ನಿರಂಜನ್ ಅಕ್ಕ ನಳಿನಾ ಮದುವೆಯಾಗಿರುವ ಎರಡೂ ಕೈಗಳಿಲ್ಲದ ಈ ಹುಡುಗ ನಿಜಕ್ಕೂ ಯಾರು ಗೊತ್ತಾ? ನೋಡಿದ್ರೆ ಶಾಕ್ ಆಗ್ತೀರಾ.. ಹ್ಯಾಟ್ಸ್ ಆಫ್ ಇವರಿಗೆ‌‌..

0 views

ಕನ್ನಡ ಕಿರುತೆರೆಯ ಖ್ಯಾತ ನಿರೂಪಕ ನಿರಂಜನ್ ದೇಶಪಾಂಡೆ ಅವರು ಸಧ್ಯ ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ ಪಾಲ್ಗೊಂಡಿದ್ದು ಸಂದರ್ಭವೊಂದರಲ್ಲಿ ತನ್ನ ಅಕ್ಕನ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿದ್ದರು.. ನಾನು ಅಕ್ಕ ಅವಳಿ ಜವಳಿ.‌. ಯಾವ ಗಂಡ ಹೆಂಡತಿಯೂ ಅಷ್ಟು ಕ್ಲೋಸ್ ಆಗಿರೋದಿಲ್ಲ.. ನಾನು ಅಕ್ಕ ಅಷ್ಟು ಕ್ಲೋಸ್ ಆಗಿದ್ವಿ.. ಅಪ್ಪ ಇಲ್ಲ.. ಅಮ್ಮ ಕೆಲಸಕ್ಕೆ ಹೋಗ್ತಾ ಇದ್ರು.. ನಾನು ಅಕ್ಕ ಇಬ್ಬರೇ ನಮ್ಮ ಜವಾಬ್ದಾರಿ ನಮ್ಮದೇ ಆಗಿತ್ತು.. ಮದುವೆ ಘಟ್ಟಕ್ಕೆ ಬಂದಾಗ ನನ್ನ ಅಕ್ಕನ ಮದುವೆ ಬಗ್ಗೆ ಸಾಕಷ್ಟು ಕನಸು ಕಂಡಿದ್ದೆ.. ಹಾಗ್ ಮಾಡಬೇಕು ಹೀಗ್ ಮಾಡಬೇಕು ಎಂದುಕೊಂಡಿದ್ದೆ.. ಆದರೆ ಅಕ್ಕ ತನ್ನ ಹಳೆಯ ಪ್ರೀತಿಯಿಂದ ನೊಂದ ವಿಚಾರಕ್ಕೋ ಏನೋ‌ ಮದುವೆ ಆಗಲು ಒಪ್ಪಲಿಲ್ಲ.. ಅವಳ ಮದುವೆಯೇ ನನಗೆ ದೊಡ್ಡ ಸವಾಲಾಗಿ ಹೋಯ್ತು.. ಎಲ್ಲೇ ಹೋದರೂ ಮನೆಯಲ್ಲಿ ಒಬ್ಬಳು ಹೆಣ್ಣು ಮಗಳಿದ್ದಾಳೆ..

ಅವಳಿಗೆ ಮದುವೆ ಮಾಡೋಕಾಗಲ್ವಾ ಅಂತೆಲ್ಲಾ ಹೇಳಿದಾಗ ಬಹಳ ನೋವಾಗ್ತಾ ಇತ್ತು ಎಂದು ಕಣ್ಣೀರಿಟ್ಟಿದ್ದರು.. ಅದರ ಜೊತೆಗೆ ಇತ್ತೀಚೆಗೆ ತನ್ನ ಅಕ್ಕ ಮದುವೆಗೆ ಒಪ್ಪಿ ತಾನೇ ಮತ್ತೊಬ್ಬ ಹುಡುಗನನ್ನು ಕರೆತಂದು ಮದುವೆ ಆಗೋದಾಗಿ ತಿಳಿಸಿದ ವಿಚಾರವನ್ನು ಹೇಳಿಕೊಂಡರು.. ಹೌದು ನಿರಂಜನ್ ಇತ್ತ ಸಾಲು ಸಾಲು ಅವಕಾಶಗಳನ್ನು ಪಡೆದು ಯಶಸ್ವಿಯಾದರೆ ಅತ್ತ ಅಕ್ಕ ವ್ಯಯಕ್ತಿಕ ಜೀವನದಲ್ಲಿ ಕುಗ್ಗಿ ಮಂಕಾಗಿದ್ದರು.. ನಮ್ಮ ಕುಟುಂಬದವರನ್ನು ಈ ರೀತಿ ನೋವಿನಲ್ಲಿ ನೋಡಲು ನಿಜಕ್ಕೂ ಸಾಧ್ಯವಿಲ್ಲ.. ನನ್ನ ಯಾವ ಯಶಸ್ಸನ್ನು ನಾನು ಸಂತೋಷದಿಂದ ಅನುಭವಿಸಲು ಸಾಧ್ಯವಾಗಲಿಲ್ಲ.. ನನಗೆ ಒಳ್ಳೆ ಹುಡುಗಿ ಸಿಕ್ಕಿ ಮದುವೆಯೂ ಆಯಿತು.. ಆದರೆ ನನ್ನ ಅಕ್ಕನ ಜೀವನದ ಗ್ರಾಫ್‌ ಕೆಳಗೆ ಇಳಿಯುತಿತ್ತು.. ಆ ನೋವು ನಿಜಕ್ಕೂ ಯಾರಿಗೂ ಬೇಡ..

ನನ್ನ ಅಕ್ಕ ಸಂಗೀತ ಟೀಚರ್ ಹಾಡ್ತಾಳೆ ನಗ್ಸ್ತಾಳೆ ಎಲ್ಲವೂ ಮಾಡ್ತಾಳೆ.. ಆದರೆ ಅಂತವರಿಗೆ ಹೀಗಾಯ್ತು ಅನ್ನೋ ದುಃಖ ಇತ್ತು.‌. ದಯವಿಟ್ಟು ನಾನು ಎಲ್ಲಾ ಹುಡುಗರಲ್ಲೂ ಕೇಳಿಕೊಳ್ತೀನಿ ಯಾರೇ ಆದರೂ ದಯವಿಟ್ಟು ಪ್ರೀತಿಸಿ ಮೋಸಮಾಡಬೇಡಿ.. ಹುಡುಗಿಯರಲ್ಲೂ ಅಷ್ಟೇ ಯಾವ ಹುಡುಗನ ಬಾಳಿನಲ್ಲಿಯೂ ಆಟ ಆಡಬೇಡಿ.. ಯಾಕಂದ್ರೆ ನೀವು ಒಂದು ಸಂಪೂರ್ಣ ಕುಟುಂಬದ ಜೊತೆ ಆಟ ಆಡ್ತಿರ್ತಿರಾ.. ಅದರಿಂದ ಒಂದು ಕುಟುಂಬ ನೋವು ಪಡತ್ತೆ.. ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳು ಇರ್ತಾರೆ ನೆನಪಿನಲ್ಲಿಡಿ ಎಂದು ಕಣ್ಣೀರಿಟ್ಟರು.. ಇದರ ಜೊತೆ ಅಕ್ಕ ಮದುವೆಯಾದ ಸಂತೋಷವನ್ನೂ ಸಹ ಹಂಚಿಕೊಂಡರು.. ಹೌದು ಮಾತು ಮುಂದುವರೆಸಿದ ನಿರಂಜನ್ ಒಂದು ದಿನ ಜಯಂತ್ ನನ್ನು ಮದುವೆ ಆಗ್ತೀನಿ ಎಂದು ನಮ್ಮ ಅಕ್ಕ ನಮ್ಮ ಮುಂದೆ ಬಂದಳು.. ನಮಗೆ ನಿಜಕ್ಕೂ ಶಾಕ್ ಆಯ್ತು.. ಹೌದು ಜಯಂತ್ ಸಾಧನೆ ಬಗ್ಗೆ ನಮಗೆ ಹೆಮ್ಮೆ ಇದೆ.. ಆದರೆ ಅಕ್ಕನನ್ನು ಅವರಿಗೆ ಕೊಟ್ಟು ಮದುವೆ ಮಾಡೋದು ಹೇಗೆ ಅನಿಸಿತು ಎಂದರು..

ಅಷ್ಟಕ್ಕೂ ಈ ಜಯಂತ್ ಯಾರು ಗೊತ್ತಾ.. ಜಯಂತ್ ಮತ್ಯಾರೂ ಅಲ್ಲ ರಾಷ್ಟ್ರ ಮಟ್ಟದ ಈಜುಪಟು.. ಎರಡೂ ಕೈಗಳಿಲ್ಲವಾದರೂ ಜಯಂತ್ ಮಾಡಿರುವ ಸಾಧನೆ ನಿಜಕ್ಕೂ ಹ್ಯಾಟ್ಸ್ ಆಫ್ ಹೇಳುವಂತದ್ದು.. ಹೌದು ಇತ್ತ ನಿರಂಜನ್ ಎರಡೂ ಕೈಗಳಿಲ್ಲದ ಹೊಟ್ಟೆ ಅರ್ಧ ಆಗಿರುವ ಹುಡುಗನಿಗೆ ಅಕ್ಕನನ್ನು ಹೇಗೆ ಮದುವೆ ಮಾಡೋದು ಎಂದು ಹಿಂದೆ ಮುಂದೆ ನೋಡುತ್ತಿದ್ದ ಸಮಯದಲ್ಲಿ ನಳಿನಾ ಅವರು “ಕೈಕಾಲು ಇದ್ದವರು ನನಗೆ ಮೋಸ ಮಾಡಬಹುದು.. ಆದರೆ ಜಯಂತ್ ನನಗೆ ಪ್ರೇರಣೆಯಾಗಿದ್ದಾರೆ.. ಪ್ರತಿದಿನವೂ ನನಗೆ ಸ್ಪೂರ್ತಿಯಾಗಿದ್ದಾರೆ.. ಅವರಿಗಾಗಿ ನಾನು ಬದುಕಬೇಕು ಎನಿಸುತ್ತಿದೆ ಎಂದಾಗ ನಿರಂಜನ್ ಮರು ಮಾತನಾಡದೇ ಮದುವೆಗೆ ಒಪ್ಪಿಕೊಂಡರು.. ವಿನಾಯಕ್ ಜೋಷಿ ಅವರ ಕಿರಿಚಿತ್ರವೊಂದರ ಸಮಯದಲ್ಲಿ ಜಯಂತ್ ಹಾಗೂ ನಳಿನಾ ಪರಿಚಯವಾಗಿದ್ದು ಜಯಂತ್ ನಳಿನಾಗೆ ಸ್ಪೂರ್ತಿಯಾಗಿದ್ದರು..

ಇನ್ನು ಕೆಲ ದಿನಗಳ ಹಿಂದೆ ನಳಿನಾ ಹಾಗೂ ಜಯಂತ್ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸಂತೋಷವಾಗಿ ಸಂಸಾರ ಮಾಡುತ್ತಿದ್ದಾರೆ.. ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡ ನಿರಂಜನ್ ತುಂಬಾ ಜನರು ಕಮ್ಮೊಗೆ ಸಿಕ್ತು ಅಂತ ಮದುವೆ ಮಾಡಿಬಿಟ್ಯಾ ಅಂತ ನನ್ನನ್ನು ಹಂಗಿಸಿದ್ದೂ ಉಂಟು.. ಆದರೆ ಅದೆಲ್ಲವನ್ನೂ ನಾನು ತಲೆಗೆ ಹಾಕಿಕೊಳ್ಳೋದಿಲ್ಲ.. ಅದೆಲ್ಲವನ್ನು ಕಸ ಎಂದುಕೊಂಡು ಪಕ್ಕಕ್ಕೆ ಸರಿಸಿ ಮುಂದೆ ಹೋಗಬೇಕು.. ಇವತ್ತು ನನ್ನ ಅಕ್ಕ ತುಂಬಾ ಚೆನ್ನಾಗಿ ಗಂಡನ ಜೊತೆ ಬದುಕುತ್ತಿದ್ದಾಳೆ ಎಂದು ಸಂತೋಷ ಪಟ್ಟರು.. ಇತ್ತ ರಕ್ಷಾಬಂಧನದ ಅಂಗವಾಗಿ ನಿರಂಜನ್ ಅಕ್ಕ ನಳಿನಾ ತಮ್ಮ ಪತಿ ಜಯಂತ್ ಜೊತೆಗೆ ನಿರಂಜನ್ ಮನೆಗೆ ಆಗಮಿಸಿ ರಾಕಿ ಕಟ್ಟಿ ಶುಭಾಶಯ ತಿಳಿಸಿದ್ದು ನಿರಂಜನ್ ಫೋಟೋ ಪೋಸ್ಟ್ ಮಾಡುವ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ..