ನನ್ನ ಮೇಲೆ ಆ ಕೆಲಸ ನಡೆದಿದೆ..

0 views

ಕನ್ನಡ ಕಿರುತೆರೆಯಲ್ಲಿ ಕಳೆದ ಎರಡು ವರ್ಷಗಳಿಂದ ಸಾಕಷ್ಟು ಮದುವೆ ಸೀಮಂತ ಹೀಗೆ ಸಾಕಷ್ಟು ಶುಭ ಸುದ್ದಿಗಳನ್ನು ಕೇಳುತ್ತಾ ಬಂದಿದ್ದೆವು.. ಆದರೀಗ ತನ್ನ ಗಂಡನೇ ತನ್ನ ಮೇಲೆ ಆ ಕೆಲಸ ಮಾಡಿದ್ದಾನೆ ಎಂದು ಇದೀಗ ಕನ್ನಡ ಕಿರುತೆರೆಯ ಖ್ಯಾತ ನಟಿ ಕನ್ನಡದ ಬಿಗ್ ಬಾಸ್ ನ ಖ್ಯಾತ ಸ್ಪರ್ಧಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.. ಹೌದು ಆ ನಟಿ ಮತ್ಯಾರೂ ಅಲ್ಲ ಬಿಗ್ ಬಾಸ್ ಕನ್ನಡದ ಸೀಸನ್ ಏಳರ ಸ್ಪರ್ಧಿ ಚೈತ್ರಾ ಕೊಟ್ಟೂರು.. ಹೌದು ಬಿಗ್ ಬಾಸ್ ಸೀಸನ್ ಏಳರ ಸ್ಪರ್ಧಿಯಾಗಿ ಆಗಮಿಸಿದ್ದ ಚೈತ್ರಾ ಕೊಟ್ಟೂರ್ ಆಗಾಗ ಸುದ್ದಿಯಾಗುತ್ತಲೇ ಇದ್ದರು.. ಬಿಗ್ ಬಾಸ್ ನಲ್ಲಿ ಶೈನ್ ಶೆಟ್ಟಿ ಜೊತೆ ಮೊದಮೊದಲು ಸಲುಗೆಯಿಂದಿದ್ದ ಚೈತ್ರಾ ಕೊಟ್ಟೂರ್ ಆನಂತರ ಎಲಿಮಿನೇಟ್ ಆಗಿ ಮತ್ತೊಂದು ಅವಕಾಶ ಪಡೆದು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಸಾಕಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿಯೇ ಉಳಿದಿದ್ದರು..

ನಂತರ ಹೊರ ಬಂದು ಸಿನಿಮಾ ಮಾಡುವುದಾಗಿ ತಿಳಿಸಿದ್ದ ಚೈತ್ರಾ ಕೊಟ್ಟೂರ್ ರವಿ ಬೆಳೆಗೆರೆ ಅವರ ಕುರಿತು ಸಿನಿಮಾ ಮಾಡುವುದಾಗಿಯೂ ತಿಳಿಸಿದ್ದರು.. ನಂತರ ಕಿರುತೆರೆ ಧಾರಾವಾಹಿಗೂ ಕಾಲಿಟ್ಟ ಚೈತ್ರಾ ಕೊಟ್ಟೂರ್ ಆ ಧಾರಾವಾಹಿ ಕೆಲವೇ ತಿಂಗಳಲ್ಲಿ ತನ್ನ ಪ್ರಸಾರವನ್ನು ನಿಲ್ಲಿಸಿತು.. ನಂತರದಲ್ಲಿ ಎಂದಿನಂತೆ ಸಿನಿಮಾ ಮಾಡುವುದಾಗಿ ತಿಳಿಸಿದ್ದರು.. ಆದರೆ ಈ ನಡುವೆ ಇದ್ದಕಿದ್ದ ಹಾಗೆ ಕೆಲ ತಿಂಗಳ ಹಿಂದೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಚೈತ್ರಾ ಕೊಟ್ಟೂರ್ ಮದುವೆಯಾದ ಸುದ್ದಿ ಹೊರಬಿತ್ತು.. ಹೌದು ಚೈತ್ರಾ ಕೊಟ್ಟೂರ್ ಮಂಡ್ಯ ಮೂಲದ ನಾಗಾರ್ಜುನ್ ಎಂಬಾತನನ್ನು ಬೆಂಗಳೂರಿನ ಗಣಪತಿ ದೇವಸ್ಥಾನದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದರು.. ಎಲ್ಲರೂ ಶುಭಾಶಯಗಳನ್ನೂ ಸಹ ತಿಳಿಸಿದ್ದರು..

ಆದರೆ ಮದುವೆಯಾದ ಕೆಲವೇ ಗಂಟೆಗಳಲ್ಲಿ ಅವರ ಅಸಲಿ ಕತೆ ಹೊರ ಬಿದ್ದಿತ್ತು.. ಇತ್ತ ಮದುವೆ ಗಂಡು ನಾಗಾರ್ಜುನ ನನ್ನನ್ನು ಮಾಡಿ ನನ್ನನ್ನು ಕರೆದುಕೊಂಡು ಹೋಗಿ ತಾಳಿ ಕಟ್ಟಿಸಿದ್ದಾರೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದನು.. ಇತ್ತ ಚೈತ್ರಾ ಕೊಟ್ಟೂರ್ ನನಗೆ ಅವನೇ ಬೇಕು ಎಂದು ಎರಡು ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.. ಕೊನೆಗೆ ನಮ್ಮ ನಮ್ಮಲ್ಲೆ ಬಗೆಹರಿಸಿಕೊಳ್ತೇವೆ ಎಂದು ಹೊರಟ ಜೋಡಿ ಅವರವರ ಊರು ಸೇರಿಕೊಂಡಿತ್ತು.. ಇತ್ತ ನಾಗಾರ್ಜುನ್ ಮತ್ತೆ ಚೈತ್ರಾ ಬಳಿ ಹೋಗಲಿಲ್ಲ.. ಇದರಿಂದ ಬೇಸರಗೊಂಡ ಚೈತ್ರಾ ಕೊಟ್ಟೂರ್ ಅದಾಗಲೇ ಒಮ್ಮೆ ಜೀವ ಕಳೆದುಕೊಳ್ಳಲು ಮುಂದಾಗಿ ಆಸ್ಪತ್ರೆಗೆ ಸೇರಿದ್ದರು..

ಆದರೆ ಇದೀಗ ಮತ್ತೆ ಸುದ್ದಿಗೆ ಬಂದಿದ್ದು.. ನನ್ನ ಗಂಡನೇ ನನ್ನ ಮೇಲೆ ಆ ಕೆಲಸ ಮಾಡಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.. ಹೌದು ಬಸವನಗುಡಿಯ ಪೊಲೀಸ್ ಠಾಣೆಯಲ್ಲಿ ಒಂಭತ್ತು ಪುಟಗಳಲ್ಲಿ ದೂರು ನೀಡಿದ್ದಾರೆ.. ಕಳೆದ ಲಾಕ್ ಡೌನ್ ಸಮಯದಲ್ಲಿ ನನ್ನ ಜೊತೆ ಮದುವೆಯಾಗುವುದಾಗಿ ಹೇಳಿ ನಾಗಾರ್ಜುನ್ ಈ ಕೆಲಸ ಮಾಡಿದ್ದನು.. ಆನಂತರ ಹೇಗೋ ಮಾಡಿ ಮದುವೆಯನ್ನು ಸಹ ಆದೆವು.. ಆದರೆ ಆ ಬಳಿಕ ನನ್ನಿಂದ ದೂರ ಆಗಿದ್ದಾನೆ.. ಮದುವೆಯಾದ ನಂತರ ಹಣಕ್ಕಾಗಿಯೂ ಸಹ ನನ್ನ ಬಳಿ ಕೇಳಿದ್ದ.. ಈಗ ನನ್ನ ಜೊತೆ ಆತನಿಲ್ಲ ಎಂದು ನಾಗಾರ್ಜುನ್ ಮೇಲೆ ದೂರು ನೀಡಿದ್ದಾರೆ..

ಈ ಹಿಂದೆಯೂ ಸಹ ಸಾಕಷ್ಟು ಬಾರಿ ನಾಗಾರ್ಜುನ್ ಹಾಗೂ ಚೈತ್ರಾ ಕೊಟ್ಟೂರ್ ನಡುವೆ ಗಲಾಟೆಗಳು ನಡೆದಿದ್ದು ಇದೀಗ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಚೈತ್ರಾ ಕೊಟ್ಟೂರ್ ಹೊಸ ದೂರನ್ನು ನೀಡಿದ್ದು ಫ್ಯಾಮಿಲಿ ವೈದ್ಯರಿಗೆ ಈ ಬಗ್ಗೆ ರಿಪೋರ್ಟ್ ಕೊಡಿ ಎಂದು ಪೊಲೀಸರು ನೋಟಿಸ್ ನೀಡಿದ್ದಾರೆ.. ಆದರೆ ಅತ್ತ ನಾಗಾರ್ಜುನ್ ಮಾತ್ರ ಚೈತ್ರಾ ಕೋಟ್ಟೂರ್ ಅವರೇ ನನಗೆ ಫೇಸ್‌ಬುಕ್‌ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಫ್ರೆಂಡ್ ಆಗಿ ಆತ್ಮೀಯವಾಗಿ ಇದ್ದರು.. ಕೊನೆಗೆ ನನ್ನನ್ಮು ಮಾಡಿ ಮದುವೆ ಮಾಡಿಕೊಂಡರು.. ಇದರಲ್ಲಿ ನನ್ನ ತಪ್ಪಿಲ್ಲ ಎಂದು ಹೇಳಿಕೊಂಡಿದ್ದರು..