ತಾಯಿಯನ್ನು ಕಳೆದುಕೊಂಡು ಹನ್ನೊಂದು ದಿನ ತುಂಬುವ ಮುನ್ನವೇ ದುನಿಯಾ ವಿಜಯ್ ಮಾಡಿರುವ ಕೆಲಸ ನೋಡಿ‌.

0 views

ಸ್ಯಾಂಡಲ್ವುಡ್ ನ ಖ್ಯಾತ ನಟ ದುನಿಯಾ ವಿಜಯ್ ಅವರು ಕೆಲವೇ ದಿನಗಳ ಹಿಂದೆ ತಮ್ಮ ತಾಯಿಯನ್ನು ಕಳೆದುಕೊಂಡ ವಿಚಾರ ಎಲ್ಲರಿಗೂ ತಿಳಿದೇ ಇದೆ‌‌. ಆದರೆ ತಾಯಿ ಇಲ್ಲವಾಗಿ ಹನ್ನೊಂದು ದಿನ ತುಂಬುವ ಮೊದಲೇ ದುನಿಯಾ ವಿಜಯ್ ಅವರು ಮಾಡಿರುವ ಕೆಲಸ ನೋಡಿ ಜನರು ದುನಿಯಾ ವಿಜಯ್ ಅವರಿಗೆ ತಮ್ಮ ತಾಯಿಯ ಮೇಲಿನ ಪ್ರೀತಿ ಕಂಡು ಮರುಗಿದ್ದಾರೆ.. ಹೌದು ಗಂಡು ಮಕ್ಕಳಿಗೆ ಅಮ್ಮನ ಕಂಡರೆ ಹೆಚ್ಚು ಪ್ರೀತಿ ಅನ್ನೋ ಮಾತು ಅಕ್ಷರಶಃ ಸತ್ಯ.‌ ಅದರಲ್ಲೂ ದುನಿಯಾ ವಿಜಯ್ ಅವರು ಮಾತನಾಡುವಾಗ ಬಹಳಷ್ಟು ಬಾರಿ ತನ್ನ ತಾಯಿಯ ಬಗ್ಗೆ ಮಾತನಾಡಿ ಕಣ್ಣೀರಿಟ್ಟಿದ್ದರು.. ಅಷ್ಟೇ ಅಲ್ಲದೇ ವಯಸ್ಸಾದ ನಂತರ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಸಾಕಷ್ಟು ಬಾರಿ ಹೇಳಿದ್ದರು. ಅವರು ಸುಮ್ಮನೆ ಬಾಯಿ‌ ಮಾತಿಗೆ ಹೇಳದೆ ಅವರ ಮಾತಿಗೆ ಅವರು ಬದ್ಧವಾಗಿದ್ದು ತಮ್ಮ ತಂದೆ ತಾಯಿಯನ್ನು ಎಳೆ ಮಕ್ಕಳಂತೆ ನೋಡಿಕೊಂಡಿದ್ದರು. ಆದರೆ ಜುಲೈ ಎಂಟರಂದು ದುನಿಯಾ ವಿಜಯ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡ ನೋವನ್ನು ಅನುಭವಿಸಿದರು.. ಆದರೆ ಇದೀಗ ತಾಯಿ ಇಲ್ಲವಾಗಿ ಹನ್ನೊಂದು ದಿನ ತುಂಬುವ ಮುನ್ನವೇ ದುನಿಯಾ ವಿಜಯ್ ಅವರು ಮಾಡಿರುವ ಕೆಲಸ ನಿಜಕ್ಕೂ ಮನಕಲಕುತ್ತದೆ.

ಹೌದು ದುನಿಯಾ ವಿಜಯ್ ಅವರ ತಂದೆ ತಾಯಿ ಇಬ್ಬರಿಗೂ ಕಳೆದ ಎರಡು ತಿಂಗಳ ಹಿಂದಷ್ಟೇ ಕೊರೊನಾ ಕಾಣಿಸಿಕೊಂಡು ಹೊರಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಮನೆಯನ್ನೇ ಆಸ್ಪತ್ರೆಯನ್ನಾಗಿಸಿ ಇಬ್ಬರನ್ನೂ ಸಹ ಚೆನ್ನಾಗಿ ನೋಡಿಕೊಂಡು ಗುಣಮುಖರನ್ನಾಗಿಸಿದ್ದರು.. ಆದರೆ ಅದ್ಯಾಕೋ ವಿಜಯ್ ಅವರು ತಮ್ಮ ತಾಯಿಯ ಒಟ್ಟಿಗೆ ಹೆಚ್ಚು ದಿನ ಸಮಯ ಭಾಗ್ಯ ಪಡೆದಿಲ್ಲವೆನ್ನುವಂತೆ ವಿಜಯ್ ಅವರ ತಾಯಿ ನಾರಾಯಣಮ್ಮ ಅವರಿಗೆ ಕಳೆದ ಒಂದು ತಿಂಗಳ ಹಿಂದೆ ಬ್ರೈನ್ ಸ್ಟ್ರೋಕಾಗಿ ಸತತ ಇಪ್ಪತ್ತು ದಿನಗಳ ಕಾಲ ಮಲಗಿದ್ದಂತೆ ವಿಜಯ್ ಅವರು ತಮ್ಮ ತಾಯಿಯ ಹಾರೈಕೆ ಮಾಡಿದರು. ಇನ್ನು ಅಮ್ಮ ಉಳಿಯುವುದಿಲ್ಲ ಎಂಬುದನ್ನು ಅರಿತ ವಿಜಯ್ ಅವರು ತನ್ನ ತಾಯಿ ಇರುವಷ್ಟು ದಿನ ಮಗುವಿನ ರೀತಿಯಲ್ಲಿ ಹಾರೈಕೆ ಮಾಡಿದರು‌..

ದಿನದಿಂದ ದಿನಕ್ಕೆ ಆರೋಗ್ಯ ಕ್ಷೀಣಿಸಿ ಜುಲೈ ಎಂಟರಂದು ನಾರಾಯಣಮ್ಮ ಅವರು ಕೊನೆತುಸಿರೆಳೆದುಬಿಟ್ಟರು. ಇನ್ನು ಇತ್ತ ದುನಿಯಾ ವಿಜಯ್ ಅವರ ಪ್ರತಿ ಕೆಲಸದಲ್ಲಿಯೂ ಬೆನ್ನೆಲುಬಾಗಿ ಇರುತ್ತಿದ್ದ ತಾಯಿಯನ್ನು ಕಳೆದುಕೊಂಡು ದುನಿಯಾ ವಿಜಯ್ ಅವರು ಅಕ್ಷರಶಃ ಕುಸಿದು ಹೋದರು‌‌.. ಕೊನೆ ಘಳಿಗೆಯಲ್ಲಿ ಅಮ್ಮನನ್ನು ಅಪ್ಪಿಕೊಂಡು ಬಿಡಲು ಒಪ್ಪದ ಮಗನ ಆ ಆಕ್ರಂದನ ನಿಜಕ್ಕೂ ಅಲ್ಲಿದ್ದ ಜನರಲ್ಲಿ ಕಣ್ಣೀರು ತರಿಸಿತ್ತು.. ಜುಲೈ ಒಂಭತ್ತರಂದು ವಿಜಯ್ ಅವರ ತಂದೆಯ ಹುಟ್ಟೂರಾದ ಆನೇಕಲ್ ನ ಕುಂಬಾರಹಳ್ಳಿಯ ಜಮೀನಿನಲ್ಲಿ ನಾರಾಯಣಮ್ಮ ಅವರ ಅಂತ್ಯ ಸಂಸ್ಕಾರ ನೆರವೇರಿತು.. ಅಂತ್ಯ ಸಂಸ್ಕಾರ ನಡೆದ ದಿನದಿಂದಲೂ ವಿಜಯ್ ತಮ್ಮ ಪತ್ನಿ ಕೀರ್ತಿ ಜೊತೆಗೆ ಅದೇ ಊರಿನಲ್ಲಿ ಉಳಿದುಕೊಂಡಿದ್ದರು..

ಆದರೆ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ವಿಜಯ್ ತಾಯಿ‌ ಇಲ್ಲವಾದ ಎರಡೇ ದಿನದಲ್ಲಿ ಮಾಡಿದ ಕೆಲಸ ನಿಜಕ್ಕೂ ಮನಕಲಕುವಂತಿತ್ತು.. ಇದೀಗ ಹನ್ನೊಂದು ದಿನ ಮುಗಿಯುವ ಮುನ್ನ ಆ ಕೆಲಸ ಸಂಪೂರ್ಣವೂ ಆಗಿದೆ.. ಹೌದು ಇದ್ದಷ್ಟು ದಿನ ಕೊನೆಗಾಲದಲ್ಲಿ ಮಗುವಿನಂತೆ ತನ್ನ ತಾಯಿಯನ್ನು ನೋಡಿಕೊಂಡಿದ್ದ ದುನಿಯಾ ವಿಜಯ್ ಅವರು ಅಮ್ಮ ಇಲ್ಲವಾದ ಬಳಿಕ ಆಕೆಯ ಅಂತ್ಯ ಸಂಸ್ಕಾರ ಮಾಡಿದ ಜಾಗದಲ್ಲಿ ಅಮ್ಮ ಮಲಗಿದ್ದಾಳೆ ಅವಳಿಗೆ ಮಳೆ ಬಿಸಿಲು ಎಂದು ಎರಡೇ ದಿನಕ್ಕೆ ತಾಯಿಯ ಸ್ಮಾರಕ ಕಟ್ಟುವ ಕೆಲಸವನ್ನು ಆರಂಭಿಸಿದರು. ನಿಧಾನವಾಗಿ ಮಾಡಬಹುದು ಎಂದು ಆಪ್ತರು ಹೇಳಿದರೂ ಸಹ ಒಪ್ಪದ ದುನಿಯಾ ವಿಜಯ್ ಅವರು ತನ್ನ ತಾಯಿಯ ಸ್ಮಾರಕವನ್ನು ಎಂಟೇ ದಿನದಲ್ಲಿ ಸಂಪೂರ್ಣಗೊಳಿಸಿದ್ದಾರೆ.. ಅಷ್ಟೇ ಅಲ್ಲದೇ ತಾಯಿಯ ಸ್ಮಾರಕದ ಮೇಲೆ ನಾರಯಾಣಮ್ಮನವರ ಮೂರ್ತಿಯನ್ನು ಸಹ ಮಾಡಿಸಿ ಪ್ರತಿಷ್ಟಾಪನೆ ಮಾಡಿದ್ದಷ್ಟೇ ಅಲ್ಲದೇ ತಾಯಿಗೆ ಬಿಸಿಲು ಹಾಗೂ ಮಳೆ ಆಗಬಾರದೆಂದು ಸಂಪೂರ್ಣವಾಗಿ ಆ ಜಾಗವನ್ನು ಶೆಲ್ಟರ್ ನಿಂದ ನಿರ್ಮಾಣ ಮಾಡಿಸಿದ್ದಾರೆ..

ದುನಿಯಾ ಸಿನಿಮಾದಲ್ಲಿ ತಾಯಿಗೆ ಸ್ಮಾರಕ ಕಟ್ಟಲು ಪರದಾಡುವ ದುನಿಯಾ ವಿಜಯ್ ಅವರ ಪಾತ್ರ ಕೊನೆಗೂ ಆ ಕೆಲಸ ಮಾಡಲಾಗದೆ ಅಂತ್ಯವಾಗಿ ಹೋಗುತ್ತದೆ.. ಆದರೆ ನಿಜ ಜೀವನದಲ್ಲಿಯೂ ತಾಯಿಯನ್ನು ಅಷ್ಟೇ ಪ್ರೀತಿಸುತ್ತಿದ್ದ ವಿಜಯ್ ಅವರು ತಾಯಿಗಾಗಿ ಎಂಟೇ ದಿನದಲ್ಲಿ ಸ್ಮಾರಕ ಕಟ್ಟಿ ಆಕೆಯ ಮೂರ್ತಿಯನ್ನಿಟ್ಟು ಹನ್ನೊಂದು ದಿನದ ಕಾರ್ಯದಲ್ಲಿ ಪೂಜಿಸಲು ಸಕಲ ತಯಾರಿ ನಡೆಸಿದ್ದಾರೆ.. ದುನಿಯಾ ವಿಜಯ್ ಅವರು ತಮ್ಮ ತಾಯಿಯ ಮೇಲೆ ಇಟ್ಟಿದ್ದ ಪ್ರೀತಿ ನಿಜಕ್ಕೂ ಮೆಚ್ಚುವಂತದ್ದು.. ಹೆತ್ತವರಿಗೆ ಮಕ್ಕಳಿಂದ ಇದಕ್ಕಿಂತ ಇನ್ನೇನು ಬೇಕು ಹೇಳಿ..