ಇದ್ದಕಿದ್ದ ಹಾಗೆ ನಾಗಿಣಿ ಧಾರಾವಾಹಿ ಮುಕ್ತಾಯ.. ಕಾರಣವೇನು ಗೊತ್ತಾ

0 views

ಜೀ ಕನ್ನಡದ ಜನಪ್ರಿಯ ಧಾರವಾಹಿಗಳಲ್ಲಿ ಒಂದು ನಾಗಿಣಿ 2 ಧಾರವಾಹಿ. ನಾಗಿಣಿ ಮೊದಲ ಬಾಗ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಆ ಧಾರವಾಹಿ ಮಟ್ಟಕ್ಕೆ ನಾಗಿಣಿ 2 ತಲಪುತ್ತಡೆಯಾ ಎನ್ನುವ ಅನುಮಾನ ಎಲ್ಲರಿಗೂ ಸಹ ಕಾಡಿತ್ತು. ಆದರೆ ನಾಗಿಣಿ 2 ಧಾರವಾಹಿ ಸಹ ತನ್ನ ಅದ್ಭುತ ಕಥೆಯ ಮೂಲಕ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ನಾಗಿಣಿ 2 ಧಾರವಾಹಿಯ ನೀನಾದ್ ಹಾಗೂ ನಮ್ರತಾ ಗೌಡ ನಟಿಸುತ್ತಿದ್ದು, ಈ ಜೋಡಿಯ ಕೆಮಿಸ್ಟ್ರಿ ವೀಕ್ಷಕರಿಗೆ ತುಂಬಾ ಇಷ್ಟವಾಗುತ್ತಿದೆ. ಇದೀಗ ಹೊಸ ರೋಚಕ ತಿರುವುಗಳಿಂದ ಸಾಗುತ್ತಿರುವ ನಾಗಿಣಿ 2 ಧಾರವಾಹಿ ಇನ್ನು 2 ತಿಂಗಳಲ್ಲಿ ಮುಗಿದು ಹೋಗುತ್ತದೆ. ನಾಗಿಣಿ 2 ಧಾರವಾಹಿ ಇನ್ನು ಪ್ರಸಾರ ವಾಗುವುದಿಲ್ಲವ? ನಾಗಿಣಿ 2 ಮುಗಿಯಲು ಕಾರಣ ಏನು ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ ನೋಡಿ..

ನಾಗಿಣಿ 2 ಪ್ರಸಾರವಾದ ಮೊದಲ ದಿನದಿಂದಲೂ ವೀಕ್ಷಕರ ಮನಸನ್ನು ತನ್ನ ಕಡೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದಿಶೇಷ ಹಾಗೂ ನಾಗಿಣಿ ಇಬ್ಬರು ನಾಗಲೋಕದಲ್ಲಿ ಪ್ರೀತಿಯಿಂದ ಸಮಯ ಕಳೆಯುತ್ತಿರುವಾಗ ಮನುಷ್ಯರಾದ ದಿಗ್ವಿಜಯ ಹಾಗೂ ಆತನ ಸ್ನೇಹಿತರು ಆದಿಶೇಷನನ್ನು ಕೊಂದು
ನಾಗಮಣಿಯನ್ನು ಅಪಹರಿಸುತ್ತಾರೆ. ಆದಿಶೇಷ ಮರಣದ ನಂತರ ದಿಗ್ವಿಜಯನ ಮ್ಮನೆಯಲ್ಲಿ ತನ್ನ ಮಗನಾಗಿ ಜನಿಸುತ್ತಾನೆ ಇನ್ನು ಶಿವಾನಿ ತನ್ನ ಪ್ರಿಯಕರ ಆದಿಶೇಷನನ್ನು ಮತ್ತೆ ನಾಗಲೋಕಕ್ಕೆ ಕರೆದುಕೊಂಡು ಹೋಗಲು ಹಾಗೂ ನಾಗಮಣಿಯನ್ನು ಮರಳಿ ಪಡೆಯಲು ಭೂಲೋಕಕ್ಕೆ ಬರುತ್ತಾಳೆ. ನಾಗಿಣಿ ತನ್ನ ಕಾರ್ಯವನ್ನು ಸಾಧಿಸುತ್ತಾಳಾ? ಆದಿಶೇಷನಿಗೆ ಪೂರ್ವಜನ್ಮದ ನೆನಪಾಗುತ್ತಡೆಯಾ? ಎನುವುದೇ ಈ ಧಾರಾವಾಹಿಯ ಮುಂದಿನ ಕಥೆಯಾಗಿದೆ.

ಇದೀಗ ನಾಗಿಣಿ ಟು ಧಾರಾವಾಹಿ ರೋಚಕ ತಿರುವುಗಳಿಗೆ ಮುಂದಕ್ಕೆ ಸಾಗುತ್ತಿದೆ. ಶಿವಾನಿಯ ಮರಣದ ನಂತರ ಇದೀಗ ಧಾರಾವಾಹಿಯಲ್ಲಿ ಶೈಲು ಎಂಟ್ರಿಯಾಗಿದೆ. ಶೈಲುನೇ ತನ್ನ ಶಿವಾನಿ ಎಂಬ ಹರಿವು ತ್ರಿಶೂಲ್ ಗೆ ಆಗುತ್ತಿದೆ. ಶೈಲುಳನ್ನು ತ್ರಿಶೂಲ್ ಮದುವೆಯಾದ ನಂತರ ಇಬ್ಬರಿಗೂ ಅಪಾಯ ತಪ್ಪಿದ್ದಲ್ಲ ಎಂದು ನಾಗಸಾಧುಗಳು ಎಚ್ಚರಿಸುತ್ತಾರೆ. ಇಬ್ಬರೂ ಸದಾ ಒಟ್ಟಿಗೆ ಇರಬೇಕು ಒಟ್ಟಾಗಿ ಇದ್ದಾಗ ಮಾತ್ರ ಇದ್ದರೆನು ಯಾರು ಬೇರೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ನಾಗಸಾಧುಗಳು. ಶಿವಾನಿ ಇದೀಗ ಗರ್ಭಿಣಿಯಾಗಿದ್ದು ಶಿವಾನಿ ಹಾಗೂ ಮಗುವನ್ನು ಕಾಪಾಡುವ ಸಲುವಾಗಿ ತ್ರಿಶೂಲ್ ಮನೆಯಿಂದ ದೂರ ಹೋಗಲು ನಿರ್ಧರಿಸುತ್ತಾನೆ. ಆದರೆ ಶಿವಾನಿ ಮಾತ್ರ ಇದಕ್ಕೆ ಒಪ್ಪುವುದಿಲ್ಲ ನನ್ನನ್ನು ನಿನ್ನ ಜೊತೆ ಕರೆದುಕೊಂಡು ಹೋಗು ಎಂದು ಹಠ ಹಿಡಿಯುತ್ತಾಳೆ.

ಇದೀಗ ಧಾರಾವಾಹಿಯಲ್ಲಿ ಮತ್ತೆ ನಾಗಿಣಿ ಮಾಯಾಂಗನೆಯ ಎಂಟ್ರಿಯಾಗಿದೆ. ತನ್ನ ಪ್ರಿಯಕರ ತ್ರಿಶೂಲ್ ನ ರೂಪದಲ್ಲಿರುವ ಆದಿಶೇಷನನ್ನು ಮತ್ತೆ ಪಡೆಯಲು ಮಾಯಾಂಗನೆ ಬಂದಿದ್ದಾಳೆ. ತನ್ನ ದಾರಿಗೆ ಮುಳ್ಳಾಗಿರುವ ಶಿವಾನಿಯನ್ನು ಕೊಲ್ಲಲು ನಿರ್ಧರಿಸುತ್ತಾರೆ ಮಾಯಾಂಗನೆ ಇನ್ನೇನು ಶಿವಾನಿಯನ್ನು ಕೊಲ್ಲುವ ಸಮಯದಲ್ಲಿ ತ್ರಿಶೂಲ್ ಅಲ್ಲಿಗೆ ಬಂದು ಶಿವಾನಿಯನ್ನು ಕಾಪಾಡುತ್ತಾನೆ. ಇದೀಗ ನಾಗಸಾದುಗಳು ತ್ರಿಶೂಲ್ ನ ಹಳೆ ನೆನಪುಗಳನ್ನು ಮರಳಿ ತರುವ ಪ್ರಯತ್ನದಲಿದ್ದಾರೆ. ಮುಂದೇನು ಆಗುತ್ತದೆ ಎಂದು ಕಾದು ನೋಡಬೇಕಿದೆ. ಇನ್ನು ಈಗಾಗಲೇ ನಾಗಿಣಿ 2 ಧಾರವಾಹಿ ಮುಗಿಯಬೇಕಿತ್ತು, ಆದರೆ ಪ್ರೇಕ್ಷಕರ ಒತ್ತಾಯದ ಮೇರೆಗೆ ನಾಗಿಣಿ 2 ಧಾರವಾಹಿಯನ್ನು ಇನ್ನು 2 ತಿಂಗಳ ಕಾಲ ಪ್ರಸಾರ ಮಾಡುವುದಾಗಿ ಧಾರವಾಹಿ ತಂಡ ನಿರ್ಧರಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಧಾರವಾಹಿ ಅಂತ್ಯವಾಗಲಿದೆ.

ಇದೀಗ ಧಾರವಾಹಿ ರೋಚಕ ತಿರುವುಗಳಿಂದ ಸಾಗುತ್ತಿದೆ. ಇದೀಗ ತ್ರಿಶೂಲ್ ನ ಪೂರ್ವ ಜನ್ಮದ ನೆನಪುಗಳನ್ನು ಮರುಕಳಿಸುವ ಪ್ರಯತ್ನದಲ್ಲಿದ್ದಾರೆ ಸ್ವಾಮೀಜಿ. ತ್ರಿಶೂಲ್ ನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆಯಾ? ತ್ರಿಶೂಲ್ ಗೆ ತಾನು ಯಾರು ಎನ್ನುವ ಅರಿವು ಆಗುತದಾ? ಎನ್ನುವ ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳಲ್ಲಿ ಕಾಡುತ್ತಿದೆ. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಮುಂಬರುವ ಸಂಚಿಕೆಗಳಲ್ಲಿ ಕಾಣಬಹುದು. ಇನ್ನು ನಾಗಿಣಿ 2 ಧಾರಾವಾಹಿ ಇನ್ನೇನು ಮುಗಿಯುತ್ತಿರುವ ವಿಷಯ ತಿಳಿದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ನಾಗಿಣಿ 2 ಧಾರವಾಹಿಯನ್ನು ಮಿಸ್ ಮಾಡಿ ಕೊಳ್ಳುವುದಾಗಿ ಅಭಿಮಾನಿಗಳು ಹೇಳುತ್ತಿದ್ದಾರೆ.