ನಾನು ನಂದಿನಿ ಹಾಡು ಬದಲಿಸಿ “ಆಕ್ಟಿಂಗ್ ಬರಲ್ಲ.. ಆದ್ರೂ ಅವಾರ್ಡ್ ತಗೋತೀನಿ” ಅಂತ ನೇರವಾಗಿ ಆ ನಟಿಗೆ ಟಾಂಗ್ ಕೊಟ್ಟ ಸಿಂಧು ಲೋಕನಾಥ್..

0 views

ನಾನು ನಂದಿನಿ ಬೆಂಗಳೂರಿಗ್ ಬಂದಿನಿ.. ಹಾಡು ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಎಲ್ಲೆಲ್ಲೂ ಟ್ರೆಂಡ್ ಆಗಿದೆ.. ಕಾಮಿಡಿ ವೀಡಿಯೋಗಳನ್ನು ಮಾಡುವ ವಿಕಿಪಿಡಿಯಾ ಹಾಗೂ ಅವರ ತಂಡ ನಾನು ನಂದಿನಿ ಹಾಡು ಬರೆದು ಕಂಪೋಸ್ ಮಾಡಿದ್ದು ಸಾವಿರಾರು ಜನರು ಇದೇ ಹಾಡಿಗೆ ರೀಲ್ಸ್ ಮಾಡುವ ಮೂಲಕ ಟ್ರೆಂಡ್ ಸೃಷ್ಟಿಸಿದ್ದಾರೆ.. ಇನ್ನು ಇದೇ ನಾನು ನಂದಿನಿ ಹಾಡಿನ ಲಿರಿಕ್ಸ್ ಬದಲಿಸಿ ಸಾಕಷ್ಟು ಜನರು ತಮಗೆ ಬೇಕಾದ ರೀತಿಯಲ್ಲಿ ಬದಲಿಸಿ ಮೆಚ್ಚುಗೆ ಪಡೆದದ್ದೂ ಉಂಟು.. ಅಷ್ಟೇ ಅಲ್ಲದೇ ನಾನು ನಂದಿನಿ ಹಾಡನ್ನು ಜನ ಸಮಾನ್ಯರು ಮಾತ್ರವಲ್ಲದೇ ಸ್ಯಾಂಡಲ್ವುಡ್ ನಟಿಯರು ಕಿರುತೆರೆ ಕಲಾವಿದರೂ ಸಹ ಉಪಯೋಗಿಸಿಕೊಂಡು ರೀಲ್ಸ್ ಮಾಡಿದ್ದುಂಟು.. ಅವುಗಳು ಸಹ ಲಕ್ಷಗಟ್ಟಲೇ ವೀವ್ಸ್ ಪಡೆದು ವೈರಲ್ ಆದವು.. ಇನ್ನು ಇದೀಗ ಕನ್ನಡದ ನಟಿ ಸಿಂಧು ಲೋಕನಾಥ್ ನಾನು ನಂದಿನಿ ಹಾಡಿನ ಲಿರಿಕ್ಸ್ ಬದಲಿಸಿದ್ದು ಕನ್ನಡದ ಮತ್ತೊಬ್ಬ ನಟಿಗೆ ಟಾಂಗ್ ಕೊಟ್ಟಿದ್ದಾರೆ..

ಹೌದು ಕನ್ನಡದ ಅನೇಕ ಪ್ರತಿಭಾವಂತ ನಾಯಕ ನಟಿಯರು ಸರಿಯಾದ ಅವಕಾಶಗಳಿಲ್ಲದೇ ಚಿತ್ರರಂಗದಿಂದ ದೂರ ಸರಿದಿದ್ದಾರೆ.. ಅಂತವರಲ್ಲಿ ಸಿಂಧು ಲೋಕನಾಥ್ ಕೂಡ ಒಬ್ಬರು.. ಇನ್ನು ಅನೇಕರು ಬೇರೆ ಬೇರೆ ರೀತಿಯಾಗಿ ಸಿನಿಮಾಗಳಲ್ಲಿ ಅವಕಾಶ ಪಡೆದದ್ದೂ ಉಂಟು.. ಪ್ರತಿಭೆ ಇಂದ ಒಂದಷ್ಟು ನಾಯಕಿಯರು ಸ್ಟಾರ್ ನಟಿಯರಾದರೆ ಮತ್ತಷ್ಟು ದಾರಿಯಿಂದ ಕೆಲವರು ನಾಯಕಿಯಾರದರೆಂಬುದು ಸ್ಯಾಂಡಲ್ವುಡ್ ಮಾತ್ರವಲ್ಲ ಎಲ್ಲಾ ಇಂಡಸ್ಟ್ರಿಗಳಲ್ಲೂ ಆಗಾಗ ಕೇಳಿ ಬರುತ್ತಲೇ ಇರುತ್ತದೆ.. ಅತಿಯಾದ ಮೈ ತೋರುವಿಕೆ ಇಂದಾಗಿ ಒಂದಷ್ಟು ಜನರು ತೆರೆ ಮೇಲೆ ಮಿಂಚಲು ಅವಕಾಶ ಪಡೆದದ್ದೂ ಉಂಟು.. ಇದೀಗ ಸಿಂಧು ಲೋಕನಾಥ್ ಅಂತಹ ನಟಿ ಒಬ್ಬರಿಗೆ ಟಾಂಗ್ ನೀಡಿದ್ದಾರೆ..

ಹೌದು ನಾನು ನಂದಿನಿ ಹಾಡಿನ ಮೂಲಕ ಸಿಂಧು ಲೋಕನಾಥ್ ಆ ನಟಿಗೆ ಆಕ್ಟಿಂಗ್ ಬರದೇ ಇದ್ದರೂ ಅವಾರ್ಡ್ ತಗೋತೀನಿ ಅಂತೆಲ್ಲಾ ಟಾಂಗ್ ನೀಡಿದ್ದಾರೆ.. ಅಷ್ಟಕ್ಕೂ ಆ ನಟಿ ಯಾರು? ಸಿಂಧು ಲೋಕನಾಥ್ ಹೇಳಿದ್ದೇನು ಮೊದಲಿಗೆ ನೋಡಿ ಬರೋಣ.. ಸಿಂಧು ಲೋಕನಾಥ್ ಬರೆದ ಸಾಲುಗಳಿವು‌.. “ನಾನು ನಂದಿನಿ ಬೆಂಗಳೂರಿಗ್ ಬಂದೀನಿ.. ಸಿನಿಮಾ ಮಾಡ್ತೀನಿ, ಹೀರೋಯಿನ್ ಆಗ್ತೀನಿ.. ಆಕ್ಟಿಂಗ್ ಬರಲ್ಲ ಆದ್ರೂ ಅವಾರ್ಡ್ ತಗೋತೀನಿ.. ಬಂದಿದ್ ದುಡ್ಡೆಲ್ಲಾ ಮಜಾ ಉಡಾಯಿಸ್ತೀನಿ.. ಬಾರೆ ನಂದಿನಿ ಬೆಂಗಳೂರ್ ತೋರಿಸ್ತೀನಿ.. ಬೇ ಬೇ ಬೇಡ.. ಬಾರೆ ನಂದಿನಿ ಡ್ರೈವ್ ಕರ್ಕೊಂಡ್ ಹೋಗ್ತೀನಿ.. ಓ ಬೇಡ ಓ ಬೇಡ… ಬಾರೆ ನಂದಿನಿ ಟಾಲಿವುಡ್ ತೋರಿಸ್ತೀನಿ.. ಬೇ ಬೇ ಬೇಡ.. ಬಾರೆ ನಂದಿನಿ ಕಾಲಿವುಡ್ ತೋರಿಸ್ತೀನಿ.. ಓ ಬೇಡ.. ಓ ಬೇಡ.. ನೋಡಮ್ಮ ಇಲ್ಲಿ ನೀನು ಆಕ್ಟಿಂಗ್ ಕಲೀಬೇಕು.. ಇಲ್ದಿದ್ರೆ ನಿಂಗಿಲ್ಲಿ ಕಷ್ಟ ಆಗತ್ತೆ.. ಸರ್ ನಾನು ಗ್ಲಾಮರಸ್ ಬಟ್ಟೆ ಹಾಕೋತೀನಿ.. ಯಾಕಂದ್ರೆ ನನ್ನ್ ಆಕ್ಟಿಂಗ್ ಅಷ್ಟಕಷ್ಟೇ.. ಐ ಕ್ಯಾನ್ ಟ್ರೈ.. ಐ ಕ್ಯಾನ್ ಆಕ್ಟ್.. ಇಫ಼್ ನಾಟ್.. ಐ ವಿಲ್ ಫ್ಲೈ ಟು ಬಾಲಿವುಡ್.. ನಾನು ನಂದಿನಿ ಬೆಂಗಳೂರಿಗ್ ಬಂದೀನಿ.. ಸಿನಿಮಾ ಮಾಡ್ತೀನಿ.. ಹೀರೋಯಿನ್ ಆಗ್ತೀನಿ.. ಆಕ್ಟಿಂಗ್ ಬರಲ್ಲ ಆದ್ರೂ ಅವಾರ್ಡ್ ತಗೋತೀನಿ..

ಇದಿಷ್ಟು ನಟಿ ಸಿಂಧು ಲೋಕನಾಥ್ ಬರೆದ ಸಾಲುಗಳಾದರೆ ಅತ್ತ ಸಿಂಧು ಬರೆದ ಸಾಲುಗಳನ್ನು ಸಾಕಸ್ಃಟು ಜನ ಶೇರ್ ಮಾಡಿಕೊಂಡರೆ.. ಮತ್ತಷ್ಟು ಜನರು ಆ ನಟಿ ಯಾರು ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.. ಮತ್ತೆ ಕೆಲವರು ಖಂಡಿತವಾಗಿ ಈ ಸಾಲುಗಳು ರಶ್ಮಿಕಾ ಮಂದಣ್ಣನಿಗೆ ಹೇಳಿರೋದು ಎಂದು ಕಮೆಂಟ್ ಮಾಡಿದ್ದಾರೆ.. ಒಟ್ಟಿನಲ್ಲಿ ನಮ್ಮ ನಂದಿನಿ ಹಾಡು ಇದೀಗ ನತೀಯೊಬ್ಬರಿಗೆ ಟಾಂಗ್ ಕೊಡುವ ಮಟ್ಟಕ್ಕೆ ಬಂದು ನಿಂತಿದ್ದು ಇನ್ನು ಯಾವ ಯಾವ ರೀತಿಯಾಗಿ ಸಾಲುಗಳು ಬದಲಾಗಿ ಯಾರ್ಯಾರ ಕತೆಗಳು ಹೊರ ಬರುವುದೋ ಕಾದು ನೋಡಬೇಕಿದೆ.. “ನಾನು ನಂದಿನಿ.. ಮತ್ತೆ ಸಿಗ್ತೀನಿ..”

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.