ದಿವ್ಯಾ ವಸಂತರಿಗೆ ಲೈವ್ ನಲ್ಲಿಯೇ ಗ್ರಹಚಾರ ಬಿಡಿಸಿದ ಯುವಕ.. ಬೇಕಿತ್ತಾ ಗುರು ಇದೆಲ್ಲಾ..

0 views

ಕಳೆದ ಮೂರು ದಿನಗಳಿಂದ ಬಿಟಿವಿ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸುದ್ದಿಯಲ್ಲಿದೆ.. ಇದಕ್ಕೆ ಕಾರಣ ಮೊದಲನೆಯದಾಗಿ ಅಮೂಲ್ಯ ಅವರು ತಾಯಿಯಾಗುತ್ತಿರುವ ವಿಚಾರವನ್ನು ಬಹಳ ವಿಜೃಂಭಿಸಿ ಇಡೀ ರಾಜ್ಯ ಸಂತೋಷ ಪಡುವ ಸುದ್ದಿ ಎಂದು ಮುಖ್ಯಮಂತ್ರಿಗಳು ಜನರಿಗಾಗಿ ಯಾವುದೋ ಒಂದು ಅತ್ಯುನ್ನತ ಯೋಜನೆಯೊಂದನ್ನು ತಂದ ರೀತಿಯಲ್ಲಿ ಸುದ್ದಿ ಮಾಡಿದ್ದರು.. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಬಹಳಷ್ಟು ಟ್ರೋಲ್ ಆಯಿತು.. ಟ್ರೋಲ್ ಅನ್ನುವುದಕ್ಕಿಂತ ಹೆಚ್ಚಾಗಿ ಜನ ಸಾಮಾನ್ಯರು ಪ್ರತಿಷ್ಟಿತ ಪತ್ರಿಕೆಯೊಂದರ ಸಂಪಾದಕರೂ ಸಹ ಬಿಟಿವಿ ಅವರ ರಾಜ್ಯವೇ ಖುಷಿ ಪಡುವ ಸುದ್ದಿಯನ್ನು ಟೀಕಿಸಿದ್ದರು.. ಇದು ಇಷ್ಟಕ್ಕೆ ಮುಗಿದಿದ್ದರೇ ಏನೂ ಮುಂದುವರೆಯುತ್ತಿರಲಿಲ್ಲ.. ಆದರೆ ಟ್ರೋಲ್ ಮಾಡಿದ್ದನ್ನೇ ಇಟ್ಟುಕೊಂಡು ಬಿಟಿವಿ ಮತ್ತೊಂದು ಸುದ್ದಿ ಮಾಡಿತು.. ಟ್ರೋಲ್ ತಲಹರಟೆ ಎಂದು ಶೀರ್ಷಿಕೆ ಕೊಟ್ಟು ದಿವ್ಯಾ ವಸಂತ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು..

ಆ ಕಾರ್ಯಕ್ರಮದಲ್ಲಿ ಟ್ರೋಲರ್ಸ್ ಗಳ ಬಗ್ಗೆ ಬೇರೆ ರೀತಿಯೇ ಮಾತನಾಡಲಾಯಿತು.. ತಮ್ಮ ತಪ್ಪೇನು ಇಲ್ಲ ಎಲ್ಲವೂ ಟ್ರೋಲರ್ಸ್ ಗಳದ್ದೇ ತಪ್ಪು ಎಂದರು.. ಅಷ್ಟೇ ಅಲ್ಲದೇ ಬಿಟ್ಟಿ ಇಂಟರ್ ನೆಟ್ ಹಾಕಿಸಿಕೊಂಡು ಮಾಡೋಕೆ ಕೆಲಸವಿಲ್ಲದವರು ಈ ರೀತಿ ಮಾಡ್ತಾರೆ ಇನ್ನೂ ಸಾಕಷ್ಟು ಇದೇ ರೀತಿ‌ ಒಂದು ಗಂಟೆಯ ಕಾರ್ಯಕ್ರಮ ಮಾಡಿದರು.. ಆದರೆ ಅದೇ ಕಾರ್ಯಕ್ರಮದ ವೀಡಿಯೋಗೆ ಜನಸಾಮಾನ್ಯರು ಮಾತ್ರ ಬಿಟಿವಿ ಬಗ್ಗೆಯೇ ಕಮೆಂಟ್ ಗಳಲ್ಲಿ ಉಗಿದುಪ್ಪಾಕ್ಕಿದ್ದರು.. ಆದರೆ ವಾಸ್ತವವನ್ನು ಅರ್ಥ ಮಾಡಿಕೊಳ್ಳದೇ ಟ್ರೋಲರ್ಸ್ ಗಳನ್ನು ಮತ್ತಷ್ಟು ಎತ್ತಿಕಟ್ಟಿದರು.. ಬೇರೆಯವರ ಬಗ್ಗೆ ಮಾತನಾಡಿದಾಗಲೇ ಬಿಡದವರು.. ತಮ್ಮ ಬಗ್ಗೆ ಮಾತನಾಡಿದರೆ ಬಿಡುವರಾ ಎನ್ನುವಂತೆ ದಿವ್ಯಾ ವಸಂತ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಟ್ರೋಲ್ ಆದರು.. ಅದರಲ್ಲೂ ಎಡಿಟ್ ಮಾಡಿದ ವೀಡಿಯೋ ಗಳು ವೈರಲ್ ಆದವು..

ಇಷ್ಟಕ್ಕೂ ಸುಮ್ಮನಾಗದ ದಿವ್ಯಾ ವಸಂತ ಇಂದು ಮತ್ತೊಮ್ಮೆ ಇರಲಾರದೆ ಇರುವೆ ಬಿಟ್ಟುಕೊಂಡರೆಂಬಂತೆ ಟ್ರೋಲರ್ಸ್ ಗಳಿಗಾಗಿಯೇ ಒಂದು ಕಾರ್ಯಕ್ರಮ.. ಯಾರು ಬೇಕಾದರೂ ಏನು ಬೇಕಾದರೂ ಮಾತನಾಡಬಹುದೆಂದು ಲೈವ್ ಕಾರ್ಯಕ್ರಮವೊಂದನ್ನು ಮಾಡಿದರು..ತಲೆಯಲ್ಲಿ ಬುದ್ಧಿ ಇದ್ದು ಇಂತಹ ಕಾರ್ಯಕ್ರಮ‌ ಮಾಡುವರೋ ಅಥವಾ ಬುದ್ಧಿ ಇಲ್ಲವೋ ಅಥವಾ ಬೇಕು ಎಂದೇ ಈ ರೀತಿ ಟಿ ಆರ್ ಪಿ ಪಡೆಯಲು ಟ್ರೋಲರ್ಸ್ ವಿಚಾರ ಇಟ್ಟುಕೊಂಡು ಇಂತಹ ಕಾರ್ಯಕ್ರಮ ಮಾಡ್ತಾರೋ ಆ ಭಗವಂತನೇ ಬಲ್ಲ.. ಆದರೆ ಇಂದು ಲೈವ್ ಕಾರ್ಯಕ್ರಮದಲ್ಲಿ ನಮ್ ಹುಡುಗರುಗಳು ಕೇಳಿದ ಪ್ರಶ್ನೆಗೆ ಸಾಕಷ್ಟು ಬಾರಿ ತಬ್ಬಿಬ್ಬಾಗಿ ಬೇರೆ ವಿಚಾರದ ಬಗ್ಗೆ ಮಾತನಾಡಲು ಶುರು ಹಚ್ಚಿಕೊಂಡರು ದಿವ್ಯವಾದ ವಸಂತ.. ಕ್ಷಮಿಸಿ ದಿವ್ಯಾ ವಸಂತ..

ಅದರಲ್ಲೂ ನವೀನ್ ಕುಮಾರ್ ಎಂಬುವವರೊಬ್ಬರು ಲೈವ್ ನಲ್ಲಿಯೇ ಸರಿಯಾಗಿ ಗ್ರಹಚಾರ ಬಿಡಿಸಿದರು.. ಹೌದು ಕೈವ್ ಗೆ ಬಂದ ನವೀನ್ ಕುಮಾರ್ ಅವರು ನೇರನೇರವಾಗಿ ಮಾತನಾಡಿದರು.. “ಅಮೂಲ್ಯ ಅವರ ಪ್ರೆಗ್ನೆನ್ಸಿ ಬಗ್ಗೆ ಅಲ್ವಾ ನೀವ್ ಈಗ ಮಾತನಾಡ್ತಿರೋದು.. ಎಂದು ಕೇಳಿದ ಕೂಡಲೇ ಪ್ರತಿಕ್ರಿಯೆ ನೀಡಿದ ದಿವ್ಯವಾದ ವಸಂತ‌ “ನಾನು ಇವಾಗ ಬೇಸಿಕಲಿ ಅದು ಒಂದು ಟ್ರೋಲ್ ಆಯ್ತು.. ಅದರ ಬಗ್ಗೆ ಮಾತ್ರ ಅಲ್ಲ ಯಾವ ಪ್ರಶ್ನೆ ಬೇಕಿದ್ರೂ ಕೇಳಿ ನಮ್ಮ ಬಳಿ ಉತ್ತರ ಇದೆ.. ಬೇರೆ ಯಾವ ವಿಚಾರನೂ‌ ನಮಗೆ ಬೇಡ.. ನಾವು ಇಲ್ಲಿ ಬಂದಿರೋದು ಕೇವಲ ಅಮೂಲ್ಯ ಅವರ ವಿಚಾರವಾಗಿ.. ಜೊತೆಗೆ ಮಾರನೆ ದಿನ ಟ್ರೋಲ್ ಪೇಜ್ ಗಳ ಬಗ್ಗೆ ನೀವೊಂದು ಕಾರ್ಯಕ್ರಮ ಮಾಡಿದ್ರಿ.. ಬಿಟ್ಟಿ ನೆಟ್ಟು ಅಂತ ಮಾತನಾಡಿದ್ರಿ.. ಸಧ್ಯದಲ್ಲಿ ಯಾರೂ ಸಹ ಉಚಿತವಾಗಿ ನೆಟ್ ಕೊಡ್ತಾ ಇಲ್ಲ.. ಒಬ್ಬ ಜರ್ನಲಿಸ್ಟ್ ಆಗಿ ಬಿಟ್ಟಿ ನೆಟ್ ಅಂತ ಮಾತಮಾಡಿದ್ರಿ.. ಎಂದ ಕೂಡಲೇ ಪ್ರತಿಕ್ರಿಯೆ ಕೊಟ್ಟ ದಿವ್ಯ ವಸಂತ ಹೌದು ನಿಜ ಜಿಯೋ ಅವರು ಈಗ ನೆಟ್ ಪ್ಯಾಕ್ ಗೆಲ್ಲಾ ಹಣ ಜಾಸ್ತಿ‌ ಮಾಡಿದ್ದಾರೆ.. ಆದರೆ ನೀವು ಬಿಟ್ಟಿ ನೆಟ್ ಬಳಸ್ತಾ ಇದ್ದೀರಾ ಎಂದು ಅರ್ಥವಿಲ್ಲದ ರೀತಿ ಪ್ರತಿಕ್ರಿಯೆ ನೀಡಿದರು..

ಮತ್ತೆ ಮಾತನಾಡಿದ ನವೀನ್ ಕುಮಾರ್.. ಮೇಡಂ ನೀವು ಒಬ್ಬ ಜರ್ನಲಿಸ್ಟ್ ಆಗಿ ಪ್ರತಿಯೊಂದು ಪದ ಮಾತನಾಡುವಾಗಲೂ ಗಮನ ಇರಬೇಕು.. ಇಲ್ಲಿ ಯಾರೂ ಸಹ ಬಿಟ್ಟಿ ನೆಟ್ ಬಳಸ್ತಾ ಇಲ್ಲ.. ಎಲ್ಲರೂ ಹಣ ಕೊಟ್ಟೇ ನೆಟ್ ಬಳಸ್ತಾ ಇರೋದು.. ಅ ಮಾತ್ ನೀವ್ ಮಾತಾಡಿದ್ದು ತಪ್ಪು.. ಅದಾದ್ಮೇಲೆ ನನ್ನ್ ಮಾತನ್ನು ಪೂರ್ತಿ ಕೇಳಿಸ್ಕೋಳಿ.. ನೀವು ಒಂದ್ ವಿಚಾರ ಹೇಳ್ಬೇಕು ಅಂದ್ರೆ ಸರಿಯಾಗಿ ಪರ್ಟಿಕ್ಯುಲರ್ ಆಗಿ ಮಾತನಾಡಿ.. ಅಮೂಲ್ಯ ಅವರ ಅಭಿಮಾನಿಗಳಿಗೆ ಸಂತೀಷದ ವಿಚಾರ ಅಂತ ಹೇಳಿ ಮುಗಿಸಿ.. ಅದನ್ನ ಬಿಟ್ಟು ಇಡೀ ರಾಜ್ಯ ಖುಷಿ ಪಡೋ ವಿಚಾರ ಅಂತ ಹೇಳಬೇಕಾ.. ರಾಜ್ಯ ಇನ್ನೂ ಸಹ ಪುನೀತ್ ಸರ್ ಅವರನ್ನ ಕಳೆದುಕೊಂಡ ದುಃಖದಲ್ಲಿದೆ.. ಈಗಲೂ ಸಹ ಸಮಾಧಿ ಬಳಿ ಜನರು ಬರ್ತಾ ಇದ್ದಾರೆ..‌ ನೋವಿನಲ್ಲಿದ್ದಾರೆ.‌. ಇಂತಹ ಸಮಯದಲ್ಲಿ ಯಾವುದೋ ಸಿಲ್ಲಿ ವಿಚಾರ ತೆಗೆದು ಅಷ್ಟೆಲ್ಲಾ ಮಾಡೋದು ಬೇಕಿತ್ತಾ.. ಜೊತೆಗೆ ಅವರು ಇನ್ಯಾರೋ ಅಮೂಲ್ಯ ಅವರಿಗೆ ಕಾಲ್ ಮಾಡ್ತಾರೆ.. ಅವರು ಈ ವಿಚಾರ ಮೊದಲು ಯಾರಿಗೆ ಹೇಳಿದ್ರಿ..‌ ಅವರು ಏನಂದ್ರು ಇವರು ಏನಂದ್ರು ಹೇಗ್ ಅನ್ನಿಸ್ತಾ ಇದೆ..‌ ಇದೆಲ್ಲಾ ಬೇಕಿತಾ ಎಂದು ಪ್ರಶ್ನೆ ಮಾಡಿದರು ನವೀನ್ ಕುಮಾರ್..

ಅದಕ್ಕೆ ಪ್ರತಿಕ್ರಿಯೆ ನೀಡಿದ ದಿವ್ಯವಾದ ವಸಂತ ಮತ್ತದೇ ರಾಗ ಶುರು ಮಾಡಿದರು “ಬಿಟ್ಟಿ ಇಂಟರ್ನೆಟ್ ಹಾಕೊಂಡು ಕಮೆಂಟ್ ಮಾಡೊರಿಗೆ ನಾನು ಹೇಳಿದೆ.. ಅದು ನಿಮಗೆ ಅನ್ವಯ ಆಗೊಲ್ಲಾ.. ಎಂದು ಮತ್ತೆ ಅರ್ಥವಿಲ್ಲದ ಉತ್ತರ ಕೊಟ್ಟರು.. ಇನ್ನು ಅಮೂಲ್ಯ ಅವರ ವಿಚಾರ ತೆಗೆದು ಮತ್ತದೇ ಮಾತುಗಳನ್ನು ಶುರು ಮಾಡಿದರು ಅಮೂಲ್ಯ ಅವರು ಚೈಲ್ಡ್ ಆರ್ಟಿಸ್ಟ್.. ಅವರಿಗೆ ನೀವು ಅಭಿಮಾನಿ ಅಲ್ಲದಿರಬಹುದು.. ಆದರೆ ರಾಜ್ಯಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ.. ಡಿ ಬಾಸ್ ಅಂತ ಬಂದರೆ ಇಡೀ ರಾಜ್ಯ ಅಂತ ಮಾತಮಾಡ್ತೀವಿ ಅದೇ ತರ ನಾವು ಇಡೀ ರಾಜ್ಯ ಅಮೂಲ್ಯ ಅವರ ವಿಚಾರಕ್ಕೆ ಖುಷಿ ಪಡತ್ತೆ ಅಂತ ನಾವು ಹೇಳಿದ್ವಿ.. ಆ ವಿಚಾರ ಅಲ್ಲಿಗೆ ಕ್ಲಿಯರ್.. ಇನ್ನು ಅಪ್ಪು ಸರ್ ವಿಚಾರಕ್ಕೆ ಬರೋದಾದ್ರೆ ಪುನೀತ್ ಸರ್ ಹೋಗಿದ್ದಕ್ಕೆ ನಮಗೂ ನೋವಿದೆ.. ನಮಗೆ ಅವರ ಮೇಲೆ ತುಂಬಾ ಗೌರವ ಇದೆ.. ಅವರು ಹೋದ ದಿನ ನಾವು ಒಂದು ಗಂಟೆ ಅಷ್ಟೇ ಕೆಲಸ ಮಾಡಿದ್ದು.. ಹಗಲು ರಾತ್ರಿ‌ ಕೆಲಸ ಮಾಡಿದ್ದೀವಿ..ಇನ್ನು ರಾಜ್ಯದ ಸೆಲಿಬ್ರೆಟಿ ಒಬ್ಬರು ಪ್ರೆಗ್ನೆಂಟ್ ಆಗಿದ್ದಾರೆ ಎಂದಾಗ ರಾಜ್ಯ ಖುಷಿ ಪಡತ್ತೆ ಎಂದು ಮತ್ತೆ ಸಮರ್ಥಿಸಿಕೊಂಡರು.. ಮತ್ತೆ ನವೀನ್ ಅವರಿಗೆ ಮಾತನಾಡಲು ಅವಕಾಶ ನೀಡದೇ ಅಷ್ಟಕ್ಕೆ ಕಾಲ್ ಕಟ್ ಮಾಡಿದರು.. ಒಟ್ಟಿನಲ್ಲಿ ಇರಲಾರದೆ ಇರುವೆ ಬಿಟ್ಟುಕೊಂಡರೆನ್ನಬಹುದು.. ಆದರೆ ಮತ್ತಷ್ಟು ದಿನ ಸಾಮಾಜಿಕ ಜಾಲತಾಣದಲ್ಲಿ ಬಿಟಿವಿ ಸುದ್ದಿಯಲ್ಲಿರೋದಂತೂ ಪಕ್ಕಾ.. ಅಷ್ಟೇ..