ಟೋಕಿಯೋದಲ್ಲಿ ನಡೆದ ಒಲಂಪಿಕ್ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ದಲ್ಲಿ ಭಾರತಕ್ಕೆ ಚಿನ್ನ ಗೆದ್ದು ಬಂದ ನೀರಜ್ ಚೋಪ್ರಾ ಅವರಿಗೆ ಬಹುಮಾನದ ಸುರಿಮಳೇಯೇ ಆಗಿದೆ.. ಪ್ರತಿಷ್ಠಿತ ಕಂಪನಿಗಳು ಕೆಲ ರಾಜ್ಯ ಸರ್ಕಾರಗಳು ಬಿಸಿಸಿಐ ಸೇರಿದಂತೆ ಅನೇಕ ಸಂಸ್ಥೆಗಳು ಅನೇಕ ರೀತಿಯ ಬಹುಮಾನಗಳನ್ನು ಘೋಷಣೆ ಮಾಡಿದೆ.. ಆದರೆ ಅದೊಂದು ಸಂಸ್ಥೆ ಕೊಟ್ಟ ಬಹುಮಾನ ಮಾತ್ರ ಯಾವುದೇ ಪ್ರಯೋಜನವಿಲ್ಲದ ಬಹುಮಾನವಾಗಿ ಹೋಗಿದೆ.. ಈ ಬಗ್ಗೆ ಸಂಸ್ಥೆಯನ್ನು ಸಹ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ..

ಹೌದು ಸೇನೆಯಲ್ಲಿಯೂ ಕಾರ್ಯ ನಿರ್ವಹಿಸುತ್ತಾ ಕ್ರೀಡೆಯಲ್ಲಿಯೂ ಪಾಲ್ಗೊಂಡು ಇದೀಗ ಭಾರತಕ್ಕೆ ಒಲಂಪಿಕ್ ನಲ್ಲಿ ಚಿನ್ನದ ಪದಕ ತಂದ ನೀರಜ್ ಚೋಪ್ರಾ ಅವರ ಸಾಧನೆಯನ್ನು ಇಡೀ ದೇಶವೇ ಸಂಭ್ರಮಿಸಿತ್ತು.. ಸಾಮಾನ್ಯ ಜನರು ನೀರಜ್ ಗೆ ಶುಭ ಹಾರೈಸಿದರೆ ಪ್ರತಿಷ್ಠಿತರು ಬಹುಮಾನಗಳನ್ನು ಘೋಷಣೆ ಮಾಡುವ ಮೂಲಕ ಅಭಿನಂದಿಸಿದರು.. ಇನ್ನು ಚಿನ್ನ ತಂದ ಹುಡುಗ ನೀರಜ್ ಅನೇಕ ಅಭಿನಂದನಾ ಸಮಾರಂಭಗಳಲ್ಲಿ ಮಾತನಾಡಿ ಇದು ನನ್ನದಲ್ಲ ಇದು ದೇಶದ ಚಿನ್ನದ ಪದಕ ಇದು ದೇಶಕ್ಕೇ ಸಮರ್ಪಣೆ ಎಂದು ದೊಡ್ಡ ಮಾತುಗಳನ್ನಾಡುವ ಮೂಲಕ ಜನರ ಮನಗೆದ್ದರು.. ಕೇವಲ 23 ವರ್ಷಕ್ಕೆ ಒಲಂಪಿಕ್ ನಲ್ಲಿ ಸಾಧನೆ ಮಾಡಿ ಭಾರತಕ್ಕೆ ಹೆಮ್ಮೆ ತಂದು ಕೊಟ್ಟ ನೀರಜ್ ಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ..

ಇನ್ನು ನೀರಜ್ ಚೋಪ್ರಾ ಅವರ ತವರು ರಾಜ್ಯ ಹರಿಯಾಣ ಸರ್ಕಾರ ಆರು ಕೋಟಿ ನಗದು ಬಹುಮಾನ ಹಾಗೂ ಪಂಚಕುಲದ ಸೆಂಟರ್ ಫಾರ್ ಎಕ್ಸಲೆನ್ಸ್ ನ ಮುಖ್ಯಸ್ಥ ಹುದ್ದೆಯನ್ನು ನೀಡಲಾಗುವುದು ಎಂದು ಘೋಷಿಸಿದ್ದಾರೆ.. ಇನ್ನು ಪಂಜಾಬ್ ಸರ್ಕಾರ ಎರಡು ಕೋಟಿ ರೂಪಾಯಿ ನಗದು ಬಹುಮಾನ ಹಾಗೂ ಬಿಸಿಐಐ ಒಂದು ಕೋಟಿ ರೂಪಾಯಿ ನಗದು ಬಹುಮಾನ.. ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಒಂದು ಕೋಟಿ ನಗದು ಬಹುಮಾನ.. ಎಲನ್ ಗ್ರೂಪ್ ನಿಂದ ಇಪ್ಪತ್ತೈದು ಲಕ್ಷ ರೂಪಾಯಿ.. ಹಾಗೂ ಇಂಡಿಗೋ ಸಂಸ್ಥೆಯಿಂದ ಒಂದು ವರ್ಷ ಅನಿಯಮಿತ ಉಚಿತ ಏರ್ ಟಿಕೆಟ್ ನೀಡಲಾಗಿದೆ.. ಜೊತೆಗೆ ಮಹೀಂದ್ರಾ ಕಂಪನಿಯಿಂದ ನೀರಜ್ ಗೆ ನೂತನ ಎಕ್ಸ್ ಯು ವಿ 700 ಕಾರನ್ನು ಉಡುಗೊರೆ ನೀಡುತ್ತಿದೆ.. ಹೀಗೆ ಅನೇಕ ಕಡೆಯಿಂದ ಅನೇಕ ರೀತಿಯ ಬಹುಮಾನಗಳು ನೀರಜ್ ಗೆ ಕೈ ಸೇರಿದೆ..

ಆದರೆ ಕರ್ನಾಟಕದ ಕೆ ಎಸ್ ಆರ್ ಟಿ ಸಿ ಸಂಸ್ಥೆ ನೀಡಿರುವ ಬಹುಮಾನಕ್ಕೆ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.. ಹೌದು ಕೆ ಎಸ್ ಆರ್ ಟಿ ಸಿ ಕಡೆಯಿಂದ ನೀರಜ್ ಗೆ ಗೋಲ್ಡನ್ ಪಾಸ್ ನೀಡಲಾಗಿದ್ದು ಇದನ್ನು ನೀರಜ್ ಬಳಸಿಕೊಂಡು ಯಾವುದೇ ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ ಓಡಾಡಬಹುದು ಎಂದು ತಿಳಿಸಲಾಗಿದೆ.. ಆದರೆ ಈ ಬಹುಮಾನದಿಂದ ಏನು ಪ್ರಯೋಜನ ಎಂದು ನೆಟ್ಟಿಗರು ಟೀಕಿಸಿದ್ದಾರೆ.. ಇದರಿಂದ ನೀರಜ್ ಗೆ ಏನು ಪ್ರಯೋಜನ ಆಗಲಿದೆ? ಸುಮ್ಮನೆ ಹೆಸರಿಗಷ್ಟೇ ಈ ಬಹುಮಾನದ ಘೋಷಣೆ.. ಅದರ ಬದಲು ಅವರ ಹೆಸರಿನಲ್ಲಿ ಮುಂದೆ ಶಾಲಾ ಕಾಲೇಜುಗಳು ತೆರೆದಾಗ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಗಳಲ್ಲಿ ರಿಯಾಯಿತಿ ನೀಡಬಹುದಿತ್ತು..

ಅಥವಾ ರಾಜ್ಯದ ಕ್ರೀಡಾಪಟುಗಳಿಗೆ ನೀರಜ್ ಹೆಸರಿನಲ್ಲಿ ಸಹಾಯವಾಗುವಂತೆ ಮಾಡಬಹುದಿತ್ತು. ಅಥವಾ ರಾಜ್ಯದಲ್ಲಿನ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತರಳು ಬೇರೆ ಯಾವುದಾದರು ಕೆಲಸವನ್ನು ನೀರಜ್ ಅವರ ಹೆಸರಿನಲ್ಲಿ ಮಾಡಬಹುದಾಗಿತ್ತು.. ಅಥವಾ ಖುದ್ದು ನೀರಜ್ ಅವರಿಗೆ ಉಪಯೋಗವಾಗುವಂತಹ ನಗದು ಬಹುಮಾನವನ್ನಾದರೂ ಅವರಿಗೆ ನೀಡಬಹುದಾಗಿತ್ತು.. ಆದರೆ ಈಗ ಕೊಟ್ಟಿರುವ ಬಹುಮಾನ ಹೊಳೆಯಲ್ಲಿ ಹುಣಸೆ ಹಣ್ಣ ತೇಯ್ದಂತೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.. ಒಟ್ಟಿನಲ್ಲಿ ಚಿನ್ನ ಗೆದ್ದ ಹುಡುಗನಿಗೆ ಗೋಲ್ಡನ್ ಪಾಸ್ ಕೊಟ್ಟು ಕೆ ಎಸ್ ಆರ್ ಟಿ ಸಿ ಟೀಕೆಗೆ ಒಳಗಾಗಿದ್ದಂತೂ ಸತ್ಯ..