ಹೊರ ಬಂದ ಕೂಡಲೇ ಗಂಡನ ಬಗ್ಗೆ ಸತ್ಯ ಬಿಚ್ಚಿಟ್ಟ ನಿಧಿ.. ಇಷ್ಟು ದಿನ ಹೇಳದೇ ಇರಲು ನಿಜವಾದ ಕಾರಣವೇನು ಗೊತ್ತಾ?

0 views

ಬಿಗ್ ಬಾಸ್ ಮನೆ ಒಂದು ರೀತಿ ತನ್ನೊಳಗೆ ಬಂದವರ ನಿಜ ಬಣ್ಣವನ್ನು ತೋರುವ ಮನೆ ಎನ್ನಬಹುದು.. ಅದೆಷ್ಟೇ ಲೆಕ್ಕಾಚಾರ ಹಾಕಿಕೊಂಡು ಬಿಗ್ ಬಾಸ್ ಮನೆಗೆ ಹೋದರೂ ಸಹ ಒಂದೆರೆಡು ವಾರದಲ್ಲಿ ಸದಸ್ಯರ ನಿಜ ರೂಪದ ದರ್ಶನ ವಾಗಿ ಬಿಡುತ್ತದೆ.. ಆ ಮನೆಯಲ್ಲೊ ಹೆಚ್ಚು ದಿನ ಯಾರೂ ಸಹ ನಾಟಕವಾಡಿಕೊಂಡು ಬದುಕಲು ಸಾಧ್ಯವೂ ಇಲ್ಲ.. ಇನ್ನು ಬಿಗ್ ಬಾಸ್ ಮನೆಯಲ್ಲಿ ಅದೆಷ್ಟೋ ಸೆಲಿಬ್ರೆಟಿಗಳ ನಿಜ ಜೀವನದ ಕತೆಗಳು ಆಚೆ ಬಂದಿವೆ.. ಒಳ್ಳೆಯವರು ಅಂದುಕೊಂಡಿದ್ದ ಅದೆಷ್ಟೋ ಸೆಲಿಬ್ರೆಟಿಗಳು ಅಷ್ಟೇನು ಒಳ್ಳೆಯವರಲ್ಲ ಎನಿಸ್ಸಿದ್ದೂ ಉಂಟು.. ಒಳ್ಳೆಯವರಲ್ಲ ಎಂದುಕೊಂಡಿದ್ದ ಸೆಲಿಬ್ರೆಟಿಗಳು ವ್ಯಕ್ತಿತ್ವ ಹಾಗೂ ಗುಣದಲ್ಲಿ ಬಹಳ ಒಳ್ಳೆಯವರು ಎಂದು ತೋರಿದ್ದೂ ಸಹ ಬಿಗ್ ಬಾಸ್ ಮನೆಯೇ..

ಇನ್ನು ಈ ಸೀಸನ್ ವಿಚಾರಕ್ಕೆ ಬಂದರೆ ಈ ಸೀಸನ್ ನಲ್ಲಿ ಬಹು ಮುಖ್ಯವಾಗಿ ತಿಳಿದದ್ದು ಎಂದರೆ ಅದು ಶುಭ ಪೂಂಜಾ ಅವರ ಗುಣ.. ಹೌದು ಹೊರಗೆ ನನ್ನಂತೆ ಸಾಕಷ್ಟು ಮಂದಿ ಏನನ್ನೋ ಓದಿ.. ಯಾರದೋ‌ ಅಭಿಪ್ರಾಯ ಕೇಳಿ ಶುಭ ಪೂಂಜಾ ಅವರ ಬಗ್ಗೆ ಬಹಳಷ್ಟು ಬೇರೆ ರೀತಿಯ ಅಭಿಪ್ರಾಯವನ್ನು ಬೆಳೆಸಿಕೊಂಡು ಬಿಟ್ಟಿದ್ದೆವು.. ನಿಜಕ್ಕೂ ಅವರ ಗುಣ ಹಾಗೂ ನಡೆದುಕೊಳ್ಳುತ್ತಿದ್ದ ರೀತಿ ಅವರ ಮುಗ್ಧತೆ ಅವರ ಬಗ್ಗೆ ತಪ್ಪು ತಿಳಿದುಕೊಂಡಿದ್ದ ಅದೆಷ್ಟೋ ಮಂದಿಗೆ ತಪ್ಪಿನ ಅರಿವಾಯಿತು ಪಶ್ಚಾತ್ತಾಪವೂ ಆಯಿತು.. ಬಿಗ್ ಬಾಸ್ ಮನೆಯೊಳಗೆ ರಾಜೀವ್ ಹಾಗೂ ರಘು ಶುಭ ಬಳಿ ಹೋಗಿ ಇದೇ ವಿಚಾರಕ್ಕೆ ಕ್ಷಮೆಯನ್ನೂ ಸಹ ಕೇಳಿದ್ದೂ ಉಂಟು.. ಇನ್ನು ನಿಧಿ ಸುಬ್ಬಯ್ಯ ಅವರ ವಿಚಾರಕ್ಕೆ ಬಂದರೆ.. ಬಿಗ್ ಬಾಸ್ ಮನೆಯಲ್ಲಿ ಸದಾ ನಗುನಗುತ್ತಾ ಸಮಯ ಕಳೆಯುತ್ತಿದ್ದರು.. ಯಾವ ಪುರುಷ ಸದಸ್ಯರಿಗೂ ಆಲಿಂಗನಕ್ಕಾಗಿ ತಮ್ಮ ತೋಳುಗಳಲ್ಲಿ ಜಾಗ ನೀಡದೇ ಬಹಳ ಸಭ್ಯತೆಯಿಂದ ನಡೆದುಕೊಂಡ ರೀತಿಗೆ ಜನರಿಂದ ಮೆಚ್ಚುಗೆಯೂ ವ್ಯಕ್ತವಾಗಿತ್ತು.. ಆದರೆ ನಿಧಿ ಸುಬ್ಬಯ್ಯ ಬಿಗ್ ಬಾಸ್ ಮನೆಯಲ್ಲಿ ತಮ್ಮ ಮದುವೆಯ ವಿಚಾರವನ್ನು ಮುಚ್ಚಿಟ್ಟಿದ್ದು ಹೊರಗೆ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು..

ಹೌದು ನಿಧಿ ಸುಬ್ಬಯ್ಯ ಅವರು ಕಳೆದ ನಾಲ್ಕು ವರ್ಷದ ಹಿಂದೆಯೇ ಮಂಗಳೂರು ಮೂಲದ ಉದ್ಯಮಿಯೊಬ್ಬರ ಜೊತೆ ಮದುವೆಯಾಗಿ ನಂತರ ವಿದೇಶದಲ್ಲಿ ನೆಲೆಸಿದ್ದರು.. ಆದರೆ ಒಂದೇ ವರ್ಷಕ್ಕೆ ಅವರಿಂದ ದೂರಾಗಿ ಮರಳಿ ಭಾರತಕ್ಕೆ ಬಂದು ನೆಲೆಸಿದ್ದರು.. ಆದರೆ ಈ ಬಗ್ಗೆ ಬಿಗ್ ಬಾಸ್ ವೇದಿಕೆಯಲ್ಲಾಗಲಿ ಅಥವಾ ಬಿಗ್ ಬಾಸ್ ಮನೆಯೊಳಗೆ ಆಗಲಿ ತಮ್ಮ ಮದುವೆಯ ಬಗ್ಗೆ ಹಾಗೂ ತಮ್ಮ ಗಂಡನ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ.. ಆದರೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಎಲ್ಲಾ ವಿಚಾರವನ್ನು ಬಿಚ್ಚಿಟ್ಟಿದ್ದಾರೆ..

ಹೌದು ಬಿಗ್ ಬಾಸ್ ಸೀಸನ್ ಎಂಟು ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತ ಕಾರಣ ಎಲ್ಲಾ ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ.. ಇದೀಗ ಮನೆಯಿಂದ ಹೊರ ಬಂದ ನಂತರ ನಿಧಿ ಸುಬ್ಬಯ್ಯ ತಮ್ಮ ಬಿಗ್ ಬಾಸ್ ಜರ್ನಿಯ ಅನುಭವವನ್ನು ಎಲ್ಲರೊಟ್ಟಿಗೆ ಹಂಚಿಕೊಂಡಿದ್ದಾರೆ.. ಈ ಸಮಯದಲ್ಲಿ ಪ್ರೇಕ್ಷಕರೊಬ್ಬರು ನಿಮಗೆ ಮದುವೆಯಾದ ವಿಚಾರವನ್ನು ಮುಚ್ಚಿಟ್ಟಿದ್ದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ.. ಇದಕ್ಕೆ ಪ್ರತಿಕ್ರಿಯೆ ನೀಡಿದ ನಿಧಿ ಸುಬ್ಬಯ್ಯ..

“ಈ ಪ್ರಶ್ನೆಗೆ ನಾನು ಹೇಗೆ ಉತ್ತರ ಕೊಡ್ಲಿ.. ಜೀವನದಲ್ಲಿ ಏನಾದರು ಕೆಟ್ಟದು ಆದರೆ ಅದರ ಬಗ್ಗೆ ಹೆಚ್ಚು ಮಾತನಾಡಿ ಅದರಿಂದ ಸಿಂಪತಿ ಪಡೆಯಬೇಕು ಎನ್ನುವ ವ್ಯಕ್ತಿ ನಾನಲ್ಲ.. ಪ್ರತಿಯೊಬ್ಬರ ಜೀವನದಲ್ಲಿಯೂ ಒಂದಲ್ಲಾ ಒಂದು ಏರುಪೇರು ಇದ್ದೇ ಇರುತ್ತದೆ.. ಒಳ್ಳೆಯ ವಿಚಾರಗಳನ್ನು ಜನರು ಬಹಳ ಕಡಿಮೆ ಮಾತನಾಡುತ್ತಾರೆ.. ಕೆಟ್ಟದ್ದು ಆಗಿರುವ ಬಗ್ಗೆ ಹೆಚ್ಚು ಮಾತನಾಡುತ್ತಾರೆ.. ಇದರಿಂದ ಅವರ ಬಗ್ಗೆ ಸಿಂಪತಿ ಹುಟ್ಟುತ್ತದೆ.. ಆದರೆ ನನಗ್ಯಾಕೋ ಅದು ಇಷ್ಟವಿಲ್ಲ.. ನನ್ನ ಜೀವನದಲ್ಲಿ ಏನಾಗಿದೆ ಅನ್ನೋದು ಎಲ್ಲರಿಗೂ ತಿಳಿದೇ ಇದೆ.. ಹೌದು ನಾನು ಮದುವೆ ಆಗಿದ್ದೆ.. ಹತ್ತು ತಿಂಗಳ ನಂತರ ಆ ಮದುವೆ ಮುಂದುವರೆಯಲಿಲ್ಲ.. ಅದನ್ನು ಅಲ್ಲಿಗೆ ಬಿಟ್ಟು ಮುಂದೆ ಜೀವನದ ಜೊತೆ ಸಾಗುವ ನಿರ್ಧಾರ ಮಾಡಿದೆ.. ಅಮ್ಮನ ಬಳಿಯೂ ನಾನು ಇದರ ಬಗ್ಗೆ ಮಾತನಾಡುವುದಿಲ್ಲ.. ಅದೇ ಕಾರಣಕ್ಕೆ ನಾನು ಬಿಗ್ ಬಾಸ್ ಮನೆಯಲ್ಲಿಯೂ ಈ ಬಗ್ಗೆ ಮಾತನಾಡಲಿಲ್ಲ ಅಷ್ಟೇ.. ಜೀವನದ ಜೊತೆ ಸಾಗುವ ನಿರ್ಧಾರ ಮಾಡಿದ್ದೆ.. ಆ ನಿರ್ಧಾರಕ್ಕೆ ಬದ್ಧವಾಗಿದ್ದೆ ಅಷ್ಟೇ.. ಎಂದಿದ್ದಾರೆ..