ಪವಿತ್ರಾ ಲೋಕೇಶ್ ನರೇಶ್ ವಿಚಾರದಲ್ಲಿ ತಿರುವು..

0 views

ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರ ವಿಚಾರದಲ್ಲಿ ಕೆಲ ದಿನಗಳಿಂದ ಸಾಕಷ್ಟು ಸುದ್ದಿಯಾಗಿರುವುದು ಎಲ್ಲರಿಗೂ ತಿಳಿದೇ ಇದೆ.. ಆದರೆ ಇದೀಗ ಆ ಎಲ್ಲಾ ವಿಚಾರಕ್ಕೂ ಹೊಸದೊಂದು ತಿರುವು ದೊರೆತಿದೆ.. ಹೌದು ನಟಿ ಪವಿತ್ರಾ ಲೋಕೇಶ್ ಅವರು ಕನ್ನಡದಲ್ಲಿ ಸಾಕಷ್ಟು ಹೆಸರು ಮಾಡಿದರೂ ಸಹ ಗೌರವಾನ್ವಿತ ಪಾತ್ರಗಳು ಹೆಚ್ಚು ದೊರಕಲಿಲ್ಲ.. ಅತ್ತ ನಟನೆಯಲ್ಲಿ ಪ್ರತಿಭಾವಂತರಾಗಿದ್ದ ಪವಿತ್ರಾ ಲೋಕೇಶ್ ಅವರಿಗೆ ತೆಲುಗಿನ ಸಿನಿಮಾಗಳಲ್ಲಿ ಅವಕಾಶಗಳು ಒದಗಿ ಬಂದವು.. ಅದರಲ್ಲೂ ತೆಲುಗಿನಲ್ಲಿ ಅಲ್ಲು ಅರ್ಜುನ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು.. ಇನ್ನೂ ಕನ್ನಡಕಿಂತ ಹೆಚ್ಚು ತೆಲುಗಿನಲ್ಲಿ‌ ಒಳ್ಳೊಳ್ಳೆ ಪಾತ್ರಗಳು ಬಂದ ಕಾರಣ ಅಲ್ಲಿಯೇ ಹೆಚ್ಚು ಸಮಯ ಕಳೆಯುವಂತಾಯಿತು..

ವೃತ್ತಿ ಬದುಕಿನ ಜೊತೆ ಅಲ್ಲಿನ ಕಲಾವಿದರ ಜೊತೆ ಸ್ನೇಹ ಒಡನಾಟವೂ ಹೆಚ್ಚಾಯಿತು.. ಅಲ್ಲಿನ ಖ್ಯಾತ ನಟ ಮಹೇಶ್ ಬಾಬು ಅವರ ಅಣ್ಣ ನಟ ನರೇಶ್ ಜೊತೆಗೆ ಪವಿತ್ರಾ ಲೋಕೇಶ್ ಅವರ ಹೆಸರು ಕೇಳಿ ಬಂದಿತ್ತು.. ಅದರಲ್ಲೂ ಅಲ್ಲಿನ ಕೆಲ ಮಾದ್ಯಮಗಳು ಈ ವಿಚಾರವನ್ನು ಸುದ್ದಿ ಮಾಡಿದ್ದವು.. ನಂತರದಲ್ಲಿ ಕನ್ನಡದಲ್ಲಿಯೂ ಈ ವಿಚಾರ ಸುದ್ದಿಯಾಯಿತು.. ನರೇಶ್ ಅವರಿಗೆ ಈಗಾಗಲೇ ಮೂರು ಮದುವೆಯಾಗಿದ್ದು ಅದರಲ್ಲೂ ಮೂರನೇ ಪತ್ನಿ ರಮ್ಯಾ ಕನ್ನಡದವರೇ ಆಗಿದ್ದು.. ಈಗ ಪವಿತ್ರಾ ಲೋಕೇಶ್ ಅವರು ನಾಲ್ಕನೇ ಮದುವೆಯಾಗಿದ್ದಾರೆ ಎನ್ನಲಾಗಿತ್ತು.. ಇನ್ನೂ ಕೆಲ ಕಡೆ ಮದುವೆಯಾಗಲಿದ್ದಾರೆ ಎನ್ನಲಾಗಿತ್ತು..

ಒಂದು ಕಡೆ ನರೇಶ್ ಅವರಿಗೆ ಅರವತ್ತ ನಾಲ್ಕು ವರ್ಷ ವಯಸ್ಸಾಗಿದ್ದು ಮೂರು ಮದುವೆಗಳಾಗಿವೆ.. ಜೊತೆಗೆ ಅವರು ಬಹಳ ಸಿರಿವಂತರೂ ಆಗಿದ್ದು ಆರು ಸಾವಿರ ಕೋಟಿ ರೂಪಾಯಿ ಆಸ್ತಿಯ ಒಡೆಯ ಎನ್ನಲಾಗಿದೆ. ಇನ್ನು ಇತ್ತ ಪವಿತ್ರಾ ಲೊಕೇಶ್ ಅವರು ಕನ್ನಡದ ಖ್ಯಾತ ನಟ ಸುಚೇಂದ್ರ ಪ್ರಸಾದ್ ಅವರ ಜೊತೆ ಮದುವೆಯಾಗಿದ್ದು ಇಬ್ಬರು ಮಕ್ಕಳು ಸಹ ಇದ್ದಾರೆ.. ಈ ನಡುವೆ ಪವಿತ್ರಾ ಲೋಕೇಶ್ ಅವರ ಹೆಸರು ನರೇಶ್ ಅವರ ಜೊತೆ ಕೇಳಿ ಬಂದಿದ್ದು ಕುಟುಂಬಕ್ಕೆ ಕೊಂಚ ಇರಿಸು ಮುರಿಸಾಗಿದ್ದು ಸತ್ಯ..

ಇನ್ನು ಈ ಬಗ್ಗೆ ಪವಿತ್ರಾ ಲೋಕೇಶ್ ಅವರ ಸಹೋದರ ನಟ ಹೇಳಿಕೆ ಕೊಟ್ಟು ಅವರು ಮದುವೆಯಾಗಿಲ್ಲ ಎಂದಿದ್ದರು.. ಆದರೆ ಈಗ ಈ ವಿಚಾರಕ್ಕೆ ಹೊಸ ತಿರುವೇ ದೊರೆತಿದೆ.. ಹೌದು ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಅವರ ವಿಚಾರದಲ್ಲೀಗ ಮೂರನೇ ಪತ್ನಿ ರಮ್ಯಾ ರಘುಪತಿ ಅವರ ಎಂಟ್ರಿ ಯಾಗಿದ್ದು ನೇರವಾಗಿ ತಿರುಗೇಟು ನೀಡಿದ್ದಾರೆ.. ಹೌದು ಇಷ್ಟು ದಿನಗಳ ಕಾಲ ತೆರೆ ಮರೆಯಲ್ಲಿದ್ದ ವಿಚಾರ ಇದೀಗ ಬೆಳಕಿಗೆ ಬರುತ್ತಿದ್ದಂತೆ ಇಷ್ಟೂ ದಿನಗಳ ಕಾಲ ಸುಮ್ಮನಿದ್ದ ನರೇಶ್ ಅವರು ಈಗ ಮೂರನೇ ಪತ್ನಿ ರಮ್ಯ ರಘುಪತಿ ಅವರಿಗೆ ಡಿವೋರ್ಸ್ ನೋಟೀಸ್ ನೀಡಿದ್ದಾರೆ.. ಇದಕ್ಕೆ ಉತ್ತರ ನೀಡಿರುವ ರಮ್ಯಾ ರಘುಪತಿ ನಾನು ಯಾವುದೇ ಕಾರಣಕ್ಕೂ ನರೇಶ್ ಗೆ ಡಿವೋರ್ಸ್ ನೀಡೋದಿಲ್ಲ..

ನನ್ನ ಗಂಡನ ಹೆಸರು ಪವಿತ್ರಾ ಲೋಕೇಶ್ ಮಾತ್ರವಲ್ಲ ಇನ್ನೂ ಆರು ಏಳು ಮಹಿಳೆಯರ ಜೊತೆ ಕೇಳಿ ಬಂದಿದೆ.. ಇದೇನೂ ಹೊಸ ವಿಚಾರ ಅಲ್ಲ.. ನಾನು ಯಾವುದೇ ಕಾರಣಕ್ಕೂ ಡಿವೋರ್ಸ್ ನೀಡೋದಿಲ್ಲ ಎಂದು ದಿಟ್ಟವಾಗಿ ಎದುರು ನಿಂತಿದ್ದಾರೆ..ಆದರೆ ಅತ್ತ ನರೇಶ್ ಮಾತ್ರ ನನಗೆ ಡಿವೋರ್ಸ್ ಸಿಗದೇ ಹೋದರೆ ಆಕೆಯ ಕೈಯಲ್ಲಿ ರಾಕಿ ಕಟ್ಟಿಸಿಕೊಂಡಾದರೂ ಆಕೆಯನ್ನು ಮನೆಯಲ್ಲಿಯೇ ಇರಿಸಿಕೊಳ್ಳುವೆ ಎಂದಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.. ಆದರೆ ಇದೆಲ್ಲದರ ನಡುವೆ ಪವಿತ್ರಾ ಲೋಕೇಶ್ ಅವರ ನಡೆಯೇ ಬೇರೆ ಯಾಗಿದೆ.. ಹೌದು ಇತ್ತ ಪವಿತ್ರಾ ಲೋಕೇಶ್ ಅವರು ಮೂಲತಃ ಮೈಸೂರಿನವರಾಗಿದ್ದು ಸಧ್ಯ ಮೈಸೂರಿಗೆ ಬಂದಿರುವ ಪವಿತ್ರಾ ಲೋಕೇಶ್ ಅವರು ಮೈಸೂರಿನ ಪೋಲೀಸ್ ಠಾಣೆ ಮೆಟ್ಟಿಲೇರಿದ್ದಾರೆ..

ಹೌದು ನಮಗೆ ಸಾಮಾಜಿಕ ಜಾಲತಾಣದಲ್ಲಿ ನನ್ನದೇ ಹೆಸರಿನಲ್ಲಿ ನಕಲಿ ಖಾತೆ ತೆರೆದಿರುವ ವ್ಯಕ್ತಿಯೊಬ್ಬರಿಂದ ಕೆಟ್ಟ ಕೆಟ್ಟ ಸಂದೇಶಗಳು ಬರುತ್ತಿದೆ.. ಜೊತೆಗೆ ನನ್ನ ಬಗ್ಗೆ ಇಂತಹ ಸುದ್ದಿಗೆ ಕಡಿವಾಣ ಹಾಕಿ ಎನ್ನುವ ಕಾರಣಕ್ಕೆ ಪವಿತ್ರಾ ಲೋಕೇಶ್ ಅವರು ಪೊಲೀಸರ ಬಳಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ.. ಒಟ್ಟಿನಲ್ಲಿ ಅತ್ತ ವಿಚಾರ ಬಹಿರಂಗವಾಗುತ್ತಿದ್ದಂತೆ ಡಿವೋರ್ಸ್ ಕೊಟ್ಟ ನಟನಿಗೆ ಪತ್ನಿ ತಿರುಗೇಟು ನೀಡಿದರೆ ಇತ್ತ ಪವಿತ್ರಾ ಲೋಕೇಶ್ ಅವರು ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.. ಆದರೆ ಇನ್ನು ಕೆಲವೇ ದಿನಗಳಲ್ಲಿ ಈ ಎಲ್ಲಾ ವಿಚಾರಗಳಿಗೂ ಎಲ್ಲಾ ಸಂಬಂಧಗಳಿಗೂ ತೆರೆ ಬೀಳಲಿದ್ದು ಸತ್ಯ ಏನೆಂದು ತಿಳಿಯಲಿದೆ..