ಹೌದು ನನಗೆ ಇಂಗ್ಲಿಷ್ ಬರೋದಿಲ್ಲ.. ಏನಿವಾಗ? ಗ್ರಹಚಾರ ಬಿಡಿಸಿದ ನೀರಜ್ ಛೋಪ್ರಾ.. ಯಾರಿಗೆ ಗೊತ್ತಾ..

0 views

ಒಲಂಪಿಕ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದು ಇದೀಗ ದೇಶಕ್ಕೆ ಗೌರವ ತಂದುಕೊಟ್ಟ ಜಾವೆಲಿನ್‌ ಥ್ರೋ ಆಟಗಾರ ನೀರಜ್‌ ಛೋಪ್ರಾ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಹೌದು ಸಾಮಾಜಿಕ ಜಾಲತಾಣದ ತುಂಬೆಲ್ಲಾ ಹೆಣ್ಣು ಮಕ್ಕಳು ಯುವಕರು ಹಿರಿಯರು ಎಲ್ಲರ ಫೇಸ್ಬುಕ್‌ ನಲ್ಲಿಯೂ ನೀರಜ್‌ ಛೋಪ್ರಾ ಅವರ ಕುರಿತ ವಿಚಾರವೇ ಕಾಣುತಿತ್ತು. ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ನೀರಜ್‌ ಛೋಪ್ರಾ ಭಾಷೆ ವಿಚಾರಕ್ಕೆ ಒಬ್ಬರಿಗೆ ಗ್ರಹಚಾರ ಬಿಡಿಸಿರುವ ವೀಡಿಯೋವೊಂದು ವೈರಲ್‌ ಆಗಿದ್ದು ನೀರಜ್‌ ಮೇಲಿನ ಗೌರವ ಇನ್ನಷ್ಟು ಹೆಚ್ಚುವಂತೆ ಮಾಡಿದೆ..

ಹೌದು ಅದೊಂದು ಕಾಲವಿತ್ತು ಇಂಗ್ಲೀಷ್ ಭಾಷೆಯನ್ನು ಕಲಿಯೋದೇ ಒಂದು ಸವಾಲು. ಬ್ರಿಟಿಷರೊಂದಿಗೆ ವ್ಯವಹರಿಸಲು ಇಂಗ್ಲೀಷ್ ಭಾಷೆ ಬುಹು ಮುಖ್ಯವಾಗಿತ್ತು. ಈಗ ಹಾಗೇನೂ ಇಲ್ಲ. ತೊದಲು ನುಡಿಯೋ ಮಕ್ಕಳಿಂದ ಹಿಡಿದು ಎಲ್ಲರೂ ಇಂಗ್ಲೀಷ್ ನಲ್ಲಿ ಮಾತನಾಡುವವರೆ. ಇನ್ನೂ ಕೆಲವರು ಇಂಗ್ಲೀಷ್ ಭಾಷೆಯ ಮೇಲೆ ಒತ್ತು ಕೊಡದವರು ಕಲಿಯೋಕೆ ಹೋಗಲ್ಲ.. ಮಾತೃಭಾಷೆಯೇ ಸಾಕು ಎನ್ನುತ್ತಾರೆ. ನಮ್ಮ ಮಾತೃ ಭಾಷೆ ಇರುವಾಗ ಬೇರೆ ಭಾಷೆಯನ್ನು ಕಲಿಯುವ ಅಗತ್ಯವಿಲ್ಲ ಎನ್ನುವರಲ್ಲಿ ನಮ್ಮ ಭಾರತದ ಹೆಮ್ಮೆಯ ನೀರಜ್ ಚೋಪ್ರಾ ಕೂಡ ಒಬ್ಬರು. 

ಟೋಕಿಯೋ  ಒಲಿಂಪಿಕ್ಸ್  ನಲ್ಲಿ ಸುವರ್ಣ ಪದಕ ಪಡೆದ ಹರಿಯಾಣದ ನೀರಜ್ ಚೋಪ್ರಾ ಭಾರತಕ್ಕೆ ಮೆರುಗನ್ನ ತಂದಿದ್ದಾರೆ. ಹೆಮ್ಮೆಯ ಪುತ್ರ ನೀರಜ್ ಚೋಪ್ರಾ ಜಾವಲಿನ್ ಥ್ರೋನಲ್ಲಿ ಬಂಗಾರದ ಪದಕಕ್ಕೆ ಮುತ್ತಿಟ್ಟಿದ್ದೇ ತಡ ಇಡೀ ದೇಶವೇ ಈತನ ಸಾಧನೆಗೆ ಹೆಮ್ಮೆ ಪಡುತ್ತಿದೆ.. ಒಲಿಂಪಿಕ್ಸ್​ ಗೆ ನೀರಜ್ ಚೋಪ್ರಾ ಹೋಗುವ ಮುನ್ನ ಅವರು ಮಾಧ್ಯಮ ಒಂದಕ್ಕೆ ಸಂದರ್ಶನ ಕೊಟ್ಟಿದ್ದರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಸಂದರ್ಶನದ ವೇಳೆ ನಿರೂಪಕರು ಇಂಗ್ಲೀಷ್​ನಲ್ಲಿ ಪ್ರಶ್ನೆ ಕೇಳಿದ್ದಾರೆ. ಆಗ ತಬ್ಬಿಬ್ಬಾಗದ ನೀರಜ್ ಅದಕ್ಕೆ ನೇರವಾಗಿಯೇ ಉತ್ತರ ನೀಡಿದ್ದಾರೆ. ಹೌದು.. ನನಗೆ ಇಂಗ್ಲೀಷ್ ಬರಲ್ಲ. ಅದಕ್ಕೇನಿವಾಗ ಎಂದು ಪ್ರತ್ಯುತ್ತರಿಸುದ್ದಾರೆ.

ಇನ್ನು ವೈಯಕ್ತಿಕ ವಿಚಾರವಾಗಿಯೂ ನಿರೂಪಕರು ಪ್ರಶ್ನಿಸಿದ್ದಾರೆ.  ನಾನು ಇಲ್ಲಿ ನಿಮ್ಮ ಮುಂದೆ ಹೇಗೆ ಕೂತಿದ್ದೇನೋ ಹಾಗೇ ಎಲ್ಲ ಸಮಯದಲ್ಲೂ ಇರ್ತೇನೆ
ಎಂದು ಚೋಪ್ರಾ ಹೇಳಿದ್ದಾರೆ. ನನಗೆ ಇಂಗ್ಲೀಷ್ ಪರ್ಫೆಕ್ಟ್ ಆಗಿ ಬರಲ್ಲ. ಹೀಗಾಗಿ ನಾನು ಒಂದು ಅವಾರ್ಡ್ ಫಂಕ್ಷನ್​ಗೆ ಹೋದರೂ  ಹಿಂದಿಯಲ್ಲೇ ಮಾತಾಡುತ್ತೇನೆಂದು ಹೇಳುತ್ತಾರೆ.. ಇನ್ನೂ ನಮ್ಮ ದೇಶದಲ್ಲಿ ತುಂಬಾ ಜನರು ಇಂಗ್ಲೀಷ್ ಮಾತಾಡ್ತಾರೆ. ಆದರೆ ನನಗನ್ನಿಸುತ್ತೆ  ನಾವು  ಹಿಂದೂಸ್ತಾನದಲ್ಲಿ ಇದ್ದೇವೆ.. ಇಂಗ್ಲೀಷ್ ಒಂದು ಭಾಷೆ ಅದನ್ನ
ಕಲಿಯಬೇಕು.. ನಮ್ಮ ನಮ್ಮ ಮಾತೃ ಭಾಷೆಯಲ್ಲಿ ಮಾತನಾಡಬೇಕು.. ಹಾಗೆ ನಮ್ಮ ಭಾಷೆಯ ಬಗ್ಗೆ ನಮಗೆ ಗರ್ವ ಇರಬೇಕು ಎಂದು ಚಿನ್ನದ ಹುಡುಗ ಹೇಳಿದ್ದಾರೆ..

ನಾಲ್ಕು ಅಕ್ಷರ ಇಂಗ್ಲೀಷ್ ಕಲಿತು ಆನೆ ಮೇಲೆ ಹೋದವರಂತೆ ಆಡುವ ಅದೆಷ್ಟೋ ಜನರ ನಡುವೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಚಿನ್ನದ ಪದಕಗಳನ್ನು ಪಡೆದು ಇದೀಗ ಒಲಂಪಿಕ್ ನಲ್ಲಿಯೂ ಸಾಧನೆ ಮಾಡಿದರೂ ಇಂಗ್ಲೀಷ್ ಬರುವುದಿಲ್ಲ ಎಂಬ ಯಾವ ಹಿಂಜರಿಕೆಯೂ ಇಲ್ಲದೇ ಮಾತೃ ಭಾಷೆಯ ಬಗ್ಗೆ ಹೆಮ್ಮೆ ಪಡುವ ನೀರಜ್ ಛೋಪ್ರಾ ನಿಜಕ್ಕೂ ಹೆಮ್ಮೆಯೇ ಸರಿ.. ಇವರನ್ನು ನೋಡಿ ಕೆಲವರು ಕಲಿಯಬೇಕಾದ್ದು ಬಹಳಷ್ಟಿದೆ..