ನಾನು ಕೂಡ ಮೈಸೂರಿನವಳೇ.. ಆದರೆ.. ಒಂದು ನಿಮಿಷ ಸಮಯವಿದ್ದರೆ ಮನಕಲಕುವ ಸ್ಟೋರಿ ನೋಡಿ..

0 views

ಮೈಸೂರು ನಮ್ಮೂರು ಎನ್ನಲು ಬಹಳ ಹೆಮ್ಮೆ ನನಗೆ.. ಏನೋ ಒಂದು ರೀತಿ ರೋಮಾಂಚನ.. ಅದರಲ್ಲೂ ದಸರಾ ಸಮಯ ಬಂದರೆ ಮೈಸೂರಿನ ರಸ್ತೆಗಳಲ್ಲಿ ಓಡಾಡಲು ಮೈ ಜುಮ್ಮೆನ್ನುತ್ತವೆ.. ಬೀದಿ ಬೀದಿಗಳಲ್ಲಿ ದೀಪಾಲಂಕಾರವನ್ನು ನೋಡಲು ಸಂಜೆಯ ಮೇಲೆ ಗಾಡಿಗಳಲ್ಲಿ ಹೋಗುವುದು ಅಭ್ಯಾಸವಾಗಿತ್ತು.. ಆದರೆ ಈ ವರ್ಷ ಇದೆಲ್ಲಾ ಬೇಕಿತ್ತಾ ಎಂದು ಮನಸ್ಸು ತಳಮಳ ಗೊಂಡಿದೆ..

ಹೌದು ನಾನು ಈ ರೀತಿ ಹೇಳುವುದರಿಂದ ಕೆಲವರಿಗೆ ಬೇಸರವಾಗಬಹುದು.. ಆದರೆ ದಯವಿಟ್ಟು ಪೂರ್ತಿ ಓದಿ.. ಹೌದು ಮೈಸೂರಿನಲ್ಲಿ ಈ ಬಾರಿ ಅದ್ಧೂರಿ ಆಚರಣೆ ಇಲ್ಲದಿದ್ದರೂ ಸಹ ಕೋಟಿ‌ ಕೋಟಿ ಹಣವನ್ನು ಈ ಸರಳ ದಸರಾಗೆಂದು ಮೀಸಲಿಟ್ಟಿದ್ದಾರೆ.. ಮೈಸೂರಿನ ರಸ್ತೆಗಳು ಪ್ರತಿ ವರ್ಷದ ದಸರಾದಂತೆ ದೀಪಾಲಂಕಾರದಿಂದ ಜಗಮಗಿಸುತ್ತಿದೆ..

ಆದರೆ ಒಮ್ಮೆ ಆಲೋಚಿಸಿ ಹತ್ತು ಕೋಟಿ ಹಣವನ್ನು ಮೈಸೂರಿನ ದಸರಾ ಹಣವೆಂದು ಪ್ರತ್ಯೇಕವಾಗಿ ಎತ್ತಿಟ್ಟು ಅದನ್ನು ಯಾವುದಾದರು ಅರ್ಥಪೂರ್ಣವಾದ ಕಾರ್ಯಕ್ಕೆ ಬಳಸಿಕೊಳ್ಳಬಹುದಿತ್ತು.. ಬಹುಮುಖ್ಯವಾಗಿ ಈಗ ಎದುರಾಗಿರುವ ಉತ್ತರ ಕರ್ನಾಟಕದ ಜನರಿಗೆ ಆ ಹಣ ನೆರವಾಗಬಹುದಾಗಿತ್ತು‌‌.. ನಮ್ಮ ಹೆಮ್ಮೆಯ ರಾಜ ಮನೆತನದಲ್ಲಿ ಸಂಪ್ರದಾಯಬದ್ಧವಾಗಿ ಎಂದಿನಂತೆ ದಸರಾ ಆಚರಣೆ ಇದ್ದೇ ಇರುತ್ತಿತ್ತು.. ದೇವಸ್ಥಾನಗಳಲ್ಲಿ ಅಗತ್ಯವಾಗಿ ಎಲ್ಲಾ ಸಂಪ್ರದಾಯಗಳ ‌ಪಾಲನೆ ಮಾಡಿ ಪೂಜೆಗಳನ್ನು ನೆರವೇರಿಸಬೇಕಿತ್ತು.. ಆದರೆ ಈ ವರ್ಷ ಸರ್ಕಾರ ಬೇರೆ ಅಲಂಕಾರಗಳಿಗೆ ಹಣ ಖರ್ಚು ಮಾಡುವುದು ಬೇಡವಾಗಿತ್ತು.. ಈ ರೀತಿ ಹೇಳಲು ಬೇರೆ ಕಾರಣವೂ ಇದೆ..

ಮೈಸೂರು ಎಂದರೆ ಮೈಸೂರಿಗರ ನರ ನಾಡಿಗಳಲ್ಲಿ ಪ್ರೀತಿ ಅಭಿಮಾನವಿದೆ.. ಅದು ಎಲ್ಲಾ ಜಿಲ್ಲೆಯವರಿಗೂ ಇದ್ದೇ ಇರುತ್ತದೆ.. ಅದೇ ರೀತಿ ನಮಗೂ ಇದೆ.. ಇದರಲ್ಲೇನು ವಿಶೇಷ ಎಂದುಕೊಳ್ಳಬೇಡಿ.. ಆದರೆ ನಮ್ಮಲ್ಲೇ ಒಬ್ಬರಿಗೆ ಕೊರೊನ ಬಂದು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಸುತ್ತಲೂ ಜಗಮಗಿಸುವ ದೀಪಾಲಂಕಾರವಿದ್ದರೆ ಮನಸ್ಸು ಕುಗ್ಗಿ ಹೋಗುತ್ತದೆ.. ಇದನ್ನು ಬರಿ ಬಾಯಿ‌ ಮಾತಿನಲ್ಲಿ ಹೇಳುತ್ತಿಲ್ಲ ಒಮ್ಮೆ ಆ ಸಂದರ್ಭವನ್ನು ಊಹಿಸಿಕೊಂಡು ನೋಡಿ ನಿಮಗೇ ಅರ್ಥವಾಗುತ್ತದೆ.. ತಿರುಗಿ ಮನೆಗೆ ಬರುತ್ತೇವೆಯೋ ಇಲ್ಲವೋ..

ಈ ರೀತಿ ದಿನಕ್ಕೆ ನೂರಾರು ಜನ ಆಸ್ಪತ್ರೆಗೆ ಸೇರುವ ಸಮಯದಲ್ಲಿ ನಮ್ಮೂರಿನವರೇ ಬೀದಿಗಳ ಶೃಂಗಾರ ಮಾಡಿ ಆನಂದಿಸುತ್ತಿದ್ದಾರೆ ಎಂದಾಗ ನಮ್ಮವರು ಯಾರೂ ಇಲ್ಲವಾ ಎನಿಸುವುದಂತೂ ಸತ್ಯ‌‌.. ಅದರಲ್ಲೂ ದುರಾದೃಷ್ಟವಶಾತ್ ಪ್ರಾಣ ಹೋಗಿ ಅದೇ ಆಂಬುಲೆನ್ಸ್ ನಲ್ಲಿ ಶರೀರವನ್ನು ಮಣ್ಣು ಮಾಡಲು ತೆಗೆದುಕೊಂಡು ಹೋಗುತ್ತಿದ್ದರೆ ಸುತ್ತಲಿನ ದೀಪಗಳು ಏನು ಅರ್ಥ ನೀಡುತ್ತವೆ? ಸಾವಿನ ಮೆರವಣಿಗೆಗೆ ಶೃಂಗಾರಗೊಂಡಂತೆ ಕಾಣುತ್ತದೆ.. ಆದರೆ ನಮ್ಮ ರಾಜಮನೆತನದವರು ಜನರ ಕಷ್ಟ ಎಂದರೆ ತಮ್ಮ ಕಷ್ಟವೆಂದು ಕಂಡವರು.. ಜನರ ಏಳಿಗೆಗಾಗಿ ಕನ್ನಂಬಾಡಿ ಕಟ್ಟೆ ಕಟ್ಟಲು ಮಹಾರಾಣಿಯರು ನಿಸ್ವಾರ್ಥದಿಂದ ತಮ್ಮ ಒಡವೆಗಳನ್ನೇ ಮಾರಿದ ಪುಣ್ಯಾತ್ಮರು..

ಆದರೆ ನಾಡು ಇಂತಹ ಕಷ್ಟದಲ್ಲಿರುವಾಗ ಸರ್ಕಾರ ಹತ್ತು ಕೋಟಿ ಕೊಟ್ಟು ಮೈಸೂರಿಗರ ಸಾವಿನ ಮೆರವಣಿಗೆಗೆ ದೀಪಾಲಂಕಾರ ಮಾಡುವ ಅಗತ್ಯವಿತ್ತಾ ಎಂದು ಮನದಾಳದಲ್ಲಿ ಎಲ್ಲೋ ಒಂದು ಕಡೆ ಅನಿಸಿದ್ದಂತೂ ಸತ್ಯ.. ಅದೇ ಹಣವನ್ನು ಪ್ರತ್ಯೇಕವಾಗಿ ಇಟ್ಟು ಕೊರೊನಾದಿಂದ ಜೀವ ಕಳೆದುಕೊಂಡವರ ನೆರವಿಗೆ ಅಥವಾ ಅತಿ ಮುಖ್ಯವಾಗಿ ಇಂದು ಉತ್ತರ ಕರ್ನಾಟಕಕ್ಕೆ ನೀಡಿದ್ದರೆ ನೂರಾರು ಕುಟುಂಬಗಳ ನೆರವಿಗೆ ಆಗುತಿತ್ತು.. ಅಲ್ಲಿ ಉತ್ತರ ಕರ್ನಾಟಕದಲ್ಲಿ ನಮ್ಮದೇ ಅಣ್ಣ ತಮ್ಮಂದಿರು.. ಮಹಿಳೆಯರು.. ಬಸುರಿ ಬಾಣಂತಿಯರು.. ವೃದ್ಧರು.. ನೀರಿನಲ್ಲಿ ದಿನಕಳೆಯುತ್ತಿದ್ದರೆ ಇತ್ತ ನಾವು ದೀಪಾಲಂಕಾರದ ರಸ್ತೆಯಲ್ಲಿ ಓಡಾಡಿದರೆ ಏನು ಅರ್ಥ? ನನ್ನ ಮಾತು ಕೆಲವರಿಗೆ ನೋವಾದರೆ ಕ್ಷಮೆ ಇರಲಿ..

ನಮ್ಮ ಕಡೆ ಒಂದು ಸಂಪ್ರದಾಯವಿದೆ.. ಊರಿನ ಕೇರಿಗಳಲ್ಲಿ ಯಾರದ್ದಾದರು ಮನೆಯಲ್ಲಿ ವ್ಯಕ್ತಿ ಕಳೆದುಕೊಂಡ ನೋವಿದ್ದರೆ ಆ ಬೀದಿಯವರು ಮನೆ ಮುಂದೆ ಗುಡಿಸಿ ನೀರಾಕಿ ರಂಗೋಲಿ ಬಿಡುತ್ತಿರಲಿಲ್ಲ.. ಆಗೆ ಮಾಡಿದರೆ ಅನು ಮಾನವೀಯತೆ ಇಲ್ಲದಂತಾಗುತ್ತದೆ ಎಂಬ ಕಾರಣಕ್ಕೆ.. ಆದರೆ ನಮ್ಮದೇ ನಾಡಿನ ಬೇರೆ ಜಿಲ್ಲೆಗಳಲ್ಲಿ ಕಷ್ಟ ಪಡುತ್ತಿರುವಾಗ ನಾವು….. ಇರಲಿ ಬಿಡಿ.. ಮುಗಿದು ಹೋಗಿದೆ.. ಆದರೆ ನಮ್ಮ ಅಣ್ಣ ತಮ್ಮಂದಿರಿಗೆ ನಾವಾಗದೆ ಮತ್ಯಾರು ಆಗುವರು? ಅಂದು ಕೊಡಗಿನಲ್ಲಿ ಪ್ರವಾಹವಾದ ಸಮಯದಲ್ಲಿ ನಾವುಗಳು ನಿಂತ ರೀತಿಯಲ್ಲಿಯೇ ನಮ್ಮ ಉತ್ತರ ಕರ್ನಾಟಕದ ಅಣ್ಣ ತಮ್ಮಂದಿರ ಕಷ್ಟಕ್ಕೆ ನೆರವಾಗಬೇಕು.. ಸರ್ಕಾರವನ್ನೇ ನಂಬಿಕೊಂಡು ಕೂರೋದು ಸಾಧ್ಯವಿಲ್ಲ.. ದಯಮಾಡಿ ಸ್ಟಾರ್ ಗಳು.. ಸೆಲಿಬ್ರೆಟಿಗಳು.. ಉಳ್ಳವರು.. ಸಂಘ ಸಂಸ್ಥೆಗಳು ಮುಂದೆಜ್ಜೆ ಇಡಿ.. ಜನಸಾಮಾನ್ಯರು ಖಂಡಿತ ನಿಮಗೆ ಕೈ ಜೋಡಿಸುವರು..