ಮೈಸೂರು ಯುವತಿ ಪ್ರಕರಣಕ್ಕೆ ಕಾರಣರಾದ ಐವರಲ್ಲಿ ಕೊನೆಯವನನ್ನು ನೋಡಿ ಶಾಕ್‌ ಆದ ಪೊಲೀಸರು ಕತ್ತಿನ ಪಟ್ಟಿ ಹಿಡಿದು ಕರೆತಂದರು.. ಅವನು ನಿಜಕ್ಕೂ ಯಾರು ಗೊತ್ತಾ?

0 views

ಮೈಸೂರು ಪ್ರಕರಣಗಳೇನೋ ಸುಖಾಂತ್ಯ ಕಂಡಿತು.. ಅತ್ತ ಒಂದು ಹೆಣ್ಣು ಮಗಳು ವಿಧ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದು ತನ್ನ ಜೀವನದಲ್ಲಿ ಊಹಿಸಿರದ ಘಟನೆ ನಡೆದು ಇನ್ನೂ ಸಹ ಅದರಿಂದ ಹೊರ ಬರಲು ಸಾಧ್ಯವಾಗದ ನೋವಿನ ನಡುವೆ.. ಇತ್ತ ಆಭರಣ ಅಂಗಡಿಯ ಘಟನೆಯಲ್ಲಿ‌ ಒಂದು ಅಮಾಯಕ ಯುವಕ ತನ್ನ ಜೀವವನ್ನೇ ಕಳೆದುಕೊಂಡ ಆ ಕುಟುಂಬದ ನೋವಿನ ನಡುವೆಯೂ ಕೊಂಚ ಸಮಾಧಾನದ ವಿಚಾರ ಎಂದರೆ ಅದು ಎರಡೂ ಘಟನೆಗೆ ಕಾರಣರಾದವರನ್ನು ಪೊಲೀಸರು ಮೂರೇ ದಿನದಲ್ಲಿ ಬೇರೆ ರಾಜ್ಯಗಳಲ್ಲಿ ಅಡಗಿ ಕೂತಿದ್ದರೂ ಸಹ ಹೆಡೆಮುರಿ ಕಟ್ಟಿ ಹಿಡಿದು ತಂದಿರುವುದು ರಾಜ್ಯದ ಜನರು ನಿಟ್ಟುಸಿರು ಬಿಡುವಂತಾಗಿದೆ.. ಹೌದು ಮೈಸೂರು ಪೊಲೀಸರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು.. ಅದರಲ್ಲೂ ಯಾವುದೇ ಸುಳಿವಿಲ್ಲದ ಪ್ರಕರಣವೊಂದನ್ನು ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿದಕ್ಕೆ ಇದೀಗ ರಾಜ್ಯದ ಜನತೆ ಅಭಿನಂದನೆ ಸಲ್ಲಿಸುತ್ತಿದ್ದಾರೆ..

ಆದರೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಘಟನೆ ಕಾರಣರಾದವರನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.. ಅದರಲ್ಲೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಐದನೆಯವನನ್ನು ನೋಡಿ ಅಕ್ಷರಶಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.. ಹೌದು ಇವರೆಲ್ಲಾ ನಿಜಕ್ಕೂ ಯಾರು ಎಲ್ಲಿಂದ ಬಂದವರು ಹೇಗೆ ಪೊಲೀಸರಿಗೆ ಸಿಕ್ಕಿಕೊಂಡರು ಎಂಬುದೇ ರೋಚಕ.. ಹೌದು ಈ ಘಟನೆಗೆ ಒಟ್ಟು ಆರು ಮಂದಿ ಕಾರಣರಾಗಿದ್ದಾರೆ.. ಅದರಲ್ಲಿ ಐದು ಮಂದಿಯನ್ನು ಅದಾಗಲೇ ಪೊಲೀಸರು ಹಿಡಿದು ಹಾಕಿದ್ದು ಮತ್ತೊಬ್ಬನನ್ನು ಸಧ್ಯದಲ್ಲಿಯೇ ಹಿಡಿಯುವುದಾಗಿಯೂ ಡಿಜಿ ಐಜಿಪಿ ಪ್ರವೀಣ್ ಸೂದ್ ಅವರು ತಿಳಿಸಿದ್ದಾರೆ.. ಇವರುಗಳು ಹೇಳಿಕೊಲ್ಳಲು ಆರೆ ಕೆಲಸ, ವೈರಿಂಗ್‌ ಕೆಲಸ, ತರಕಾರಿ ಮಾರುವುದು ಈ ಕೆಲಸಗಳನ್ನು ಮಾಡುತ್ತಿರುವುದಾಗಿ ಹೇಳುತ್ತಾರೆ.

ಆದರೆ ಇವರು ನಿಜವಾಗಿ ಮಾಡುವ ಕೆಲಸವೇ ಬೇರೆ.. ಹೌದು ಇವರು ದಿನವೂ ತಮಿಳುನಾಡಿನಿಂದ ಬರುವ ಲಾರಿಗಳ್ಲಲ್ಲಿ ಮೈಸೂರಿಗೆ ಆಗಮಿಸಿ ನಿರಜನ ಪರದೇಶಗಳಲ್ಲಿ ಜನರಿಂದ ಹನ ಪಡೆದು ಅದೇ ಹಣದಲ್ಲಿ ಪಾರ್ಟಿ ಮಾಡುವದೇ ಇವರ ಕಾಯಕ.. ಆದರೆ ಇವರೆಲ್ಲಾ ಹೇಗೆ ಈ ಪ್ರಕರಣದಲ್ಲಿ ಭಾಗಿಯಾದರು ಎಂಬ ಸ್ಟೋರಿ ನಿಜಕ್ಕೂ ಆ ಹುಡುಗಿಯ ಹಣೆಬರಹ ಅದೇನಾಗಿತ್ತು ಎನಿಸುತ್ತದೆ.. ಹೌದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಆರ್ ಎಂ ಸಿ ತರಕಾರಿ ಮಾರುಕಟ್ಟೆ ಇದೆ.. ಅಲ್ಲಿಗೆ ಬೇರೆ ರಾಜ್ಯಗಳಿಂದ ತರಕಾರಿ ತೆಗೆದುಕೊಂಡು ಹೋಗಲು ಲಾರಿಗಳು ಬರುತ್ತವೆ.. ಹೆಚ್ಚು ತಮಿಳುನಾಡು ಹಾಗೂ ಕೇರಳದ ಗಾಡಿಗಳು ಬರುವವು.. ಇನ್ನು ಈ ಘಟನೆಗೆ ಕಾರಣರಾದವರು ತಮಿಳು ನಾಡಿನ ತಿರುಪುರ್ ನವರು.. ಇವರು ಘಟನೆ ನಡೆದ ಆಗಸ್ಟ್ ಇಪ್ಪತ್ತ ನಾಲ್ಕಕ್ಕಿಂತ ಮೊದಲ ಮೂರು ದಿನಗಳು ಸಹ ಸತತವಾಗಿ ಮೈಸೂರಿಗೆ ಬಂದು ತರಕಾರಿ ಲೋಡ್ ಮಾಡಿಕೊಂಡು ಹೋಗುತ್ತಿದ್ದರು..

ಪ್ರತಿದಿನವೂ ಸಹ ಆ ಜಾಗಕ್ಕೆ ಹೋಗಿ ಪಾರ್ಟಿ ಮಾಡುತ್ತಿದ್ದರು.. ಆ ಜಾಗಕ್ಕೆ ಯುವತಿ ಹಾಗೂ ಗೆಳೆಯ ವಾಕ್ ಗೆ ಬರುತ್ತಿರುವುದನ್ನು ಗಮನಿಸಿದ್ದಾರೆ.. ಹೀಗೆ ಗಮನಿಸಿ ಮೂರನೇ ದಿನ ಯುವಕ ಹಾಗೂ ಯುವತಿ ಕುಳಿತಿರುವುದನ್ನು ಗಮನಿಸಿ ವೀಡಿಯೋ ಮಾಡಿಕೊಂಡು ಮೂರು ಲಕ್ಷ ನೀಡುವಂತೆ ತಿಳಿಸಿದ್ದಾರೆ.. ಮೊದಲಿಗೆ ಅವರಿಗೆ ಹಣ ಪಡೆಯುವ ಉದ್ದೇಶವಷ್ಟೇ ಇದ್ದು ನಂತರ ಮೂರು ಲಕ್ಷ ಹಣ ಸಿಗದಿದ್ದಾಗ ಅವರಿಗೆ ಸಿಕ್ಕದ್ದು ಮುನ್ನೂರು ರೂಪಾಯಿ ಮಾತ್ರ.. ಆಗ ಕೋಪಗೊಂಡ ಆ ಆರು ಮಂದಿ ಕೊನೆಗೆ ಇಂತಹ ಕೆಲಸ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.. ಆದರೆ ಅವರು ಪಾರ್ಟಿ ಮಾಡಲು ಬಳಸಿದ್ದ ಬಾಟಲಿಗಳು ಹಾಗೂ ಅವರ ಜೇಬಿನಿಂದ ಬಿದ್ದಿದ್ದ ತಮಿಳುನಾಡಿನ ಅಲ್ಲಿನ ಸ್ಥಳೀಯ ಬಸ್ ಟಿಕೆಟ್ ಒಂದರ ಸುಳಿವಿನಿಂದ ಇವರನ್ನು ಪೊಲೀಸರು ಪತ್ತೆ ಹಚ್ವಿದ್ದು ನಿಜಕ್ಕೂ ಗ್ರೇಟ್ ಎನ್ನಬಹುದು..

ಅಷ್ಟೇ ಅಲ್ಲದೇ ಇಲ್ಲಿ ಯುವತಿ ಹಾಗೂ ಸ್ನೇಹಿತನಿಂದ ಪಡೆದಿದ್ದ ಮೊಬೈಲ್ ಅನ್ನು ತಮಿಳು ನಾಡಿಗೆ ಹೋಗಿ ಅಲ್ಲಿ ಬಳಸುತ್ತಿದ್ದರಂತೆ.. ಆ ಆರು ಜನರ ಹೆಸರು ಭೂಪತಿ, ಮುರುಗೇಶ್, ಅರವಿಂದ್, ಜೋಸೆಫ್.. ಇನ್ನೂ ಹೇಳಬೇಕೆಂದರೆ ಆ ಆರು ಜನರಲ್ಲಿ ಒಬ್ಬನ ವಯಸ್ಸು ಇನ್ನೂ ಸಹ ಹದಿನಾರು.. ಹೌದು ಶಾಲೆಗೆ ಹೋಗಬೇಕಾದ ಸಮಯದಲ್ಲಿ ಆತ ಮಾಡಿರುವ ಕೆಲಸ ಬೆಚ್ಚಿಬೀಳಿಸಿದೆ.. ಹೌದು ಸಣ್ಣ ವಯಸ್ಸಿಬಲ್ಲಿಯೇ ಇಂತಹ ಕೆಲಸದಲ್ಲಿ ಭಾಗಿಯಾದವ ಮುಂದೆ ಇನ್ನೆಂತ ಕೆಲಸ ಮಾಡಲು ಸಹ ಹೇಸುವವನಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.. ಅಷ್ಟೇ ಅಲ್ಲದೇ ಇಂತಹವರು ಯಾವುದೇ ಕಾರಣಕ್ಕೂ‌ ಮತ್ತೆಂದೂ ಹೊರ ಬರಬಾರದು.. ಇಂತಹ ಕೆಲಸ ಮಾಡುವವರಿಗೆ ಇದೊಂದು ದೊಡ್ಡ ಎಚ್ಚರಿಕೆಯಾಗಿರಬೇಕು ಎಂಬುದೇ ಜನರ ಅಭಿಪ್ರಾಯ.. ಆದರೆ ಆ ಹುಡುಗಿಯ ಜೀವನ.. ಉತ್ತರಿಸಲಾಗದ ಪ್ರಶ್ನೆಯಷ್ಟೇ..