ನಮ್ರತಾ ಮೇಲಿನ ಆಸೆಗಾಗಿ ಸ್ನೇಹಿತ್‌ ಮಾಡಿರುವ ಕೀಳು ಮಟ್ಟದ ಕೆಲಸ ನೋಡಿ..

0 views

ಬಿಗ್‌ ಬಾಸ್‌ ಮನೆಯಲ್ಲಿ ಪ್ರತಿ ಸೀಸನ್‌ ನಲ್ಲಿಯೂ ಪ್ರೀತಿ ಪ್ರೇಮ ಎಂದುಕೊಂಡು ಒಂದೊಂದು ಜೋಡಿ ಇರೋದುಂಟು.. ಈ ವಿಚಾರವಾಗಿಯಾದರೂ ಫಿನಾಲೆ ವಾರದವರೆಗೆ ಸೇವ್‌ ಆಘುವ ಲೆಕ್ಕಚಾರವೂ ಇರುತ್ತದೆ.. ಅದರಂತೆಯೇ ಪ್ರತಿಯೊಂದು ಸೇಸನ್‌ ನಲ್ಲಿಯೂ ಒಂದೊಂದು ಜೋಡಿಯನ್ನು ಕಾಣುತ್ತೇವೆ.. ಆದರೆ ಅದೆಲ್ಲವೂ ಒಂದು ರೀತಿ ಮನರಂಜನೆಗೆ ಮಾತ್ರವೇ ಸೀಮಿತವಾಗಿತ್ತು.. ಯಾರಿಗೂ ಕಿರಿಕಿರಿ ನೀಡುವ ಮಟ್ಟಕ್ಕೆ ಹೋಗಿರಲಿಲ್ಲ.. ಆದರೆ ಈ ಬಾರಿಯ ಸೇಸನ್‌ ನಲ್ಲಿ ಬಂದ ಬಹುತೇಕ ಸದಸ್ಯರು ಒಬ್ಬೊಬ್ಬ ಮಹಿಳಾ ಸ್ಪರ್ಧಿಗಳ ಹಿಂದೆ ಹೋಗಿದ್ದು ಅದರಲ್ಲೂ ಕೆಲವರ ನಡವಳಿಕೆ ವಿಪರೀತ ಎನಿಸಿ ನೋಡಲು ಸಹ ಕಿರಿಕಿರಿ ಆಗುತ್ತಿರೋದುಂಟು.. ಹೌದು ಬಿಗ್‌ ಬಾಸ್‌ ಸೀಸನ್‌ ಹತ್ತರಲ್ಲಿ ಬಂದ ಸದಸ್ಯರಲ್ಲಿ ಒಂದು ಕಡೆ ಮೈಕಲ್‌ ಇಶಾನಿ ಒಂದು ಜೋಡಿಯಾದರೆ.. ಶುರುವಿನಲ್ಲಿ ಕಾರ್ತಿಕ್‌ ಸಂಗೀತಾ ಹಿಂದೆ ಬಿದ್ದಿದ್ದು ನಂತರ ಗುಡ್‌ ಫ್ರೆಂಡ್ಸ್‌ ಎಂದು ಆತ್ಮೀಯತೆಯೇನೋ ಮುಂದುವರೆಸಿದರು.. ಸ್ನೇಹಿತರು ಎಂದುಕೊಳ್ಳುತ್ತಲೇ ಎಲ್ಲಾ ರೀತಿ ಅಡ್ವಾಂಟೇಜ್‌ ಪಡೆದುಕೊಂಡದ್ದು ಜನರಿಗೆ ಸ್ಪಷ್ಟವಾಗಿ ಕಾಣುತ್ತಿದ್ದು ಈ ಬಗ್ಗೆ ಸಾಕಷ್ಟು ಟ್ರೋಲ್‌ ಕೂಡ ಆಗಿತ್ತು.. ಇದರ ಹೊರತಾಗಿಯೂ ಕಾರ್ತಿಕ್‌ ಬಿಗ್‌ ಬಾಸ್‌ ಮನೆಯಲ್ಲಿ ಆಡುವ ಟಾಸಕ್‌ ಗಳು ಹಾಗೂ ಮನೆಯಲ್ಲಿ ಇರುವ ರೀತಿಯಿಂದ ಜನರಿಗೆ ಇಷ್ಟವಾಗಿದ್ದು ಫಿನಾಲೆಯ ಒಬ್ಬ ಸ್ಪರ್ಧಿ ಎನ್ನಲಾಗುತ್ತಿದೆ..

ಇನ್ನು ಸಂಗೀತಾಗೆ ಶುರುವಿನಲ್ಲಿ ಎಲ್ಲರ ಬೆಂಬಲ ದೊರೆತಿತ್ತು.. ಆದರೆ ಇತ್ತೀಚೆಗೆ ಸಂಗೀತಾ ಕೂಡ ತನ್ನ ಅತಿಯಾದ ಬಾಯಿ ಹಾಗೂ ಅತಿಯಾದ ಜಗಳಗಳಿಂದ ಕಿರಿಕಿರಿ ಮಾಡುತ್ತಿರೋದುಂಟು.. ಇನ್ನು ಮನೆಯ ಮತ್ತೊಂದು ಜೋಡಿ ಸ್ನೇಹಿತ್‌ ಹಾಘೂ ನಮ್ರತಾ.. ಅತ್ತ ಸ್ನೇಹಿತ್‌ ತಾನು ನಿಜವಾಗಿಯೂ ನಮ್ರತಾಳನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದು ಇತ್ತ ನಮ್ರತಾ ಕಡಾಖಂಡಿತವಾಗಿ ಸ್ನೇಹಿತ್‌ ನ ಪ್ರಪೋಸಲ್‌ ಅನ್ನು ನಿರಾಕರಿಸಿದ್ದಾಯ್ತು.. ಆದರೂ ಸಹ ಸ್ನೇಹಿತ್‌ ಮಾತ್ರ ನಮ್ರತಾ ಹಿಂದೆ ಹೋಗೋದನ್ನ ನಿಲ್ಲಿಸಲಿಲ್ಲ.. ಹಿಂದೆ ಹೋಗಿದ್ದರೆ ಪರವಾಗಿಲ್ಲ ಆದರೆ ಸ್ನೇಹಿತ್‌ ನಮ್ರತಾಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದು ನೋಡುಗರಿಗೆ ತೀರಾ ಅಸಹ್ಯ ಎನಿಸುವಂತಾಗಿದೆ.. ಹೌದು ಈ ವಾರ ಮನೆಯ ಕ್ಯಾಪ್ಟನ್‌ ಆಗಿರುವ ಸ್ನೇಹಿತ್‌ ಗೆ ಡಬಲ್‌ ಅಧಿಕಾರ ದೊರೆತಿದೆ.. ತನ್ನ ಅಧಿಕಾರವನ್ನು ಸರಿಯಾಗಿ ಬಳಸಿಕೊಂಡು ತಾನೂ ಒಬ್ಬ ಸ್ಟ್ರಾಂಗ್‌ ಸ್ಪರ್ಧಿ ಎಂದು ತೋರಿಸಲು ಸ್ನೇಹಿತ್‌ ಗೆ ಇದು ಒಳ್ಳೆಯ ಅವಕಾಶವಾಗಿತ್ತು..

ಆದರೆ ಸ್ನೇಹಿತ್‌ ಮಾತ್ರ ನಮ್ರತಾ ಹಾಕಿದ ಗೆರೆಯನ್ನು ದಾಟದೆ ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಿರುವುದಷ್ಟೇ ಅಲ್ಲದೇ ಆಕೆಯ ತಾಳಕ್ಕೆ ಕುಣಿಯುತ್ತಿದ್ದಾನೆ.. ಹೌದು ಮನೆಯ ಕ್ಯಾಪ್ಟನ್‌ ಆದ ಸ್ನೇಹಿತ್‌ ಗೆ ಮೊದಲು ಸಿಕ್ಕ ಅವಕಾಶ ನಾಮಿನೇಷನ್‌ ಮಾಡುವುದು.. ಆ ಸಮಯದಲ್ಲಿ ನಮ್ರತಾಳನ್ನು ಉಳಿಸಿ ಪ್ರತಾಪ್‌ ನನ್ನು ನಾಮಿನೇಟ್‌ ಮಾಡಿದನು.. ಅದು ಹೋದರೆ ಹೋಗಲಿ ಎಂದುಕೊಂಡರೂ.. ಟಾಸ್ಕ್‌ ಸಮಯದಲ್ಲಿ ಮನೆಯ ಸದಸ್ಯರನ್ನು ಆಯ್ಕೆ ಮಾಡಬೇಕಾದ ಸಮಯ ಬಂದಾಗ ಮನೆಯ ಹನ್ನೊಂದು ಸದಸ್ಯರ ಯಾವ ಮಾತನ್ನೂ ಗಮನಕ್ಕೆ ತೆಗೆದುಕೊಳ್ಳದೇ ಕೇವಲ ನಮ್ರತಾ ಹೇಳಿದ ರೀತಿಯಲ್ಲಿಯೇ ಎರಡು ತಂಡದ ಸದಸ್ಯರನ್ನು ಆಯ್ಕೆ ಮಾಡಿದ್ದು ಮನೆಯಲ್ಲಿ ದೊಡ್ಡ ಜಗಳಕ್ಕೆ ಕಾರಣವಾಗಿತ್ತು.. ನಮ್ರತಾ ಹೇಳಿದ ಹಾಗೆ ಮೈಕಲ್‌ ನಮ್ಮ ತಂಡಕ್ಕೆ ಬೇಕು.. ಮಾವುತ ನಮಗೆ ಬೇಡ.. ವಿನಯ್‌ ನಮಗೆ ಬೇಕು ಎನ್ನಲಾಗಿ ಆಕೆ ಹೇಳಿದಂತೆಯೇ ತಂಡವನ್ನು ರಚಿಸಿದ್ದಾಯ್ತು..

ಅದೂ ಹೋದರೆ ಹೋಗಲಿ ಎಂದು ಸುಮ್ಮನಾದರೂ ಮುಂದೆ ಟಾಸ್ಕ್‌ ಗಳಲ್ಲಿ ಮನೆಯ ಕ್ಯಾಪ್ಟನ್‌ ಆಗಿ ನಿರ್ಧಾರ ತೆಗೆದುಕೊಂಡ ನಂತರ ನಮ್ರತಾ ಇನ್ನೇನೋ ಹೇಳಿದರೆ ಆಗ ಮತ್ತೆ ತನ್ನ ನಿರ್ಧಾರವನ್ನೇ ಬದಲಿಸಿ ನಮ್ರತಾ ಹೇಳಿದ್ದೇ ಸರಿ.. ಸದೇ ನನ್ನ ನಿರ್ಧಾರ ಎನ್ನುತ್ತಿದ್ದು ಅದಾಗಲೇ ಜನರು ಸ್ನೇಹಿತ್‌ ನನ್ನ ಸಂಗಬುಲ್ಲ ಎಂದು ಛೀಮಾರಿ ಹಾಕುತ್ತಿದ್ದಾರೆ.. ಅತನ ತಪ್ಪು ಒಮ್ಮೆ ಆದರೆ ಸರಿ.. ಎರಡು ಬಾರಿ ಆದರೆ ಸರಿ.. ಆದರೆ ಪದೇ ಪದೇ ನಮ್ರತಾಳನ್ನು ಮೆಚ್ಚಿಸುವ ಸಲುವಾಗಿ ಮನೆಯ ಅಷ್ಟೂ ಸದಸ್ಯರ ಆಟವನ್ನು ಕಾಳಿಗೆ ಕಸ ಮಾಡಿಕೊಂಡಿರುವ ಸ್ನೇಹಿತ್‌ ಮನೆಯಲ್ಲಿ ಉಳಿಯಲು ಲಾಯಕ್ಕೇ ಇಲ್ಲ ಎನ್ನುತ್ತಿದ್ದಾರೆ ಜನರು..