ಕೆಲ ದಿನಗಳ ಹಿಂದೆ ಮೈಸೂರಿನ 73 ವರ್ಷದ ಮಹಿಳೆ ವರ ಬೇಕಾಗಿದೆ ಎಂದು ಜಾಹಿರಾತು ಕೊಟ್ಟಿದ್ದರು.. ಅವರು ಯಾರು ಗೊತ್ತಾ? ಈಗ ಏನಾಗಿದ್ದಾರೆ ನೋಡಿ‌‌‌‌..

0 views

ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ವಿಚಾರಗಳು ಸರ್ ಎಂದು ವೈರಲ್ ಆಗಿ ಬಿಡುತ್ತವೆ.ಮ್ ಕೆಲವು ವಿಚಾರಗಳು ಜನರಿಗೆ ಉಪಯೋಗವಾದರೆ.. ಕೆಲವೊಂದು ಉಒಅಯೋಗವಿಲ್ಲದ್ದು.. ಮತ್ತಷ್ಟು ಟ್ರೋಲ್ ಗಳು ಸಹ ವೈರಲ್ ಆಗುತ್ತವೆ.. ಅದೇ ರೀತಿ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪತ್ರಿಕೆಯ ಜಾಹಿರಾತೊಂದು ವೈರಲ್ ಆಗಿತ್ತು.. “ಸರ್ಕಾರಿ ನಿವೃತ್ತಿಯಾದ ಲಕ್ಷಣವಾದ ಬ್ರಾಹ್ಮಣ ಸ್ತ್ರೀಗೆ ಮದುವೆಯಾಗಲು 73 ವರ್ಷ ಮೇಲ್ಪಟ್ಟ ಆರೋಗ್ಯವಂತ ಬ್ರಾಹ್ಮಣ ವರ ಬೇಕಾಗಿದ್ದಾರೆ” ಎಂಬ ಜಾಹೀರಾತನ್ನು ನೀಡಲಾಗಿತ್ತು.. ಇದು ಮದುವೆಯಾಗುವ ವಯಸ್ಸಾ ಎಂದು ಬಹಳಷ್ಟು ಟ್ರೋಲ್ ಆಗಿತ್ತು.. ಕೆಲವರು ಸುಮ್ಮನೆ ಪರೀಕ್ಷೆ ಮಾಡುವ ಸಲುವಾಗಿ ಫೋನ್ ಮಾಡಿದ್ದೂ ಉಂಟು.. ಆದರೆ ಇದರ ಹಿಂದೆ ಬೇರೆಯದ್ದೇ ಕತೆಯಿದೆ..

ಹೌದು ಆಕೆ ಮೈಸೂರಿನವರು.. ವಯಸ್ಸು 73.. ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದ ಜೀವ.. ಈ ಸಮಯದಲ್ಲಿ ಅವರಿಗೆ ಏನನಿಸಿತೋ.. ಇನ್ನುಳಿದಷ್ಟು ದಿನ ಜೊತೆಯಲ್ಲಿ ಇರಲು ಒಂದು ಜೀವ ಬೇಕೆನಿಸಿತು.. ಇರುವಷ್ಟು ದಿನ ಜೊತೆಯಾಗಿ ಹೆಜ್ಜೆ ಹಾಕುವ.. ಅರ್ಥ ಮಾಡಿಕೊಳ್ಳುವವರು ಒಬ್ಬರು ಬೇಕೆನಿಸಿತು.. ಅದೇ ಕಾರಣಕ್ಕಾಗಿ ವರನ ಹುಡುಕಾಟ ಆರಂಭಿಸಿದರು..

ಆಕೆ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದವರು.. ಸರ್ಕಾರಿ ನೌಕರಿಯಲ್ಲಿಯೂ ಇದ್ದರು‌‌.. ಹದಿಮೂರು ವರ್ಷದ ಹಿಂದೆ ನಿವೃತ್ತಿಯೂ ಆದರು‌‌.. ಅಲ್ಲಿಯವರೆಗೆ ಶಾಲೆ ಮಕ್ಕಳು ಅಂತ ಸಮಯ ಕಳೆಯುತ್ತಿದ್ದ ಅವರು ಕಳೆದ ಹದಿಮೂರು ವರ್ಷಗಳಿಂದ ಒಬ್ಬಂಟಿಯಾಗಿ ಜೀವನ ಸಾಗಿಸಿದರು.. ಇವರಿಗೆ ಮದುವೆ ಆಗಿಲ್ಲ ಎಂದಲ್ಲ.. ಇವರೂ ಸಹ ಎಲ್ಲರಂತೆಯೇ ಮದುವೆಯಾಗಿದ್ದರು.. ಸುಂದರ ಬದುಕಿನ ಕನಸು ಕಟ್ಟಿಕೊಂಡಿದ್ದರು.. ಮನೆ ಗಂಡ ಮಕ್ಕಳು ಹೀಗೆ ಮುಂದಿನ ಭವಿಷ್ಯದ ಬಗ್ಗೆ ಸಾವಿರಾರು ಕನಸು ಕಟ್ಟಿದ್ದರು.. ಆದರೆ ವಿಧಿಯ ನಿರ್ಣಯವೇ ಬೇರೆ ಇತ್ತು.. ಇವರು ಮದುವೆಯಾಗಿದ್ದ ವ್ಯಕ್ತಿಗೆ ಅದಾಗಲೇ ಬೇರೆ ಮದುವೆಯಾಗಿತ್ತು.. ವಿಚಾರ ತಿಳಿದು ಮನನೊಂದ ಇವರು ಗಂಡನಿಂದ ದೂರಾದರು..

ನಂತರ ಮದುವೆಯ ಚಿಂತೆ ಮಾಡದೇ ಶಿಕ್ಷಕಿಯ ವೃತ್ತಿಯನ್ನು ಮುಂದುವರೆಸುತ್ತಾ ಒಬ್ಬಂಟಿಯಾಗಿಯೇ ಜೀವನ ದೂಡಿದರು.. ಆದರೆ ಅದ್ಯಾಕೋ ಇಷ್ಟು ವರ್ಷಗಳ ಬಳಿಕ ಒಬ್ಬಂಟಿತನ ಕಾಡತೊಡಗಿತು ಎನಿಸುತ್ತದೆ.. ಜೊತೆಗೆ ನಮ್ಮವರು ಯಾರಾದರು ಬೇಕು ಎನಿಸಿತು ಎಂದೆನಿಸುತ್ತದೆ. ಅದೇ ಕಾರಣಕ್ಕಾಗಿ ಮದುವೆಯಾಗಲು ಮೈಸೂರಿನ ಸ್ಥಳೀಯ ಪತ್ರಿಕೆಯಲ್ಲಿ ಜಾಹಿರಾತು ನೀಡಿದರು.. ಆದರೆ ದುರಾದೃಷ್ಟವಶಾತ್ ಆ ಜಾಹಿರಾತು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿ ಹೋಯ್ತು..

ಆದರೆ ಇದೆಲ್ಲದರಿಂದಾಚೆಗೆ ಸಿಹಿ ಸುದ್ದಿಯೂ ಒಂದಿದೆ.. ಹೌದು 73 ವರ್ಷದ ಆ ನಿವೃತ್ತ ಶಿಕ್ಷಕಿಗೆ ತಾವು ಬಯಸಿದಂತೆ ವರ ಸಿಕ್ಕಿದ್ದಾರೆ.. ಇನ್ನು ಕೆಲ ದಿನಗಳಲ್ಲಿ ಸರಳವಾಗಿ ಮದುವೆಯಾಗಿ ಮುಂಬರುವ ದಿನಗಳಲ್ಲಿ ಜೊತೆಯಾಗಿ ಜೀವನ ಸಾಗಿಸಲಿದ್ದಾರೆ.. ಜೀವನದಲ್ಲಿ ಏಕಾಂಗಿಯಾಗಿ ಯವ್ವೌನದಲ್ಲಿ ಜೀವನ ಸಾಗಿಸಬಹುದು.. ಆದರೆ ಮುಪ್ಪಿನಲ್ಲಿ ನಮ್ಮವರು ಯಾರಾದರು ಬೇಕು ಎನಿಸುವುದಂತೂ ಸತ್ಯ.. ಆ ಹಿರಿಯ ಜೀವಕ್ಕೆ ಈಗ ಸಿಕ್ಕಿರುವ ಮತ್ತೊಂದು ಕುಟುಂಬ ಆಸರೆಯಾಗಲಿ.. ಮುಂಬರುವ ದಿನಗಳನ್ನು ನೆಮ್ಮದಿಯಾಗಿ ಕಳೆಯುವಂತಾಗಲಿ..