಗೂ ಕುಟುಂಬ ಎಲ್ಲಿ ಹೋಯಿತು ಏನಾಯಿತು ಎಂದು ಇದುವರೆಗೂ ಪತ್ತೆಯಾಗಿಲ್ಲ.. ಕೆಟ್ಟ ಮಗ ಹುಟ್ಟಿದ ಎಂದು ಗಟ್ಟಿ‌ ಮನಸ್ಸು ಮಾಡಿ ಆ ತಾಯಿ ಈತನಿಗೆ ಎಳ್ಳು ನೀರು ಬಿಟ್ಟು ಎಲ್ಲೋ ಒಂದು ಕಡೆ ಬದುಕಿರಲಿ.. ಆದರೆ ಎಂದೂ ಸಹ ಇಂತಹ ಮಗನಿಗಾಗಿ ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳದಿರಲಿ..