ಶಿಕ್ಷಕರ ತಲೆಗೆ ಡಸ್ಟ್ ಬಿನ್ ಹಾಕಿ ಕೈಮಾಡಿದ್ದ ವಿದ್ಯಾರ್ಥಿಗಳು.. ಎರಡು ದಿನದ ನಂತರ ಬಯಲಾಯ್ತು ಅಸಲಿ ಕತೆ..

0 views

ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗಿತ್ತು.. ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರೊಬ್ಬರ ತಲೆಗೆ ಡಸ್ಟ್ ಬಿನ್ ಹಾಕಿ ಅಪಮಾನ‌ ಮಾಡಿ ಅವರ ಮೇಲೆ ಕೈ ಮಾಡಿದ್ದರು.. ಇದನ್ನು ಅಲ್ಲಿಯೇ ಇದ್ದ ಬೇರೆ ವಿದ್ಯಾರ್ಥಿಗಳು ವೀಡಿಯೋ ಮಾಡಿಕೊಂಡಿದ್ದರು.. ನಂತರ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿ ಬಹಳಷ್ಟು ವೈರಲ್ ಆಗಿತ್ತು.. ಈ ವೀಡಿಯೋಗೆ ಸಾಕಷ್ಟು ಜನ ಅದರಲ್ಲೂ ಕನ್ನಡದ ಸೆಲಿಬ್ರೆಟಿಗಳು ಸೃಜನ್ ಲೋಕೇಶ್ ಸೇರಿದಂತೆ ಬಹಳಷ್ಟು ಕಲಾವಿದರೂ ಸಹ ಪ್ರತಿಕ್ರಿಯೆ ನೀಡಿ ವಿದ್ಯಾರ್ಥಿಗಳಿಗೆ ಸರಿಯಾದ ಕ್ರಮ ಕೈಗೊಳ್ಳುವಂತೆ ಹೇಳಿದ್ದರು.. ಆದರೀಗ ಎರಡು ದಿನದ ನಂತರ ಅಸಲಿ ವಿಚಾರ ಬಯಲಾಗಿದೆ..

ಹೌದು ಮೊದಲನೆಯದಾಗಿ ಈ ಘಟನೆ ನಡೆದಿದ್ದು ದಾವಣಗೆರೆ ಜಿಲ್ಲೆಯ ನಲ್ಲೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ.. ಹೌದು ಸರ್ಕಾರಿ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಗುರುವಿನ ಬೆಲೆಯೇ ಗೊತ್ತಿಲ್ಲದ ಅವಿವೇಕಿಗಳು ತಮ್ಮ ಹಿಂದಿ ಶಿಕ್ಷಕರಾದ ಪ್ರಕಾಶ್ ಅವರಿಗೆ ಈ ರೀತಿ ಮಾಡಿದ್ದಾರೆ.. ಹೌದು ಅಷ್ಟಕ್ಕೂ ನಡೆದದ್ದೇನು ಎಂದರೆ ಪ್ರಕಾಶ್ ಅವರು ಎಂದಿನಂತೆ ಪಾಠ ಮಾಡಲೆಂದು ತರಗತಿಗೆ ಬಂದರು.. ಪಾಠ ಶುರು ಮಾಡುತ್ತಿದ್ದಂತೆ ಅದನ್ನು ಕೇಳಿಸಿಕೊಳ್ಳದೇ ತಮ್ಮನ್ನು ತಾವು ಏನೋ ಅಂದುಕೊಂಡು ನಾಲ್ಕೈದು ವಿದ್ಯಾರ್ಥಿಗಳು ಪ್ರಕಾಶ್ ಅವರ ಬಳಿ ಬಂದು ಮೊದಲು ಅವರನ್ನು ತಳ್ಳಾಡಿ ನಂತರ ಅವರ ತಲೆಗೆ ಡಸ್ಟ್ ಬಿನ್ ಹಾಕಿ‌ ಮತ್ತೆ ಕೈ ಮಾಡಿದ್ದರು.. ಅದೇ ತರಗತಿಯಲ್ಲಿದ್ದ ವಿದ್ಯಾರ್ಥಿಗಳು ಇದನ್ನು ವೀಡಿಯೋ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.. ಇನ್ನು ವೀಡಿಯೋ ವೈರಲ್ ಆಗುತ್ತಿದ್ದಂತೆ ಎಬಿವಿಪಿ ವಿದ್ಯಾರ್ಥಿ ಸಂಘದವರು ಶಾಲೆಗೆ ಆಗಮಿಸಿ ಆ ವಿದ್ಯಾರ್ಥಿಗಳಿಂದ ಪ್ರಕಾಶ್ ಅವರ ಬಳಿ ಕ್ಷಮೆ ಕೇಳಿಸಿದ್ದರು.. ಯಾವ ವಿದ್ಯಾರ್ಥಿಗಳು ಗುರುಗಳಿಗೆ ಕೈಮಾಡಿದ್ದರೋ ಅದೇ ವಿದ್ಯಾರ್ಥಿಗಳು ಪ್ರಕಾಶ್ ಅವರ ಕಾಲಿಗೆ ಬಿದ್ದು ಕ್ಷಮಿಸಿ ಎಂದು ಕೇಳಿಕೊಂಡರು..

ಅಷ್ಟೇ ಅಲ್ಲದೇ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಸಹ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿದ್ದರು.. ಜೊತೆಗೆ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ಅವರೂ ಸಹ ಶಾಲೆಗೆ ಆಗಮಿಸಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಜೊತೆ ಮಾತನಾಡಿ ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಿದ್ದರು.. ಇನ್ನು ವೀಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ಹಾಗೂ ವಿದ್ಯಾರ್ಥಿಗಳ ಮೇಲೆ ಅಸಮಾಧಾನ ವ್ಯಕ್ತವಾಗಿತ್ತು.. ಆದರೆ ಇಷ್ಟೆಲ್ಲಾ ನಡೆದರೂ ಸಹ ಶಿಕ್ಷಕರಾದ ಪ್ರಕಾಶ್ ಅವರು ಸುಮ್ಮನೇಕೆ ಇದ್ದರು.. ಅವರಿಂದ ಪ್ರತಿರೋಧವಾಗಲಿ ಅಥವಾ ಪೊಲೀಸರಿಗೆ ದೂರು ನೀಡುವುದಾಗಲಿ ಏನೂ ಸಹ ಮಾಡಲಿಲ್ಲ.. ಇದಕ್ಕೆ ಕಾರಣವೇನು ಎಂದು ಸಾಮಾಜಿಕ‌ ಜಾಲತಾಣದಲ್ಲಿ ಕೆಲವರು ಕಮೆಂಟ್ ಮಾಡಿದ್ದರು.. ಆದರೆ ಅಲ್ಲಿ ಅಂದರೆ ಪ್ರಕಾಶ್ ಅವರು ದೂರು ನೀಡದೇ ಇರಲು ಅಸಲಿ ವಿಚಾರ ಬೇರೆಯೇ ಇತ್ತು..

ಹೌದು ಪ್ರಕಾಶ್ ಅವರಿಗೆ ಅದಾಗಲೇ ಐವತ್ತೊಂಭತ್ತು ವರ್ಷ ವಯಸ್ಸು.. ಇತ್ತ ಬಹಳ ಸೌಮ್ಯ ಸ್ವಭಾವದವರಾದ ಪ್ರಕಾಶ್ ಅವರು ಮೊದಲೂ ಸಹ ವಿದ್ಯಾರ್ಥಿಗಳು ಸಣ್ಣ ಪುಟ್ಟದಾಗಿ ತರಲೆ ಮಾಡಿದಾಗ ಸಹಿಸಿಕೊಂಡು ಬಂದವರು.. ಆದರೆ ಆ ದಿನ ಏಕಾಏಕಿ ಆರೀತಿ ಮಾಡಿಬಿಟ್ಟರು.. ಅಂತಹ ಸಮಯದಲ್ಲಿ ಏನು ಮಾಡಬೇಮೆಂದು ತೋಚದೇ ಸುಮ್ಮನಿದ್ದರು.. ಆದರೆ ಆ ಪುಣ್ಯಾತ್ಮ ಆ ಘಟನೆ ನಡೆದ ನಂತರವೂ ಸುಮ್ಮನೇ ಇದ್ದುಬಿಟ್ಟರು.. ಇದು ಅವರ ದೊಡ್ಡತನ.. ಹೌದು ಅವರು ಸುಮ್ಮನಿರಲು ನಿಜವಾದ ಕಾರಣ ಆ ಮಕ್ಕಳ ಭವಿಷ್ಯ ಹಾಳಾಗಬಾರದು ಎಂದು.. ಹೌದು ಪೊಲೀಸರಲ್ಲಿ ದೂತು ನೀಡಿದರೆ ಅಥವಾ ಮೇಲಾಧಿಕಾರಿಗಳಲ್ಲಿ ದೂರು ನೀಡಿದರೆ ಅವರನ್ನು ಶಾಲೆಯಿಂದ ಹೊರ ಕಳುಹಿಸಬಹುದು.. ಮೊದಲೇ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು‌ ಈ ಸಮಯದಲ್ಲಿ ನಾನು ದೂರು ಕೊಟ್ಟರೆ ಅವರ ಭವಿಷ್ಯ ಹಾಳಾಗಬಹುದೆಂದು ಸುಮ್ಮನಾದರು..

ಹೌದು ಈ ಬಗ್ಗೆ ನಿನ್ನೆ ಮಾದ್ಯಮದವರು ಪ್ರಕಾಶ್ ಅವರನ್ನು ಪ್ರಶ್ನಿಸಿದಾಗ ಅವರ ಬಾಯಿಂದ ಬಂದ ಉತ್ತರವೇ ಇದಾಗಿತ್ತು ‌. ನಾನು ಮುಂದಿನ ವರ್ಷ ನಿವೃತ್ತಿಯಾಗ್ತೇನೆ.. ನನಗೆ ಇನ್ನೊಂದು ವರ್ಷವಷ್ಟೇ ಸೇವೆ ಇರೋದು.. ಆದರೆ ಆ ಮಕ್ಕಳು ಮುಂದೆ ಸಮಾಜದಲ್ಲಿ ಚೆನ್ನಾಗಿ ಬಾಳಬೇಕಾದವರು.. ಅವರ ಮಎ ದೂರು ಕೊಟ್ಟರೆ ಅವರ ಭವಿಷ್ಯವೇ ಹಾಳಾಗುತ್ತದೆ ಅದಕ್ಕೆ ನಾನು ಯಾವ ದೂರನ್ನೂ ಸಹ ನೀಡಲಿಲ್ಲ ಎಂದರು.. ಇದು ನಿಜಕ್ಕೂ ಅವರ ದೊಡ್ಡತನವೇ ಸರಿ.. ಶಿಕ್ಷಕ ಎಂದೂ ಸಹ ಮಕ್ಕಳ ಶ್ರೇಯಸ್ಸನ್ನು ಬಯಸುವರು ಎಂಬುದಕ್ಕೆ ಪ್ರಕಾಶ್ ಅವರೇ ನಿಜವಾದ ಉದಾಹರಣೆ.. ಆದರೆ ಪ್ರಕಾಶ್ ಅವರ ಮೇಲೆ ಕೈ ಮಾಡುವಾಗ ಅದೇ ತರಗತಿಯಲ್ಲಿ ಇದ್ದ ಸಾಕಷ್ಟು ವಿದ್ಯಾರ್ಥಿಗಳು ಅದನ್ನು ತಡೆಯದೇ ಸುಮ್ಮನೆ ಕೂತಿದದ್ದು ಮಾತ್ರ ವಿಪರ್ಯಾಸವೇ ಸರಿ..